ಡಿಸೆಂಬರ್‍‍ನಲ್ಲಿ ಅನಾವರಣಗೊಳ್ಳಲಿದೆ ಟಾಟಾ ಆಲ್‍‍ಟ್ರೊಜ್

ಭಾರತೀಯ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಅಲ್‍‍ಟ್ರೊಜ್ ಅನ್ನು ಈ ವರ್ಷದ ಡಿಸ್‍ಂಬರ್‍‍ನಲ್ಲಿ ಅನಾವರಣಗೊಳಿಸುವುದಾಗಿ ಘೋಷಿಸಿದೆ. 2018ರ ಆಟೋ ಎಕ್ಸ್ ಪೋ ಸಮಯದಲ್ಲಿ ಇದನ್ನು ಕಾನ್ಸೆಪ್ಟ್ ವೆಹಿಕಲ್ ಎಂದು ಅನಾವರಣಗೊಳಿಸಲಾಗಿತ್ತು.

ಡಿಸೆಂಬರ್‍‍ನಲ್ಲಿ ಅನಾವರಣಗೊಳ್ಳಲಿದೆ ಟಾಟಾ ಆಲ್‍‍ಟ್ರೊಜ್

ಶೀಘ್ರದಲ್ಲೇ ಅನಾವರಣಗೊಳ್ಳಲಿರುವ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಟಾಟಾ ಆಲ್ಫಾ ಪ್ಲಾಟ್‍‍ಫಾರ್ಮ್‍ನ ಅಡಿಯಲ್ಲಿ ಅಭಿವೃದ್ದಿಪಡಿಸಲಾಗಿದೆ. ಈ ವಿಭಾಗದಲ್ಲಿ ಅತ್ಯಂತ ವಿಶಾಲವಾದ ಕಾರು ಎಂದು ಹೇಳಬಹುದುದಾಗಿದೆ. ಭವಿಷ್ಯದಲ್ಲಿ ಮಿನಿ-ಎಸ್‍‍ಯು‍ವಿ ನಿರ್ಮಿಸಲು ಅಲ್ಫಾ ಪ್ಲೇಟ್‍‍ಫಾರ್ಮ್ ಅನ್ನು ಬಳಸಲಿದೆ ಎಂದು ವರದಿಯಾಗಿದೆ.

ಡಿಸೆಂಬರ್‍‍ನಲ್ಲಿ ಅನಾವರಣಗೊಳ್ಳಲಿದೆ ಟಾಟಾ ಆಲ್‍‍ಟ್ರೊಜ್

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿ ಬಹುನಿರೀಕ್ಷೆಯನ್ನು ಹುಟ್ಟು ಹಾಕಿದೆ. ಹೊಸ ಅಲ್‍‍ಟ್ರೊಜ್ ಬಿಎಸ್-6 ಎಂಜಿನ್ ಅನ್ನು ಹೊಂದಿರಲಿದೆ.

ಡಿಸೆಂಬರ್‍‍ನಲ್ಲಿ ಅನಾವರಣಗೊಳ್ಳಲಿದೆ ಟಾಟಾ ಆಲ್‍‍ಟ್ರೊಜ್

ಟಾಟಾ ಸಂಸ್ಥೆಯು ಹೊಸ ಕಾರಿನ ಎಂಜಿನ್ ಪರ್ಫಾಮೆನ್ಸ್‌ನಲ್ಲಿ ಕೆಲವು ಗಮನಸೆಳೆಯಬಹುದಾದ ಬದಲಾವಣೆಗಳನ್ನು ಮಾಡಿದ್ದು, ಪ್ರಮುಖ ವಿಚಾರ ಅಂದ್ರೆ ಹೊಸ ಆಲ್‌ಟ್ರೊಜ್ ಕಾರನ್ನು ಸಹ ಇಂಪ್ಯಾಕ್ಟ್ ಡಿಸೈನ್ 2.0 ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

ಡಿಸೆಂಬರ್‍‍ನಲ್ಲಿ ಅನಾವರಣಗೊಳ್ಳಲಿದೆ ಟಾಟಾ ಆಲ್‍‍ಟ್ರೊಜ್

2.0 ವಿನ್ಯಾಸದಿಂದ ಕಾರಿನ ತೂಕವನ್ನು ಕಡಿತಗೊಳಿಸುವಲ್ಲಿ ಸಾಕಷ್ಟು ನೆರವಾಗಿದ್ದು, ಇದು ನೇರವಾಗಿ ಕಾರಿನ ಎಂಜಿನ್ ಪರ್ಫಾಮೆನ್ಸ್ ಸುಧಾರಣೆಯಾಗುವುದಲ್ಲದೇ ಮೈಲೇಜ್ ಪ್ರಮಾಣ ಕೂಡಾ ಹೆಚ್ಚಳವಾಗಿರುವುದು

ಡಿಸೆಂಬರ್‍‍ನಲ್ಲಿ ಅನಾವರಣಗೊಳ್ಳಲಿದೆ ಟಾಟಾ ಆಲ್‍‍ಟ್ರೊಜ್

ಹೊಸ ಅಲ್ಟ್ರೋಜ್ ಅನ್ನು ಈ ವರ್ಷದ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಬೇಕಾಗಿತ್ತು, ಆದರೆ ಬಿಎಸ್-6 ಎಂಜಿನ್ ಅನ್ನು ಅಳವಡಿಸುವ ಸಲುವಾಗಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ. ಪೆಟ್ರೋಲ್ ಮಾದರಿಗಳು 1.2 ಲೀಟರ್ ಮತ್ತು ಟಾಪ್ ಎಂಡ್ ರೂಪಾಂತರಗಳಲ್ಲಿ 1.2 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿರುತ್ತವೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಡಿಸೆಂಬರ್‍‍ನಲ್ಲಿ ಅನಾವರಣಗೊಳ್ಳಲಿದೆ ಟಾಟಾ ಆಲ್‍‍ಟ್ರೊಜ್

ಅಲ್ಟ್ರೋಜ್ ಕಾರಿನಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ 90 ಬಿ‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದೆಗೆ ಮ್ಯಾನುವಲ್ ಗೇರಬಾಕ್ಸ್ ಅನ್ನು ಅಳವಡಿಸಲಾಗುತ್ತದೆ. ಆದರೆ ಮುಂದಿನ ಹಂತದಲ್ಲಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ. ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.8.50 ಲಕ್ಷಕ್ಕೆ ನಿಗದಿಯಾಗಬಹುದು ಎಂದು ಅಂದಾಜಿಸಲಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಡಿಸೆಂಬರ್‍‍ನಲ್ಲಿ ಅನಾವರಣಗೊಳ್ಳಲಿದೆ ಟಾಟಾ ಆಲ್‍‍ಟ್ರೊಜ್

ಟಾಟಾ ಸಂಸ್ಥೆಯು ಹೊಸ ಆಲ್‌ಟ್ರೋಜ್ ಕಾರನ್ನು ಸಹ ಈ ಹಿಂದಿನ ನೆಕ್ಸಾನ್ ಮತ್ತು ಹ್ಯಾರಿಯರ್ ಮಾದರಿಯಲ್ಲೇ ಹೆಚ್ಚಿನ ಸುರಕ್ಷತೆಗೆ ಪ್ರಾಮುಖ್ಯತೆಯನ್ನು ನೀಡಿದೆ. ದೇಶಿಯ ಮಾರುಕಟ್ಟೆಯಲ್ಲಿ ಅಲ್‍‍ಟ್ರೋಜ್ ಕಾರು ಬಿಡುಗಡೆಯಾದ ಬಳಿಕ ಕಾರು ಹ್ಯುಂಡೈ ಐ20 ಮತ್ತು ಮಾರುತಿ ಬಲೆನೊ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Tata Altroz To Be Unveiled In December: India Launch Early 2020 - Read in Kannada
Story first published: Saturday, November 9, 2019, 12:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X