Just In
- 10 hrs ago
ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ
- 10 hrs ago
ಸ್ಪಾಟ್ ಟೆಸ್ಟ್ನಲ್ಲಿ ಕಂಡು ಬಂದ ಬಿಎಸ್-6 ಹೀರೋ ಗ್ಲ್ಯಾಮರ್ ಬೈಕ್
- 11 hrs ago
ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- 12 hrs ago
ಅಂಬಾನಿಗೆ ಭದ್ರತೆ ನೀಡುತ್ತಿರುವ ಕಾರುಗಳ ಬೆಲೆ ಎಷ್ಟು ಗೊತ್ತಾ?
Don't Miss!
- Lifestyle
ಶುಕ್ರವಾರವಾದ ದಿನ ಭವಿಷ್ಯ 6-12-2019
- News
ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಟೀಕೆ
- Movies
ಈ ಷರತ್ತಿಗೆ ಓಕೆ ಅಂದ್ರೆ 'ಅರ್ಜುನ್ ರೆಡ್ಡಿ' ನಿರ್ದೇಶಕನ ಜೊತೆ ರಣ್ಬೀರ್ ಚಿತ್ರ!
- Sports
ರನ್ ಬೆನ್ನತ್ತುವ ಪರೀಕ್ಷೆಗೆ ಭಾರತ ಸಿದ್ದ: ವಿರಾಟ್ ಕೊಹ್ಲಿ
- Finance
ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು
- Technology
ಗೂಗಲ್ ಫೋಟೋಸ್ ನಲ್ಲಿ ಇದೀಗ ಚಾಟ್ ಫೀಚರ್- ಇದರಲ್ಲಿ ನೀವೇನು ಮಾಡಬಹುದು?
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
- Travel
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
ಪೆಟ್ರೋಲ್ ಬಂಕ್‍ನಿಂದ ಹೊರಡುವ ಮುನ್ನ ಎಚ್ಚರ..!
ಕಾರು ಹಾಗೂ ಬೈಕುಗಳನ್ನು ಹೊಂದಿರುವವರು ಪೆಟ್ರೋಲ್ ಬಂಕ್‌ಗಳಿಗೆ ಹೋಗಲೇ ಬೇಕಾಗುತ್ತದೆ. ಈ ಹಿಂದೆ ಹಲವು ಪೆಟ್ರೋಲ್ ಬಂಕ್ ಮಾಲೀಕರು ಹಾಗೂ ಕೆಲಸಗಾರರು ಹೆಚ್ಚು ಹಣ ಗಳಿಸುವ ಉದ್ದೇಶದಿಂದ ವಂಚಿಸುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಇಂಧನದಲ್ಲಿ ಕಲಬೆರಕೆ ಮಾಡುವ ಹಾಗೂ ಕಡಿಮೆ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಹಾಕುವ ಪ್ರಕರಣಗಳು ಬಯಲಾಗಿದ್ದವು. ಈಗ ಹೊಸ ರೀತಿಯ ವಂಚನೆಯೊಂದು ಬೆಳಕಿಗೆ ಬಂದಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಸವಾರರೊಬ್ಬರು ಇತ್ತೀಚೆಗೆ ಹೇಗೆ ವಂಚನೆಗೊಳಗಾದರೂ ಎಂಬುದನ್ನು ಈ ವೀಡಿಯೊದಲ್ಲಿ ಕಾಣಬಹುದು.
ಪೆಟ್ರೋಲ್ ಹಾಕುವವರು ಬಾಕಿ ಹಣವನ್ನು ವಾಪಸ್ ನೀಡುವಾಗ ಹೇಗೆ ವಂಚಿಸುತ್ತಾರೆ ಎಂಬುದನ್ನು ಈ ವೀಡಿಯೊದಲ್ಲಿ ನೋಡಬಹುದು. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಸವಾರನು ಪೆಟ್ರೋಲ್ ಬಂಕ್‌ಗೆ ಹೋಗುವುದರೊಂದಿಗೆ ಈ ವೀಡಿಯೊ ಆರಂಭವಾಗುತ್ತದೆ.

ಅವರು ಪೆಟ್ರೋಲ್ ಬಂಕಿಗೆ ಹೋದ ನಂತರ ಅಲ್ಲಿದ್ದ ಕೆಲಸಗಾರನಿಗೆ ಐವತ್ತು ರೂಪಾಯಿಗಳಿಗೆ ಪೆಟ್ರೋಲ್ ಹಾಕಲು ಹೇಳುತ್ತಾರೆ. ಆ ಕೆಲಸಗಾರನು, ಪೆಟ್ರೋಲ್ ತುಂಬಲು ಶುರು ಮಾಡುತ್ತಾನೆ. ಅದೇ ವೇಳೆ ಕ್ಯಾಷಿಯರ್ ಹಣ ಕೇಳುತ್ತಾನೆ. ರಾಯಲ್ ಎನ್‍ಫೀಲ್ಡ್ ನಲ್ಲಿದ್ದವರು ಆ ವ್ಯಕ್ತಿಗೆ 500 ರೂಪಾಯಿಗಳ ನೋಟ್ ನೀಡುತ್ತಾರೆ.

ಕ್ಯಾಷಿಯರ್ ಆ ನೋಟ್ ಅನ್ನು ಪೆಟ್ರೋಲ್ ಹಾಕುತ್ತಿದ್ದವನಿಗೆ ನೀಡುತ್ತಾನೆ. ಪೆಟ್ರೋಲ್ ಹಾಕುತ್ತಿದ್ದವನು ತನ್ನ ಜೇಬಿನಿಂದ ನೋಟುಗಳ ಕಂತನ್ನು ಹೊರತೆಗೆಯುತ್ತಾನೆ. ಹಗರಣ ಬಯಲಿಗೆ ಬಂದಿರುವುದು ಇಲ್ಲಿಯೇ. ಅವನು ನೀಡಬೇಕಾಗಿರುವ ಚಿಲ್ಲರೆಯನ್ನು ಎರಡು ಸಾರಿ ಎಣಿಸಿ ನಂತರ ಅದನ್ನು ಬೈಕ್ ಸವಾರರಿಗೆ ನೀಡುತ್ತಾನೆ.

ಪೆಟ್ರೋಲ್ ಹಾಕುವವನು ಹೇಗೆ ಮೋಸ ಮಾಡಿದನು ಎಂಬುದನ್ನು ವೀಡಿಯೊವನ್ನು ನಿಧಾನಗೊಳಿಸಿ ತೋರಿಸಲಾಗಿದೆ. ಪೆಟ್ರೋಲ್ ಬಂಕಿನ ಕೆಲಸದವನು ಬೈಕು ಸವಾರನಿಗೆ ಸಂಪೂರ್ಣ ಚಿಲ್ಲರೆಯನ್ನು ನೀಡಲಿಲ್ಲ. ಅವನು ಎಷ್ಟು ಚುರುಕಾಗಿದ್ದನೆಂದರೆ ಬೈಕ್ ಸವಾರರಿಗೆ ಸ್ವಲ್ಪವೂ ಅನುಮಾನ ಬಾರದ ರೀತಿಯಲ್ಲಿ ವರ್ತಿಸಿದ್ದಾನೆ.

ಬೈಕ್ ಸವಾರನಿಗೆ ನಂಬಿಕೆ ಬರುವ ರೀತಿಯಲ್ಲಿ, ಬೈಕ್ ಸವಾರನ ಮುಂದೆ ನೋಟುಗಳನ್ನು ಎರಡು ಬಾರಿ ಎಣಿಸಿದಂತೆ ನಟಿಸಿದ್ದಾನೆ. ಆದರೆ ಬೈಕ್ ಸವಾರನಿಗೆ ಚಿಲ್ಲರೆಯನ್ನು ನೀಡುವ ಮೊದಲು, ನೂರು ರೂಪಾಯಿಯ ಒಂದು ನೋಟ್ ಅನ್ನು ತಾನೇ ಇಟ್ಟುಕೊಂಡು ಉಳಿದ ಚಿಲ್ಲರೆ ಹಣವನ್ನು ಬೈಕ್ ಸವಾರನಿಗೆ ನೀಡಿದ್ದಾನೆ.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಈ ರೀತಿಯ ವಂಚನೆ ಪ್ರಕರಣಗಳು ನಮ್ಮ ದೇಶದಲ್ಲಿ ಹೊಸದಾಗಿ ನಡೆಯುತ್ತಿಲ್ಲ. ಆದ ಕಾರಣ ಯಾವಾಗಲೂ ಚಿಲ್ಲರೆಯನ್ನು ಪಡೆಯುವ ಮೊದಲು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಸವಾರರ ಪ್ರಕಾರ, ಅವರು ಹಣವು ಎಲ್ಲೋ ಮರೆಯಾಗಿದೆ ಎಂದು ಭಾವಿಸಿದ್ದರು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಆದರೆ ಅವರು ವೀಡಿಯೊವನ್ನು ಎಡಿಟ್ ಮಾಡಲು ಕುಳಿತಾಗ ಈ ವಂಚನೆಯ ಬಗ್ಗೆ ಅರಿವಾಗಿದೆ. ಇದು ಸಾಮಾನ್ಯ ಪ್ರಕರಣದಂತೆ ಕಂಡರೂ, ನೋಟು ದೊಡ್ಡ ಮೊತ್ತವನ್ನು ಹೊಂದಿದ್ದರೆ ಹೆಚ್ಚಿನ ಹಾನಿಯಾಗುವುದು ಖಚಿತ. ನಗದು ವಹಿವಾಟು ನಡೆಯುವ ಯಾವುದೇ ಸ್ಥಳದಲ್ಲಿ ಈ ರೀತಿಯ ಹಗರಣ ಸಂಭವಿಸಬಹುದು.
MOST READ: ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಜನರು ಅವಸರದಲ್ಲಿದ್ದಾಗ ಅಥವಾ ಅವರು ಬೇರೆಯವರೊಂದಿಗೆ ಮಾತನಾಡಿಕೊಂಡು ಬಿಜಿಯಾಗಿದ್ದಾಗ ನೋಟುಗಳನ್ನು ಎಣಿಸದೇ ಜೇಬಿನಲ್ಲಿಟ್ಟುಕೊಳ್ಳುತ್ತಾರೆ. ಯಾವಾಗಲೂ ಹಣವನ್ನು ಪಡೆಯುವಾಗ ಪರಿಶೀಲಿಸಿವುದು ಒಳ್ಳೆಯದು. ಸ್ವಲ್ಪ ಲೇಟ್ ಆದರೂ ಪರವಾಗಿಲ್ಲ ಹೊರಡುವ ಮುನ್ನ ಹಣವನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಿ.