ಪಟಾಕಿ ಬದಲಿಗೆ ಲೇಸರ್ ಶೋ ಏರ್ಪಡಿಸಲಿದ್ದಾರೆ ಸಿ‍ಎಂ ಕೇಜ್ರಿವಾಲ್

ದೆಹಲಿ ಸರ್ಕಾರವು ತನ್ನ ಕುಖ್ಯಾತ ಸಮ ಬೆಸ ನಿಯಮವನ್ನು ಮತ್ತೆ ಜಾರಿಗೊಳಿಸಲು ನಿರ್ಧರಿಸಿದೆ. ವಾಯು ಮಾಲಿನ್ಯವು ರಾಜಧಾನಿಯಲ್ಲಿ ವಿಪರೀತವಾಗಿರುವ ಹಿನ್ನೆಲೆಯಲ್ಲಿ, ವಾಯು ಮಾಲಿನ್ಯ ಪ್ರಮಾಣವನ್ನು ತಡೆಗಟ್ಟಲು ಈ ನಿರ್ಧಾರ ತೆಗೆದುಕೊಂಡಿದೆ.

ಪಟಾಕಿ ಬದಲಿಗೆ ಲೇಸರ್ ಶೋ ಏರ್ಪಡಿಸಲಿದ್ದಾರೆ ಸಿ‍ಎಂ ಕೇಜ್ರಿವಾಲ್

ಈ ಸಮ ಬೆಸ ನಿಯಮವನ್ನು ನವೆಂಬರ್ 4ರಿಂದ 15ರವರೆಗಿನ ಅಲ್ಪ ಅವಧಿಗೆ ಜಾರಿಗೊಳಿಸಲಾಗುವುದು. ಈ ನಿಯಮದ ಪ್ರಕಾರ, ದೆಹಲಿಯ ಕಾರು ಚಾಲಕರು ದಿನ ಬಿಟ್ಟು ದಿನ ಬೆಸ ಹಾಗೂ ಸಮ ಸಂಖ್ಯೆಗಳೊಂದಿಗೆ ಕೊನೆಗೊಳ್ಳುವ ಕಾರುಗಳನ್ನು ಚಲಾಯಿಸಬೇಕಾಗುತ್ತದೆ. ಈ ಹಿಂದೆ ಈ ನಿಯಮವು ಅಲ್ಪ ಪ್ರಮಾಣದಲ್ಲಿ ಯಶಸ್ಸು ಕಂಡಿತ್ತು.

ಪಟಾಕಿ ಬದಲಿಗೆ ಲೇಸರ್ ಶೋ ಏರ್ಪಡಿಸಲಿದ್ದಾರೆ ಸಿ‍ಎಂ ಕೇಜ್ರಿವಾಲ್

ಇದರಿಂದ ದೆಹಲಿಯ ಮಾಲಿನ್ಯ ಪ್ರಮಾಣವು ಗಮನಾರ್ಹವಾಗಿ ಇಳಿಕೆಯಾಗಿತ್ತು. ಸುರಕ್ಷತೆ ದೃಷ್ಟಿಯಿಂದ ತುರ್ತು ವಾಹನಗಳಿಗೆ ಹಾಗೂ ಮಹಿಳಾ ಚಾಲಕಿಯರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಬೆಸ ಸಮ ಯೋಜನೆಯನ್ನು ದೆಹಲಿಯಲ್ಲಿ 2016ರಲ್ಲಿ ಮೊದಲ ಬಾರಿಗೆ ಜಾರಿ ಮಾಡಲಾಯಿತು.

ಪಟಾಕಿ ಬದಲಿಗೆ ಲೇಸರ್ ಶೋ ಏರ್ಪಡಿಸಲಿದ್ದಾರೆ ಸಿ‍ಎಂ ಕೇಜ್ರಿವಾಲ್

ಜಾರಿಯಾದಾಗಿನಿಂದ ಈ ಯೋಜನೆಯು ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ. ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ವಾರಾಂತ್ಯದಲ್ಲಿ ಬೆಸ ಸಮ ನಿಯಮವು ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.

ಪಟಾಕಿ ಬದಲಿಗೆ ಲೇಸರ್ ಶೋ ಏರ್ಪಡಿಸಲಿದ್ದಾರೆ ಸಿ‍ಎಂ ಕೇಜ್ರಿವಾಲ್

ಹೆಚ್ಚು ಅವಧಿಗೆ ಜಾರಿಗೊಳಿಸಿದರೆ ಅನಾನುಕೂಲವಾಗುವ ಕಾರಣಕ್ಕೆ ಬೆಸ ಸಮ ನಿಯಮವನ್ನು ಸೀಮಿತ ಸಮಯದ ಅವಧಿಗೆ ಮಾತ್ರ ಜಾರಿಗೊಳಿಸಲಾಗುವುದು. ಸಂಶೋಧನೆಯ ಪ್ರಕಾರ ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿದೆ.

ಪಟಾಕಿ ಬದಲಿಗೆ ಲೇಸರ್ ಶೋ ಏರ್ಪಡಿಸಲಿದ್ದಾರೆ ಸಿ‍ಎಂ ಕೇಜ್ರಿವಾಲ್

ವಾಹನಗಳು, ಕೈಗಾರಿಕೆಗಳು, ಕಸವನ್ನು ಸುಡುವುದರಿಂದ ಉಂಟಾಗುವ ಹೊಗೆ, ಹತ್ತಿರದ ಜಮೀನುಗಳಲ್ಲಿರುವ ಬೆಳೆ ಅವಶೇಷಗಳಿಂದ ವಾಯು ಮಾಲಿನ್ಯವು ಏರಿಕೆಯಾಗುತ್ತಿದೆ. ದೆಹಲಿ ಸರ್ಕಾರವು ವಾಯು ಮಾಲಿನ್ಯ ನಿಯಂತ್ರಣಕ್ಕೆ ಏಳು ಅಂಶಗಳ ಕ್ರಿಯಾ ಯೋಜನೆಯನ್ನು ಸಿದ್ದ ಪಡಿಸಿದೆ.

ಪಟಾಕಿ ಬದಲಿಗೆ ಲೇಸರ್ ಶೋ ಏರ್ಪಡಿಸಲಿದ್ದಾರೆ ಸಿ‍ಎಂ ಕೇಜ್ರಿವಾಲ್

ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍‍ರವರು ಮಾಲಿನ್ಯವು 25%ನಷ್ಟು ಕಡಿಮೆಯಾಗಿದೆ. ವಾಯು ಮಾಲಿನ್ಯವು ಕಡಿಮೆಗೊಳಿಸಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾಗುತ್ತಿರುವ ಏಕೈಕ ರಾಜ್ಯ ದೆಹಲಿಯಾಗಿದೆ ಎಂದು ಹೇಳಿದರು.

MOST READ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಪಟಾಕಿ ಬದಲಿಗೆ ಲೇಸರ್ ಶೋ ಏರ್ಪಡಿಸಲಿದ್ದಾರೆ ಸಿ‍ಎಂ ಕೇಜ್ರಿವಾಲ್

ವಾಯು ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿಯ ರಾಜ್ಯ ಸರ್ಕಾರವು 1,000 ಎಲೆಕ್ಟ್ರಿಕ್ ಬಸ್ಸುಗಳನ್ನು ಬಿಡುಗಡೆಗೊಳಿಸಿದೆ. ಈ ಬಸ್ಸುಗಳು ಪರಿಸರ ಸ್ನೇಹಿಯಾಗಿದ್ದು ಮಾಲಿನ್ಯವನ್ನು ಕಡಿಮೆ ಮಾಡಲಿವೆ. ಸಮ ಬೆಸ ನಿಯಮವನ್ನು ಮೊದಲ ಬಾರಿಗೆ 2014ರಲ್ಲಿ ರೋಮ್‍‍ನಲ್ಲಿ ಜಾರಿಗೊಳಿಸಲಾಗಿತ್ತು.

MOST READ: ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಪಟಾಕಿ ಬದಲಿಗೆ ಲೇಸರ್ ಶೋ ಏರ್ಪಡಿಸಲಿದ್ದಾರೆ ಸಿ‍ಎಂ ಕೇಜ್ರಿವಾಲ್

ರೋಮ್ ನಗರದಲ್ಲಿ ವಾಯು ಮಾಲಿನ್ಯವು ಯಾವ ಪ್ರಮಾಣದಲ್ಲಿ ಹದಗೆಟ್ಟಿತ್ತು ಎಂದರೆ ಅಲ್ಲಿನ ಸರ್ಕಾರವು ರಸ್ತೆಯಲ್ಲಿ ಕಾರುಗಳ ಸಂಚಾರನ್ನು ನಿಷೇಧಿಸಿತ್ತು. ಈ ನಿಯಮವನ್ನು ಅಲ್ಲಿ ಜಾರಿಗೊಳಿಸಿದ ನಂತರ ವಾಯು ಮಾಲಿನ್ಯ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿ, ಆರೋಗ್ಯಕರವಾದ ವಾತಾವರಣ ನಿರ್ಮಾಣವಾಗಿತ್ತು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಪಟಾಕಿ ಬದಲಿಗೆ ಲೇಸರ್ ಶೋ ಏರ್ಪಡಿಸಲಿದ್ದಾರೆ ಸಿ‍ಎಂ ಕೇಜ್ರಿವಾಲ್

ಗಮನಿಸಬೇಕಾದ ಸಂಗತಿಯೆಂದರೆ, ದೆಹಲಿ ಸರ್ಕಾರವು ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸದಂತೆ ದೆಹಲಿಯ ನಾಗರೀಕರನ್ನು ಒತ್ತಾಯಿಸಿದೆ. ಇದರ ಬದಲಿಗೆ ಸರ್ಕಾರದ ವತಿಯಿಂದ ಲೇಸರ್ ಶೋವನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದೆ.

ಪಟಾಕಿ ಬದಲಿಗೆ ಲೇಸರ್ ಶೋ ಏರ್ಪಡಿಸಲಿದ್ದಾರೆ ಸಿ‍ಎಂ ಕೇಜ್ರಿವಾಲ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ದೆಹಲಿಯು ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಒಂದಾಗಿದೆ. ಕಳೆದ ಕೆಲ ವರ್ಷಗಳಿಂದ ಮಾಲಿನ್ಯ ಪ್ರಮಾಣವು ವಿಪರೀತವಾಗಿ ಏರಿಕೆಯಾಗಿದೆ. ಎಲೆಕ್ಟ್ರಿಕ್ ವಾಹನಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸುವವರೆಗೆ ಸಮ ಬೆಸ ಯೋಜನೆಯು ತಾತ್ಕಾಲಿಕ ಪರಿಹಾರವಾಗಿರಲಿದೆ. ದೀಪಾವಳಿಯ ಪಟಾಕಿ ಸಂಬಂಧ ಮುಖ್ಯಮಂತ್ರಿ ಕೇಜ್ರಿವಾಲ್‍‍ರವರು ನೀಡಿರುವ ಹೇಳಿಕೆಯು ಹಾಸ್ಯಾಸ್ಪದವಾಗಿದೆ.

Article Published On: Saturday, September 14, 2019, 11:03 [IST]
English summary
Odd-Even Rule Returns To Delhi From November: Aims To Reduce Air Pollution - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+