ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ನಟ ನಾಗಾರ್ಜುನ

ವಿಶ್ವ ಬ್ಯಾಡ್ಮಿಂಟನ್ ತಾರೆ, ಮುತ್ತಿನ ನಗರಿಯ ಕುವರಿ ಪಿ.ವಿ. ಸಿಂಧು ಅವರಿಗೆ ಶುಭಾಷಯಗಳ ಜೊತೆ ಉಡುಗೊರೆಗಳ ಮಹಾಪೂರವೇ ಹರಿದುಬರುತ್ತಿದ್ದು, ಟಾಲಿವುಡ್ ಹಿರಿಯ ನಟ ನಾಗಾರ್ಜನ ಅವರು ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್5 ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ನಟ ನಾಗಾರ್ಜುನ

ಹೈದರಾಬಾದ್‍ನಲ್ಲಿರುವ ಅನ್ನಪೂರ್ಣ ಸ್ಟುಡಿಯೋದಲ್ಲಿ ಭೇಟಿ ಮಾಡಿದ ನಟ ನಾಗಾರ್ಜುನ ಅವರು ಪಿವಿ ಸಿಂಧು ಕೋಚ್ ಪುಲ್ಲೇಲ ಗೋಪಿಚಂದ್ ಅವರ ಸಮ್ಮುಖದಲ್ಲಿ ಬಿಎಂಡಬ್ಲ್ಯು ಎಕ್ಸ್5 ಕಾರನ್ನು ಉಡುಗೊರೆಯಾಗಿ ನೀಡಿದ್ದು, ಆಂಧ್ರ ಕ್ರಿಕೆಟ್ ಅಸೋಸಿಯೆಷನ್ ಮಾಜಿ ಅಧ್ಯಕ್ಷ ಚಾಮುಂಡೇಶ್ವರಿನಾಥ್ ಅವರು ಈ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಹಲವು ಕ್ರೀಡಾಪಟುಗಳಿಗೆ ಇದುವರೆಗೆ 22 ಕಾರುಗಳನ್ನು ಗಿಫ್ಟ್ ಆಗಿ ನೀಡಿರುವ ಚಾಮುಂಡೇಶ್ವರಿನಾಥ್ ಅವರು ಪಿವಿ ಸಿಂಧು ಅವರಿಗೆ ನಟ ನಾಗಾರ್ಜುನ ಅವರಿಂದ ಉಡುಗೊರೆಯನ್ನು ಹಸ್ತಾಂತರಿಸಿದ್ದಾರೆ.

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ನಟ ನಾಗಾರ್ಜುನ

ತೆಲಂಗಾಣ ಬ್ಯಾಡ್ಮಿಂಟನ್ ಅಸೋಸಿಯೆಷನ್ ಉಪಾಧ್ಯಕ್ಷರೂ ಆಗಿರುವ ನಟ ನಾಗಾರ್ಜುನ ಅವರು ಪಿವಿ ಸಿಂಧು ಅವರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ ಅತ್ಯುತ್ತಮ ತರಬೇತಿ ಮೂಲಕ ದೇಶದ ಕೀರ್ತಿಗೆ ಕಾರಣರಾದ ಪಿವಿ ಸಿಂಧು ಕೋಚ್ ಪುಲ್ಲೇಲ ಗೋಪಿಚಂದ್ ಅವರಿಗೂ ಧನ್ಯವಾದ ತಿಳಿಸಿದ್ದಾರೆ.

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ನಟ ನಾಗಾರ್ಜುನ

ಇನ್ನು ಪಿವಿ ಸಿಂಧು ಅವರಿಗೆ ಈ ಹಿಂದೆಯೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡಾ ಬಿಎಂಡಬ್ಲ್ಯು ಎಕ್ಸ್1 ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇದೀಗ ಮತ್ತಷ್ಟು ದುಬಾರಿ ಬೆಲೆಯ ಎಕ್ಸ್‌5 ಎಸ್‌ಯುವಿ ಆವೃತ್ತಿಯು ಉಡುಗೊರೆಯಾಗಿ ಬಂದಿದ್ದು, ಆನ್‌ರೋಡ್ ಪ್ರಕಾರ ಈ ಕಾರಿನ ಬೆಲೆಯು ಆರಂಭಿಕವಾಗಿ ರೂ. 86.20 ಲಕ್ಷದಿಂದ ಹೈ ಎಂಡ್ ಮಾದರಿಯು ರೂ.97.39 ಲಕ್ಷ ಬೆಲೆ ಹೊಂದಿದೆ.

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ನಟ ನಾಗಾರ್ಜುನ

ಹೊಸ ಬಿಎಂಡಬ್ಲ್ಯು ಎಕ್ಸ್5 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಎಂಜಿನ್ ಮಾದರಿಗಳಲ್ಲಿ ಲಭ್ಯವಿದ್ದು, ಡೀಸೆಲ್ ಮಾದರಿಯಲ್ಲಿ ಎಕ್ಸ್ ಡ್ರೈವ್ 30ಡಿ ಸ್ಪೋರ್ಟ್ಸ್ ಮತ್ತು ಎಕ್ಸ್ ಡ್ರೈವ್ 30ಡಿ ಎಕ್ಸ್ ಲೈನ್ ಎಂಬ ಎರಡು ವೆರಿಯೆಂಟ್‌ಗಳಿವೆ. ಹಾಗೆಯೇ ಪೆಟ್ರೋಲ್ ಮಾದರಿಯಲ್ಲಿ ಟಾಪ್ ಎಂಡ್‍ ಎಕ್ಸ್‌ಡ್ರೈವ್ 40ಐ ಎಂ ಸ್ಪೋರ್ಟ್ ವಾಹನವನ್ನು ಬಿಡುಗಡೆ ಮಾಡಲಾಗಿದ್ದರೂ ಹೊಸ ವೆರಿಯೆಂಟ್ ವರ್ಷದ ಕೊನೆಯಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ನಟ ನಾಗಾರ್ಜುನ

ಸಿ‍ಎಲ್‍ಎ‍ಆರ್ ಪ್ಲಾಟ್‍‍ಫಾರಂ ಮೇಲೆ ನಿರ್ಮಾಣಗೊಂಡಿರುವ ಬಿ‍ಎಂ‍‍ಡಬ್ಲ್ಯು ಎಕ್ಸ್5 ಮಾದರಿಯು, ಹೊಸ ತಲೆಮಾರಿನ ಎಕ್ಸ್5 ಮಾದರಿಗಿಂತಲೂ ಹೆಚ್ಚು ಉದ್ದ, ಎತ್ತರ ಮತ್ತು ಅಗಲವಾದ ವಿನ್ಯಾಸವನ್ನು ಹೊಂದಿದೆ.

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ನಟ ನಾಗಾರ್ಜುನ

ಹಳೆ ತಲೆಮಾರಿನ ಎಕ್ಸ್5 ಆವೃತ್ತಿಗೆ ಹೋಲಿಕೆ ಮಾಡಿದಲ್ಲಿ ಹೊಸ ಎಕ್ಸ್5 ಮಾದರಿಯು ಹೆಚ್ಚುವರಿಯಾಗಿ 35-ಎಂಎಂ ಉದ್ದ, 32-ಎಂಎಂ ಅಗಲ ಮತ್ತು 11-ಎಂಎಂ ಎತ್ತರವನ್ನು ಹೊಂದಿದ್ದು, ಹಲವು ಪ್ರೀಮಿಯಂ ಫೀಚರ್ಸ್‌ಗಳು ಹೊಸ ಕಾರಿಗೆ ಮತ್ತಷ್ಟು ಐಷಾರಾಮಿ ಕಳೆತಂದಿವೆ.

MOST READ: ಖದೀಮರಿಗೆ ಎಸ್‍‍ಯುವಿ ಕಾರುಗಳೇ ಯಾಕೆ ಹೆಚ್ಚು ಟಾರ್ಗೆಟ್?

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ನಟ ನಾಗಾರ್ಜುನ

ಬಿ‍ಎಂ‍‍ಡಬ್ಲ್ಯು ಎಕ್ಸ್5 ನಲ್ಲಿ ಕಾಕ್‍‍ಪಿಟ್ ಪ್ರೊಫೆಶನಲ್ ಡಿಸ್‍‍ಪ್ಲೇ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಅಳವಡಿಸಲಾಗಿರುವ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಲೆದರ್ ಅಪ್‍‍ಹೊಲ್‍‍ಸ್ಟರಿ, ವೈರ್‍‍ಲೆಸ್ ಚಾರ್ಜಿಂಗ್, 4 ಝೋನ್ ಕ್ಲೈಮೇಟ್ ಕಂಟ್ರೋಲ್, ಪನೊರಾಮಿಕ್ ಸನ್‍‍ರೂಫ್, ಆಂಬಿಯಂಟ್ ಲೈಟಿಂಗ್ ಮತ್ತು ಹಿಂಬದಿಯ ಪ್ರಯಾಣಿಕರಿಗಾಗಿ ಸ್ಕ್ರೀನ್‍‍ಗಳನ್ನು ಅಳವಡಿಸಲಾಗಿದೆ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ನಟ ನಾಗಾರ್ಜುನ

ಹೊಸ ಬಿ‍ಎಂ‍‍ಡಬ್ಲ್ಯು ಎಕ್ಸ್5 ಕಾರು 3.0 ಲೀಟರ್ 6 ಸಿಲಿಂಡರಿನ ಡೀಸೆಲ್ ಎಂಜಿನ್ ಹೊಂದಿದ್ದು, 261-ಬಿ‍‍ಹೆಚ್‍‍ಪಿ ಮತ್ತು 620-ಎನ್‍ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ ಎಕ್ಸ್ ಡ್ರೈವ್ 40ಐ ಎಂ ಸ್ಪೋರ್ಟ್ ಮಾದರಿಯು 3.0 ಲೀಟರ್ 6 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 340-ಬಿ‍‍ಹೆಚ್‍‍ಪಿ ಮತ್ತು 450-ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ- ಹೊಸ ಉದ್ಯಮಕ್ಕೆ ಕೈಜೋಡಿಸಿದ ಮಾರುತಿ ಸುಜುಕಿ ಮತ್ತು ಟೊಯೊಟಾ

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ನಟ ನಾಗಾರ್ಜುನ

ಎರಡೂ ಮಾದರಿಗಳಲ್ಲಿ 8 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಇ ಮತ್ತು ಆಡಿ ಕ್ಯೂ7 ವಾಹನಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.

Article Published On: Tuesday, September 17, 2019, 19:00 [IST]
English summary
PV Sindhu Gets Gift Brand New BMW X5 SUV. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+