ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಈ ವರ್ಷದ ಬೇಸಿಗೆಯು ಮುಗಿಯುತ್ತಾ ಬಂದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲವು ಶುರುವಾಗಲಿದೆ. ಬೇಸಿಗೆಯ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ವಾಹನವನ್ನು ಚಲಾಯಿಸುವವರಿಗಂತೂ ನರಕ ದರ್ಶನವಾಗುತ್ತದೆ.

ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಈ ವೇಳೆಯಲ್ಲಿ ವಾಹನ ಚಲಾಯಿಸುವವರು ಬಿಸಿಲಿನ ಹೊಡೆತದಿಂದ ಹಾಗೂ ಬಿಸಿಲಿನಿಂದ ಉಂಟಾಗುವ ಇನ್ನಿತರ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಹೆಚ್ಚಿನ ಸುರಕ್ಷ ಕ್ರಮಗಳನ್ನು ಅನುಸರಿಸುತ್ತಲೇ ಇರುತ್ತಾರೆ. ಆದರೆ ಪ್ರತಿ ಬೇಸಿಗೆಯಲ್ಲೂ ಸೋಷಿಯಲ್ ಮೀಡಿಯಾಗಳಲ್ಲಿ, ನಿಮ್ಮ ವಾಹನದ ಫ್ಯೂಯಲ್ ಟ್ಯಾಂಕ್‍‍ಗೆ ಪೂರ್ತಿಯಾಗಿ ಇಂಧನ ತುಂಬಿಸದಿರಿ, ತುಂಬಿಸಿದರೆ ಟ್ಯಾಂಕ್ ಬ್ಲಾಸ್ಟ್ ಆಗುತ್ತದೆ ಎಂಬ ಸುದ್ದಿಯೊಂದು ಹರಿದಾಡುತ್ತಲೇ ಇರುತ್ತದೆ.

ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಜನರು ಈ ರೀತಿಯ ಸುದ್ದಿಯನ್ನು ನಂಬಿ, ಒಬ್ಬರಿಂದ ಒಬ್ಬರಿಗೆ ಕಳುಹಿಸುತ್ತಾರೆ. ಈ ಕೆಳಗಿರುವ ಸುದ್ದಿಯು ಅಂತಹ ಸುದ್ದಿಗಳಲ್ಲಿ ಒಂದಾಗಿದ್ದು, ಜನರಿಗೆ ಬೇಸಿಗೆಯಲ್ಲಿ ಫುಲ್ ಟ್ಯಾಂಕ್ ಮಾಡಿಸದೇ ಇರಲು ಎಚ್ಚರಿಕೆ ನೀಡುತ್ತಿದೆ.

ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಈ ರೀತಿಯ ಸುದ್ದಿಗಳನ್ನು ಏಕೆ ಹರಡುತ್ತಾರೆ, ಹರಡುವವರು ಯಾರು, ಅವರ ಉದ್ದೇಶವೇನು ಎಂಬುದು ತಿಳಿಯುತ್ತಿಲ್ಲ. ನಮಗೆ ತಿಳಿದು ಬಂದ ಮಾಹಿತಿಯ ಪ್ರಕಾರ ಇಂತಹ ಸುದ್ದಿಗಳೆಲ್ಲವೂ ಸುಳ್ಳಾಗಿದ್ದು, ಈ ಸುಳ್ಳು ಸುದ್ದಿಗಳನ್ನು ಯಾರೂ ಸಹ ಗಂಭೀರವಾಗಿ ಪರಿಗಣಿಸಬಾರದೆಂದು ತಿಳಿಸಲಾಗಿದೆ.

ಹೆಚ್ಚಿನ ತಾಪಮಾನವಿರುವಾಗ ವಾಹನಗಳಿಗೆ ಬೇರೆ ರೀತಿಯಲ್ಲಿ ತೊಂದರೆಗಳಾಗುತ್ತವೆ ಎನ್ನುವುದು ನಿಜವಾದರೂ ಟ್ಯಾಂಕ್‍‍ನಲ್ಲಿ ಪೂರ್ತಿಯಾಗಿ ಇಂಧನ ತುಂಬಿಸಿಕೊಂಡರೆ ಟ್ಯಾಂಕ್ ಬ್ಲಾಸ್ಟ್ ಆಗುತ್ತದೆ ಎನ್ನುವುದು ಶುದ್ಧ ಸುಳ್ಳು. ಈ ರೀತಿಯ ಸುಳ್ಳು ಮಾಹಿತಿ ಹಾಗೂ ವದಂತಿಗಳನ್ನು ಹಬ್ಬಿಸಿದ್ದ ಬಗ್ಗೆ ಇಂಡಿಯನ್ ಆಯಿಲ್ ಕಂಪನಿಯ ಅಧಿಕಾರಿಗಳು ಟ್ವೀಟ್ ಮಾಡಿ ಈ ರೀತಿಯ ಸುದ್ದಿಗಳನ್ನು ಅಲ್ಲಗಳೆದಿದ್ದರು. ಟ್ವೀಟಿನಲ್ಲಿ ಈ ರೀತಿಯಾಗಿ ಹೇಳಲಾಗಿತ್ತು.

ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಸೋಷಿಯಲ್ ಮೀಡಿಯಾದಲ್ಲಿರುವ ಮತ್ತೊಂದು ಚಿತ್ರದಲ್ಲಿ ರಾಯಲ್ ಎನ್‍‍ಫೀಲ್ಡ್ ಬೈಕ್ ಸುಟ್ಟು ಕರಕಲಾಗಿರುವ ಚಿತ್ರವನ್ನು ಶೇರ್ ಮಾಡಲಾಗಿದೆ. ಈ ಬೈಕಿನಲ್ಲಿರುವ ಟ್ಯಾಂಕಿಗೆ ಫುಲ್ ಟ್ಯಾಂಕ್ ಮಾಡಿಸಿದ ಕಾರಣಕ್ಕೆ ಬೆಂಕಿ ತಗುಲಿ ಬೈಕ್ ಸುಟ್ಟು ಹೋಗಿದೆ ಎಂದು ತೋರಿಸಲಾಗುತ್ತಿದೆ. ಇನ್ನೂ ಕೆಲವು ಸುದ್ದಿಗಳಲ್ಲಿ ಈ ಬೈಕ್ ಅನ್ನು ಚಲಾಯಿಸುತ್ತಿದ್ದ ಮನುಷ್ಯನು ಬೈಕಿಗೆ ಬೆಂಕಿ ತಗುಲಿದಾಗ ಸುಟ್ಟು ಕರಕಲಾಗಿದ್ದಾನೆ ಎಂದು ಹೇಳಲಾಗಿದೆ. ಈ ಎಲ್ಲಾ ಸುದ್ದಿಗಳು ಸುಳ್ಳಾಗಿದ್ದು, ಯಾರೂ ಕೂಡ ಈ ಸುದ್ದಿಗಳನ್ನು ನಂಬಬಾರದು.

MOST READ: ಎಸ್‍‍ಯು‍‍ವಿ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಈ ರೀತಿಯ ವದಂತಿಗಳು, ಬೇಸಿಗೆ ವೇಳೆಯಲ್ಲಿ ಟಯರ್‍‍ಗಳಲ್ಲಿ ಗಾಳಿಯನ್ನು ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗಿ ತುಂಬಿಸಿಕೊಳ್ಳಿ ಎಂದು ನೀಡುವ ಸಲಹೆಯ ಮೇಲೆ ಹಬ್ಬಿವೆ. ಬೇಸಿಗೆಯಲ್ಲಿ ಗಾಳಿಯು ತನ್ನ ಸುತ್ತಲಿನ ವಾತಾವರಣವು ಬಿಸಿಯಾಗುವುದರಿಂದ ಉಬ್ಬಿಕೊಳ್ಳುತ್ತದೆ.

ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಇದರಿಂದಾಗಿ ಗಾಡಿಯನ್ನು ವೇಗವಾಗಿ ಚಲಾಯಿಸುವಾಗ, ಟಯರಿನ ವಾತಾವರಣವು ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚಾಗಿ ಅದರೊಳಗಿರುವ ಗಾಳಿಯು ಉಬ್ಬಿ, ಕೆಲವೊಮ್ಮೆ ಟಯರ್‍‍ಗಳು ಬ್ಲಾಸ್ಟ್ ಆಗುತ್ತವೆ. ಆದರೆ ಇದಕ್ಕೂ ವಾಹನಗಳ ಟ್ಯಾಂಕ್ ಪೂರ್ತಿಯಾಗಿ ತುಂಬಿಸಿಕೊಂಡರೆ ಬೈಕ್ ಬ್ಲಾಸ್ಟ್ ಆಗುತ್ತದೆ ಎನ್ನುವುದಕ್ಕೂ ಯಾವುದೇ ಸಂಬಂಧವಿಲ್ಲ.

MOST READ: ಜಂಟಿಯಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸುತ್ತಿವೆ ಕೆಟಿ‍ಎಂ-ಬಜಾಜ್

ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಯಾವುದೇ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ, ಅದನ್ನು ಪೇಪರ್ ಡಿಸೈನ್‍‍‍ನಲ್ಲಿ ಅಭಿವೃದ್ಧಿಪಡಿಸಿ, ಪೂರ್ತಿ ಪ್ರಮಾಣದ ವಾಹನವಾಗಿ ಮಾರ್ಪಡಿಸಲು ಅನೇಕ ಸಂಶೋಧನೆಗಳನ್ನು ನಡೆಸಲಾಗುತ್ತದೆ. ಕೆಲವು ವಾಹನಗಳನ್ನು ಅಭಿವೃದ್ಧಿಪಡಿಸಲು ವರ್ಷಗಳೇ ಹಿಡಿಯುತ್ತವೆ.

ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಅಭಿವೃದ್ಧಿ ಪಡಿಸುವ ಸಮಯದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಟೆಸ್ಟ್ ಗಳನ್ನು ನಡೆಸಲಾಗುವ ಕಾರಣ ವಾಹನಗಳ ಬೆಲೆಯೂ ಹೆಚ್ಚಾಗುತ್ತದೆ. ಹೊಸ ವಾಹನಗಳನ್ನು ತಯಾರಿಸುವಾಗ ಅವುಗಳ ಮೇಲೆ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಲಾಗುತ್ತದೆ.

MOST READ: ಭಾರತದಲ್ಲಿ ಬಿಡುಗಡೆಯಾದ ಲ್ಯಾಂಡ್ ರೋವರ್ ಡಿಸ್ಕವರಿ

ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ವಾಹನ ತಯಾರಕರು ಪ್ರತಿಯೊಂದು ವಿಷಯದಲ್ಲೂ ಎಚ್ಚರವಹಿಸಿ, ಸುರಕ್ಷತೆಯ ಕಡೆಗೆ ಗಮನಹರಿಸಿ ವಾಹನಗಳನ್ನು ತಯಾರಿಸಿರುತ್ತಾರೆ. ನಿಮ್ಮ ವಾಹನದ ಟ್ಯಾಂಕ್ ಸಾಮರ್ಥ್ಯಕ್ಕೆ ತಕ್ಕಂತೆ, ಯಾವುದೇ ವದಂತಿಗಳಿಗೆ ಕಿವಿಗೊಡದೇ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿಕೊಳ್ಳಬಹುದು.

Most Read Articles

Kannada
English summary
No, your fuel tank won’t explode when full in summer – Fake news buster - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X