ಹೊಸ ಸುರಕ್ಷಾ ಫೀಚರ್ಸ್ ಪಡೆಯಲಿದೆ ಟಾಟಾ ಟಿಯಾಗೋ

ಟಾಟಾ ಮೋಟಾರ್ಸ್, ತನ್ನ ಟಿಯಾಗೋ ಹ್ಯಾಚ್‍‍ಬ್ಯಾಕ್ ಸರಣಿಯ ಎಲ್ಲಾ ಮಾದರಿಗಳಲ್ಲೂ ಸುರಕ್ಷತಾ ಫೀಚರ್‍‍‍ಗಳನ್ನು ಅಪ್‍‍ಗ್ರೇಡ್ ಮಾಡುವುದಾಗಿ ಘೋಷಿಸಿದೆ. ಈ ವಾಹನದಲ್ಲಿ ಇನ್ನೂ ಮುಂದೆ ಡ್ಯೂಯಲ್ ಏರ್‍‍ಬ್ಯಾಗ್‍‍ಗಳು, ಯಾಂಟಿ ಬ್ರೇಕಿಂಗ್ ಸಿಸ್ಟಂ (ಎ‍‍ಬಿ‍ಎಸ್)ಗಳಿರಲಿವೆ.

ಹೊಸ ಸುರಕ್ಷಾ ಫೀಚರ್ಸ್ ಪಡೆಯಲಿದೆ ಟಾಟಾ ಟಿಯಾಗೋ

ಇದರ ಜೊತೆಗೆ ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ ಸಿಸ್ಟಂ (ಇ‍‍ಬಿ‍‍ಡಿ), ಕಾರ್ನರ್ ಸ್ಟಾಬಿಲಿಟಿ ಕಂಟ್ರೋಲ್ (ಸಿ‍ಎಸ್‍‍ಸಿ) ಹಾಗೂ ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್‍‍‍‍ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಈ ಎಲ್ಲಾ ಸುರಕ್ಷತಾ ಕ್ರಮಗಳನ್ನು ಒಳಗೊಂಡಿರುವ ಹೊಸ ಟಾಟಾ ಟಿಯಾಗೋದ ಬೆಲೆಯು ಭಾರತದಲ್ಲಿರುವ ಎಕ್ಸ್ ಶೋ ರೂಂ ದರಗಳಂತೆ ರೂ.4.40 ಲಕ್ಷಗಳಾಗಲಿದೆ. ಸುರಕ್ಷತಾ ಕ್ರಮಗಳ ಜೊತೆಯಲ್ಲಿ, ಟಾಟಾ ಮೋಟಾರ್ಸ್ ಎಮರ್ಜೆನ್ಸಿ ವಾರ್ನಿಂಗ್ ಸಿಸ್ಟಂ, ಒವರ್ ಸ್ಪೀಡ್ ಅನ್ನು ನಿಯಂತ್ರಿಸಲು ಅಲರ್ಟ್ ಫೀಚರ್ ಹಾಗೂ ಚಾಲಕರು, ಸಹ ಪ್ರಯಾಣಿಕರು ಸೀಟ್ ಬೆಲ್ಟ್ ಗಳನ್ನು ಧರಿಸಲು ಸೂಚಿಸುವ ಫೀಚರ್‍‍ಗಳನ್ನು ಅಳವಡಿಸಲಿದೆ.

ಹೊಸ ಸುರಕ್ಷಾ ಫೀಚರ್ಸ್ ಪಡೆಯಲಿದೆ ಟಾಟಾ ಟಿಯಾಗೋ

ಟಾಟಾ ಟಿಯಾಗೋ ಸರಣಿಯ ಎಲ್ಲಾ ವಾಹನಗಳಲ್ಲೂ ಇನ್ನು ಮುಂದೆ ಸೀಟ್ ಬೆಲ್ಟ್ ಗಳ ಜೊತೆಗೆ ಪ್ರಿ ಟೆನ್ಷನರ್ ಹಾಗೂ ಲೋಡ್ ಲಿಮಿಟರ್‍‍ಗಳನ್ನು ನೀಡಲಾಗುವುದು. ಹೊಸ ಸುರಕ್ಷತಾ ಕ್ರಮಗಳನ್ನು ಹೊಂದಿರುವ ಟಾಟಾ ಟಿಯಾಗೋ ವಾಹನಗಳ ಉತ್ಪಾದನೆಯು ಮುಗಿದಿದ್ದು, ಟಾಟಾ ಮೋಟಾರ್ಸ್ ಶೋರೂಂ‍‍ಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಹೊಸ ಸುರಕ್ಷಾ ಫೀಚರ್ಸ್ ಪಡೆಯಲಿದೆ ಟಾಟಾ ಟಿಯಾಗೋ

ಟಿಯಾಗೋ ವಾಹನದಲ್ಲಿ ಅಳವಡಿಸಲಾಗಿರುವ ಹೊಸ ಸುರಕ್ಷತಾ ಫೀಚರ್‍‍ಗಳ ಬಗ್ಗೆ ಮಾತನಾಡಿದ, ಟಾಟಾ ಮೋಟಾರ್ಸ್‍‍ನ ಸೇಲ್ಸ್, ಮಾರ್ಕೆಟಿಂಗ್, ಕಸ್ಟಮರ್ ಸಪೋರ್ಟ್‍‍‍ನ ಪ್ಯಾಸೆಂಜರ್ ವೆಹಿಕಲ್ ಬಿಸಿನೆಸ್ ಯೂನಿಟ್‍‍ನ ಉಪಾಧ್ಯಕ್ಷರಾದ ಎಸ್ ಎನ್ ಬರ್ಮನ್ ರವರು, ಕಾರುಗಳನ್ನು ಕೊಳ್ಳುತ್ತಿರುವವರು ಕಾರುಗಳಲ್ಲಿರುವ ಸುರಕ್ಷತಾ ಫೀಚರ್‍‍ಗಳಿಗೆ ಆದ್ಯತೆ ನೀಡುತ್ತಿದ್ದಾರೆ.

ಹೊಸ ಸುರಕ್ಷಾ ಫೀಚರ್ಸ್ ಪಡೆಯಲಿದೆ ಟಾಟಾ ಟಿಯಾಗೋ

ನಾವು ಸಹ ಕಾರುಗಳಲ್ಲಿ ಸುರಕ್ಷತಾ ಫೀಚರ್‍‍ಗಳು ಇರುವಂತೆ ನೋಡಿಕೊಳ್ಳುತ್ತೇವೆ. ಈಗ ಟಿಯಾಗೋ ಸರಣಿಯ ಕಾರುಗಳಲ್ಲಿ ಸ್ಟಾಂಡರ್ಡ್ ಸುರಕ್ಷತಾ ಕ್ರಮಗಳನ್ನು ಅಳವಡಿಸಿ, ನಾವು ಭಾರತದ ವಾಹನಗಳಲ್ಲಿ ಸುರಕ್ಷತೆಯನ್ನು ನೀಡುವುದಕ್ಕೆ ಬದ್ದವಾಗಿದ್ದೇವೆ. ಇಂಪ್ಯಾಕ್ಟ್ ಡಿಸೈನ್ ಲಾಂಗ್ವೇಜ್ ಹೊಂದಿದ ನಮ್ಮ ಕಂಪನಿಯ ಮೊದಲ ಕಾರು ಟಿಯಾಗೋ ಆಗಿದ್ದು, ಮಾರುಕಟ್ಟೆಯಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿದೆ. ಇದರಿಂದಾಗಿ ಟಿಯಾಗೋ, ಕಾರು ಕೊಳ್ಳುವವರ ಮೊದಲ ಆದ್ಯತೆಯಾಗಿರಲಿದೆ ಎಂದು ತಿಳಿಸಿದರು.

ಹೊಸ ಸುರಕ್ಷಾ ಫೀಚರ್ಸ್ ಪಡೆಯಲಿದೆ ಟಾಟಾ ಟಿಯಾಗೋ

ಇದರ ಹೊರತಾಗಿ ಟಾಟಾ ಟಿಯಾಗೋ ವಾಹನದಲ್ಲಿ ಯಾವುದೇ ಮೆಕಾನಿಕಲ್ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಹ್ಯಾಚ್‍‍‍ಬ್ಯಾಕ್ ವಾಹನವು 2 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಮೊದಲನೇಯದು 3 ಸಿಲಿಂಡರ್‍‍ನ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಆಗಿದ್ದು, 85 ಬಿ‍‍ಹೆಚ್‍‍ಪಿಯನ್ನು 6,000 ಆರ್‍‍ಪಿ‍ಎಂನಲ್ಲಿ ಹಾಗೂ 114 ಎನ್‍ಎಂ ಟಾರ್ಕ್ ಅನ್ನು 3,500 ಆರ್‍‍ಪಿ‍ಎಂನಲ್ಲಿ ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾದ ಮಾರುತಿ ಸುಜುಕಿ ಬ್ರಿಝಾ ಸ್ಪೋರ್ಟ್ ಎಡಿಷನ್

ಹೊಸ ಸುರಕ್ಷಾ ಫೀಚರ್ಸ್ ಪಡೆಯಲಿದೆ ಟಾಟಾ ಟಿಯಾಗೋ

ಎರಡನೇ ಎಂಜಿನ್ ಆಯ್ಕೆಯಲ್ಲಿ 1.05 ಲೀಟರಿನ ರೆವೊಟಾರ್ಕ್ ಡೀಸೆಲ್ ಎಂಜಿನ್ ಇದ್ದು, ಈ ಎಂಜಿನ್ 70 ಬಿ‍‍ಹೆಚ್‍‍ಪಿ ಪವರ್ ಅನ್ನು 4,000 ಆರ್‍‍ಪಿ‍ಎಂನಲ್ಲಿ ಹಾಗೂ 140 ಎನ್‍ಎಂ ಟಾರ್ಕ್ ಅನ್ನು 1,800 ಆರ್‍‍ಪಿ‍ಎಂನಲ್ಲಿ ಉತ್ಪಾದಿಸಲಿದೆ.

ಹೊಸ ಸುರಕ್ಷಾ ಫೀಚರ್ಸ್ ಪಡೆಯಲಿದೆ ಟಾಟಾ ಟಿಯಾಗೋ

ಎರಡೂ ಎಂಜಿನ್‍‍ಗಳಲ್ಲಿ 5 ಸ್ಪೀಡಿನ ಮ್ಯಾನುಯಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಆದರೆ ಪೆಟ್ರೋಲ್ ಮಾದರಿಯ ಎಂಜಿನ್‍‍ನಲ್ಲಿ ಹೆಚ್ಚುವರಿಯಾಗಿ 5 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಹೊಸ ಸುರಕ್ಷಾ ಫೀಚರ್ಸ್ ಪಡೆಯಲಿದೆ ಟಾಟಾ ಟಿಯಾಗೋ

ಸುರಕ್ಷತಾ ಫೀಚರ್‍‍ಗಳನ್ನು ಹೊಂದಿರುವ ಟಾಟಾ ಟಿಯಾಗೋ ವಾಹನದ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.4.40 ಲಕ್ಷಗಳೆಂದು ನಿಗದಿಯಾಗಿದೆ.

ಹೊಸ ಸುರಕ್ಷಾ ಫೀಚರ್ಸ್ ಪಡೆಯಲಿದೆ ಟಾಟಾ ಟಿಯಾಗೋ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಾಟಾ ಮೋಟಾರ್ಸ್ ಯಾವಾಗಲೂ ಸುರಕ್ಷತೆಗೆ ಹೆಚ್ಚು ಒತ್ತು ನೀಡುತ್ತದೆ. ನಾವು ಬಹುತೇಕ ಬಾರಿ ಟಾಟಾ ಮೋಟಾರ್ಸ್‍‍ನ ವಾಹನಗಳು ಅಪಘಾತಕ್ಕೀಡದಾಗ, ಅದರಲ್ಲಿದ್ದ ಪ್ರಯಾಣಿಕರು ಯಾವುದೇ ತೊಂದರೆಯಿಲ್ಲದಂತೆ ಪಾರಾದ ಬಗ್ಗೆ ಕೇಳುತ್ತಲೇ ಇರುತ್ತೇವೆ. ಈ ಅಪಘಾತಗಳಲ್ಲಿ ಪಾರಾದ ಪ್ರಯಾಣಿಕರು ಟಾಟಾ ಮೋಟಾರ್ಸ್‍‍ನ ವಾಹನಗಳಲ್ಲಿರುವ ಸುರಕ್ಷತೆಯನ್ನು ಪ್ರಶಂಸಿಸುತ್ತಾರೆ.

ಹೊಸ ಸುರಕ್ಷಾ ಫೀಚರ್ಸ್ ಪಡೆಯಲಿದೆ ಟಾಟಾ ಟಿಯಾಗೋ

ಸುರಕ್ಷತೆಯ ಫೀಚರ್‍‍ಗಳನ್ನು ಅಳವಡಿಸುವುದು ಒಳ್ಳೆಯ ಬೆಳವಣಿಗೆ. ಟಾಟಾ ಟಿಯಾಗೋ ಈಗ ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿದೆ. ಇದರಿಂದ ಈ ವಾಹನದ ಮಾರಾಟದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Tata Motors Upgrades Safety Features On The Tiago — Made Of Great, But Safer Now - Read in kannada
Story first published: Saturday, May 25, 2019, 15:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X