ಸಾಮಾಜಿಕ ಅಂತರದ ಬಗ್ಗೆ ಕಾರು ತಯಾರಕ ಕಂಪನಿಗಳು ಹೇಳಿದ್ದೇನು ಗೊತ್ತಾ?
ಕರೋನಾ ವೈರಸ್ ವಿಶ್ವಾದ್ಯಂತ ಹರಡಿದ್ದು, ಸಾಂಕ್ರಾಮಿಕ ರೋಗದ ಸ್ವರೂಪವನ್ನು ಪಡೆದುಕೊಂಡಿದೆ. ವಿಶ್ವದ 200ಕ್ಕೂ ಹೆಚ್ಚು ದೇಶಗಳು ಕರೋನಾ ವೈರಸ್‌ಗೆ ತುತ್ತಾಗಿವೆ. ಭಾರತ, ಅಮೆರಿಕ, ಫ್ರಾನ್ಸ್ ಹಾಗೂ ಇಟಲಿಯಲ್ಲಿರುವ ವಾಹನ ತಯಾರಾಕ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಮುಚ್ಚಿ ನೌಕರರಿಗೆ ಮನೆಯಲ್ಲಿಯೇ ಇರಲು ಸೂಚನೆ ನೀಡಿವೆ.

ಭಾರತದಲ್ಲಿ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ವೈರಸ್ ಹರಡದಂತೆ ತಡೆಯಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸರ್ಕಾರವು ಜನರಿಗೆ ಸೂಚಿಸಿದೆ. ಕರೋನಾ ವೈರಸ್ ಹರಡುವುದನ್ನು ತಪ್ಪಿಸಲು ಆಟೋಮೊಬೈಲ್ ಕಂಪನಿಗಳು ಜನರಿಗೆ ಏನು ಮನವಿ ಮಾಡುತ್ತಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಆಡಿ
ಆಡಿ ತನ್ನ ಲೊಗೊದಲ್ಲಿರುವ ನಾಲ್ಕು ಉಂಗುರಗಳನ್ನು ಬೇರೆ ಬೇರೆ ಮಾಡುವ ಮೂಲಕ ಸಾಮಾಜಿಕ ದೂರವನ್ನು ಅಳವಡಿಸಿಕೊಳ್ಳಲು ಮನವಿ ಮಾಡಿದೆ. ಜನರು ಮನೆಗಳಲ್ಲಿ ಉಳಿಯುವಂತೆ ಆಡಿ ಕಂಪನಿ ಮನವಿ ಮಾಡಿದೆ.
ಬಿಎಂಡಬ್ಲ್ಯು
ಜರ್ಮನ್ ಮೂಲದ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಈ ಸಂದೇಶವನ್ನು ಅತ್ಯಂತ ಸರಳ ರೀತಿಯಲ್ಲಿ ತಲುಪಿಸಿದೆ. ರಸ್ತೆ ಯಾವಾಗಲೂ ಇರುತ್ತದೆ, ಸದ್ಯಕ್ಕೆ ನಾವು ಮನೆಯಲ್ಲಿಯೇ ಇರೋಣ ಎಂದು ಕಂಪನಿ ಹೇಳಿದೆ.
MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್
ಫೋರ್ಡ್
ಫೋರ್ಡ್ ಮೋಟಾರ್ಸ್ ತನ್ನ ಕಾರುಗಳನ್ನು ಪರಸ್ಪರ ಹೊರಹಾಕುವ ಮೂಲಕ ಸಾಮಾಜಿಕ ಅಂತರದ ಮಹತ್ವವನ್ನು ತಿಳಿಸಿದೆ. ಕರೋನಾದ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರವನ್ನುಕಾಯ್ದುಕೊಳ್ಳುವಂತೆ ಮನವಿ ಮಾಡಿದೆ.
MOST READ: ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?
ಮರ್ಸಿಡಿಸ್ ಬೆಂಝ್
ಮರ್ಸಿಡಿಸ್ ಬೆಂಝ್ ಕಂಪನಿಯು ಜನರನ್ನು ಮನೆಯಲ್ಲೇ ಇರುವಂತೆ ಮನವಿ ಮಾಡಿದೆ. ಕರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರಿಗೆ ಕಂಪನಿಯು ಧನ್ಯವಾದ ತಿಳಿಸಿದೆ.
MOST READ: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಕಂಪನಿಯು ಸಹ ಜನರು ಮನೆಯಲ್ಲಿಯೇ ಇರಬೇಕೆಂದು ಮನವಿ ಮಾಡಿದೆ. ಕಂಪನಿಯ ಎಸ್‌ಯುವಿ ಕಾರುಗಳು ಮನೆಯಿಂದ ಹೊರಬರುವುದನ್ನು ತೋರಿಸುವ ಚಿತ್ರವನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿದೆ.


Click it and Unblock the Notifications