ಜಿನೆವಾ ಮೋಟಾರ್ ಶೋನಲ್ಲಿ ಪ್ರದರ್ಶನಗೊಳ್ಳಲಿದೆ ಟಾಟಾ 7 ಸೀಟರ್ ಹ್ಯಾರಿಯರ್..!

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆ ಟಾಟಾ ಸಂಸ್ಥೆಯು ಕಳೆದ ತಿಂಗಳು 23ರಂದು ಹೊಸ ಮಾದರಿಯ 5 ಸೀಟರ್ ಹ್ಯಾರಿಯರ್ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಪರಿಚಯಿಸುತ್ತಿದ್ದು, ಈ ಮಧ್ಯೆ ಮತ್ತೊಂದು ವಿನೂತನ ಮಾದರಿಯ 7 ಸೀಟರ್ ಹ್ಯಾರಿಯರ್ ಕಾರನ್ನು ಸಹ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ಜೀನೆವಾ ಮೋಟಾರ್ ಶೋನಲ್ಲಿ ಪ್ರದರ್ಶನಗೊಳ್ಳಲಿದೆ ಟಾಟಾ 7 ಸೀಟರ್ ಹ್ಯಾರಿಯರ್..!

ಸದ್ಯ 7 ಸೀಟರ್ ಹ್ಯಾರಿಯರ್ ಪರಿಚಯಿಸಲು ಸಿದ್ದವಾಗುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಹೆಚ್7ಎಕ್ಸ್ ಕೋಡ್ ಆಧಾರದಲ್ಲಿ ಹೊಸ ಕಾರನ್ನು ಅಭಿವೃದ್ಧಿಗೊಳಿಸುತ್ತಿದ್ದು, ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ನಮ್ಮ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಹಲವು ಬಾರಿ ಸ್ಪಾಟ್ ಟೆಸ್ಟಿಂಗ್ ನಡೆಸಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ. ಇದೀಗ ಮಾಹಿತಿ ಪ್ರಕಾರ ಮುಂದಿನ ತಿಂಗಳು ಮಾರ್ಚ್ ಆರಂಭದಲ್ಲಿ ಆರಂಭವಾಗಲಿರುವ ಜಿನೆವಾ ಆಟೋ ಮೇಳದಲ್ಲಿ ಪ್ರದರ್ಶನಗೊಳ್ಳಲಿದ್ದು, ವರ್ಷಾಂತ್ಯಕ್ಕೆ ಹೊಸ ಕಾರು ರಸ್ತೆಗಿಳಿಯುವ ಸಾಧ್ಯತೆಗಳಿವೆ.

ಈ ಕುರಿತು 7 ಸೀಟರ್ ಹ್ಯಾರಿಯರ್ ಬಿಡುಗಡೆಯ ಕುರಿತಾಗಿ ಆಟೋಕಾರ್ ಇಂಡಿಯಾ ಸುದ್ದಿಸಂಸ್ಥೆಯ ಜೊತೆ ಮಾತನಾಡಿರುವ ಟಾಟಾ ಮೋಟಾರ್ಸ್ ನಿರ್ದೇಶಕ ಗುಂಟೆರ್ ಬುಟ್ಸ್ಚೆಕ್ ಅವರು, 2019ರ ಅವಧಿಯಲ್ಲಿ ಹ್ಯಾರಿಯರ್ ಸೇರಿದಂತೆ ಒಟ್ಟು 4 ಹೊಸ ಕಾರು ಆವೃತ್ತಿಗಳನ್ನು ಹಂತಹಂತವಾಗಿ ಪರಿಚಯಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಜೀನೆವಾ ಮೋಟಾರ್ ಶೋನಲ್ಲಿ ಪ್ರದರ್ಶನಗೊಳ್ಳಲಿದೆ ಟಾಟಾ 7 ಸೀಟರ್ ಹ್ಯಾರಿಯರ್..!

ಇನ್ನು ಹೆಚ್7ಎಕ್ಸ್ ಮಾದರಿಯು 6 ಪ್ಲಸ್ 1 ಆಸನ ಮಾದರಿಯ ಎಸ್‌ಯುವಿ ಕಾರು ಆವೃತ್ತಿಯಾಗಿದ್ದು, 5 ಸೀಟರ್ ಹ್ಯಾರಿಯರ್ ಮಾದರಿಯಲ್ಲೇ ಹೊಸ ಕಾರು ಕೂಡಾ ಒಳ ಮತ್ತು ಹೊರ ವಿನ್ಯಾಸಗಳನ್ನು ಪಡೆದುಕೊಂಡಿದೆ.

ಮತ್ತೊಂದು ವಿಚಾರ ಅಂದ್ರೆ, ಹೊಸ ಕಾರು ಇಂಪ್ಯಾಕ್ಟ್ 2.0 ಡಿಸೈನ್ ಅಡಿ ನಿರ್ಮಾಣವಾಗಿದ್ದು, ಇನ್ನು ಕಾರಿನ ಉತ್ಪಾದನಾ ಆವೃತ್ತಿಯು ಫ್ಲೇರ್ಡ್ ಆರ್ಚೆಸ್, ಮುಂಭಾಗದ ಬಂಪರ್‍‍ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್‍‍ಗಳಿಂದ ಸಜ್ಜುಗೊಂಡಿದೆ.

ಜೀನೆವಾ ಮೋಟಾರ್ ಶೋನಲ್ಲಿ ಪ್ರದರ್ಶನಗೊಳ್ಳಲಿದೆ ಟಾಟಾ 7 ಸೀಟರ್ ಹ್ಯಾರಿಯರ್..!

ಕಾರಿನ ವಿನ್ಯಾಸಗಳು

ಹೆಚ್‍7ಎಕ್ಸ್ ಎಸ್‍ಯುವಿ ಕಾರುಗಳು ಐಷಾರಾಮಿ ಒಳವಿನ್ಯಾಸದೊಂದಿಗೆ ವಿಶಾಲವಾದ ಕ್ಯಾಬಿನ್ ಸ್ಪೆಸ್ ಹೊಂದಿದ್ದು, ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಪ್ರೀಮಿಯಂ ಆಡಿಯೊ ಸಿಸ್ಟಂ ಹಾಗೂ ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ.

ಟಾಟಾ ಹೆಚ್7ಎಕ್ಸ್ ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ್ದು, ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡ ಈ ಪ್ಲಾಟ್‍‍ಫಾರ್ಮ್ ಅನ್ನು ಕಾಣಬಹುದಾಗಿದೆ.

ಜೀನೆವಾ ಮೋಟಾರ್ ಶೋನಲ್ಲಿ ಪ್ರದರ್ಶನಗೊಳ್ಳಲಿದೆ ಟಾಟಾ 7 ಸೀಟರ್ ಹ್ಯಾರಿಯರ್..!

ಎಂಜಿನ್ ಸಾಮರ್ಥ್ಯ

ಟಾಟಾ ಹೆಚ್7ಎಕ್ಸ್ ಕಾರುಗಳು 2.0-ಲೀಟರ್ ಟರ್ಬೋ ಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 190-ಬಿಹೆಚ್‍ಪಿ ಹಾಗೂ 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ಟಿಯನ್ನು ಪಡೆದಿದ್ದು, ಜೆಡ್ಎಫ್ 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಿರಬಹುದು ಎನ್ನಲಾಗಿದೆ.

ಇದಲ್ಲದೆ ಟಾಟಾ ಹೆಚ್7ಎಕ್ಸ್ ಕಾರುಗಳು ಐಷಾರಾಮಿ ಕಾರುಗಳ ಮಾದರಿಯಲ್ಲೇ ಆಲ್ ವೀಲ್ ಡ್ರೈ ಸಿಸ್ಟಂ ಮತ್ತು ವಿವಿಧ ಡ್ರೈವಿಂಗ್ ಮೋಡ್‍‍ಗಳನ್ನು ಪಡೆದಿರಲಿದ್ದು, ಆಫ್ ರೋಡಿಂಗ್‌ನಲ್ಲೂ ಸರಾಗ ಚಾಲನೆಗಾಗಿ ಆಫ್ ರೋಡ್ ಡ್ರೈವಿಂಗ್ ಮೋಡ್ ಅನ್ನು ಸಹ ಪಡೆದಿರಲಿದೆ.

ಹೀಗಾಗಿ ಪ್ರಸ್ತುತ ಈ ಕಾರನ್ನು ಭಾರತೀಯ ರಸ್ತೆಗಳಲ್ಲಿ ಪರಿಶೀಲಿಸಲಾಗುತ್ತಿದ್ದು, ಇದೇ ಹಣಕಾಸು ವರ್ಷದ ಅವಧಿಯೊಳಗೆ ಬಿಡುಗಡೆಗೊಳ್ಳಲಿರುವ ಹೊಸ ಕಾರಿನ ಬೆಲೆಯ ಕುರಿತು ನಿಖರ ಮಾಹಿತಿ ಇಲ್ಲವಾದರೂ ಎಕ್ಸ್‌ಶೋರೂಂ ಪ್ರಕಾರ ರೂ. 19 ಲಕ್ಷದಿಂದ ರೂ. 24 ಲಕ್ಷದ ವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Tata H7X (Harrier 7-Seater) To Debut At 2019 Geneva Motor Show. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X