ಟ್ರಾಕ್ಟರುಗಳಿಗೂ ಅನ್ವಯವಾಗಲಿವೆ ಬಿಎಸ್ 6 ನಿಯಮಗಳು

ಮುಂದಿನ ವರ್ಷದ ಅಕ್ಟೋಬರ್‌ನಿಂದ ಟ್ರಾಕ್ಟರುಗಳಿಗೂ ಸಹ ಬಿಎಸ್ 6 ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸಾರಿಗೆ ಇಲಾಖೆ ಹೇಳಿದೆ. ಈಗಾಗಲೇ ಉತ್ಪಾದನಾ ಹಂತದಲ್ಲಿರುವ ವಾಹನಗಳಿಗೆ ಬಿಎಸ್ 6 ನಿಯಮವು 2021ರ ಏಪ್ರಿಲ್ 1ರಿಂದ ಅನ್ವಯವಾಗಲಿದೆ.

ಟ್ರಾಕ್ಟರುಗಳಿಗೂ ಅನ್ವಯವಾಗಲಿವೆ ಬಿಎಸ್ 6 ನಿಯಮಗಳು

2020ರ ಅಕ್ಟೋಬರ್ ನಿಂದ 2021ರ ಅಕ್ಟೋಬರ್ ವರೆಗೆ ಟ್ರಾಕ್ಟರುಗಳಿಗೆ ಅನ್ವಯವಾಗುವ ಬಿಎಸ್ 6 ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಮೋಟಾರು ವಾಹನ ಕಾಯ್ದೆ, 1989ಕ್ಕೆ ತಿದ್ದುಪಡಿ ಮಾಡಿದೆ. ನಿರ್ಮಾಣ ಕಾರ್ಯಗಳಲ್ಲಿ ಬಳಸುವ ವಾಹನಗಳಿಗೆ ಬಿಎಸ್ 6 ನಿಯಮಗಳ ಅನುಷ್ಠಾನವನ್ನು 6 ತಿಂಗಳವರೆಗೆ ಮುಂದೂಡಲಾಗಿದೆ.

ಟ್ರಾಕ್ಟರುಗಳಿಗೂ ಅನ್ವಯವಾಗಲಿವೆ ಬಿಎಸ್ 6 ನಿಯಮಗಳು

ಕೃಷಿ ಹಾಗೂ ನಿರ್ಮಾಣ ಕಾರ್ಯಗಳಲ್ಲಿ ಬಳಕೆಯಾಗುವ ವಾಹನಗಳಿಗೆ ಸಂಬಂಧಿಸಿದ ಬಿಎಸ್ 6 ನಿಯಮಗಳ ಅನುಷ್ಠಾನದ ಬಗ್ಗೆ ಗೊಂದಲವುಂಟಾಗಿದೆ ಎಂದು ಸಾರಿಗೆ ಇಲಾಖೆ ಹೇಳಿದೆ. ಇಲಾಖೆಯು ಈ ಕುರಿತು ಮಾಹಿತಿಯನ್ನು ಬಿಡುಗಡೆಗೊಳಿಸಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಟ್ರಾಕ್ಟರುಗಳಿಗೂ ಅನ್ವಯವಾಗಲಿವೆ ಬಿಎಸ್ 6 ನಿಯಮಗಳು

ಈ ವಾಹನಗಳಿಗೆ ಸಂಬಂಧಿಸಿದ ಬಿಎಸ್ 6 ನಿಯಮಗಳ ಅನುಷ್ಠಾನದ ದಿನಾಂಕವನ್ನು ಪ್ರಕಟಿಸಿದೆ. ಇತರ ವಾಹನಗಳು, ಟ್ರಾಕ್ಟರುಗಳು ಹಾಗೂ ಭಾರೀ ವಾಹನಗಳ ಬಿಎಸ್ 6 ನಿಯಮಗಳ ಬಗ್ಗೆ ವಾಹನ ವಿತರಕರಲ್ಲಿ ತಪ್ಪು ಕಲ್ಪನೆ ಹಾಗೂ ತಪ್ಪು ಮಾಹಿತಿಗಳು ಹರಿದಾಡುತ್ತಿವೆ ಎಂದು ಸಾರಿಗೆ ಇಲಾಖೆ ಹೇಳಿದೆ.

ಟ್ರಾಕ್ಟರುಗಳಿಗೂ ಅನ್ವಯವಾಗಲಿವೆ ಬಿಎಸ್ 6 ನಿಯಮಗಳು

ಇತರ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಅನ್ವಯವಾಗುವ ಬಿಎಸ್ 6 ನಿಯಮಗಳು ಟ್ರಾಕ್ಟರುಗಳಿಗೂ ಅನ್ವಯವಾಗುತ್ತವೆ ಎಂದು ವಿತರಕರು ಗೊಂದಲಕ್ಕೀಡಾಗಿದ್ದರು. ಈ ಕಾರಣಕ್ಕೆ ಟ್ರಾಕ್ಟರುಗಳ ಮಾರಾಟದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಟ್ರಾಕ್ಟರುಗಳಿಗೂ ಅನ್ವಯವಾಗಲಿವೆ ಬಿಎಸ್ 6 ನಿಯಮಗಳು

ಈ ವರ್ಷದ ಏಪ್ರಿಲ್ 1ರಿಂದ ದೇಶಾದ್ಯಂತ ಬಿಎಸ್ 6 ನಿಯಮಗಳನ್ನು ಜಾರಿಗೆ ತರಲಾಗಿದೆ. ಬಿಎಸ್ 6 ನಿಯಮಗಳ ಅನುಷ್ಠಾನದ ನಂತರ, ದೇಶದಲ್ಲಿ ಬಿಎಸ್ 4 ವಾಹನಗಳ ಮಾರಾಟ ಹಾಗೂ ನೋಂದಣಿಯನ್ನು ನಿಷೇಧಿಸಲಾಗಿದೆ.

ಟ್ರಾಕ್ಟರುಗಳಿಗೂ ಅನ್ವಯವಾಗಲಿವೆ ಬಿಎಸ್ 6 ನಿಯಮಗಳು

ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ವಾಹನ ತಯಾರಕ ಕಂಪನಿಗಳಿಗೆ 10%ನಷ್ಟು ಬಿಎಸ್ 4 ವಾಹನಗಳನ್ನು ಮಾರಾಟ ಮಾಡಲು ಅನುಮತಿ ನೀಡಿದೆ. ಆದರೆ ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ ಬಿಎಸ್ 4 ವಾಹನಗಳ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿಲ್ಲ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಟ್ರಾಕ್ಟರುಗಳಿಗೂ ಅನ್ವಯವಾಗಲಿವೆ ಬಿಎಸ್ 6 ನಿಯಮಗಳು

ಭಾರತ್ ಸ್ಟೇಜ್ (ಬಿಎಸ್) ಮಾನದಂಡವೆಂದರೆ ವಾಹನಗಳು ಹೊರಸೂಸುವ ಮಾಲಿನ್ಯದ ಮಿತಿ. ಭಾರತದಲ್ಲಿ ಮೊದಲ ಹೊರಸೂಸುವಿಕೆ ಮಾನದಂಡವಾದ ಬಿಎಸ್ 1 ಅನ್ನು 1991ರಲ್ಲಿ ಜಾರಿಗೆ ತರಲಾಯಿತು. 2001ರಲ್ಲಿ ಬಿಎಸ್ 2 ಹಾಗೂ 2005ರಲ್ಲಿ ಬಿಎಸ್ 3ಗಳನ್ನು ಜಾರಿಗೆ ತರಲಾಯಿತು.

ಟ್ರಾಕ್ಟರುಗಳಿಗೂ ಅನ್ವಯವಾಗಲಿವೆ ಬಿಎಸ್ 6 ನಿಯಮಗಳು

ಸುಮಾರು 12 ವರ್ಷಗಳ ನಂತರ 2017ರಲ್ಲಿ ಬಿಎಸ್ 4 ನಿಯಮಗಳನ್ನು ಜಾರಿಗೆ ತರಲಾಯಿತು. ಹೊರಸೂಸುವಿಕೆ ಪ್ರಮಾಣವನ್ನು ಮತ್ತಷ್ಟು ನಿಯಂತ್ರಿಸಲು ಅಂತರರಾಷ್ಟ್ರೀಯ ನಿಯಮಗಳಿಗೆ ಅನುಗುಣವಾಗಿ ಬಿಎಸ್ 5 ಬದಲಿಗೆ ಬಿಎಸ್ 6 ಅನ್ನು ಜಾರಿಗೆ ತರಲಾಗಿದೆ.

Most Read Articles
 

Kannada
English summary
BS6 emission norms applicable to tractors from October 2021. Read in Kannada.
Story first published: Tuesday, October 6, 2020, 17:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X