ವಾಹನ ಮಾರಾಟ ಹೆಚ್ಚಳಕ್ಕಾಗಿ ಜಿಎಸ್‌ಟಿ ತಗ್ಗಿಸುವ ಸುಳಿವು ಕೊಟ್ಟ ಕೇಂದ್ರ ಸರ್ಕಾರ
ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ವಾಹನ ಉತ್ಪಾದನಾ ಸಂಸ್ಥೆಗಳ ಸಹಾಯಕ್ಕೆ ಧಾವಿಸಿರುವ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಮಾದರಿಯಲ್ಲಿ ಇಂಧನ ಆಧಾರಿತ ವಾಹನಗಳ ಮೇಲಿನ ಜಿಟಿಎಸ್‌ಟಿ ಪ್ರಮಾಣವನ್ನು ಸಹ ತಗ್ಗಿಸುವ ಭರವಸೆ ನೀಡಿದೆ.

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಚ್ಚರ್ ಸಂಘದ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು, ಸಂಕಷ್ಟದಲ್ಲಿರುವ ಆಟೋಮೊಬೈಲ್ ಉದ್ದಮ ಚೇತರಿಕೆಗೆ ಕೇಂದ್ರ ಸರ್ಕಾರವು ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಈ ವೇಳೆ ಆಟೋ ಉತ್ಪಾದನಾ ಸಂಸ್ಥೆಗಳ ಬೇಡಿಕೆ ಕುರಿತು ಪ್ರಕ್ರಿಯೆಸಿದ ಗಡ್ಕರಿಯವರು ಎಲೆಕ್ಟ್ರಿಕ್ ವಾಹನ ಮೇಲಿನ ಜಿಎಸ್‌ಟಿ ತಗ್ಗಿಸಿದ ಮಾದರಿಯಲ್ಲಿ ಇಂಧನಆಧರಿತ ವಾಹನಗಳಿಗೂ ಜಿಎಸ್‌ಟಿ ವಿನಾಯ್ತಿ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟಿಸುವ ಭರವಸೆ ನೀಡಿದ್ದಾರೆ.

ಕಳೆದ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭರ್ಜರಿ ಪ್ಯಾಕೇಜ್ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರವು ಜಿಎಸ್‌ಟಿ ಪ್ರಮಾಣವನ್ನು ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡುವ ಮೂಲಕ ಇಂಧನ ಆಧರಿತ ವಾಹನಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಶೇ.18ರಿಂದ ಶೇ.28ಕ್ಕೆ ಏರಿಕೆ ಮಾಡಿತ್ತು.

ಇದರಿಂದ ಇಂಧನ ಆಧರಿತ ವಾಹನ ಬೆಲೆಯಲ್ಲಿ ಒಂದೇ ಬಾರಿಗೆ ಬೆಲೆ ಹೆಚ್ಚಳವಾಗಿದ್ದರಿಂದ ಗ್ರಾಹಕರು ಹೊಸ ವಾಹನ ಖರೀದಿ ಯೋಜನೆಯನ್ನು ಮುಂದುಡಿದ್ದು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಭಾರೀ ಪ್ರಮಾಣದ ಹಿನ್ನಡೆಯಾಯಿತು.

ಅದು ಎಷ್ಟರ ಮಟ್ಟಿಗೆ ಅಂದರೇ, ಕಳೆದ 19 ವರ್ಷಗಳಲ್ಲೇ ಮೊದಲ ಬಾರಿಗೆ ಜನಪ್ರಿಯ ಕಾರು ಸಂಸ್ಥೆಗಳೇ ಹೊಸ ವಾಹನ ಉತ್ಪಾದನೆಯನ್ನು ತಾತ್ಕಲಿಕವಾಗಿ ಬಂದ್ ಮಾಡುವಷ್ಟು ಪರಿಸ್ಥಿತಿ ಎದುರಾಗಿದೆ. ಇದುವರೆಗೂ ಕೂಡಾ ಆಟೋ ಉದ್ಯಮವು ಕನಿಷ್ಠ ಪ್ರಮಾಣದ ವಾಹನಗಳ ಮಾರಾಟಕ್ಕೂ ಪರದಾಟುತ್ತಿದ್ದು, ವಾಹನ ಮಾರಾಟದ ಕುಸಿತ ಪರಿಣಾಮ ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ಇದೀಗ ಮಧ್ಯಪ್ರವೇಶಿದ್ದು, ಸದ್ಯದ ಪರಿಸ್ಥಿತಿ ಸುಧಾರಣೆಗೆ ಇನ್ನು ಮೂರರಿಂದ ನಾಲ್ಕು ತಿಂಗಳು ಬೇಕಾಗಬಹುದು ಎನ್ನಲಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ನಿಷೇಧ ಸದ್ಯಕ್ಕಿಲ್ಲ!
ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಚ್ಚರ್ ಸಂಘದ ಸಮಾವೇಶದಲ್ಲಿ ಆಟೋ ಉದ್ಯಮ ಚೇತರಿಕೆ ಕುರಿತು ಮಾತನಾಡುತ್ತಾ ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡ ಸಚಿವ ನಿತಿನ್ ಗಡ್ಕರಿಯವರು, ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ನಿಷೇಧ ಯೋಜನೆ ನಮ್ಮ ಮುಂದಿಲ್ಲ ಎಂದಿದ್ದಾರೆ.

ವಿಶ್ವಾದ್ಯಂತ 2030ರ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸುವ ಕುರಿತು ಹಲವು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ಬಗ್ಗೆ ನಿಮ್ಮ ನಿಲುವು ಎನು ಎನ್ನುವ ಕುರಿತು ಮಾತನಾಡಿದ ಗಡ್ಕರಿಯವರು ಅಂತಹ ಯೋಜನೆಗಳು ಸದ್ಯದ ಮಟ್ಟಿಗೆ ಸಾಧ್ಯವಿಲ್ಲ ಎನ್ನುವ ಸುಳಿವು ನೀಡಿದ್ದಾರೆ.
MOST READ:ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅಂದರೆ ಇನ್ನೂ 10 ವರ್ಷಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ತಗ್ಗಿಸಲು ಸಾಧ್ಯವೇ ಇಲ್ಲ ಎನ್ನುವಂತಹ ಮಾತುಗಳನ್ನಾಡಿರುವ ಗಡ್ಕರಿಯವರು, ಎಲೆಕ್ಟ್ರಿಕ್ ವಾಹನಗಳಿಗೆ ಗರಿಷ್ಠ ಬೆಂಬಲ ನೀಡಲು ಮಾತ್ರ ಸಾಧ್ಯವೆಂದಿದ್ದಾರೆ.
MOST READ: 26 ವರ್ಷಗಳ ಬಳಿಕ ಸ್ವಂತ ಕಾರು ಖರೀದಿಸಿದ ಮಹೀಂದ್ರಾ ಎಂಡಿ

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲೆ ಜನ ಅಷ್ಟೊಂದು ಅಲಂಬನೆಯಾಗಿರುವುದೇ ನಿಷೇಧ ಮಾಡಲು ಸಾಧ್ಯವಿಲ್ಲ ಎಂದಿರುವ ಸಾರಿಗೆ ಸಚಿವರು ಜನರ ಆಯ್ಕೆಯಲ್ಲಿ ಬದಲಾವಣೆಯಾದಾಗ ಮಾತ್ರವೇ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಬಹುದು ಎಂದಿದ್ದಾರೆ.
MOST READ: ವಾಹನ ಮಾರಾಟದಲ್ಲಿ ಸತತ ಕುಸಿತ- ಕಾರು ಉತ್ಪಾದನೆಗೆ ಮತ್ತೆ ಬ್ರೇಕ್ ಹಾಕಿದ ಮಾರುತಿ ಸುಜುಕಿ

ಇದರ ಜೊತೆಗೆ ಇಂಧನ ಆಧರಿತ ವಾಹನಗಳನ್ನು ನಿರ್ಬಂಧಿಸುವ ಸಂಬಂಧ ಕಳೆದ ಕೆಲ ದಿನಗಳ ಹಿಂದೆ ಜಾರಿಗೆ ತರಲಾಗಿದ್ದ ನೋಂದಣಿ ಶುಲ್ಕ ಹೆಚ್ಚಳ, ದುಬಾರಿ ಸೆಸ್ ಸೇರಿದಂತೆ ಹಲವು ಕಠಿಣ ಕ್ರಮಗಳು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದ್ದು, ಜಿಎಸ್‌ಟಿ ಪ್ರಮಾಣವನ್ನು ತಗ್ಗಿಸಿದ್ದಲ್ಲಿ ಹೊಸ ವಾಹನಗಳ ಬೆಲೆಯು ಗಣನೀಯವಾಗಿ ತಗ್ಗಬಹುದೆಂದು ನೀರಿಕ್ಷಿಸಲಾಗಿದೆ.


Click it and Unblock the Notifications