ಕರೋನಾ ಭೀತಿಯ ನಡುವೆಯೂ ಕಾರು ಉತ್ಪಾದನೆ ಆರಂಭಿಸಿದ ಚೀನಾ ಕಂಪನಿ
ಚೀನಾ ಮೂಲದ ಇವಿ ಸ್ಟಾರ್ಟ್ಅಪ್ ಕಂಪನಿಯಾದ ಬೈಟಾನ್, ಎಂ ಬೈಟ್ ಎಲೆಕ್ಟ್ರಿಕ್ ಎಸ್‌ಯುವಿಯ ಪೂರ್ವ ನಿರ್ಮಾಣ ಕಾರ್ಯಗಳನ್ನು ಆರಂಭಿಸಿದೆ. ಹೊಸ ಎಲೆಕ್ಟ್ರಿಕ್ ಎಸ್‌ಯುವಿಯು ಈ ವರ್ಷದ ಕೊನೆಯಲ್ಲಿ ಚೀನಾದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಬೈಟಾನ್, ಮೂರು ವರ್ಷಗಳ ಹಿಂದೆ ನಿಸ್ಸಾನ್ ಹಾಗೂ ಬಿಎಂಡಬ್ಲ್ಯು ಕಂಪನಿಗಳ ಎಕ್ಸಿಕ್ಯೂಟಿವ್ ಆಗಿ ಮೊದಲ ಬಾರಿಗೆ ಮಾರುಕಟ್ಟೆಗೆ ಕಾಲಿಟ್ಟಿತು. ಕಂಪನಿಯ ಮೊದಲ ವಿನ್ಯಾಸವನ್ನು 2018ರಲ್ಲಿ ಪ್ರದರ್ಶಿಸಲಾಯಿತು. ಈ ವಿನ್ಯಾಸವು ನಾನ್‌ಝಿಂಗ್ ಹೆಚ್‌ಕ್ಯೂ ಮಾದರಿಯನ್ನು ಹೋಲುತ್ತದೆ.

ಈ ವರ್ಷದ ಕೊನೆಯಲ್ಲಿ ಚೀನಾದಲ್ಲಿ ಬಿಡುಗಡೆಯಾಗಲಿರುವ ಎಂ-ಬೈಟ್ ಎಲೆಕ್ಟ್ರಿಕ್ ಎಸ್‌ಯುವಿ ಮುಂದಿನ ವರ್ಷ ಅಮೆರಿಕಾ ಹಾಗೂ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಪ್ರಿ-ಪ್ರೊಡಕ್ಷನ್ ಕೆಲಸವನ್ನು ಬಹಿರಂಗಪಡಿಸಲು ಎಂ-ಬೈಟ್ ಮಾದರಿಯ ಮೂಲಮಾದರಿಗಳನ್ನು ಉತ್ಪಾದನಾ ಘಟಕದಲ್ಲಿ ಪೋಸ್ಟ್ ಮಾಡಲಾಗಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಮೂಲಮಾದರಿಯ ಎಲೆಕ್ಟ್ರಿಕ್ ಎಸ್‌ಯುವಿಗಳು ರಿಜಿಶ್ಟ್ರೇಷನ್ ಹಾಗೂ ಸರ್ಟಿಫಿಕೇಶನ್ ಹಂತದಲ್ಲಿವೆ. ಗ್ರಾಹಕರನ್ನು ತಲುಪುವ ಮೊದಲು ಈ ಮಾದರಿಗಳನ್ನು ಇನ್ನಷ್ಟು ಪರಿಷ್ಕರಿಸಲಾಗುವುದು.

ಈ ವರ್ಷದ ಕೊನೆಯಲ್ಲಿ ಚೀನಾದಲ್ಲಿ ಬಿಡುಗಡೆಯಾಗಲಿರುವ ಎಂ-ಬೈಟ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯ ಉತ್ಪಾದನೆಯು ಸದ್ಯಕ್ಕೆ ಎದುರಾಗಿರುವ ಕರೋನಾ ವೈರಸ್ ಹಾವಳಿಯಿಂದಾಗಿ ವಿಳಂಬವಾಗುತ್ತಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಬೈಟಾನ್ ಎಂ-ಬೈಟ್ ಎಲೆಕ್ಟ್ರಿಕ್ ಕಾರನ್ನು ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಪ್ರತಿಯೊಂದು ಮಾದರಿಯೂ ಪ್ರತ್ಯೇಕವಾದ ಫಂಕ್ಷನಾಲಿಟಿ ಹಾಗೂ ಬ್ಯಾಟರಿ ಸಿಸ್ಟಂ ಹೊಂದಿರಲಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ 72 ಕಿ.ವ್ಯಾನ ಬ್ಯಾಟರಿ ಪ್ಯಾಕೇಜ್ ಅಳವಡಿಸಲಾಗುವುದು.

ಈ ಮೋಟರ್ 270 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಮೋಟರ್ ಹಿಂಭಾಗದ ವ್ಹೀಲ್‌ಗಳಿಗೆ ಪವರ್ ನೀಡುತ್ತದೆ. ಈ ಬ್ಯಾಟರಿ ಸಿಸ್ಟಂ ಅನ್ನು 95 ಕಿ.ವ್ಯಾನ ಬ್ಯಾಟರಿ ಆಯ್ಕೆಯೊಂದಿಗೆ ನೀಡಲಾಗುತ್ತದೆ. ಈ ಬ್ಯಾಟರಿಯು 400 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಎಂ-ಬೈಟ್ ಪ್ರೀಮಿಯಂ ಮಾದರಿಯನ್ನು 4-ವ್ಹೀಲ್-ಡ್ರೈವ್‌ನೊಂದಿಗೆ ಮಾರಾಟ ಮಾಡಲಾಗುವುದು. 4-ವೀಲ್-ಡ್ರೈವ್ ಎಲೆಕ್ಟ್ರಿಕ್ ಆವೃತ್ತಿಯನ್ನು ಒಂದು ಬಾರಿಗೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ 386 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಎಸ್‌ಯುವಿಯಲ್ಲಿರುವ ಬ್ಯಾಟರಿಯನ್ನು ಚಾರ್ಜ್ ಮಾಡಲು ಗ್ರಾಹಕರಿಗೆ 150 ಕಿ.ವ್ಯಾ ಡಿಸಿ ಫಾಸ್ಟ್ ಚಾರ್ಜರ್ ನೀಡಲಾಗುವುದು.

ಈ ಎಸ್‌ಯುವಿಯ ಇಂಟಿರಿಯರ್‌ನಲ್ಲಿ 48 ಇಂಚಿನ ಇನ್‌ಫೋಟೇನ್‌ಮೆಂಟ್ ಸ್ಕ್ರೀನ್ ಅಳವಡಿಸಲಾಗುವುದು. ಬೈಟಾನ್ ಕಂಪನಿಯ ಕೆ-ಬೈಟ್ ಸೆಡಾನ್ ಕಾನ್ಸೆಪ್ಟ್ ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಎಂ-ಬೈಟ್ ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆ ಸುಮಾರು 45,000 ಡಾಲರ್‌ಗಳಾಗಿರಲಿದೆ.


Click it and Unblock the Notifications