ಮಾರಾಟಕ್ಕಿದೆ ರತನ್ ಟಾಟಾ ಮನಮೆಚ್ಚಿದ ಕಾರು

ಶತಕೋಟ್ಯಾಧಿಪತಿ ರತನ್ ಟಾಟಾ ವಿವಿಧ ಕ್ಷೇತ್ರಗಳಲ್ಲಿ ನೂರಾರು ಕಂಪನಿಗಳನ್ನು ಹೊಂದಿದ್ದಾರೆ. ಟಾಟಾ ಮೋಟಾರ್ಸ್ ದೇಶದ ಆಟೋಮೊಬೈಲ್ ಉದ್ಯಮದಲ್ಲಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಟಾಟಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ವರ್ಷಗಳಿಂದಿದ್ದು, ಈ ಕಂಪನಿಯ ವಾಹನಗಳು ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದ್ದವು.

ಮಾರಾಟಕ್ಕಿದೆ ರತನ್ ಟಾಟಾ ಮನಮೆಚ್ಚಿದ ಕಾರು

ಇತ್ತೀಚಿನ ವರ್ಷಗಳವರೆಗೂ ಟಾಟಾ ಮೋಟಾರ್ಸ್‍‍ನ ಮುಖ್ಯಸ್ಥರಾಗಿದ್ದ ರತನ್ ಟಾಟಾರವರು ಸ್ವತ: ಕಾರು ಪ್ರಿಯರಾಗಿದ್ದು, ಹಲವಾರು ಲಗ್ಷುರಿ ಕಾರುಗಳ ಒಡೆಯರಾಗಿದ್ದಾರೆ. ರತನ್ ಟಾಟಾರವರು ಬಳಸುತ್ತಿದ್ದ ಒಂದು ಲಗ್ಷುರಿ ಕಾರ್ ಅನ್ನು ಈಗ ಮಾರಾಟ ಮಾಡಲಾಗುತ್ತಿದೆ.

ಮಾರಾಟಕ್ಕಿದೆ ರತನ್ ಟಾಟಾ ಮನಮೆಚ್ಚಿದ ಕಾರು

1978ರ ಮಾಡೆಲ್‍‍ನ ಬ್ಯುಕ್ ಸ್ಕೈಲಾರ್ಕ್ ಕಾರ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ರತನ್ ಟಾಟಾರವರು ಖರೀದಿಸಿದ್ದರು. ಆಗಿನ ಕಾಲಕ್ಕೆ ಈ ಕಾರ್ ಅನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿತ್ತು. ಎಡಭಾಗದಲ್ಲಿ ಸ್ಟೀಯರಿಂಗ್ ಹೊಂದಿದ್ದ ಈ ಕಾರಿನಲ್ಲಿ ಈಗಲೂ ಸ್ಟೀಯರಿಂಗ ಎಡಭಾಗದಲ್ಲಿಯೇ ಇದೆ.

ಮಾರಾಟಕ್ಕಿದೆ ರತನ್ ಟಾಟಾ ಮನಮೆಚ್ಚಿದ ಕಾರು

ಈ ಕಾರ್ ಅನ್ನು ಮಾರಾಟ ಮಾಡುವ ಬಗ್ಗೆ ಫೇಸ್ ಬುಕ್‍‍ನಲ್ಲಿ ಪೋಸ್ಟ್ ಮಾಡಲಾಗಿದೆ. ಕಾರು ಖರೀದಿಸಿದ್ದಾಗ ಇದ್ದ ಇಂಟಿರಿಯರ್ ಅನ್ನು ಈಗಲೂ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಈ ಕಾರಿಗೆ ರೂ.14 ಲಕ್ಷ ನಿಗದಿಪಡಿಸಲಾಗಿದೆ. ಬೆಲೆಯನ್ನು ಕಡಿಮೆ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಮಾರಾಟಕ್ಕಿದೆ ರತನ್ ಟಾಟಾ ಮನಮೆಚ್ಚಿದ ಕಾರು

ಈ ಪೋಸ್ಟ್ ನಲ್ಲಿರುವ ಚಿತ್ರಗಳಲ್ಲಿ ವಾಹನವು ಉತ್ತಮ ಸ್ಥಿತಿಯಲ್ಲಿರುವುದನ್ನು ಕಾಣಬಹುದು. ಈಗ ಈ ಕಾರಿನ ಮಾಲೀಕರಾಗಿರುವವರು ಈ ಕಾರ್ ಅನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದಾರೆ. ಈ ಕಾರಿನಲ್ಲಿರುವ ಬ್ಯಾಡ್ಜ್ ಹಾಗೂ ಲೊಗೊಗಳು ಒಂದೇ ಕಡೆಯಲ್ಲಿವೆ.

ಮಾರಾಟಕ್ಕಿದೆ ರತನ್ ಟಾಟಾ ಮನಮೆಚ್ಚಿದ ಕಾರು

ಕಾರ್ ಅನ್ನು ಉತ್ಪಾದಿಸಿದಾಗ ಅಳವಡಿಸಿದ್ದ ಬಣ್ಣವೂ ಈಗಲೂ ಹಾಗೆಯೇ ಇದೆ. ಇದರಿಂದಾಗಿ ಈ ಕಾರ್ ಅನ್ನು ಉತ್ತಮವಾಗಿ ನಿರ್ವಹಿಸಿರುವುದು ಕಂಡು ಬರುತ್ತದೆ. ಕಾರಿನ ಇಂಟಿರಿಯರ್ ಹಾಗೆಯೇ ಇದ್ದು, ಹೆಚ್ಚುವರಿಯಾಗಿ ಯಾವುದೇ ಮಾಡಿಫೈ ಮಾಡಲಾಗಿಲ್ಲ.

ಮಾರಾಟಕ್ಕಿದೆ ರತನ್ ಟಾಟಾ ಮನಮೆಚ್ಚಿದ ಕಾರು

ಆದರೆ ಈ ಕಾರ್ ಅನ್ನು ಖರೀದಿಸಿದ ನಂತರ, ಬೇರೆ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಈ ವ್ಹೀಲ್‍‍ಗಳಿಂದಾಗಿ ಕಾರಿನ ಲುಕ್ ಹೆಚ್ಚಿದೆ. ಅಂದ ಹಾಗೆ ಈ ಕಾರು ಎಂ‍ಎಂ‍‍ಹೆಚ್ 7474 ಎಂಬ ನಂಬರನ್ನು ಹೊಂದಿದೆ.

MOST READ: ಎ‍‍ಬಿ‍ಎಸ್‍‍ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರರು..!

ಮಾರಾಟಕ್ಕಿದೆ ರತನ್ ಟಾಟಾ ಮನಮೆಚ್ಚಿದ ಕಾರು

ಈ ಕಾರಿನಲ್ಲಿ ವಿ8 ಎಂಜಿನ್ ಅಳವಡಿಸಲಾಗಿದೆ. 1978ರಲ್ಲಿ ಬ್ಯುಕ್ ಕಂಪನಿಯು ಒಟ್ಟು 1,14,220 ಸ್ಕೈಲಾರ್ಕ್ ಕಾರುಗಳನ್ನು ಉತ್ಪಾದಿಸಿತ್ತು. ಇದರಲ್ಲಿ ಬಹುತೇಕ ಕಾರುಗಳು ವಿ6 ಎಂಜಿನ್ ಹೊಂದಿದ್ದವು. ಕೇವಲ 17,116 ಕಾರುಗಳಲ್ಲಿ ಮಾತ್ರ ವಿ8 ಎಂಜಿನ್ ಅಳವಡಿಸಲಾಗಿತ್ತು. ಆಗ ಮೂರು ರೀತಿಯ ವಿ8 ಎಂಜಿನ್‍‍ಗಳಿದ್ದವು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಮಾರಾಟಕ್ಕಿದೆ ರತನ್ ಟಾಟಾ ಮನಮೆಚ್ಚಿದ ಕಾರು

5.0 ಲೀಟರಿನ ವಿ8 ಎಂಜಿನ್ 145 ಬಿ‍‍ಹೆಚ್‍‍ಪಿ ಪವರ್ ಹಾಗೂ 332 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, 5.8 ಲೀಟರಿನ ವಿ8 ಎಂಜಿನ್ 155 ಬಿ‍‍ಹೆಚ್‍‍ಪಿ ಪವರ ಹಾಟು 380 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 5.7 ಲೀಟರಿನ ವಿ8 ಎಂಜಿನ್ 170 ಬಿ‍‍ಹೆಚ್‍‍ಪಿ ಪವರ್ ಹಾಗೂ 373 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಮಾರಾಟಕ್ಕಿದೆ ರತನ್ ಟಾಟಾ ಮನಮೆಚ್ಚಿದ ಕಾರು

ಈ ಕಾರಿನಲ್ಲಿ ಯಾವ ವಿಧದ ವಿ8 ಎಂಜಿನ್ ಅಳವಡಿಸಲಾಗಿದೆ ಎಂದು ತಿಳಿದು ಬಂದಿಲ್ಲ. ಈ ಎಂಜಿನ್‍‍ನಲ್ಲಿ 2 ಸ್ಪೀಡ್‍‍ನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿತ್ತು. ಈ ಕಾರು ಸ್ಕೈಲಾರ್ಕ್‍‍ನ ಎಸ್‍‍ಆರ್ ಮಾದರಿಯಾಗಿದ್ದು, ಈ ಕಾರುಗಳಲ್ಲಿರುವ ಟಾಪ್ ಎಂಡ್ ಮಾದರಿಯಾಗಿದೆ. ಜೊತೆಗೆ ಲಗ್ಷುರಿ ಮಾದರಿ ಕೂಡ ಆಗಿದೆ.

ಮಾರಾಟಕ್ಕಿದೆ ರತನ್ ಟಾಟಾ ಮನಮೆಚ್ಚಿದ ಕಾರು

ರತನ್ ಟಾಟಾರವರು ಫೆರಾರಿ ಕ್ಯಾಲಿಫೋರ್ನಿಯಾ, ಮರ್ಸಿಡಿಸ್ ಬೆಂಝ್ 500 ಎಸ್‍ಎಲ್, ಲ್ಯಾಂಡ್ ರೋವರ್ ಫ್ರೀ ಲ್ಯಾಂಡರ್, ಮರ್ಸಿಡಿಸ್ ಬೆಂಝ್ ಡಬ್ಲ್ಯು 124, ಕ್ಯಾಡಿಲಾಕ್ ಎಕ್ಸ್ ಎಲ್‍ಆರ್, ಕ್ರೈಸ್ಲರ್ ಸೆಬ್ರಿಂಗ್, ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಹಾಗೂ ಬ್ಯೂಕ್ ಸೂಪರ್ 8 ಸೇರಿದಂತೆ ಹಲವು ಲಗ್ಷುರಿ ಕಾರುಗಳೊಂದಿಗೆ ಕಾಣಿಸಿಕೊಂಡಿದ್ದಾರೆ.

ಮಾರಾಟಕ್ಕಿದೆ ರತನ್ ಟಾಟಾ ಮನಮೆಚ್ಚಿದ ಕಾರು

ರತನ್ ಟಾಟಾರವರು ಮಾಸ್ ಸೆಗ್‍‍ಮೆಂಟಿನ ಟಾಟಾ ನೆಕ್ಸಾನ್ ಕಾರ್ ಅನ್ನು ಸಹ ಹೊಂದಿದ್ದಾರೆ. ಹಿಂದೊಮ್ಮೆ ರತನ್ ಟಾಟಾರವರು ಹೋಂಡಾ ಸಿವಿಕ್ ಕಾರ್ ಅನ್ನು ಚಾಲನೆ ಮಾಡಿದ್ದರು. ಈಗ ಮಾರಾಟ ಮಾಡಲಾಗುತ್ತಿರುವ ಕಾರು ಯಾರ ಹೆಸರಿನಲ್ಲಿದೆ ಎಂಬುದು ತಿಳಿದು ಬಂದಿಲ್ಲ.

Image Courstey: Salman Vora/Facebook

Article Published On: Friday, September 27, 2019, 18:20 [IST]
English summary
Ratan Tata’s ultra RARE Buick sedan for sale - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+