ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣಕ್ಕೆ ಟಾಟಾ ಗ್ರೀನ್ ಸಿಗ್ನಲ್
ಎಲೆಕ್ಟ್ರಿಕ್ ಕಾರು ಉತ್ಪನ್ನಗಳ ಬಿಡುಗಡೆ ಮೇಲೆ ವಿಶೇಷ ಆಸಕ್ತಿವಹಿಸಿರುವ ಟಾಟಾ ಸಂಸ್ಥೆಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ 2021ರ ಒಳಗಾಗಿ ಬರೋಬ್ಬರಿ 300ಕ್ಕೂ ಹೆಚ್ಚು ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯುವ ಯೋಜನೆ ರೂಪಿಸಿದೆ.

ಟಾಟಾ ಸಂಸ್ಥೆಯು ಸದ್ಯ ಟಿಗೋರ್ ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಚಾಲನೆ ನೀಡುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಇನ್ನು ಕೆಲವು ಜನಪ್ರಿಯ ಕಾರುಗಳ ಎಲೆಕ್ಟ್ರಿಕ್ ವರ್ಷನ್ ಬಿಡುಗಡೆ ಮಾಡುವ ತವಕದಲ್ಲಿದೆ. ಈ ಹಿನ್ನೆಲೆ ಎಲೆಕ್ಟ್ರಿಕ್ ಕಾರುಗಳಿಗೆ ಪೂರಕವಾಗಿ ಚಾರ್ಜಿಂಗ್ ಸ್ಟೆಷನ್ ಸೌಲಭ್ಯವನ್ನು ಕಲ್ಪಿಸುವ ಸಂಬಂಧ ದೇಶದ ಪ್ರಮುಖ ನಗರಗಳಲ್ಲಿ 300ಕ್ಕೂ ಹೆಚ್ಚು ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ಆರಂಭಿಸಲು ಚಾಲನೆ ನೀಡಿದೆ.

ಪ್ರಸ್ತುತ ಮಾರಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಉತ್ತಮ ಬೇಡಿಕೆಯಿದ್ದರೂ ಸಹ ಚಾರ್ಜಿಂಗ್ ಸ್ಟೆಷನ್‌ಗಳ ಕೊರತೆಯಿಂದಾಗಿ ಬಹುತೇಕ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಖರೀದಿ ಯೋಜನೆಯಿಂದ ಹಿಂದೆ ಸರಿಯುತ್ತಿದ್ದು, ಟಾಟಾ ಸಂಸ್ಥೆಯು ಈ ನಿಟ್ಟಿನಲ್ಲಿ ಯೋಜನೆ ರೂಪಿಸಿ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣ ಮಾಡುತ್ತಿದೆ.

ಹಾಗೆಯೇ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿರುವ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗೂ ಮುಂದಾಗಿರುವ ಟಾಟಾ ಸಂಸ್ಥೆಯು ಬರೋಬ್ಬರಿ 4 ಸಾವಿರ ಕೋಟಿ ಹೂಡಿಕೆ ಮಾಡುತ್ತಿದ್ದು, ಲೀಥಿಯಂ ಅಯಾನ್ ಬ್ಯಾಟರಿ ಉತ್ಪನ್ನಕ್ಕಾಗಿ ವಿದೇಶಿ ಮಾರುಕಟ್ಟೆಗಳ ಮೇಲೆ ಅಲಂಭಿಸಬೇಕಾದ ಪರಿಸ್ಥಿತಿಯನ್ನು ತಗ್ಗಿಸಲು ಈ ಯೋಜನೆ ರೂಪಿಸಿದೆ.

ಭಾರತದಲ್ಲಿ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನಾ ಘಟಕಗಳು ಇಲ್ಲದೇ ಇರುವ ಹಿನ್ನೆಲೆಯಲ್ಲಿ ಬಹುತೇಕ ಎಲೆಕ್ಟ್ರಿಕ್ ವಾಹನಗಳ ಸಂಸ್ಥೆಗಳು ಚೀನಾ ಮತ್ತು ತೈವಾನ್ ಮಾರುಕಟ್ಟೆಗಳನ್ನೇ ಅವಲಂಭಿಸಿದ್ದು, ಇದೀಗ ಟಾಟಾ ಸೇರಿದಂತೆ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಸ್ಥಳೀಯವಾಗಿಯೇ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನಾ ಯೋಜನೆಗೆ ಚಾಲನೆ ನೀಡಲಿವೆ. ಇದರಿಂದ ದೇಶಿಯವಾಗಿಯೇ ನಿರ್ಮಾಣವಾದ ಲೀಥಿಯಂ ಅಯಾನ್ ಬ್ಯಾಟರಿ ಬಳಕೆ ಮಾಡಿದ್ದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಕೂಡಾ ಸಾಕಷ್ಟು ತಗ್ಗಲಿದೆ.

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಮತ್ತು ಖರೀದಿಸುವ ಗ್ರಾಹಕರಿಗೂ ಕೂಡಾ ವಿವಿಧ ಹೊಸ ಯೋಜನೆಗಳನ್ನು ಘೋಷಿಸಿದೆ.

ಜಿಎಸ್‌ಟಿ ಪ್ರಮಾಣದಲ್ಲಿ ಭಾರೀ ಕಡಿತ ಮಾಡಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಟಾಟಾ ಸೇರಿದಂತೆ ಪ್ರಮುಖ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳು ತಮ್ಮ ಇವಿ ಬೆಲೆಗಳನ್ನು ಕಡಿತಗೊಳಿಸಿವೆ. ಟಿಗೋರ್ ಎಲೆಕ್ಟ್ರಿಕ್ ಕಾರಿನ ಬೆಲೆಯಲ್ಲಿ ಬರೋಬ್ಬರಿ ರೂ.80 ಸಾವಿರ ಬೆಲೆ ಇಳಿಕೆ ಮಾಡಲಾಗಿದ್ದು, ಇದು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಸಂಸ್ಥೆಗಳ ಜೊತೆಗೆ ಎಲೆಕ್ಟ್ರಕ್ ವಾಹನ ಖರೀದಿದಾರರಿಗೂ ಸಾಕಷ್ಟು ಸಹಕಾರಿಯಾಗಲಿದೆ.
MOST READ: ಕೈಗೆಟುಕುವ ಬೆಲೆಯಲ್ಲಿ ಆರು ಏರ್‍ಬ್ಯಾಗ್ ಹೊಂದಿರುವ ಕಾರುಗಳಿವು ..!

ಹೊಸ ದರ ಪಟ್ಟಿಯ ಪ್ರಕಾರ ಈ ಹಿಂದೆ ಸಬ್ಸಡಿ ರಹಿತ ಟಿಗೋರ್ ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.12.35 ಲಕ್ಷ ಮತ್ತು ರೂ.12.71 ಲಕ್ಷ ಇದ್ದ ಬೆಲೆ ಇದೀಗ ಜಿಎಸ್‌ಟಿ ಇಳಿಕೆ ನಂತರ ರೂ. 11.58 ಲಕ್ಷಕ್ಕೆ ಮತ್ತು ರೂ. 11.92 ಲಕ್ಷಕ್ಕೆ ಇಳಿಕೆಯಾಗಿದೆ. ಹಾಗೆಯೇ ಸಬ್ಸಡಿ ಸಹಿತ ಟಿಗೋರ್ ಕಾರಿನ ಮಾರಾಟ ಬೆಲೆಯು ಈ ಹಿಂದೆ ಇದ್ದ ರೂ. 10.99 ಲಕ್ಷ ಮತ್ತು ರೂ.11.09 ಲಕ್ಷ ಬೆಲೆಯು ಇದೀಗ ರೂ.9.96 ಲಕ್ಷ ಮತ್ತು ರೂ.10.30 ಲಕ್ಷಕ್ಕೆ ಇಳಿಕೆಯಾಗಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹೊಸ ಆದೇಶದಿಂದಾಗಿ ಅಗಸ್ಟ್ 1ರಿಂದಲೇ ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಲಿದ್ದು, ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳು ಇದಕ್ಕೆ ಹರ್ಷ ವ್ಯಕ್ತಪಡಿಸಿವೆ. ಯಾಕೆಂದ್ರೆ ಹೊಸ ಯೋಜನೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗಿ ಮಾರಾಟ ಪ್ರಮಾಣವು ಹೆಚ್ಚಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮೇಲೆ ಗ್ರಿನ್ ಸೆಸ್ ಹೆಚ್ಚಾಗುವುದರಿಂದ ಎಲೆಕ್ಟ್ರಿಕ್ ವಾಹನಗಳಿಗೂ ಇದು ಪೂರಕವಾಗಿದೆ.
MOST READ: ಗ್ರಾಹಕರಿಗೆ ಉಟ ಕೊಡುವ ಧಾವಂತವಲ್ಲಿ ಈ ಡೆಲಿವರಿ ಬಾಯ್ ಮಾಡಿದ ತಪ್ಪುಗಳು ಎಷ್ಟು ಗೊತ್ತಾ?

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ತೆರಿಗೆ ವಿನಾಯ್ತಿ ಸಹ ನೀಡಿದ್ದು, ಬರೋಬ್ಬರಿ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಹಿಂದಿನ ಫೇಮ್ 2 ಯೋಜನೆ ಅಡಿಯಲ್ಲಿ ಘೋಷಣೆ ಮಾಡಲಾಗಿರುವ ಸಬ್ಸಡಿ ಯೋಜನೆಯನ್ನು ಸಹ ಮುಂದುವರಿಸಲಾಗಿದೆ.


Click it and Unblock the Notifications