ಟೊಯೊಟಾ ಮತ್ತು ಮಾರುತಿ ಸುಜುಕಿ ಜಂಟಿ ನಿರ್ಮಾಣದಲ್ಲಿ ಬರಲಿದೆ ಹೊಸ ಎಂಪಿವಿ ಕಾರು

ಟೊಯೊಟಾ ಮತ್ತು ಮರುತಿ ಸುಜುಕಿ ಸಂಸ್ಥೆಯು ಜಂಟಿಯಾಗಿ ವಾಹನಗಳನ್ನು ತಯಾರಿ ಮಾಡುವುದರ ಬಗ್ಗೆ ನಾವು ನಿಮಗೆ ಈ ಮೊದಲೇ ಮಾಹಿತಿಯನ್ನು ನೀಡಿದ್ದೆವು. ಇದೀಗ ಟೊಯೊಟಾ ಮತ್ತೆ ಮಾರುತಿ ಸುಜುಕಿ ಸಂಸ್ಥೆಯು ಮಹೀಂದ್ರಾ ಮರಾಜೊ ಕಾರಿಗೆ ಟಾಂಗ್ ನೀಡಲು ಒಂದು ಹೊಸ ಎಂಪಿವಿ ಕಾರನ್ನು ತಯಾರು ಮಾಡುತ್ತಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದು, ಈ ಕುರಿತಾದ ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ.

ಟೊಯೊಟಾ ಮತ್ತು ಮಾರುತಿ ಸುಜುಕಿ ಜಂಟಿ ನಿರ್ಮಾಣದಲ್ಲಿ ಬರಲಿದೆ ಹೊಸ ಎಂಪಿವಿ ಕಾರು

ಸಹಭಾಗಿತ್ವದ ಆಧಾರದ ಮೇಲೆ ನಿರ್ಮಾಣವಾಗೊಳ್ಳಲಿರುವ ಹೊಸ ಎಂಪಿವಿ ಕಾರನ್ನು ಟೊಯೊಟಾ ಸಂಸ್ಥೆಯು ಉತ್ಪಾದನೆ ಮಾಡಿ ಆನಂತರ ಸುಜುಕಿ ಸಂಸ್ಥೆಗೆ ನೀಡಲಿದೆ. ಈ ಹೊಸ ಎಂಪಿವಿ ಕಾರನ್ನು ಟೊಯೊಟಾ ಮತ್ತು ಸುಜುಕಿ ಶೋರುಂಗಳಲ್ಲಿ ದೊರೆಯಲಿದೆ. ಆದರೆ ಇಲ್ಲಿ ಬರಲಿರುವ ಹೊಸ ಎಂಪಿವಿ ಕಾರು ಟೊಯೊಟಾ ಇನೊವಾ ಕ್ರಿಸ್ಟಾ ಅಥವಾ ಎರ್ಟಿಗಾ ಕಾರುಗಳ ಸ್ಥಳವನ್ನು ಪಡೆದುಕೊಳ್ಳಲಿದೆಯೆ ಎಂಬುದು ಇನ್ನು ಸರಿಯಾದ ಮಾಹಿತಿ ಸಿಕ್ಕಿಲ್ಲ.

ಟೊಯೊಟಾ ಮತ್ತು ಮಾರುತಿ ಸುಜುಕಿ ಜಂಟಿ ನಿರ್ಮಾಣದಲ್ಲಿ ಬರಲಿದೆ ಹೊಸ ಎಂಪಿವಿ ಕಾರು

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಮತ್ತು ಎರ್ಟಿಗಾ ಕಾರುಗಳ ಬೆಲೆಯ ಮಧ್ಯದಲ್ಲಿ ಸಮಾರು 7 ರಿಂದ 8 ಲಕ್ಷದ ಅಂತರವಿದೆ. ಏಕೆಂದರೆ ಎರ್ಟಿಗಾ ಕಾರು ಎಕ್ಸ್ ಶೋರು ಪ್ರಕಾರ ರೂ. 7.44 ಲಕ್ಷದ ಪ್ರಾರಂಭಿಕ ಬೆಲೆ ಮತ್ತು ಇನೊವಾ ಕ್ರಿಸ್ಟಾ ಕಾರು ಆರಂಭಿಕವಾಗಿ ರೂ. 14.83 ಲಕ್ಷ ಬೆಲೆಯನ್ನು ಪಡುದುಕೊಂಡಿದೆ.

ಟೊಯೊಟಾ ಮತ್ತು ಮಾರುತಿ ಸುಜುಕಿ ಜಂಟಿ ನಿರ್ಮಾಣದಲ್ಲಿ ಬರಲಿದೆ ಹೊಸ ಎಂಪಿವಿ ಕಾರು

ಇವುಗಳ ನಡುವೆ ಇರುವ 7 ಲಕ್ಷದ ಬೆಲೆಯ ನಡುವೆ ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆ ಜಂಟಿಯಾಗಿ ನಿರ್ಮಾಣ ಮಾಡುವ ಎಂಪಿವಿ ಕಾರು ಬೆಲೆಯನ್ನು ಪಡೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಹೀಗಾದಲ್ಲಿ ಮಹೀಂದ್ರಾ ಮರಾಜೊ ಕಾರುಗಳಿಗಿಂತಲೂ ಹೆಚ್ಚಿನ ವೈಶಿಷ್ಟ್ಯತೆಯನ್ನು ಪಡೆಯಲಿದೆ ಹೊಸ ಎಂಪಿವಿ ಕಾರು. ಹಾಗೆಯೆ ಹೊಸ ಎಂಪಿವಿ ಕಾರು 2021-22ರಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.

ಟೊಯೊಟಾ ಮತ್ತು ಮಾರುತಿ ಸುಜುಕಿ ಜಂಟಿ ನಿರ್ಮಾಣದಲ್ಲಿ ಬರಲಿದೆ ಹೊಸ ಎಂಪಿವಿ ಕಾರು

ಎರಡೂ ಸಂಸ್ಥೆಗಳಿಂದ ನಿರ್ಮಾಣವಾಗಲಿರುವ ಹೊಸ ಎಂಪಿವಿ ಕಾರು ಡೀಸೆಲ್ ಎಂಜಿನ್ ಅನ್ನು ಹೊಂದಿರುವುದಿಲ್ಲ ಮತ್ತು ಬದಲಿಗೆ ಪೆಟ್ರೋಲ್ ಹೈಬ್ರಿಡ್ ಹಾಗು ಫುಲ್ ಎಲೆಕ್ಟ್ರಿಕ್ ಆಯ್ಕೆಯನ್ನು ಪಡುದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಬರಲಿರುವ ಕಾರುಗಳು ಜಾರಿಯಾಗಲಿರುವ BS6 ಎಮಿಷನ್ ಅನ್ನು ಸಹ ಹೊಂದಿರಲಿದೆ.

ಟೊಯೊಟಾ ಮತ್ತು ಮಾರುತಿ ಸುಜುಕಿ ಜಂಟಿ ನಿರ್ಮಾಣದಲ್ಲಿ ಬರಲಿದೆ ಹೊಸ ಎಂಪಿವಿ ಕಾರು

ಎಂಪಿವಿ ಕಾರನ್ನು ಹೊರತು ಪಡಿಸಿ ಎರಡೂ ಸಂಸ್ಥೆಗಳು ಇನ್ನಿತರೆ ವಾಹನಗಳನ್ನು ನಿರ್ಮಾಣ ಮಾಡಲಿವೆ. ಮೊದಲಿಗೆ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಬಲೆನೊ ಮತ್ತು ವಿಟಾರಾ ಬ್ರೆಝಾ ಕಾರುಗಳನ್ನು ಟೊಯೊಟಾ ಸಂಸ್ಥೆಗೆ ಕಳುಹಿಸಿ ಅವುಗಳ ಮೇಲೆ ಟೊಯೊಟಾ ಸಂಸ್ಥೆಯ ಬ್ಯಾಡ್ಜಿಂಗ್ ಅನ್ನು ಅಳವಡಿಸಿ, ದೇಶಿಯ ಮಾರುಕಟ್ಟೆಯಲ್ಲಿ ಮತ್ತು ಆಫ್ರಿಕನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದೆ.

MOST READ: ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಟೊಯೊಟಾ ಮತ್ತು ಮಾರುತಿ ಸುಜುಕಿ ಜಂಟಿ ನಿರ್ಮಾಣದಲ್ಲಿ ಬರಲಿದೆ ಹೊಸ ಎಂಪಿವಿ ಕಾರು

ಅಷ್ಟೆ ಅಲ್ಲದೇ ಬಲೆನೊ ಮತ್ತು ವಿಟಾರಾ ಬ್ರೆಝಾ ಮಾತ್ರವಲ್ಲದೆಯೆ ಮಾರುತಿ ಸಿಯಾಜ್ ಹಾಗು ಎರ್ಟಿಗಾ ಕಾರುಗಳನ್ನು ಸಹ ಟೊಯೊಟಾ ಬ್ಯಾಡ್ಜಿಂಗ್ ಅನ್ನು ಪಡೆದುಕೊಳ್ಳಲಿದೆ. ಎಲ್ಲವೂ ಅಂದುಕೊಂಡತೆ ಆದಲ್ಲಿ ಭವಿಷ್ಯದಲ್ಲಿ ಟೊಯೊಟಾ ಸಂಸ್ಥೆಯು ತಮ್ಮ ಪೆಟ್ರೋಲ್-ಹೈಬ್ರಿಡ್ ಟೆಕ್ನಾಲಜಿಯನ್ನು ಮಾರುತಿ ಸುಜುಕಿಯೊಂದಿಗೆ ಹಂಚಿಕೊಳ್ಳುವ ಸಾಧ್ಯತೆಗಳು ಕೂಡಾ ಇದೆ.

ಟೊಯೊಟಾ ಮತ್ತು ಮಾರುತಿ ಸುಜುಕಿ ಜಂಟಿ ನಿರ್ಮಾಣದಲ್ಲಿ ಬರಲಿದೆ ಹೊಸ ಎಂಪಿವಿ ಕಾರು

ಟೊಯೊಟಾ ಮತ್ತು ಮಾರುತಿ ಸುಜುಕಿ ಸಂಸ್ಥೆಯು ಎಲೆಕ್ಟ್ರಿಕ್ ವಾಹನಗಳನ್ನು ಸಹ ನಿರ್ಮಾಣ ಮಾಡುವ ಕಾರ್ಯವನ್ನು ಶುರು ಮಾಡಿದೆ. ಮುಂದಿನ ವರ್ಷ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಹೊಸ ವ್ಯಾಗನ್ ಆರ್ ಅಕರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ಧತೆಯನ್ನು ನಡೆಸುತಿದ್ದು, ಇನ್ನು ಟೊಯೊಟಾ ಸಂಸ್ಥೆಯು ಸಹ ಶೀಘ್ರವೇ ಎಲೆಕ್ಟ್ರಿಕ್ ವಾಹನವನ್ನು ತಯಾರು ಮಾಡಲಿದೆ.

ಟೊಯೊಟಾ ಮತ್ತು ಮಾರುತಿ ಸುಜುಕಿ ಜಂಟಿ ನಿರ್ಮಾಣದಲ್ಲಿ ಬರಲಿದೆ ಹೊಸ ಎಂಪಿವಿ ಕಾರು

ಇವಿ ಕಾರುಗಳ ಪ್ರಮುಖ ತಾಂತ್ರಿಕ ಅಂಶವಾದ ಲೀಥಿಯಂ ಅಯಾನ್ ಬ್ಯಾಟರಿಗಳ ಬೆಲೆ ಅಧಿಕವಿರುವ ಕಾರಣ ರೆಗ್ಯೂಲರ್ ಮಾಡೆಲ್ ವ್ಯಾಗನ್ ಆರ್ ಮಾದರಿಗಿಂತಲೂ ಬೆಲೆ ಎರಡರಷ್ಟು ಜಾಸ್ತಿ ಇರಲಿದ್ದು, ಪ್ರತಿ ಚಾರ್ಜಿಂಗ್‌ಗೆ ಕನಿಷ್ಠ 150 ರಿಂದ 180ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲ 72 ವೊಲ್ಟ್, 25kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿಯೆಂತೆ.

MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಟೊಯೊಟಾ ಮತ್ತು ಮಾರುತಿ ಸುಜುಕಿ ಜಂಟಿ ನಿರ್ಮಾಣದಲ್ಲಿ ಬರಲಿದೆ ಹೊಸ ಎಂಪಿವಿ ಕಾರು

ಹಾಗೆಯೇ ಹೊಸ ವ್ಯಾಗನ್ ಆರ್ ಕಾರಿನಲ್ಲಿ ಅತಿ ವೇಗವಾಗಿ ಚಾರ್ಚಿಂಗ್ ಮಾಡಬಹುದಾದ ಡಿಸಿ ಫಾಸ್ಟ್ ಚಾರ್ಜಿಂಗ್ ಸಿಸ್ಟಂ ಬಳಕೆ ಮಾಡಲಾಗಿದ್ದು, ಇದು ಕೇವಲ 1 ಗಂಟೆಯ ಒಳಗಾಗಿ ಶೇ.80 ರಷ್ಟು ಚಾರ್ಜ್ ಆಗಲಿದೆ ಎಂದು ಹೇಳಲಾಗಿದೆ.

Source: ETAuto

Article Published On: Friday, March 22, 2019, 13:45 [IST]
English summary
Toyota Kirloskar to start making Suzuki cars in India by 2022. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+