ನೆಕ್ಸಾನ್ ಮಾದರಿಯಲ್ಲೆ ಟಾಟಾ ಹ್ಯಾರಿಯರ್ ಇದೀಗ ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯ

ಮಾರುಕಟ್ಟೆಯಲ್ಲಿ ಹಲವಾರು ವಾಹನಗಳು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದಾರೂ ವಾಹನ ತಯಾರಕ ಸಂಸ್ಥೆಗಳು ಅವುಗಳಿಗೆ ಒಂದೇ ಬಣ್ಣವಲ್ಲದೆಯೆ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಖರೀದಿ ಮಾಡುವ ಆಯ್ಕೆಯನ್ನು ಸಹ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇಶದಲ್ಲಿರುವ ಟಾಟಾ ಮೋಟಾರ್ಸ್‍ನ ಕೆಲ ಡೀಲರ್‍‍ಗಳು ಟಿಯಾಗೊ, ನೆಕ್ಸಾನ್ ಮತ್ತು ಹೆಕ್ಸಾ ಕಾರುಗಳಂತೆಯೆ ಹ್ಯಾರಿಯರ್ ಕಾರಿಗೂ ಸಹ ಡ್ಯುಯಲ್ ಟೋನ್ ಬಣ್ಣಗಳನ್ನು ನೀಡಿ ಬಿಡುಗಡೆ ಮಾಡಿದ್ದಾರೆ.

ನೆಕ್ಸಾನ್ ಮಾದರಿಯಲ್ಲೆ ಟಾಟಾ ಹ್ಯಾರಿಯರ್ ಇದೀಗ ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯ

ಸಧ್ಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಸುಮಾರು 6 ತಿಂಗಳಿನಿಂದ ಎಸ್‍ಯುವಿ ಪ್ರಿಯರಲ್ಲಿ ಹೆಚ್ಚು ಬೇಡಿಕೆಯನ್ನು ಪಡೆಯುತ್ತಿರುವ ಟಾಟಾ ಹ್ಯಾರಿಯರ್ ಕಾರು ಇತ್ತೀಚೆಗೆ ಮೊದಲ ಬಾರಿಗೆ ಬೆಲೆಯಲ್ಲಿ ಏರಿಕೆಯನ್ನು ಕಂಡಿದೆ. ರಶ್‍ಲೇನ್ ವರದಿ ಪ್ರಕಾರ ಟಾಟಾ ಹ್ಯಾರಿಯರ್ ಇದೀಗ ಆರ್ಕಸ್ ವೈಟ್ ಮತ್ತು ಕ್ಯಾಲಿಸೃಟೋ ಕಾಪರ್ ಎಂಬ ಹೊಸ ಡ್ಯುಯಲ್ ಟೋನ್ ಬಣ್ಣವನ್ನು ಪಡೆದಿದ್ದು, ಬೇರಾವ ಬದಲಾವಣೆಯನ್ನು ಪಡೆದಿರುವುದಿಲ್ಲ.

ನೆಕ್ಸಾನ್ ಮಾದರಿಯಲ್ಲೆ ಟಾಟಾ ಹ್ಯಾರಿಯರ್ ಇದೀಗ ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯ

ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ ಹ್ಯಾರಿಯರ್ ಎಸ್‍ಯುವಿ ಕಾರಿನ ಬೆಲೆಯಲ್ಲಿ ಏರಿಕೆಯನ್ನು ಮಾಡಲಾಗಿದ್ದು, ಇದು ಬಿಡುಗಡೆಗೊಂಡಾಗಿನಿಂದಲೂ ಮೊದಲನೆಯ ಬಾರಿ ಈ ಕಾರಿನ ಬೆಲೆಯಲ್ಲಿ ಏರಿಕೆಯನ್ನು ಮಾಡಲಾಗಿದೆ. ಎಕ್ಸ್ ಶೋರುಂ ಪ್ರಕಾರ ರೂ. 12.7 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದ ಈ ಕಾರು ಇದೀಗ ಎಕ್ಸ್ ಶೋರುಂ ಪ್ರಕಾರ ರೂ. 13 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ನೆಕ್ಸಾನ್ ಮಾದರಿಯಲ್ಲೆ ಟಾಟಾ ಹ್ಯಾರಿಯರ್ ಇದೀಗ ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯ

ಟಾಟಾ ಹ್ಯಾರಿಯರ್ ಕಾರು ಒಟ್ಟು ನಾಲ್ಕು ವೇರಿಯೆಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬೆಲೆ ಏರಿಕೆಯ ನಂತರ ಎಕ್ಸ್ಎಂ ವೇರಿಯೆಂಟ್ ಎಕ್ಸ್ ಶೋರುಂ ಪ್ರಕಾರ ರೂ. 14.06 ಲಕ್ಷ, ಎಕ್ಸ್ಟಿ ವೇರಿಯೆಂಟ್ ರೂ. 15.25 ಲಕ್ಷ ಹಾಗು ಟಾಪ್ ಎಂಡ್ ಮಾಡಲ್ ಆದ ಎಕ್ಸ್ಜೆಡ್ ವೇರಿಯೆಂಟ್ ರೂ. 16.56 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ನೆಕ್ಸಾನ್ ಮಾದರಿಯಲ್ಲೆ ಟಾಟಾ ಹ್ಯಾರಿಯರ್ ಇದೀಗ ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯ

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

ನೆಕ್ಸಾನ್ ಮಾದರಿಯಲ್ಲೆ ಟಾಟಾ ಹ್ಯಾರಿಯರ್ ಇದೀಗ ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯ

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಿರುವುದು ಹ್ಯಾರಿಯರ್ ವಿನ್ಯಾಸಕ್ಕೆ ಐಷಾರಾಮಿ ಕಳೆ ಬಂದಿದೆ.

ನೆಕ್ಸಾನ್ ಮಾದರಿಯಲ್ಲೆ ಟಾಟಾ ಹ್ಯಾರಿಯರ್ ಇದೀಗ ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯ

ಹೊಸ ಡಿಸೈನ್ ತಂತ್ರಜ್ಞಾನದಿಂದಾಗಿ ಕಾರು ಸಾಕಷ್ಟು ಸ್ಟೈಲಿಷ್ ಆಗಿ ಕಾಣುವಂತಾಗಿದ್ದು, ಕಾರಿನ ಮುಂಭಾಗದಲ್ಲಿ ಹನಿಕೊಂಬ್ ಗ್ರೀಲ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಪಾಲಿಜೊನಲ್ ಮಾದರಿಯ ಎಲ್‌ಇಡಿ ಲೈಟ್ಸ್ ಮಾದರಿಯು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

ನೆಕ್ಸಾನ್ ಮಾದರಿಯಲ್ಲೆ ಟಾಟಾ ಹ್ಯಾರಿಯರ್ ಇದೀಗ ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯ

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

ನೆಕ್ಸಾನ್ ಮಾದರಿಯಲ್ಲೆ ಟಾಟಾ ಹ್ಯಾರಿಯರ್ ಇದೀಗ ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯ

ಜೆನಾನ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್ ಮತ್ತು ಕಾರ್ನರಿಂಗ್ ಲೈಟ್ಸ್, ಶಾರ್ಕ್ ಫಿನ್ ಆ್ಯಂಟೆನಾ, 7 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 8.8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 9 ಜೆಬಿಎಲ್ ಸ್ಪೀಕರ್ಸ್‍, 60:40 ವಿಭಜಿತ ಸೀಟ್‍ಗಳು ಮತ್ತು ನಾರ್ಮಲ್, ವೆಟ್ ಮತ್ತು ರಫ್ ಎಂಬ ಮೂರು ಟೆರೈನ್ ರೆಸ್ಪಾನ್ಸ್ ಮೊಡ್ಸ್ ಸೌಲಭ್ಯವಿದೆ.

ನೆಕ್ಸಾನ್ ಮಾದರಿಯಲ್ಲೆ ಟಾಟಾ ಹ್ಯಾರಿಯರ್ ಇದೀಗ ಡ್ಯುಯಲ್ ಟೋನ್ ಬಣ್ಣದಲ್ಲಿ ಲಭ್ಯ

ಹಾಗೆಯೇ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

Most Read Articles

Kannada
English summary
Tata Harrier Is Now Available With Dual Tone Color Option. Read In Kannada
Story first published: Friday, June 21, 2019, 11:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X