ಸದ್ಯದಲ್ಲೇ ಬರಲಿವೆ ಉಬರ್ ಬಸ್ಸುಗಳು..!

ದೆಹಲಿಯ ತನ್ನ ಗ್ರಾಹಕರಿಗಾಗಿ ಉಬರ್ ಕಂಪನಿಯು ಸಾರ್ವಜನಿಕ ಸಾರಿಗೆ ಎಂಬ ಹೊಸ ಫೀಚರ್ ಅನ್ನು ತನ್ನ ಆಪ್‍‍ನಲ್ಲಿ ಬಿಡುಗಡೆಗೊಳಿಸಿದೆ. ಇದರಿಂದ ಉಬರ್ ಬಸ್ಸುಗಳು ದೆಹಲಿಯಲ್ಲಿ ಸಂಚರಿಸುವ ದಿನಗಳು ದೂರವಿಲ್ಲ ಎಂದು ಕಂಡು ಬರುತ್ತದೆ.

ಸದ್ಯದಲ್ಲೇ ಬರಲಿವೆ ಉಬರ್ ಬಸ್ಸುಗಳು..!

ಈ ಹೊಸ ಫೀಚರ್ ಅನ್ನು ಮಂಗಳವಾರವಷ್ಟೇ ದೆಹಲಿಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಫೀಚರ್ ಅನ್ನು ದೆಹಲಿಯ ಗ್ರಾಹಕರು ಬಸ್ಸುಗಳನ್ನು ತಮ್ಮ ಆದ್ಯತೆಯಾಗಿ ಹೇಗೆ ಆಯ್ಕೆ ಮಾಡಲಿದ್ದಾರೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಬಿಡುಗಡೆಗೊಳಿಸಲಾಗಿದೆ.

ಸದ್ಯದಲ್ಲೇ ಬರಲಿವೆ ಉಬರ್ ಬಸ್ಸುಗಳು..!

ಉಬರ್ ಕಂಪನಿಯು, ಬಸ್ ಸೇವೆಯನ್ನು ಬಿಡುಗಡೆಗೊಳಿಸುವ ಮುನ್ನ ಈ ಫೀಚರ್ ಅನ್ನು ಪರೀಕ್ಷಿಸಲು ಬಯಸಿದೆ. ಉಬರ್ ಕಂಪನಿಯು ಕಳೆದ ವರ್ಷದ ಅಕ್ಟೋಬರ್‍‍ನಲ್ಲಿ ಈಜಿಪ್ಟ್ ನ ಕೈರೋದಲ್ಲಿ ಉಬರ್ ಬಸ್ಸುಗಳನ್ನು ಬಿಡುಗಡೆಗೊಳಿಸಿತ್ತು.

ಸದ್ಯದಲ್ಲೇ ಬರಲಿವೆ ಉಬರ್ ಬಸ್ಸುಗಳು..!

ಹೆಚ್ಚು ಸಂಚರಿಸುವ ಮಾರ್ಗಗಳಲ್ಲಿ ಆಗಾಗ್ಗೆ ಚಲಿಸುವ ಹವಾನಿಯಂತ್ರಿತ ಬಸ್‌ನಲ್ಲಿ ಆಸನಗಳನ್ನು ಕಾಯ್ದಿರಿಸಲು ಉಬರ್ ಬಸ್ ಅಪ್ಲಿಕೇಶನ್‍‍ನಿಂದ ಸಹಾಯವಾಗಲಿದೆ. ಇದರಿಂದಾಗಿ ಯಾವಾಗಲೂ ಅರಾಮದಾಯಕ ಪ್ರಯಾಣವನ್ನು ಮಾಡಬಹುದು.

ಸದ್ಯದಲ್ಲೇ ಬರಲಿವೆ ಉಬರ್ ಬಸ್ಸುಗಳು..!

ಉಬರ್ ಬಸ್ ಅಪ್ಲಿಕೇಶನ್ ಎಲ್ಲಾ ಆಂಡ್ರಾಯ್ಡ್ ಸಾಧನಗಳಲ್ಲಿ ಹಾಗೂ ಎಲ್ಲಾ ರೀತಿಯ ನೆಟ್‌ವರ್ಕ್ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಬಗ್ಗೆ ಮಾತನಾಡಿದ ಉಬರ್ ಸಿಇಒ ದಾರಾ ಖೋಸ್ರೋಶಾಹಿರವರು, ಉಬರ್ ಬಸ್ ಸೇವೆ ನಾವು ಬಿಡುಗಡೆಗೊಳಿಸಿದ ಹೊಸ ಉತ್ಪನ್ನವಾಗಿದೆ.

ಸದ್ಯದಲ್ಲೇ ಬರಲಿವೆ ಉಬರ್ ಬಸ್ಸುಗಳು..!

ಈ ಸೇವೆಯು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ನಾವು ಪರೀಕ್ಷಿಸುತ್ತೇವೆ. ಈ ಉತ್ಪನ್ನವನ್ನು ಹೆಚ್ಚಿನ ಜನರು ಬಳಸಿದಂತೆಲ್ಲಾ, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರ್ಕೆಟಿಂಗ್ ಮಾಡಲಾಗುತ್ತದೆ ಎಂದು ಹೇಳಿದರು.

ಸದ್ಯದಲ್ಲೇ ಬರಲಿವೆ ಉಬರ್ ಬಸ್ಸುಗಳು..!

ಉಬರ್ ಬಸ್ಸುಗಳು ದೆಹಲಿಗೆ ಕಾಲಿಟ್ಟ ನಂತರ ಶಟಲ್ ಸೇವೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ನೀವು ಎಲ್ಲಿಂದ ಬಸ್ ಹತ್ತಬೇಕೊ ಅಲ್ಲಿಂದ ನಿಮ್ಮನ್ನು ಪಿಕ್ ಮಾಡಿ, ನೀವು ತಲುಪಬೇಕೆಂದಿರುವ ಜಾಗಕ್ಕೆ ಡ್ರಾಪ್ ಮಾಡುತ್ತವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಸದ್ಯದಲ್ಲೇ ಬರಲಿವೆ ಉಬರ್ ಬಸ್ಸುಗಳು..!

ಇದೇ ರೀತಿಯ ಸೇವೆಯನ್ನು ಬೇರೆ ನಗರಗಳಲ್ಲಿ ನೀಡಲಾಗುತ್ತಿದೆ. ಆಪ್‍‍ನಲ್ಲಿ ತಲುಪಬೇಕಿರುವ ಸ್ಥಳವನ್ನು ಆಯ್ಕೆ ಮಾಡಿಕೊಂಡು, ನಂತರ ಉಬರ್ ಬಸ್ ಅನ್ನು ಆಯ್ಕೆ ಮಾಡಬೇಕು. ದರವನ್ನು ಪರಿಶೀಲಿಸಿದ ನಂತರ ರಿಕ್ವೆಸ್ಟ್ ಕಳುಹಿಸಬೇಕು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸದ್ಯದಲ್ಲೇ ಬರಲಿವೆ ಉಬರ್ ಬಸ್ಸುಗಳು..!

ಇದಾದ ನಂತರ 5 ನಿಮಿಷಗಳ ಕಾಲ ಕಾಯಬೇಕು. ಇದೇ ವೇಳೆಯಲ್ಲಿ ಬೇರೆ ಗ್ರಾಹಕರು ಯಾರಾದರೂ ಈ ಮಾರ್ಗದಲ್ಲಿ ಸಂಚರಿಸುವವರು ಇದ್ದಾರೆಯೇ ಎಂದು ಪರಿಶೀಲಿಸಲಾಗುತ್ತದೆ. ಇಲ್ಲದಿದ್ದರೆ ನಿಮಗೆ ಹತ್ತಿರವಿರುವ ಮಾರ್ಗವನ್ನು ನೀಡಲಾಗುತ್ತದೆ ಎಂದು ಉಬರ್ ತಿಳಿಸಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸದ್ಯದಲ್ಲೇ ಬರಲಿವೆ ಉಬರ್ ಬಸ್ಸುಗಳು..!

ಚಾಲಕನ ಮಾಹಿತಿ ಹಾಗೂ ಪಿಕ್ ಅಪ್ ಸ್ಥಳದ ಬಗೆಗೆ ನಿಮಗೆ ಮಾಹಿತಿ ದೊರೆಯಲಿದೆ. ಬಸ್ ಎಲ್ಲಿದೆ ಎಂಬುದನ್ನು ನಿಮ್ಮ ಪಿಕ್ ಅಪ್ ಜಾಗದಿಂದ ಟ್ರಾಕ್ ಮಾಡಬಹುದಾಗಿದೆ. ಮ್ಯಾಪ್‍‍ನಲ್ಲಿರುವ ನಿಮ್ಮ ಪಿಕ್ ಅಪ್ ಸ್ಥಳಕ್ಕೆ ತಡ ಮಾಡದೇ ಸರಿಯಾದ ಸಮಯಕ್ಕೆ ತಲುಪಬೇಕು.

ಸದ್ಯದಲ್ಲೇ ಬರಲಿವೆ ಉಬರ್ ಬಸ್ಸುಗಳು..!

ಬಸ್ ಬರುವ ಮೊದಲೇ ಆ ಸ್ಥಳದಲ್ಲಿರ ಬೇಕಾಗುತ್ತದೆ. ನೀವು ಹೋಗಬೇಕಾದ ಬಸ್ ನಿಮಗಾಗಿ ಎರಡು ನಿಮಿಷ ಕಾಯಲಿದೆ ಎಂದು ಉಬರ್ ಸಂಸ್ಥೆಯು ತನ್ನ ಬ್ಲಾಗ್ ಪೋಸ್ಟ್ ನಲ್ಲಿ ಹೇಳಿದೆ. ಬಾರ್‍‍ಕೋಡ್ ಅನ್ನು ಸ್ಕ್ಯಾನ್ ಮಾಡಿ, ನಿಮ್ಮ ಟಿಕೆಟ್ ಅನ್ನು ಚಾಲಕನಿಗೆ ತೋರಿಸಿದ ನಂತರ ಚಾಲಕನಿಗೆ ಟಿಕೆಟ್ ಹಣವನ್ನು ನೀಡಬೇಕು ಅಥವಾ ಆಪ್ ಮೂಲಕವೇ ಹಣವನ್ನು ಪಾವತಿಸಬಹುದು.

ಸದ್ಯದಲ್ಲೇ ಬರಲಿವೆ ಉಬರ್ ಬಸ್ಸುಗಳು..!

ನೀವು ತಲುಪಬೇಕಾದ ಸ್ಥಳವು ಬಂದಾಗ, ಉಬರ್ ಸಂಸ್ಥೆಯು ಆ ಸ್ಥಳಕ್ಕೆ ಹತ್ತಿರದಲ್ಲಿರುವ ಮಾರ್ಗವನ್ನು ತೋರಿಸಲಿದೆ. ನಂತರ ಆ ಮಾರ್ಗದಲ್ಲಿ ನಿಮ್ಮನ್ನು ಕರೆದೊಯ್ಯಲಿದೆ. ನೀವು ಚಲಿಸುತ್ತಿರುವ ಬಸ್‍‍ನಿಂದ ಯಾವಾಗ ಇಳಿಯಬೇಕು ಎಂಬುದರ ಬಗ್ಗೆ ನೋಟಿಫಿಕೇಷನ್ ಬರಲಿದೆ. ನಂತರ ಈ ಆಪ್‍ ನೀವು ತಲುಪಬೇಕಾದ ಮಾರ್ಗಗಳನ್ನು ಸಹ ತೋರಿಸಲಿದೆ.

Most Read Articles

Kannada
English summary
Uber Bus not too far from Delhi roads - Read in Kannada
Story first published: Thursday, October 24, 2019, 18:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X