ಎಲೆಕ್ಟ್ರಿಕ್ ಆಟೋ ಬಿಡುಗಡೆಗೊಳಿಸಿದ ಪಿಯಾಜಿಯೊ
ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನವಾದ ಆಪೆ ಎಲೆಕ್ಟ್ರಿಕ್ ಆಟೋವನ್ನು ಬಿಡುಗಡೆಗೊಳಿಸಿದೆ. ಈ ಎಲೆಕ್ಟ್ರಿಕ್ ಆಟೋದ ಆರಂಭಿಕ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.97 ಲಕ್ಷಗಳಾಗಿದೆ.

ಹೊಸ ಸರಣಿಯ ಎಲೆಕ್ಟ್ರಿಕ್ ಆಪೆಯನ್ನು ಪ್ಯಾಸೆಂಜರ್ ಹಾಗೂ ಗೂಡ್ಸ್ ಸೆಗ್‍ಮೆಂಟ್ ಸೇರಿದಂತೆ ವಿವಿಧ ವರ್ಗಗಳಲ್ಲಿ ಮಾರಾಟ ಮಾಡಲಾಗುವುದು. ಪಿಯಾಜಿಯೊ ಕಂಪನಿಯು ಮೊದಲಿಗೆ ಆಪೆ ಎಲೆಕ್ಟ್ರಿಕ್ ಸರಣಿಯಡಿಯಲ್ಲಿ ಆಪೆ ಇ ಸಿಟಿಯನ್ನು ಬಿಡುಗಡೆಗೊಳಿಸಿದೆ.

ಆಪೆ ಇ ಸಿಟಿ ಹೊರತೆಗೆಯಬಹುದಾದ ಬ್ಯಾಟರಿ ಟೆಕ್ನಾಲಜಿ ಹೊಂದಿರುವ ಭಾರತದ ಮೊದಲ ಎಲೆಕ್ಟ್ರಿಕ್ ಆಟೋ ಆಗಿದೆ. ಈ ಆಟೋದಲ್ಲಿ 4.7 ಕಿ.ವ್ಯಾನ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 70ರಿಂದ 80 ಕಿ.ಮೀವರೆಗೂ ಚಲಿಸುತ್ತದೆ.

ಭಾರತದಲ್ಲಿನ ನಗರಗಳ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿರುವ ಪಿಯಾಜಿಯೊ ಆಪೆ ಇ ಸಿಟಿ ಎಲೆಕ್ಟ್ರಿಕ್ ಆಟೋಗಳಲ್ಲಿ ಹೊರತೆಗೆಯಬಹುದಾದ ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಅಳವಡಿಸಲಾಗಿದೆ.

ಈ ಸ್ವಾಪೇಬಲ್ ಬ್ಯಾಟರಿಗಳನ್ನು ಸನ್ ಮೊಬಿಲಿಟಿಯಿಂದ ಪಡೆಯಲಾಗಿದೆ. ಸನ್ ಮೊಬಿಲಿಟಿಯು ಇಂಟರ್‍ಚೇಂಜ್ ಸ್ಟೇಷನ್‍ಗಳ ಸೇವೆಯನ್ನು ಸಹ ನೀಡುತ್ತದೆ. ಇದರಿಂದಾಗಿ ಬ್ಯಾಟರಿಯು ಖಾಲಿಯಾದರೆ ಕೆಲವೇ ನಿಮಿಷಗಳಲ್ಲಿ ಬೇರೆ ಬ್ಯಾಟರಿಯನ್ನು ಅಳವಡಿಸಿಕೊಳ್ಳಬಹುದು.

ಪಿಯಾಜಿಯೊ ಗ್ರಾಹಕರು ಆಪ್ ಆಧಾರಿತ ಇಕೊ ಸಿಸ್ಟಂನಿಂದ ಬ್ಯಾಟರಿಯ ಚಾರ್ಜ್, ರಿಚಾರ್ಜ್ ಹಾಗೂ ಬ್ಯಾಟರಿ ಕೇಂದ್ರಗಳ ಬಗ್ಗೆ ತಿಳಿಯಬಹುದು. ಈ ಎಲೆಕ್ಟ್ರಿಕ್ ಆಟೋದ ಮುಂಭಾಗದಲ್ಲಿ ಈ ಸೆಗ್‍ಮೆಂಟಿನಲ್ಲಿಯೇ ಮೊದಲ ಬಾರಿಗೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ.

ಇದರ ಜೊತೆಗೆ ಚಾರ್ಜ್‍ನ ಸ್ಥಿತಿ, ಡ್ರೈವ್ ಮೋಡ್, ಸರ್ವಿಸ್ ಅಲರ್ಟ್, ಎಕಾನಾಮಿ ಮೋಡ್ ಸೇರಿದಂತೆ ಹಲವಾರು ಫೀಚರ್‍ಗಳಿವೆ. ಎಲೆಕ್ಟ್ರಿಕ್ ಆಟೋ ಬಿಡುಗಡೆಯ ಸಮಾರಂಭದಲ್ಲಿ ಪಿಯಾಜಿಯೊ ಕಂಪನಿಯು ಆಪೆ ಇ ಸಿಟಿ ಎಫ್‍ಎಕ್ಸ್ ಮೂಲಮಾದರಿಯನ್ನು ಸಹ ಪ್ರದರ್ಶಿಸಿತು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಆಪೆ ಇ ಸಿಟಿ ಎಫ್‍ಎಕ್ಸ್ ನಲ್ಲಿ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಆಟೋವನ್ನು 2020ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಇದಾದ ನಂತರ ಆಪೆ ಸರಣಿಯಲ್ಲಿರುವ ಉಳಿದ ಆಟೋಗಳನ್ನು ಬಿಡುಗಡೆಗೊಳಿಸಲಾಗುವುದು.
MOST READ: ವಾಹನ ಡೀಲರ್‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಬಿಡುಗಡೆ ಸಮಾರಂಭದಲ್ಲಿ ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್‌ನ ಎಂಡಿ ಹಾಗೂ ಸಿಇಒ ಡಿಯಾಗೋ ಗ್ರಾಫಿರವರು ಮಾತನಾಡಿ, ಆಪೆ 29 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಈಗ ಮೊದಲ ಬಾರಿಗೆ ಆಪೆ ಎಲೆಕ್ಟ್ರಿಕ್ ಆಟೋಗಳನ್ನು ಬಿಡುಗಡೆಗೊಳಿಸಲಾಗಿದೆ.
MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಆಪೆ ಇ-ಸಿಟಿಯನ್ನು ಮೊದಲ ಕೊಡುಗೆಯಾಗಿ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು. ವಿವಿಧ ರೀತಿಯ ಗ್ರಾಹಕರ ಅಗತ್ಯತೆಗಳಿಗಾಗಿ ಸ್ವ್ಯಾಪ್ ಮಾಡಬಹುದಾದ ಹಾಗೂ ಸ್ಥಿರವಾದ ಬ್ಯಾಟರಿ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿದ್ದೇವೆ.

ಸ್ವ್ಯಾಪ್ ಮಾಡಬಹುದಾದ ಟೆಕ್ನಾಲಜಿಗಾಗಿ, ಸನ್ ಮೊಬಿಲಿಟಿಯೊಂದಿಗೆ ಸಹಭಾಗಿತ್ವವನ್ನು ಮಾಡಿಕೊಳ್ಳಲಾಗಿದೆ. ಇದರಿಂದ ಗ್ರಾಹಕರಿಗೆ ಹೊಸದಾದ, ಸ್ಮಾರ್ಟ್ ಆದ ಹಾಗೂ ವಿಶಿಷ್ಟವಾಗಿ ಸ್ವ್ಯಾಪ್ ಮಾಡಬಹುದಾದ ಸ್ಮಾರ್ಟ್ ಬ್ಯಾಟರಿ ವ್ಯವಸ್ಥೆಯನ್ನು ನೀಡಲಾಗುತ್ತದೆ.

ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚು ಗಮನಹರಿಸುತ್ತಿವೆ. ಪಿಯಾಜಿಯೊ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ತನ್ನದೇ ಆದ ಯೋಜನೆಯನ್ನು ಹೊಂದಿದೆ. ಇದರಿಂದಾಗಿ ಶೀಘ್ರದಲ್ಲಿಯೇ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಬಹುದು ಎಂದು ಹೇಳಿದರು.

ಪಿಯಾಜಿಯೊ ಆಪೆ ಇ-ಸಿಟಿಯನ್ನು 36 ತಿಂಗಳು ಅಥವಾ 1 ಲಕ್ಷ ಕಿ.ಮೀ ವಾರಂಟಿಯೊಂದಿಗೆ ಮಾರಾಟ ಮಾಡಲಾಗುತ್ತದೆ. ಇದರ ಜೊತೆಗೆ 3 ವರ್ಷಗಳವರೆಗೆ ಉಚಿತ ಮೆಂಟೆನೆಂನ್ಸ್ ನೀಡಲಾಗುವುದು. ಕಂಪನಿಯು 3 ವರ್ಷದ ಎಎಂಸಿ ಪ್ಯಾಕೇಜ್ ಅನ್ನು ನೀಡಲಿದೆ. ಇದಕ್ಕಾಗಿ ರೂ.3000 ಪಾವತಿಸಬೇಕಾಗುತ್ತದೆ.


Click it and Unblock the Notifications








