ಕರೋನಾ ವೈರಸ್ ಭೀತಿ ನಡುವೆಯೂ ವಾಹನ ಉತ್ಪಾದನೆಗೆ ಸಜ್ಜಾದ ಆಟೋ ಕಂಪನಿಗಳು

ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಬರೋಬ್ಬರಿ 21 ದಿನಗಳ ಕಾಲ ಲಾಕ್ ಡೌನ್ ವಿಧಿಸಿದ್ದ ಕೇಂದ್ರ ಸರ್ಕಾರವು ಇದೀಗ ಮತ್ತೆ ಪರಿಸ್ಥಿತಿಗೆ ಅನುಗುಣವಾಗಿ ಈ ತಿಂಗಳಾಂತ್ಯದ ತನಕ ಮುಂದುವರಿಸುವ ಸುಳಿವು ಕೊಟ್ಟಿದ್ದು, ಕೈಗಾರಿಕೆ ವಲಯದಲ್ಲಿ ಭಾರೀ ನಷ್ಟ ಭೀತಿ ಎದುರಾಗಿದೆ.

ಕರೋನಾ ವೈರಸ್ ಭೀತಿ ನಡುವೆಯೂ ವಾಹನ ಉತ್ಪಾದನೆಗೆ ಸಜ್ಜಾದ ಆಟೋ ಕಂಪನಿಗಳು

ಕೇಂದ್ರ ಸರ್ಕಾರವು ವಿಧಿಸಿರುವ ಲಾಕ್ ಡೌನ್ ನಾಳೆಗೆ ಮುಕ್ತಾಯವಾಗಲಿದ್ದು, ವೈರಸ್ ಇನ್ನು ಹತೋಟಿ ಬರದಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಲಾಕ್ ಡೌನ್ ಮುಂದುವರಿದಲ್ಲಿ ಕೈಗಾರಿಕೆ ವಲಯವು ಮತ್ತಷ್ಟು ನಷ್ಟ ಎದುರಿಸಬೇಕಾದ ಸನ್ನಿವೇಶ ಎದುರಾಗಿದೆ. ಈ ಹಿನ್ನಲೆಯಲ್ಲಿ ಉತ್ಪಾದನಾ ವಲಯಗಳಿಗೆ ಕೆಲವು ವಿನಾಯ್ತಿಗಳನ್ನು ನೀಡುವಂತೆ ಕೇಂದ್ರ ಗೃಹಸಚಿವಾಲಯದ ಮೊರೆ ಹೋಗಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಂಘ-ಸಂಸ್ಥೆಗಳು ಖಾಸಗಿ ಉತ್ಪಾದನಾ ಕಂಪನಿಗಳ ಆರ್ಥಿಕ ದಿವಾಳಿತನ ತಪ್ಪಿಸುವ ಪ್ರಯತ್ನ ನಡೆಸಿವೆ.

ಕರೋನಾ ವೈರಸ್ ಭೀತಿ ನಡುವೆಯೂ ವಾಹನ ಉತ್ಪಾದನೆಗೆ ಸಜ್ಜಾದ ಆಟೋ ಕಂಪನಿಗಳು

ಉತ್ಪಾದನಾ ವಲಯದಲ್ಲಿ ಕರೋನಾ ವೈರಸ್ ಹರಡದಂತೆ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಂಘ-ಸಂಸ್ಥೆಗಳು, ಆಟೋ ಉತ್ಪಾದನೆ ಸೇರಿದಂತೆ ಕೆಲವು ಕೆಲವು ವಲಯಗಳಲ್ಲಿ ಮಾತ್ರವೇ ಉತ್ಪಾದನೆಗೆ ಅವಕಾಶ ಕೋರಿವೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಕರೋನಾ ವೈರಸ್ ಭೀತಿ ನಡುವೆಯೂ ವಾಹನ ಉತ್ಪಾದನೆಗೆ ಸಜ್ಜಾದ ಆಟೋ ಕಂಪನಿಗಳು

ಒಂದು ವೇಳೆ ಆಟೋ ಉತ್ಪಾದನಾ ಕಂಪನಿಗಳಿಗೆ ವಿನಾಯ್ತಿ ದೊರೆತಲ್ಲಿ ಶೀಘ್ರದಲ್ಲೇ ಹೊಸ ವಾಹನ ಉತ್ಪಾದನೆ ಶುರುವಾಗಲಿದ್ದು, ವೈರಸ್ ಹರಡದಂತೆ ಹಲವು ಕಟ್ಟು-ನಿಟ್ಟಿನ ಕ್ರಮಗಳೊಂದಿಗೆ ಉತ್ಪಾದನೆಯು ಮರುಚಾಲನೆ ಪಡೆದುಕೊಳ್ಳಲಿವೆ.

ಕರೋನಾ ವೈರಸ್ ಭೀತಿ ನಡುವೆಯೂ ವಾಹನ ಉತ್ಪಾದನೆಗೆ ಸಜ್ಜಾದ ಆಟೋ ಕಂಪನಿಗಳು

ಆದರೆ ಕೇಂದ್ರ ಸರ್ಕಾರವು ನಾಳೆ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಕೈಗಾರಿಕಾ ವಲಯದ ಭವಿಷ್ಯ ನಿರ್ಧಾರವಾಗಲಿದ್ದು, ಲಾಕ್ ಡೌನ್ ಮತ್ತೆ ಮುಂದುವರಿದು ಉತ್ಪಾದನಾ ವಲಯವು ಸಂಪೂರ್ಣ ಸ್ತಬ್ದವಾದಲ್ಲಿ ಆರ್ಥಿಕ ಪರಿಸ್ಥಿತಿಯು ಮತ್ತಷ್ಟು ಶೋಚನೀಯ ಸ್ಥಿತಿಗೆ ತಲುಪುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಮುಂದುವರಿಸಲು ಅವಕಾಶ ನೀಡುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘ-ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಕರೋನಾ ವೈರಸ್ ಭೀತಿ ನಡುವೆಯೂ ವಾಹನ ಉತ್ಪಾದನೆಗೆ ಸಜ್ಜಾದ ಆಟೋ ಕಂಪನಿಗಳು

ಇನ್ನು ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ಬಿಎಸ್-6 ಎಮಿಷನ್ ನಿಯಮವು ಆಟೋ ಉತ್ಪಾದನಾ ಕಂಪನಿಗಳಿಗೆ ಮತ್ತಷ್ಟು ಆರ್ಥಿಕ ಹೊರೆಯಾಗಿ ಪರಿಣಮಿಸಿದ್ದು, ಹೊಸ ನಿಯಮ ಜಾರಿಗೆ ಮುನ್ನ ಲಾಕ್ ಡೌನ್ ಆಗಿದ್ದರಿಂದ ಸಾವಿರಾರು ಕೋಟಿ ಮೌಲ್ಯದ ಬಿಎಸ್-4 ವಾಹನಗಳ ಸ್ಟಾಕ್ ಹಾಗೆಯೇ ಉಳಿದಿದೆ.

ಕರೋನಾ ವೈರಸ್ ಭೀತಿ ನಡುವೆಯೂ ವಾಹನ ಉತ್ಪಾದನೆಗೆ ಸಜ್ಜಾದ ಆಟೋ ಕಂಪನಿಗಳು

ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಯಾಗಿದ್ದರೂ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾನ್ ಆಗಿರುವ ಬಿಎಸ್-4 ವಾಹನಗಳ ಮಾರಾಟಕ್ಕೆ ಕೆಲವು ವಿನಾಯ್ತಿಗಳನ್ನು ನೀಡಿರುವ ಸುಪ್ರೀಂಕೋರ್ಟ್ ಈ ತಿಂಗಳ 24ರ ತನಕ ಮಾತ್ರವೇ ಇಂತಿಷ್ಟು ಪ್ರಮಾಣದ ಬಿಎಸ್-4 ವಾಹನಗಳನ್ನು ಮಾತ್ರವೇ ಮಾರಾಟ ಮಾಡಬೇಕೆಂಬ ನಿಯಮ ಜಾರಿಗೊಳಿಸಿದೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಕರೋನಾ ವೈರಸ್ ಭೀತಿ ನಡುವೆಯೂ ವಾಹನ ಉತ್ಪಾದನೆಗೆ ಸಜ್ಜಾದ ಆಟೋ ಕಂಪನಿಗಳು

ಪ್ರತಿ ಆಟೋ ಕಂಪನಿಗಳು ತಮ್ಮ ಬಳಿ ಸದ್ಯ ಸ್ಟಾಕ್ ಇರುವ ಶೇ.100 ರಷ್ಟು ಬಿಎಸ್-4 ವಾಹನಗಳಲ್ಲಿ ಕೇವಲ ಶೇ.10 ರಷ್ಟು ಪ್ರಮಾಣದ ವಾಹನಗಳನ್ನು ಮಾತ್ರವೇ ಏಪ್ರಿಲ್ 24ರ ತನಕ ಮಾರಾಟಕ್ಕೆ ಅವಕಾಶ ನೀಡಿದ್ದು, ಬಿಎಸ್-6 ವಾಹನಗಳ ಉತ್ಪಾದನೆ ಮತ್ತು ಮಾರಾಟವು ಎಂದಿನಂತೆ ಮುಂದುವರಿಯಲಿದೆ.

ಕರೋನಾ ವೈರಸ್ ಭೀತಿ ನಡುವೆಯೂ ವಾಹನ ಉತ್ಪಾದನೆಗೆ ಸಜ್ಜಾದ ಆಟೋ ಕಂಪನಿಗಳು

ಮಾಹಿತಿಗಳ ಪ್ರಕಾರ, ವಿವಿಧ ಆಟೋ ಕಂಪನಿಗಳ ಬಳಿ ಸುಮಾರು ರೂ.6,400 ಕೋಟಿ ಮೌಲ್ಯದ 7 ಲಕ್ಷ ಬಿಎಸ್-4 ವಾಹನ ಸ್ಟಾಕ್ ಮಾರಾಟವಾಗದೆ ಹಾಗೆಯೇ ಉಳಿದ್ದು, ಇದೀಗ ಸುಪ್ರೀಂಕೋರ್ಟ್ ನೀಡಿದ ವಿನಾಯ್ತಿ ಮೇರೆಗೆ ಶೇ.10 ರಷ್ಟು ವಾಹನಗಳನ್ನು ಮಾತ್ರವೇ ಮಾರಾಟಬೇಕಿದೆ.

MOST READ: ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ಕರೋನಾ ವೈರಸ್ ಭೀತಿ ನಡುವೆಯೂ ವಾಹನ ಉತ್ಪಾದನೆಗೆ ಸಜ್ಜಾದ ಆಟೋ ಕಂಪನಿಗಳು

ಇನ್ನುಳಿದ ಶೇ.90ರಷ್ಟು ಬಿಎಸ್-4 ವಾಹನಗಳ ಸ್ಟಾಕ್ ಪ್ರಮಾಣವು ಆಟೋ ಕಂಪನಿಗಳಿಗೆ ಭಾರೀ ಪ್ರಮಾಣದ ಆರ್ಥಿಕ ಹೊರೆಯಾಗಲಿದ್ದು, ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ನೀಡಿರುವ ಕಾಲಾವಧಿಯಲ್ಲೇ ಅವಕಾಶವಿರುವಷ್ಟು ಬಿಎಸ್-4 ಸ್ಟಾಕ್ ಮಾರಾಟಕ್ಕೆ ಭರ್ಜರಿ ಸಿದ್ದತೆ ನಡೆಸಿವೆ.

Article Published On: Monday, April 13, 2020, 18:36 [IST]
English summary
Coronavirus Pandemic: Indian Auto Industry To Slowly Restart Operations Soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+