ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಂಜಿ ಹೆಕ್ಟರ್

ದೇಶಿಯ ಮಾರುಕಟ್ಟೆಯಲ್ಲಿರುವ ಎಸ್‍‍ಯುವಿಗಳಲ್ಲಿ ಇಂಟರ್‍‍ನೆಟ್ ಹೊಂದಿರುವ ಮೊದಲ ವಾಹನ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಎಂಜಿ ಹೆಕ್ಟರ್ ಎಸ್‍‍ಯುವಿಯನ್ನು ಈ ವರ್ಷದ ಜೂನ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಂಜಿ ಹೆಕ್ಟರ್

ಸ್ಪರ್ಧಾತ್ಮಕ ಬೆಲೆ ಹಾಗೂ ಹಲವಾರು ಪ್ರೀಮಿಯಂ ಫೀಚರ್‍‍ಗಳನ್ನು ಹೊಂದಿರುವ ಕಾರಣಕ್ಕೆ ಭಾರತೀಯ ಗ್ರಾಹಕರು ಈ ಎಸ್‍‍ಯುವಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಎಂಜಿ ಹೆಕ್ಟರ್ ಕಾರ್ ಅನ್ನು ಸದ್ಯಕ್ಕೆ ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಂಜಿ ಹೆಕ್ಟರ್

ಇವುಗಳಲ್ಲಿ 1.5 ಲೀಟರಿನ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 140 ಬಿ‍‍ಹೆಚ್‍‍ಪಿ ಪವರ್ ಹಾಗೂ 240 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಹೈಬ್ರಿಡ್ ಎಂಜಿನ್‍‍ನೊಂದಿಗೂ ಸಹ ಮಾರಾಟ ಮಾಡಲಾಗುತ್ತದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಂಜಿ ಹೆಕ್ಟರ್

ಎಂಜಿ ಹೆಕ್ಟರ್ ಎಸ್‍‍ಯುವಿಯನ್ನು 2 ಲೀಟರಿನ ಫಿಯಟ್ ಮಲ್ಟಿಜೆಟ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್‍‍ನೊಂದಿಗೂ ಸಹ ಮಾರಾಟ ಮಾಡಲಾಗುತ್ತದೆ. ಈ ಎಂಜಿನ್ 170 ಬಿಹೆಚ್‍‍ಪಿ ಪವರ್ ಹಾಗೂ 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಂಜಿ ಹೆಕ್ಟರ್

ಪೆಟ್ರೋಲ್ ಎಂಜಿನ್‍‍ನೊಂದಿಗೆ 6 ಸ್ಪೀಡಿನ ಮ್ಯಾನುವಲ್ ಹಾಗೂ 6 ಸ್ಪೀಡಿನ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಗಳನ್ನು ಅಳವಡಿಸಲಾಗಿದೆ. ಪೆಟ್ರೋಲ್ ಹೈಬ್ರಿಡ್ ಹಾಗೂ ಡೀಸೆಲ್ ಎಂಜಿನ್‍‍ಗಳಲ್ಲಿ 6 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಂಜಿ ಹೆಕ್ಟರ್

ಎಂಜಿ ಹೆಕ್ಟರ್ ಬಿಡುಗಡೆಯಾದಾಗಿನಿಂದ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಬೇಡಿಕೆಯನ್ನು ಹೊಂದಿದೆ. ಎಂಜಿ ಹೆಕ್ಟರ್ ಕಂಪನಿಯು ತನ್ನ ಕಾರುಗಳನ್ನು ಗುಜರಾತ್‍‍ನ ಹಲೋಲ್‍‍ನಲ್ಲಿರುವ ಉತ್ಪಾದನಾ ಘಟಕದಲ್ಲಿ ಉತ್ಪಾದಿಸುತ್ತದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಂಜಿ ಹೆಕ್ಟರ್

ನವೆಂಬರ್ ತಿಂಗಳ ಎಂಜಿ ಹೆಕ್ಟರ್ ಹಾಗೂ ಅದರ ಪ್ರತಿಸ್ಪರ್ಧಿ ಕಾರುಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಲಾಗಿದೆ. ಆಟೋ ಮೊಬೈಲ್ ಉದ್ಯಮವು ಕುಸಿತವನ್ನು ಕಾಣುತ್ತಿದ್ದರೂ ಎಂಜಿ ಹೆಕ್ಟರ್‍‍ನ 3,239 ಯುನಿಟ್‍‍ಗಳು ನವೆಂಬರ್‍ ತಿಂಗಳಿನಲ್ಲಿ ಮಾರಾಟವಾಗಿವೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಂಜಿ ಹೆಕ್ಟರ್

ಎಂಜಿ ಹೆಕ್ಟರ್, ಎಸ್‍‍ಯುವಿ ಸೆಗ್‍‍ಮೆಂಟಿನ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ. ಎಂಜಿ ಹೆಕ್ಟರ್ ಎಸ್‍‍ಯುವಿಯು ಮಾರಾಟದಲ್ಲಿ ಮತ್ತೊಮ್ಮೆ ತನ್ನ ಪ್ರತಿಸ್ಪರ್ಧಿಗಳಾದ ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಹಾಗೂ ಮಹೀಂದ್ರಾ ಎಕ್ಸ್ ಯುವಿ 500ಗಳನ್ನು ಹಿಂದಿಕ್ಕಿದೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಂಜಿ ಹೆಕ್ಟರ್

ನವೆಂಬರ್ ತಿಂಗಳಿನಲ್ಲಿ ಹ್ಯಾರಿಯರ್‍‍ನ 762 ಯುನಿಟ್‍‍ಗಳು ಮಾರಾಟವಾಗಿವೆ. ಈ ಅವಧಿಯಲ್ಲಿ ಜೀಪ್ ಕಂಪಾಸ್‍‍ನ 638 ಯುನಿಟ್‍‍ಗಳು ಹಾಗೂ ಮಹೀಂದ್ರಾ ಎಕ್ಸ್ ಯುವಿಯ 500 ಯುನಿಟ್‍‍ಗಳು ಮಾರಾಟವಾಗಿವೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಂಜಿ ಹೆಕ್ಟರ್

ಹೊಸ ತಲೆಮಾರಿನ ಮಹೀಂದ್ರಾ ಎಕ್ಸ್ ಯುವಿ 500 ಅನ್ನು ಮುಂದಿನ ವರ್ಷ ಬಿಡುಗಡೆಗೊಳಿಸಲಾಗುವುದು. ಮುಂದಿನ ವರ್ಷದ ಆರಂಭದಲ್ಲಿ ಬಿ‍ಎಸ್ 6 ಎಂಜಿನ್ ಹೊಂದಿರುವ ಟಾಟಾ ಹ್ಯಾರಿಯರ್ ಕಾರು ಬಿಡುಗಡೆಯಾಗಲಿದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಂಜಿ ಹೆಕ್ಟರ್

ಇದರ ಜೊತೆಗೆ ಫೇಸ್‍‍ಲಿಫ್ಟ್ ಆವೃತ್ತಿಯ ಜೀಪ್ ಕಂಪಾಸ್ ಸಹ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಅಲ್ಲಿಯವರೆಗೂ ಎಂಜಿ ಹೆಕ್ಟರ್ ಎಸ್‍‍ಯುವಿ ಮಾರಾಟದಲ್ಲಿ ರಾರಾಜಿಸಲಿದೆ.

Most Read Articles

Kannada
English summary
November 2019 sales analysis - Read in Kannada
Story first published: Saturday, December 7, 2019, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X