ಬಿಡುಗಡೆಯಾಗಲಿರುವ ಟಾಟಾ ಆಲ್‌ಟ್ರೊಜ್ ಉತ್ಪಾದನಾ ಆವೃತ್ತಿ ಅನಾವರಣ

ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಆಲ್‌ಟ್ರೊಜ್ ಕಾರು ಆವೃತ್ತಿಯು ಅನಾವರಣಗೊಂಡಿದ್ದು, ಪ್ರೀಮಿಯಂ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿ ಹೊಂದಿರುವ ಹೊಸ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಬಿಡುಗಡೆಯಾಗಲಿರುವ ಟಾಟಾ ಆಲ್‌ಟ್ರೊಜ್ ಉತ್ಪಾದನಾ ಆವೃತ್ತಿ ಅನಾವರಣ

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿ ಹೊಸ ಕಾರನ್ನು ಅಭಿವೃದ್ದಿಗೊಳಿಸಿದ್ದು, 2020ರ ಜನವರಿ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಖರೀದಿಗೆ ಇಂದಿನಿಂದಲೇ ರೂ.21 ಸಾವಿರ ಮುಂಗಡ ಪಾವತಿಸಿ ಅಧಿಕೃತವಾಗಿ ಬುಕ್ಕಿಂಗ್ ದಾಖಲಿಸಬಹುದು.

ಬಿಡುಗಡೆಯಾಗಲಿರುವ ಟಾಟಾ ಆಲ್‌ಟ್ರೊಜ್ ಉತ್ಪಾದನಾ ಆವೃತ್ತಿ ಅನಾವರಣ

ಹ್ಯಾರಿಯರ್ ಕಾರು ಬಿಡುಗಡೆಯ ಯಶಸ್ವಿ ನಂತರ ಕಾರು ಮಾರಾಟದಲ್ಲಿ ಮಹತ್ವದ ಬದಲಾಣೆ ಪರಿಚಯಿಸುತ್ತಿರುವ ಟಾಟಾ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಆಲ್ಫಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನುಅಭಿವೃದ್ದಿಗೊಳಿಸಿದೆ.

ಬಿಡುಗಡೆಯಾಗಲಿರುವ ಟಾಟಾ ಆಲ್‌ಟ್ರೊಜ್ ಉತ್ಪಾದನಾ ಆವೃತ್ತಿ ಅನಾವರಣ

ಇಂಪ್ಯಾಕ್ಟ್ 2.0 ಡಿಸೈನ್‌ನಿಂದಾಗಿ ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಎನ್ನಿಸುವ ಆಲ್‌ಟ್ರೊಜ್ ಕಾರು ಗ್ರೆ ಮತ್ತು ಬ್ಲ್ಯಾಕ್ ಬಣ್ಣದ ಕ್ಯಾಬಿನ್, ಡ್ಯಾಶ್‌ಬೋರ್ಡ್ ಸುತ್ತಲು ಸಿಲ್ವರ್ ಆಕ್ಸೆಂಟ್, ಫಾಲೋ ಮೀ ಹೆಡ್‌ಲ್ಯಾಂಪ್, ಹೈ ಎಂಡ್ ಆವೃತ್ತಿಯಲ್ಲಿ ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೋಡಣೆ ಹೊಂದಿದೆ.

ಬಿಡುಗಡೆಯಾಗಲಿರುವ ಟಾಟಾ ಆಲ್‌ಟ್ರೊಜ್ ಉತ್ಪಾದನಾ ಆವೃತ್ತಿ ಅನಾವರಣ

ಹಾಗೆಯೇ ಸ್ಟ್ಯಾಂಡರ್ಡ್ ಆಗಿ ಹೊಸ ಕಾರಿನಲ್ಲಿ 7-ಇಂಚಿನ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಮಡಿಕೆ ಮಾಡಬಹುದಾದ ಮಲ್ಟಿ ಇನ್‌ಫಾರ್ಮ್‌ಮೆಷನ್ ಡಿಸ್‌‌ಪ್ಲೇ, ಎತ್ತರವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಆಸನ, ಎರಡು ಬದಿಯಲ್ಲೂ ಸೆಂಟರ್ ಆರ್ಮ್ ರೆಸ್ಟ್, 12 ವೊಲ್ಟ್ ಚಾರ್ಜಿಂಗ್ ಪೋರ್ಟ್ಸ್, ನಾಲ್ಕು ಬಾಗಿಲುಗಳಲ್ಲೂ ಬಾಟಲ್ ಹೋಲ್ಡರ್ಸ್, ಕೀ ಲೆಸ್ ಎಂಟ್ರಿ, ಹಿಂಬದಿಯ ಸವಾರರಿಗೂ ಎಸಿ ವೆಂಟ್ಸ್ ಸೇರಿದಂತೆ ಹಲವಾರು ಹೊಸ ಫೀಚರ್ಸ್‌ಗಳು ಆಲ್‌ಟ್ರೊಜ್ ಕಾರಿನಲ್ಲಿವೆ.

ಬಿಡುಗಡೆಯಾಗಲಿರುವ ಟಾಟಾ ಆಲ್‌ಟ್ರೊಜ್ ಉತ್ಪಾದನಾ ಆವೃತ್ತಿ ಅನಾವರಣ

ಎಂಜಿನ್ ಸಾಮರ್ಥ್ಯ

ಆಲ್‌ಟ್ರೊಜ್ ಕಾರು ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಎರಡು ಕಾರು ಮಾದರಿಗಳಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದೆ.

ಬಿಡುಗಡೆಯಾಗಲಿರುವ ಟಾಟಾ ಆಲ್‌ಟ್ರೊಜ್ ಉತ್ಪಾದನಾ ಆವೃತ್ತಿ ಅನಾವರಣ

ಟಾಟಾ ಸಂಸ್ಥೆಯು ಹೊಸ ಕಾರಿನ ಎಂಜಿನ್ ಪರ್ಫಾಮೆನ್ಸ್‌ನಲ್ಲಿ ಕೆಲವು ಗಮನಸೆಳೆಯಬಹುದಾದ ಬದಲಾವಣೆಗಳನ್ನು ಮಾಡಿದ್ದು, ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಮತ್ತು ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಬಿಡುಗಡೆಯಾಗಲಿರುವ ಟಾಟಾ ಆಲ್‌ಟ್ರೊಜ್ ಉತ್ಪಾದನಾ ಆವೃತ್ತಿ ಅನಾವರಣ

ಇದರೊಂದಿಗೆ ಟಾಟಾ ಸಂಸ್ಥೆಯು ಹೊಸ ಆಲ್‌ಟ್ರೊಜ್ ಕಾರಿನಲ್ಲೂ ಈ ಹಿಂದಿನ ನೆಕ್ಸಾನ್ ಮತ್ತು ಹ್ಯಾರಿಯರ್ ಮಾದರಿಯಲ್ಲೇ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ ಒದಗಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ.

MOST READ: ಚಾರ್ಜಿಂಗ್ ಸೌಲಭ್ಯ ನೀಡದ ಬಸ್ಸಿಗೆ ಬಿತ್ತು 5,000 ದಂಡ

ಬಿಡುಗಡೆಯಾಗಲಿರುವ ಟಾಟಾ ಆಲ್‌ಟ್ರೊಜ್ ಉತ್ಪಾದನಾ ಆವೃತ್ತಿ ಅನಾವರಣ

ಹೊಸ ಕಾರಿನಲ್ಲಿ ಡ್ಯಯಲ್ ಏರ್‌ಬ್ಯಾಗ್, ಎಬಿಎಸ್ ಮತ್ತು ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಐಸೊಫಿಕ್ಸ್ ಚೈಲ್ಡ್ ಮೌಂಟ್ ಸೀಟ್, ಫ್ರಂಟ್ ಫಾಗ್ ಲೈಟ್ ಜೊತೆ ಕಾರ್ನಿಂಗ್ ಫಂಕ್ಷನ್ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಿದೆ.

MOST READ: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಗಾಗಿ ರೂ.2,800 ಕೋಟಿ ಹೂಡಿಕೆ ಮಾಡಲಿದೆ ಬಿವೈಡಿ

ಬಿಡುಗಡೆಯಾಗಲಿರುವ ಟಾಟಾ ಆಲ್‌ಟ್ರೊಜ್ ಉತ್ಪಾದನಾ ಆವೃತ್ತಿ ಅನಾವರಣ

ಆಲ್‌ಟ್ರೊಜ್ ಬೆಲೆ(ಅಂದಾಜು)

ಸದ್ಯ ಅನಾವರಣಗೊಂಡಿರುವ ಆಲ್‌ಟ್ರೊಜ್ ಕಾರು 2020ರ ಜನವರಿ ಕೊನೆಯ ವಾರದಲ್ಲಿ ಅಧಿಕೃತವಾಗಿ ಖರೀದಿ ಲಭ್ಯವಾಗಲಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.50 ಲಕ್ಷದಿಂದ ಟಾಪ್ ಎಂಡ್ ಕಾರಿನ ಬೆಲೆಯು ರೂ.8 ಲಕ್ಷ ಬೆಲೆ ಅಂದಾಜಿಸಲಾಗಿದೆ.

ಬಿಡುಗಡೆಯಾಗಲಿರುವ ಟಾಟಾ ಆಲ್‌ಟ್ರೊಜ್ ಉತ್ಪಾದನಾ ಆವೃತ್ತಿ ಅನಾವರಣ

ಈ ಮೂಲಕ ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಆಲ್‌ಟ್ರೊಜ್ ಕಾರು ಹ್ಯಾಚ್‌ಬ್ಯಾಕ್ ಪ್ರಿಯರ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಐ20, ಮಾರುತಿ ಬಲೆನೊ, ಟೊಯೊಟಾ ಗ್ಲಾಂಝಾ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.

Article Published On: Tuesday, December 3, 2019, 19:56 [IST]
English summary
Tata Altroz Production-Spec Revealed in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+