ಎಸ್‍ಯುವಿ ಮಾರಾಟದಲ್ಲಿ ಅಗ್ರ ಸ್ಥಾನಕ್ಕೇರಿದ ಕಿಯಾ ಸೆಲ್ಟೋಸ್
ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಟಾಪ್-10 ಎಸ್‍ಯುವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹೆಚ್ಚು ಮಾರಾಟವಾದ ಎಸ್‍ಯುವಿಗಳ ಪಟ್ಟಿಯಲ್ಲಿ ಕಿಯಾ ಸೆಲ್ಟೋಸ್ ಮೊದಲ ಸ್ಥಾನವನ್ನು ಪಡೆದುಕೊಂಡು ದೇಶಿಯ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಸಾಧಿಸುತ್ತಿದೆ.

ಕಿಯಾ ಸೆಲ್ಟೋಸ್ ಎಸ್‍ಯುವಿಯನ್ನು ಕಳೆದ ಆಗಸ್ಟ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದಾಗಿನಿಂದಲೂ ಸೆಲ್ಟೋಸ್ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಗ್ರಾಹಕಾರ ಗಮನಸೆಳೆಯುವಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಯಶಸ್ವಿಯಾಗಿದೆ.

ಅಕ್ಟೋಬರ್ ತಿಂಗಳಲ್ಲಿ ಕಿಯಾ ಸೆಲ್ಟೋಸ್‍ನ 12,854 ಯುನಿಟ್‍ಗಳು ಮಾರಾಟವಾಗಿವೆ. ಮಾರುತಿ ಸುಜುಕಿ ವಿಟಾರಾ ಬ್ರಿಝಾ ಮತ್ತು ಹ್ಯುಂಡೈ ವೆನ್ಯೂ ಎಸ್‍ಯುವಿಗಳನ್ನು ಹಿಂದಿಕ್ಕಿ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಎಸ್‍ಯುವಿ ಎಂದು ಎನಿಸಿಕೊಂಡಿದೆ. ಸೆಲ್ಟೋಸ್ ಉತ್ತಮವಾಗಿ ಮಾರಾಟವಾಗುವುದರಿಂದ ಮಾರುಕಟ್ಟೆಯಲ್ಲಿ ಕಿಯಾ ಸಂಸ್ಥೆಯು ಐದನೇ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಕಿಯಾ ಮೋಟಾರ್ಸ್ ಸಂಸ್ಥೆಯು ಟೊಯೊಟಾ, ಹೋಂಡಾ ಮತ್ತು ಫೋಕ್ಸ್ ವ್ಯಾಗನ್ ನಂತಹ ಜನಪ್ರಿಯ ಬ್ರ್ಯಾಂಡ್‍ಗಳನ್ನು ಹಿಂದಿಕ್ಕಿ ಹೊಸ ಸಾಧನೆಯನ್ನು ಮಾಡಿದೆ.

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಈ ಟಾಪ್-10 ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮಾರುತಿ ಸುಜುಕಿ ಜನಪ್ರಿಯ ಕಾಂಪ್ಯಾಕ್ಟ್ ಎಸ್‍ಯುವಿಯು ಕಳೆದ ಅಕ್ಟೋಬರ್ ತಿಂಗಳಲ್ಲಿ 10,227 ಯುನಿಟ್‍ಗಳು ಮಾರಾಟ ಮಾಡಲಾಗಿವೆ. ವಿಟಾರಾ ಬ್ರಿಝಾ ಎಸ್‍ಯುವಿ ವಿಭಾಗದಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

ಈ ಪಟ್ಟಿಯಲ್ಲಿ ಹ್ಯುಂಡೈ ವೆನ್ಯೂ ಮೂರನೇಯ ಸ್ಥಾನವನ್ನು ಪಡೆದುಕೊಂಡಿದೆ. ಕೊರಿಯನ್ ಮೂಲದ ಹ್ಯುಂಡೈ ಕಂಪನಿಯ ವೆನ್ಯೂ ಕಾರು ಬಿಡುಗಡೆಯಾದ ಪ್ರಾರಂಭದಲ್ಲಿ ಉತ್ತಮ ಮಾರಾಟವಾಗುತಿತ್ತು. ಈ ಎಸ್‍ಯುವಿಯು ಕಳೆದ ಎರಡು ತಿಂಗಳುಗಳಿಂದ ಮಾರಾಟದಲ್ಲಿ ಕುಸಿತ ಕಂಡಿದೆ. ಕಳೆದ ಆಕ್ಟೋಬರ್ ತಿಂಗಳಲ್ಲಿ ಹ್ಯುಂಡೈ ವೆನ್ಯೂ 8,576 ಯುನಿಟ್‍ಗಳು ಮಾರಾಟ ಮಾಡಲಾಗಿವೆ.

ಈ ಟಾಪ್-10 ಪಟ್ಟಿಯಲ್ಲಿ ಹ್ಯುಂಡೈ ಕ್ರೆಟಾ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಹುಂಡೈ ಕ್ರೆಟಾ ಕಳೆದ ಅಕ್ಟೋಬರ್ ತಿಂಗಳಲ್ಲಿ 7,269 ಯುನಿಟ್‍ಗಳು ಮಾರಾಟವಾಗಿವೆ. ಹೊಸ ಜನರೇಷನ್ ಕ್ರೆಟಾವನ್ನು ಕಂಪನಿಯು ಅಭಿವೃದ್ದಿಪಡಿಸುತ್ತಿದ್ದಾರೆ. ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಹೊಸ ಹ್ಯುಂಡೈ ಕ್ರೆಟಾವನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಈ ಪಟ್ಟಿಯಲ್ಲಿ 5ಸ್ಥಾನವನ್ನು ಮಹೀಂದ್ರಾ ಸ್ಕಾರ್ಪಿಯೋ ಪಡೆದುಕೊಂಡಿದೆ. ಈ ಎಸ್‍ಯುವಿಯು ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟಕ್ಕಿದೆ ಮತ್ತು ಇದು ಜನಪ್ರಿಯ ಎಸ್‍ಯುವಿಯಾಗಿದೆ. ಮಹೀಂದ್ರಾ ಸ್ಕಾರ್ಪಿಯೋ ಹಲವಾರು ವರ್ಷಗಳಿಂದ ಸ್ಥಿರವಾಗಿ ಮಾರಾಟವಾಗುತ್ತಿದೆ. ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯು ಕಳೆದ ಅಕ್ಟೋಬರ್ ತಿಂಗಳಲ್ಲಿ 4,628 ಯುನಿಟ್‍ಗಳು ಮಾರಾಟವಾಗಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಈ ಪಟ್ಟಿಯಲ್ಲಿ ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್ ಮತ್ತು ಎಂಜಿ ಹೆಕ್ಟರ್ ಎಸ್‍ಯುವಿಗಳು ಕ್ರಮವಾಗಿ ಆರನೇ, ಏಳನೇ ಮತ್ತು ಎಂಟನೇ ಸ್ಥಾನವನ್ನು ಪಡೆದುಕೊಂಡಿವೆ. ಟಾಟಾ ನೆಕ್ಸಾನ್ ಎಸ್‍ಯುವಿಯು ಕಳೆದ ಅಕ್ಟೋಬರ್ ತಿಂಗಳಲ್ಲಿ 4,438 ಯುನಿಟ್‍ಗಳು ಮಾರಾಟವಾಗಿದೆ. ಫೋರ್ಡ್ ಇಕೋಸ್ಪೋರ್ಟ್ ಎಸ್‍ಯುವಿಯು 4,326 ಯುನಿಟ್‍ಗಳು ಮಾರಾಟವಾಗಿವೆ. ಇನ್ನೂ ಎಂಜಿ ಹೆಕ್ಟರ್ ಕಳೆದ ತಿಂಗಳಲ್ಲಿ 3,536 ಯುನಿಟ್‍ಗಳ ಮಾರಾಟದೊಂದಿಗೆ ಎಂಟನೇ ಸ್ಥಾನವನ್ನು ಪಡೆದಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಎಂಜಿ ಹೆಕ್ಟರ್ ಎಸ್‍ಯುವಿಯು ಹೆಚ್ಚು ಮಾರಾಟವಾಗುವುದರಿಂದ ಈ ತಿಂಗಳಿನಿಂದ ಅದರ ಉತ್ಪಾದನೆಯನ್ನು ಹೆಚ್ಚಿಸಿದ್ದಾರೆ. ಆದರೆ ಪ್ರಸ್ತುತ ಭಾರತದಲ್ಲಿ ಸುಮಾರು 4 ರಿಂದ 5 ತಿಂಗಳವರೆಗಿನ ವೇಟಿಂಗ್ ಪಿರಿಯಡ್ ಅನ್ನು ಹೊಂದಿದೆ. ಉತ್ಪಾದನೆಯು ಹೆಚ್ಚಿರುವುದರಿಂದ ವೇಟಿಂಗ್ ಪಿರಿಯಡ್ ಕಡಿಮೆಯಾಗುವ ಸಾಧ್ಯತೆಗಳಿವೆ.
MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಈ ಪಟ್ಟಿಯಲ್ಲಿ ಕೊನೆಯ ಎರಡೂ ಸ್ಥಾನಗಳನ್ನು ಪಡೆಯುವಲ್ಲಿ ಮಹೀಂದ್ರಾ ಕಂಪನಿ ಯಶ್ವಸಿಯಾಗಿದೆ. ಒಂಬತ್ತನೇಯ ಸ್ಥಾನವನ್ನು ಎಕ್ಸ್‌ಯುವಿ 300 ಪಡೆದರೆ, ಎಕ್ಸ್‌ಯುವಿ 500 ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಮಹೀಂದ್ರಾ ಎಕ್ಸ್‌ಯುವಿ 300 ಎಸ್‍ಯುವಿಯ 3,046 ಯುನಿಟ್‍ಗಳು ಮಾರಾಟವಾದರೆ ಎಕ್ಸ್‌ಯುವಿ 500 ಎಸ್‍ಯುವಿಯ 1,378 ಯುನಿಟ್‍ಗಳು ಮಾರಾಟವಾಗಿವೆ.
| ಸ್ಥಾನ | ಮಾದರಿಗಳು | ಮಾರಾಟದ ಪ್ರಮಾಣ
|
| 1 | ಕಿಯಾ ಸೆಲ್ಟೋಸ್ | 12,854 |
| 2 | ಮಾರುತಿ ಸುಜುಕಿ ವಿಟಾರಾ ಬ್ರಿಝಾ | 10,227 |
| 3 | ಹ್ಯುಂಡೈ ವೆನ್ಯೂ | 8,576 |
| 4 | ಹ್ಯುಂಡೈ ಕ್ರೆಟಾ | 7,269 |
| 5 | ಮಹೀಂದ್ರಾ ಸ್ಕಾರ್ಪಿಯೋ | 4,628 |
| 6 | ಟಾಟಾ ನೆಕ್ಸಾನ್ | 4,438 |
| 7 | ಫೋರ್ಡ್ ಇಕೋಸ್ಪೋರ್ಟ್ | 4,326 |
| 8 | ಎಂಜಿ ಹೆಕ್ಟರ್ | 3,536 |
| 9 | ಮಹೀಂದ್ರಾ ಎಕ್ಸ್‌ಯುವಿ 300 | 3,045 |
| 10 | ಮಹೀಂದ್ರಾ ಎಕ್ಸ್‌ಯುವಿ 500 | 1,378 |

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಟಾಪ್-10 ಎಸ್‍ಯುವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇತ್ತೀಚಿಗೆ ಬಿಡುಗಡೆಯಾದ ಕಿಯಾ ಸೆಲ್ಟೋಸ್ ಜನಪ್ರಿಯ ಕಂಪನಿಗಳ ಎಸ್‍ಯುವಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.


Click it and Unblock the Notifications








