ಹಳೆಯ ಮತ್ತು ಹೊಸ ಕಾರುಗಳ ಮೇಲೆ ಭರ್ಜರಿ ವಾರಂಟಿ ಘೋಷಿಸಿದ ರೆನಾಲ್ಟ್

ರೆನಾಲ್ಟ್ ಇಂಡಿಯಾ ಸಂಸ್ಥೆಯ ಕಾರುಗಳ ಮೇಲೆ ವಾರಂಟಿ ಅವಧಿಯನ್ನು ವಿಸ್ತರಣೆ ಮಾಡಿದ್ದು, ಹೊಸ ಮತ್ತು ಹಳೆಯ ಕಾರುಗಳ ಮೇಲೆ ಎನಿಟೈಮ್ ವಾರಂಟಿ ಯೋಜನೆ ಅಡಿ ಆಕರ್ಷಕ ಖಾತರಿ ಯೋಜನೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಹಳೆಯ ಮತ್ತು ಹೊಸ ಕಾರುಗಳ ಮೇಲೆ ಭರ್ಜರಿ ವಾರಂಟಿ ಘೋಷಿಸಿದ ರೆನಾಲ್ಟ್

ಹೊಸ ಯೋಜನೆ ಅಡಿ 7 ವರ್ಷ ಅಥವಾ 1 ಲಕ್ಷ ಕಿ.ಮೀ ತನಕ ವಾರಂಟಿ ಪಡೆದುಕೊಳ್ಳಬಹುದಾಗಿದ್ದು, ಈ ಹಿಂದಿನ 50 ಸಾವಿರ ಕಿ.ಮೀ ಅಥವಾ 2 ವರ್ಷದ ಅವಧಿಯ ವಾರಂಟಿ ಯೋಜನೆಗಿಂತಲೂ ಹೊಸ ವಾರಂಟಿ ಯೋಜನೆಯು ಗರಿಷ್ಠ ಅವಧಿಯ ಸುರಕ್ಷತೆ ನೀಡಲಿದೆ. ಸದ್ಯ ಕ್ವಿಡ್ ಕಾರು ಮಾದರಿಯ ಮೇಲೆ 1 ಲಕ್ಷ ಕಿ.ಮೀ ಇಲ್ಲವೇ 4 ವರ್ಷಗಳ ಅವಧಿಗೆ ವಾರಂಟಿ ಪಡೆಯಬಹುದಾಗಿದ್ದು, ಇದನ್ನು ಕೂಡಾ ಸ್ಟ್ಯಾಂಡರ್ಡ್ ವಾರಂಟಿ ಮೇಲೆಯೇ 1 ಲಕ್ಷ ಕಿ.ಮೀ ಇಲ್ಲವೇ 5 ವರ್ಷಗಳ ಅವಧಿಗೆ ವಿಸ್ತರಣೆ ಮಾಡಿಸಿಕೊಳ್ಳಬಹುದಾಗಿದೆ.

ಹಳೆಯ ಮತ್ತು ಹೊಸ ಕಾರುಗಳ ಮೇಲೆ ಭರ್ಜರಿ ವಾರಂಟಿ ಘೋಷಿಸಿದ ರೆನಾಲ್ಟ್

ಹೊಸ ವಾರಂಟಿ ಯೋಜನೆಗಳಿಗಾಗಿ ರೆನಾಲ್ಟ್ ಸಂಸ್ಥೆಯು ಕ್ವಿಡ್ ಕಾರಿಗೆ ರೂ.5,775 ಮತ್ತು ಲೊಡ್ಜಿ ಎಂಪಿವಿ ಆವೃತ್ತಿಗೆ ರೂ.21,550 ದರ ನಿಗದಿಪಡಿಸಿದ್ದು, ಅಧಿಕೃತ ಸರ್ವೀಸ್ ಸೆಂಟರ್‌ಗಳಲ್ಲಿ ಹೊರತುಪಡಿಸಿ ಥರ್ಡ್ ಪಾರ್ಟಿ ಗ್ಯಾರೇಜ್‌ಗಳಲ್ಲಿ ಸೇವೆ ಪಡೆಯುವುದಾದರೇ ಆರಂಭಿಕವಾಗಿ ರೂ. 8,390 ಮತ್ತು ರೂ. 34,175 ದರ ನಿಗದಿ ಮಾಡಲಾಗಿದೆ.

ಹಳೆಯ ಮತ್ತು ಹೊಸ ಕಾರುಗಳ ಮೇಲೆ ಭರ್ಜರಿ ವಾರಂಟಿ ಘೋಷಿಸಿದ ರೆನಾಲ್ಟ್

ಹಾಗೆಯೇ ಮಾರಾಟದಿಂದ ಸ್ಥಗಿತಗೊಳಿಸಲಾದ ಪಲ್ಸ್ ಹ್ಯಾಚ್‌ಬ್ಯಾಕ್, ಸ್ಕಾಲಾ ಸೆಡಾನ್, ಫ್ಲ್ಯೂಯೆನ್ಸ್ ಎಕ್ಸಿಕ್ಯೂಟಿವ್ ಸೆಡಾನ್ ಮತ್ತು ಕೊಲಿಯೊಸ್ ಎಸ್‌ಯುವಿ ಕಾರುಗಳ ಮೇಲೂ ವಿಸ್ತರಿತ ವಾರಂಟಿ ನೀಡಲಾಗುತ್ತಿದ್ದು, ರೂ. 7,820ದಿಂದ ರೂ. 94,810 ದರ ನಿಗದಿಪಡಿಸಲಾಗಿದೆ.

ಹಳೆಯ ಮತ್ತು ಹೊಸ ಕಾರುಗಳ ಮೇಲೆ ಭರ್ಜರಿ ವಾರಂಟಿ ಘೋಷಿಸಿದ ರೆನಾಲ್ಟ್

ಹೊಸ ವಾರಂಟಿ ಪ್ಯಾಕೇಜ್‌ನಲ್ಲಿ ಕಾರಿನ ಎಂಜಿನ್, ಗೇರ್‌ಬಾಕ್ಸ್, ಇಸಿಎಂ, ಸ್ಟಾರ್ಟರ್ ಮೋಟಾರ್, ಆಲ್ಟ್ರಾನೇಟರ್, ಡಿಫರೆನ್ಷಿಯಲ್, ಎಸಿ ಕಂಪ್ರೆಸರ್ ಮತ್ತು ಸ್ಟೀರಿಂಗ್ ಬಾಕ್ಸ್‌ನಂತಹ ಪ್ರಮುಖ ಘಟಕಗಳ ಮೇಲೆ ವಾರಂಟಿ ಯೋಜನೆ ನೀಡವಾಗುತ್ತಿದ್ದು, ಹೊಸ ಪ್ಯಾಕೇಜ್‌ನೊಂದಿಗೆ ರೋಡ್ ಸೈಡ್ ಅಸಿಸ್ಟ್ ಸೇವೆಯೂ ದೊರೆಯಲಿದೆ. ಜೊತೆಗೆ ಗ್ರಾಹಕರು ತಮ್ಮ ವಾರಂಟಿ ಪ್ಯಾಕೇಜ್‌ನ ಅವಧಿ ಮುಗಿದಿದ್ದರೂ ಸಹ ಅಧಿಕೃತ ಸೇವಾ ಕೇಂದ್ರಗಳಲ್ಲಿ ಹೊಸ ಯೋಜನೆ ಅಡಿ ವಾರಂಟಿ ಕವರೇಜ್ ಪಡೆಯಬಹುದಾಗಿದೆ.

ಹಳೆಯ ಮತ್ತು ಹೊಸ ಕಾರುಗಳ ಮೇಲೆ ಭರ್ಜರಿ ವಾರಂಟಿ ಘೋಷಿಸಿದ ರೆನಾಲ್ಟ್

ಇನ್ನು ರೆನಾಲ್ಟ್ ಸಂಸ್ಥೆಯು ಶೀಘ್ರದಲ್ಲೇ ಬಿಎಸ್-6 ಕಾರುಗಳ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಲು ಭರ್ಜರಿ ಸಿದ್ದತೆ ನಡೆಸಿದ್ದು, 2020ರ ಏಪ್ರಿಲ್ 1ರಿಂದ ಸ್ಥಗಿತಗೊಳ್ಳಲಿರುವ ಬಿಎಸ್-4 ವಾಹನಗಳ ಸ್ಟಾಕ್ ಪ್ರಮಾಣವನ್ನು ಪೂರ್ಣಗೊಳಿಸಲು ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ.

ಹಳೆಯ ಮತ್ತು ಹೊಸ ಕಾರುಗಳ ಮೇಲೆ ಭರ್ಜರಿ ವಾರಂಟಿ ಘೋಷಿಸಿದ ರೆನಾಲ್ಟ್

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ತಾಂತ್ರಿಕ ಅಂಶಗಳನ್ನು ಒಳಗೊಂಡಿದ್ದರೂ ನೀರಿಕ್ಷಿತ ಮಟ್ಟದಲ್ಲಿ ಬೇಡಿಕೆ ಪಡೆಯುವಲ್ಲಿ ಹಿನ್ನೆಡೆ ಅನುಭವಿಸುತ್ತಿರುವ ಕ್ಯಾಪ್ಚರ್ ಕಾರು ಖರೀದಿ ಮೇಲೆ ಬರೋಬ್ಬರಿ ರೂ.3 ಲಕ್ಷದ ತನಕ ಡಿಸ್ಕೌಂಟ್ ನೀಡಲಾಗುತ್ತಿದೆ.

MOST READ: ಡಿ.1ರಿಂದ ಕಡ್ಡಾಯವಾಗಲಿರುವ ಫಾಸ್ಟ್‌ಟ್ಯಾಗ್ ಈಗಲೇ ಉಚಿತವಾಗಿ ಪಡೆಯಿರಿ..!

ಹಳೆಯ ಮತ್ತು ಹೊಸ ಕಾರುಗಳ ಮೇಲೆ ಭರ್ಜರಿ ವಾರಂಟಿ ಘೋಷಿಸಿದ ರೆನಾಲ್ಟ್

ರೆನಾಲ್ಟ್ ಕ್ಯಾಪ್ಚರ್ ಕಾರು ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ ಲಭ್ಯವಿದ್ದು, ಗ್ರಾಹಕರ ತಮ್ಮ ಬೇಡಿಕೆಯಂತೆ ವಿವಿಧ ಮಾದರಿಗಳನ್ನು ಡಿಸ್ಕೌಂಟ್ ದರಗಳಲ್ಲೇ ಆಯ್ಕೆ ಮಾಡಬಹುದಾಗಿದೆ.

MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಹಳೆಯ ಮತ್ತು ಹೊಸ ಕಾರುಗಳ ಮೇಲೆ ಭರ್ಜರಿ ವಾರಂಟಿ ಘೋಷಿಸಿದ ರೆನಾಲ್ಟ್

ಕ್ಯಾಪ್ಚರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.49 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಕಾರಿನ ಬೆಲೆಯು ರೂ.12.99 ಲಕ್ಷ ಬೆಲೆ ಹೊಂದಿದ್ದು, ಇದೀಗ ಡಿಸ್ಕೌಂಟ್ ನಂತರ ಕಾರಿನ ಬೆಲೆಯು ದೆಹಲಿ ಎಕ್ಸ್ ‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.44 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಬೆಲೆಯು 9.94 ಲಕ್ಷಕ್ಕೆ ಖರೀದಿ ಮಾಡಬಹುದಾಗಿದೆ. ಭರ್ಜರಿ ಡಿಸ್ಕೌಂಟ್ ಜೊತೆಗೆ ಕೆಲವು ಆಯ್ದ ಮಾದರಿಗಳ ಮೇಲೆ ಇನ್ನು ಹೆಚ್ಚಿನ ಆಫರ್‌ಗಳು ಕೂಡಾ ಲಭ್ಯವಿವೆ ಎನ್ನಲಾಗಿದೆ.

MOST READ: ಹೆಂಡತಿಗಿಂತ ಕಾರೇ ಬೆಸ್ಟ್, ಯಾಕೆ ಗೊತ್ತಾ?

ಹಳೆಯ ಮತ್ತು ಹೊಸ ಕಾರುಗಳ ಮೇಲೆ ಭರ್ಜರಿ ವಾರಂಟಿ ಘೋಷಿಸಿದ ರೆನಾಲ್ಟ್

ಒಟ್ಟಿನಲ್ಲಿ ರೆನಾಲ್ಟ್ ಸಂಸ್ಥೆಯು ಎಸ್‌ಯುವಿ ಪ್ರಿಯರನ್ನು ಸೆಳೆಯುವ ಉದ್ದೇಶದೊಂದಿಗೆ ವಿಶೇಷ ಡಿಸ್ಕೌಂಟ್ ಮತ್ತು ವಿಸ್ತರಿತ ವಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ರೆನಾಲ್ಟ್ ಕಾರು ಯಾವ ಮಟ್ಟದಲ್ಲಿ ಬೇಡಿಕೆ ಪಡೆದುಕೊಳ್ಳಲಿವೆ ಎಂಬುವುದನ್ನು ಕಾಯ್ದುನೋಡಬೇಕಿದೆ.

Most Read Articles

Kannada
English summary
Renault offering 7-year extended warranty scheme details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X