ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು
ಮೇ 2019ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳು ಅಗ್ರ ಸ್ಥಾನದಲ್ಲಿವೆ. ಈ ಪಟ್ಟಿಯಲ್ಲಿ ಸತತವಾಗಿ ಅಗ್ರಸ್ಥಾನದಲ್ಲಿದ್ದ ಮಾರುತಿ ಆಲ್ಟೋ ಕಾರಿನ ಜಾಗದಲ್ಲಿ ಮಾರುತಿ ಸ್ವಿಫ್ಟ್ ಕಾರು ಬಂದಿದೆ.

ಮಾರುತಿ ಸ್ವಿಫ್ಟ್ ತಮ್ಮದೇ ಕಂಪನಿಯ ಆಲ್ಟೋ ಕಾರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬಂದಿದೆ. ಮೂರನೇ ತಲೆಮಾರಿನ ಸ್ವಿಫ್ಟ್ ಹ್ಯಾಚ್‍ಬ್ಯಾಕ್ ಕಾರು ಮೇ ತಿಂಗಳಿನಲ್ಲಿ 17,039ಗಳಷ್ಟು ಮಾರಾಟವಾಗಿದೆ. ಮಾರುತಿ ಸುಜುಕಿ ಕಂಪನಿಯು 2,000 ಬಲೆನೋ ಕಾರುಗಳನ್ನು ತಯಾರಿಸಿ ಗ್ಲಾಂಜಾ ಹೆಸರಿನಲ್ಲಿ ಟೊಯೊಟಾ ಕಂಪನಿಗೆ ಹಸ್ತಾಂತರಿಸಿದೆ. ಬಲೆನೋ ಕಾರಿನ 15,176 ವಾಹನಗಳನ್ನು ಮಾರಾಟ ಮಾಡಲಾಗಿದೆ. ಒಟ್ಟಾರೆಯಾಗಿ 17,200 ಗ್ಲಾಂಜಾ ಹಾಗೂ ಬಲೆನೋ ಕಾರುಗಳ ಮಾರಾಟವಾಗಿದೆ.

ಎರಡನೇ ಸ್ಥಾನದಲ್ಲಿ ಹೊಸದಾಗಿ ಬಿಡುಗಡೆಯಾದ ಆಲ್ಟೊ ಹಾಗೂ ಮೂರನೇ ಸ್ಥಾನದಲ್ಲಿ ಡಿಜೈರ್ ವಾಹನಗಳಿದ್ದು, ಹಲವು ತಿಂಗಳುಗಳಿಂದ ಮಾರಾಟದಲ್ಲಿ ಕುಸಿತವನ್ನು ಅನುಭವಿಸುತ್ತಿವೆ. ಮೇ ತಿಂಗಳಿನಲ್ಲೂ ಹೊಸ ಆಲ್ಟೊ ಕಾರಿನ ಮಾರಾಟದಲ್ಲಿ 25% ಕುಸಿತವಾಗಿದೆ ಹಾಗೂ ಡಿಜೈರ್ ಕಾರಿನ ಮಾರಾಟದಲ್ಲಿ 34% ನಷ್ಟು ಕುಸಿತವುಂಟಾಗಿದೆ.

ಮಾರುತಿ ವ್ಯಾಗನ್ ಆರ್ ಕಾರು ಬಲೆನೋ ಕಾರಿನ ನಂತರದಲ್ಲಿ ಐದನೇ ಸ್ಥಾನದಲ್ಲಿದೆ. ಈ ಕಾರಿನ ಮಾರಾಟದಲ್ಲೂ 9%ನಷ್ಟು ಕುಸಿತವುಂಟಾಗಿ 14,561 ವಾಹನಗಳನ್ನು ಮಾರಾಟ ಮಾಡಲಾಗಿದೆ. ಮಾರುತಿ ಒಮ್ನಿ ಕಾರಿನ ಮಾರಾಟವನ್ನು ದೇಶಿಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಿದ ನಂತರ ಇಕೋ ವಾಹನದ ಮಾರಾಟದಲ್ಲಿ ಚೇತರಿಕೆಯಾಗಿದೆ.

ಇಕೋ, ಮಾರುತಿ ಸುಜುಕಿ ಕಂಪನಿಯು ತನ್ನ ಬ್ರಾಂಡಿನಲ್ಲಿ ಮಾರಾಟ ಮಾಡುತ್ತಿರುವ ಏಕೈಕ ವ್ಯಾನ್ ಮಾದರಿಯ ವಾಹನವಾಗಿದೆ. ಮೇ ತಿಂಗಳಿನಲ್ಲಿ 11,739 ಇಕೋ ವಾಹನಗಳ ಮಾರಾಟವಾಗಿದ್ದು, ಆರನೇ ಸ್ಥಾನದಲ್ಲಿದೆ. ಹ್ಯುಂಡೈನ ಕ್ರೆಟಾ ವಾಹನವು ಎಸ್‍ಯುವಿ ಸೆಗ್‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಒಟ್ಟಾರೆ ಕಾರುಗಳ ಮಾರಾಟ ಪಟ್ಟಿಯಲ್ಲಿ 9,054 ಕಾರುಗಳ ಮಾರಾಟದೊಂದಿಗೆ ಏಳನೇ ಸ್ಥಾನದಲ್ಲಿದೆ. ಎಂಟನೇ ಸ್ಥಾನದಲ್ಲಿರುವ ಎಲೈಟ್ ಐ20 ಪ್ರಿಮೀಯಂ ಹ್ಯಾಚ್‍ಬ್ಯಾಕ್‍ನ 8,958 ಕಾರುಗಳನ್ನು ಮಾರಾಟ ಮಾಡಲಾಗಿದೆ.
| ಸ್ಥಾನ | ಮಾದರಿ | ಮೇ 2019ರಲ್ಲಿನ ಮಾರಾಟ |
| 1 | ಮಾರುತಿ ಸ್ವಿಫ್ಟ್ | 17,039 |
| 2 | ಮಾರುತಿ ಆಲ್ಟೋ | 16,394 |
| 3 | ಮಾರುತಿ ಡಿಜೈರ್ | 16,196 |
| 4 | ಮಾರುತಿ ಬಲೆನೋ | 15,176 |
| 5 | ಮಾರುತಿ ವ್ಯಾಗನ್ ಆರ್ | 14,561 |
| 6 | ಮಾರುತಿ ಇಕೋ | 11,739 |
| 7 | ಹ್ಯುಂಡೈ ಕ್ರೆಟಾ | 9,054 |
| 8 | ಹ್ಯುಂಡೈ ಐ20 | 8,958 |
| 9 | ಮಾರುತಿ ಎರ್ಟಿಗಾ | 8,864 |
| 10 | ಮಾರುತಿ ವಿಟಾರಾ ಬ್ರಿಝಾ | 8,781 |
MOST READ: ಟ್ಯೂಬ್‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍ಲೆಸ್ ಟಯರ್ ಸದ್ದು ಶುರು

ಎರ್ಟಿಗಾ ಎಂಪಿವಿ ಕಾರು 9ನೇ ಸ್ಥಾನದಲ್ಲಿದೆ. ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರಿಝಾ ಕಾರು 10ನೇ ಸ್ಥಾನದಲ್ಲಿದೆ.
MOST READ: ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಬ್ರಿಝಾ ಕಾರು ಕಳೆದ ಕೆಲವು ದಿನಗಳಿಂದ ದೇಶಿಯ ಮಾರುಕಟ್ಟೆಯಲ್ಲಿದ್ದು, ಇದರಲ್ಲಿರುವ ವಿನ್ಯಾಸವು ಹಳೆಯದಾಗಿದೆ. ಎರ್ಟಿಗಾ ಎಂಪಿವಿ ಕಾರು ತನ್ನಲ್ಲಿರುವ ಹೊಸ ಡಿಸೈನ್ ಹಾಗೂ ಹೊಸ ಬಗೆಯ ಫೀಚರ್‍ಗಳಿಂದ ಬ್ರಿಝಾ ಕಾರನ್ನು ಹಿಂದಿಕ್ಕಿದೆ.
MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಮಾರುತಿ ಸುಜುಕಿ ಕಂಪನಿಯ ಕಾರುಗಳ ಮಾರಾಟದಲ್ಲಿ ಕಳೆದ ಕೆಲವು ದಿನಗಳಿಂದ ಕುಸಿತವುಂಟಾಗಿದೆ. ಆದರೂ ವಿವಿಧ ರೀತಿಯ ವಾಹನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಕಾರಣದಿಂದಾಗಿ, ಮಾರುಕಟ್ಟೆಯಲ್ಲಿ ಹಿಡಿತವನ್ನು ಹೊಂದಿದೆ. ಹ್ಯುಂಡೈ ಕಂಪನಿಯು ಕ್ರೆಟಾ ಹಾಗೂ ಎಲೈಟ್ ಐ20 ಕಾರುಗಳ ಬಿಡುಗಡೆಯ ನಂತರ ತೀವ್ರವಾದ ಸ್ಪರ್ಧೆಯನ್ನು ನೀಡುತ್ತಿದೆ. ಈಗ ವೆನ್ಯೂ ಕಾರಿನ ಬಿಡುಗಡೆಯ ನಂತರ ಮಾರಾಟದಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ.


Click it and Unblock the Notifications