ಕರೋನಾ ವೈರಸ್ ಎಫೆಕ್ಟ್: ಇನ್ನಿಲ್ಲದಂತೆ ನೆಲಕಚ್ಚಿದ ಆಟೋಮೊಬೈಲ್ ಉದ್ಯಮ

ಕರೋನಾ ವೈರಸ್‌ನಿಂದಾಗಿ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟಾಗುತ್ತಿದೆ. ಕರೋನಾವನ್ನು ನಿಯಂತ್ರಿಸಲು ಎಲ್ಲಾ ರಾಷ್ಟ್ರಗಳು ಲಾಕ್‌ಡೌನ್ ಜಾರಿಗೊಳಿಸಿವೆ.

ಕರೋನಾ ವೈರಸ್ ಎಫೆಕ್ಟ್: ಇನ್ನಿಲ್ಲದಂತೆ ನೆಲಕಚ್ಚಿದ ಆಟೋಮೊಬೈಲ್ ಉದ್ಯಮ

ಭಾರತದಲ್ಲಿ 21 ದಿನಗಳ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಕರೋನಾ ಸೋಂಕಿನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಲಾಕ್‌ಡೌನ್ ಅನ್ನು ಈ ತಿಂಗಳ ಕೊನೆಯವರೆಗೆ ವಿಸ್ತರಿಸಿವೆ. ತಮಿಳುನಾಡಿನಲ್ಲಿಯೂ ಲಾಕ್‌ಡೌನ್ ಅವಧಿಯನ್ನು ಏಪ್ರಿಲ್ 30ರವರೆಗೆ ವಿಸ್ತರಿಸಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ಇನ್ನಿಲ್ಲದಂತೆ ನೆಲಕಚ್ಚಿದ ಆಟೋಮೊಬೈಲ್ ಉದ್ಯಮ

ಲಾಕ್‌ಡೌನ್‌ನಿಂದಾಗಿ ಎಲ್ಲಾ ವರ್ಗದ ಜನರು ತೊಂದರೆಗೊಳಗಾಗಿದ್ದಾರೆ. ಸಣ್ಣ ಉದ್ಯಮಗಳಿಂದ ಹಿಡಿದು, ದೊಡ್ಡ ಉದ್ಯಮಗಳವರೆಗೆ ಬಹುತೇಕ ಎಲ್ಲಾ ಉದ್ಯಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್ ಎಫೆಕ್ಟ್: ಇನ್ನಿಲ್ಲದಂತೆ ನೆಲಕಚ್ಚಿದ ಆಟೋಮೊಬೈಲ್ ಉದ್ಯಮ

ಆಟೋಮೊಬೈಲ್ ಉದ್ಯಮವು ಹಲವಾರು ಉದ್ಯೋಗವನ್ನು ನೀಡುವುದರ ಜೊತೆಗೆ ದೇಶದ ಆರ್ಥಿಕತೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಚೆನ್ನೈನ ಸುತ್ತಮುತ್ತ ವಿಶ್ವದ ಪ್ರಮುಖ ಕಾರು ಹಾಗೂ ಬೈಕು ಕಂಪನಿಗಳು ಹಾಗೂ ಬಿಡಿಭಾಗ ತಯಾರಕ ಕಂಪನಿಗಳಿವೆ.

ಕರೋನಾ ವೈರಸ್ ಎಫೆಕ್ಟ್: ಇನ್ನಿಲ್ಲದಂತೆ ನೆಲಕಚ್ಚಿದ ಆಟೋಮೊಬೈಲ್ ಉದ್ಯಮ

ಹ್ಯುಂಡೈ ಮೋಟಾರ್, ಬಿಎಂಡಬ್ಲ್ಯು, ಫೋರ್ಡ್, ರೆನಾಲ್ಟ್ - ನಿಸ್ಸಾನ್, ರಾಯಲ್ ಎನ್‌ಫೀಲ್ಡ್, ಯಮಹಾ ಸೇರಿದಂತೆ ಹಲವು ದ್ವಿಚಕ್ರ ವಾಹನ ತಯಾರಕ ಕಂಪನಿಗಳು, ಭಾರತ್ ಬೆಂಝ್ ಸೇರಿದಂತೆ ಭಾರಿ ಪ್ರಮಾಣದ ವಾಹನ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ.

MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಕರೋನಾ ವೈರಸ್ ಎಫೆಕ್ಟ್: ಇನ್ನಿಲ್ಲದಂತೆ ನೆಲಕಚ್ಚಿದ ಆಟೋಮೊಬೈಲ್ ಉದ್ಯಮ

ಭಾರತದಲ್ಲಿ ಮಾರಾಟವಾಗುವ ನಾಲ್ಕು ಚಕ್ರ ವಾಹನಗಳ ಪೈಕಿ 30%ನಷ್ಟನ್ನು ಚೆನ್ನೈನಲ್ಲಿ ತಯಾರಿಸಲಾಗುತ್ತದೆ. ದೇಶದ ಒಟ್ಟು ವಾಹನ ರಫ್ತಿನ 50% ಚೆನ್ನೈನಿಂದ ಆಗುತ್ತದೆ.

ಕರೋನಾ ವೈರಸ್ ಎಫೆಕ್ಟ್: ಇನ್ನಿಲ್ಲದಂತೆ ನೆಲಕಚ್ಚಿದ ಆಟೋಮೊಬೈಲ್ ಉದ್ಯಮ

ಚೆನ್ನೈ ಹಾಗೂ ಹೊಸೂರಿನಲ್ಲಿರುವ ವಾಹನ ತಯಾರಕ ಕಂಪನಿಗಳಲ್ಲಿ ಲಕ್ಷಾಂತರ ಜನರು ನೇರವಾಗಿ ಹಾಗೂ ಪರೋಕ್ಷವಾಗಿ ಕೆಲಸ ಮಾಡುತ್ತಾರೆ. ಕರೋನಾ ಸೋಂಕಿನ ಕಾರಣಕ್ಕೆ ಚೆನ್ನೈ ಸುತ್ತಮುತ್ತಲಿರುವ ಉತ್ಪಾದನಾ ಘಟಕಗಳಲ್ಲಿನ ವಾಹನ ಉತ್ಪಾದನೆಯು ತೀವ್ರವಾಗಿ ಕುಸಿದಿದೆ.

MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಕರೋನಾ ವೈರಸ್ ಎಫೆಕ್ಟ್: ಇನ್ನಿಲ್ಲದಂತೆ ನೆಲಕಚ್ಚಿದ ಆಟೋಮೊಬೈಲ್ ಉದ್ಯಮ

ಕೆಲವು ಕಂಪನಿಗಳು ಕಳೆದ ತಿಂಗಳ 20ರವರೆಗೂ ಉತ್ಪಾದನೆ ನಡೆಸಿದ್ದವು. ಈ ತಿಂಗಳು ಲಾಕ್‌ಡೌನ್ ಕಾರಣಕ್ಕೆ ವಾಹನ ತಯಾರಕ ಕಂಪೆನಿಗಳಿಗೆ ಒಂದೇ ಒಂದು ವಾಹನವನ್ನು ಸಹ ಉತ್ಪಾದಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಕೋಟ್ಯಂತರ ರೂಪಾಯಿಗಳ ನಷ್ಟವಾಗಿದೆ.

ಕರೋನಾ ವೈರಸ್ ಎಫೆಕ್ಟ್: ಇನ್ನಿಲ್ಲದಂತೆ ನೆಲಕಚ್ಚಿದ ಆಟೋಮೊಬೈಲ್ ಉದ್ಯಮ

ಈ ಕಂಪನಿಗಳಲ್ಲಿರುವ ನೌಕರರು ಆತಂಕದಲ್ಲಿದ್ದಾರೆ. ವಾಹನ ತಯಾರಕ ಕಂಪನಿಗಳು ವೆಚ್ಚ ಕಡಿತಕ್ಕೆ ಮುಂದಾಗುವ ಸಾಧ್ಯತೆಗಳಿವೆ. ಇದರಿಂದಾಗಿ ತಾತ್ಕಾಲಿಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಇನ್ನಿಲ್ಲದಂತೆ ನೆಲಕಚ್ಚಿದ ಆಟೋಮೊಬೈಲ್ ಉದ್ಯಮ

ವಾಹನ ಉತ್ಪಾದನಾ ಘಟಕಗಳ ಮೇಲೆ ಅವಲಂಬಿತವಾಗಿರುವ ಇತರ ಉದ್ಯಮಗಳಿಗೂ ತೊಂದರೆಯಾಗುತ್ತಿದೆ. ಚಿಕ್ಕ ಅಂಗಡಿಗಳಿಂದ ಹಿಡಿದು ಸಾರಿಗೆ ಸೇವಾ ಕಂಪನಿಗಳವರೆಗೆ, ಹಲವಾರು ಸಮಸ್ಯೆಗಳು ಎದುರಾಗಲಿವೆ.

ಕರೋನಾ ವೈರಸ್ ಎಫೆಕ್ಟ್: ಇನ್ನಿಲ್ಲದಂತೆ ನೆಲಕಚ್ಚಿದ ಆಟೋಮೊಬೈಲ್ ಉದ್ಯಮ

ವಾಹನ ತಯಾರಕ ಕಂಪನಿಗಳು ಕರೋನಾ ವೈರಸ್‌ನಿಂದ ತೊಂದರೆಗೀಡಾಗಿದ್ದರೂ, ಕರೋನಾ ವಿರುದ್ಧದ್ದ ಹೋರಾಟಕ್ಕೆ ಕೈಜೋಡಿಸಿವೆ. ಮಾಸ್ಕ್ ಹಾಗೂ ವೆಂಟಿಲೇಟರ್‌ಗಳ ತಯಾರಿಕೆಯಲ್ಲಿ ತೊಡಗಿವೆ.

ಕರೋನಾ ವೈರಸ್ ಎಫೆಕ್ಟ್: ಇನ್ನಿಲ್ಲದಂತೆ ನೆಲಕಚ್ಚಿದ ಆಟೋಮೊಬೈಲ್ ಉದ್ಯಮ

ಮುಂದಿನ ತಿಂಗಳ ಮಧ್ಯ ಭಾಗದ ವೇಳೆಗೆ ಕರೋನಾ ವೈರಸ್ ಹಾವಳಿ ಕಡಿಮೆಯಾಗಿ ವ್ಯಾಪಾರ ವಹಿವಾಟುಗಳು ಸರಿದಾರಿಗೆ ಬರಲಿವೆ ಎಂದು ಆಟೋಮೊಬೈಲ್ ಉದ್ಯಮವು ಕಾಯುತ್ತಿದೆ. ಆರ್ಥಿಕ ನಷ್ಟದಿಂದ ಚೇತರಿಸಿಕೊಳ್ಳಲು ಒಂದು ವರ್ಷಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ.

Most Read Articles

Kannada
English summary
Corona Lockdown extended Chennai Automobile hub facing tough times. Read in Kannada.
Story first published: Tuesday, April 14, 2020, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X