ಕರೋನಾ ಎಫೆಕ್ಟ್- ಮಾರಾಟವಾಗದೆ ಉಳಿದ 7 ಲಕ್ಷ ಬಿಎಸ್-4 ವಾಹನಗಳು

ಕರೋನಾ ವೈರಸ್‌ನಿಂದಾಗಿ ಇಡಿ ವಿಶ್ವವೇ ಆತಂಕದಲ್ಲಿದ್ದು, ವೈರಸ್ ಹರಡುವಿಕೆಯನ್ನು ತಡೆಯಲು ಎಲ್ಲಾ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಿರುವಾಗ ದೇಶದ ಆರ್ಥಿಕ ಪರಿಸ್ಥಿತಿಯು ದಿನದಿಂದ ದಿನಕ್ಕೆ ಶೋಚನೀಯವಾಗುತ್ತಿದ್ದು, ಆಟೋ ಉದ್ಯಮದವು ಕೂಡಾ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಕರೋನಾ ಎಫೆಕ್ಟ್- ಮಾರಾಟವಾಗದೆ ಉಳಿದ 7 ಲಕ್ಷ ಬಿಎಸ್-4 ವಾಹನಗಳು

ಮಾಲಿನ್ಯ ತಡೆಯುವ ಉದ್ದೇಶದಿಂದ ದೇಶದಲ್ಲಿ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಬಿಎಸ್-6(ಭಾರತ್ ಸ್ಟೆಜ್-6) ಜಾರಿಗೆ ತರಲಾಗುತ್ತಿದ್ದು, ಹೊಸ ಎಮಿಷನ್ ನಿಯಮ ಜಾರಿ ನಂತರ ಬಿಎಸ್-4 ವಾಹನ ಮಾರಾಟ ಮತ್ತು ನೋಂದಣಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗುತ್ತಿದೆ. ಆದರೆ ನಿಗದಿತ ಅವಧಿಯೊಳಗೆ ಬಿಎಸ್-4 ವಾಹನ ಮಾರಾಟ ಮಾಡಲು ಕರೋನಾ ವೈರಸ್ ಹಿನ್ನಲೆ ಸಂಪೂರ್ಣವಾಗಿ ಲಾಕ್ ಡೌನ್ ಮಾಡಿರುವುದರಿಂದ ವಾಹನ ಉತ್ಪಾದನಾ ಸಂಕಷ್ಟಕ್ಕೆ ಸಿಲುಕಿವೆ.

ಕರೋನಾ ಎಫೆಕ್ಟ್- ಮಾರಾಟವಾಗದೆ ಉಳಿದ 7 ಲಕ್ಷ ಬಿಎಸ್-4 ವಾಹನಗಳು

ಈ ನಡುವೆ ಬಿಎಸ್-4 ವಾಹನಗಳ ಮಾರಾಟ ಅವಧಿಯನ್ನು ವಿಸ್ತರಿಸುವಂತೆ ಎರಡು ಬಾರಿ ಸುಪ್ರೀಂಕೋರ್ಟ್ ಮೊರೆಹೋಗಿದ್ದ ಆಟೋ ಕಂಪನಿಗಳ ಮನವಿಯನ್ನು ತಳ್ಳಿಹಾಕಲಾಗಿದ್ದು, ಇದರಿಂದ ಮಾರಾಟವಾಗದೆ ಉಳಿದಿರುವ ಬಿಎಸ್-4 ವಾಹನಗಳು ಆರ್ಥಿಕ ಹೊರೆಯಾಗಿ ಪರಿಣಮಿಸಿವೆ.

ಕರೋನಾ ಎಫೆಕ್ಟ್- ಮಾರಾಟವಾಗದೆ ಉಳಿದ 7 ಲಕ್ಷ ಬಿಎಸ್-4 ವಾಹನಗಳು

ಆದರೆ ಪರಿಸ್ಥಿತಿಗೆ ಅನುಗುಣವಾಗಿ ಹಲವಾರು ವಿನಾಯ್ತಿಗಳನ್ನು ನೀಡಿರುವ ಕೇಂದ್ರ ಸರ್ಕಾರವು ಬಿಎಸ್-4 ವಾಹನ ಮಾರಾಟಕ್ಕೆ ಮತ್ತಷ್ಟು ಅವಕಾಶ ನೀಡುವ ಸಾಧ್ಯತೆಗಳಿದ್ದು, ಮುಂಬರುವ ದಿನಗಳಲ್ಲಿ ಕೈಗೊಳ್ಳಲಿರುವ ಆರ್ಥಿಕ ನಿರ್ಧಾರಗಳ ಮೇಲೆ ಬಿಎಸ್-4 ವಾಹನಗಳ ಭವಿಷ್ಯ ನಿರ್ಧಾರವಾಗಲಿದೆ.

ಕರೋನಾ ಎಫೆಕ್ಟ್- ಮಾರಾಟವಾಗದೆ ಉಳಿದ 7 ಲಕ್ಷ ಬಿಎಸ್-4 ವಾಹನಗಳು

ಇನ್ನು ಇಡೀ ವಿಶ್ವವೇ ಇದೀಗ ಕರೋನಾ ವೈರಸ್ ವಿರುದ್ದ ಹೋರಾಟ ನಡೆಸುತ್ತಿದ್ದು, ವೈರಸ್ ತಡೆಯುವ ಎಲ್ಲಾ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಡುವೆ ದೇಶದ ಆರ್ಥಿಕ ಪರಿಸ್ಥಿತಿಯು ಶೋಚನೀಯವಾಗುತ್ತಿದ್ದು, ಮಾಹಾಮಾರಿ ಕರೋನಾ ತಡೆಯಲು ಹೆಚ್ಚುವರಿ ಸಂಪನ್ಮೂಲ ಕ್ರೂಢೀಕರಣಕ್ಕೆ ಸರ್ಕಾರ ನಿರ್ಧರಿಸಿದೆ. 'ಹಣಕಾಸು ಮಸೂದೆ 2020'ರಲ್ಲಿ ಕೆಲವು ತಿದ್ದುಪಡಿ ಮಾಡಲು ಹಣಕಾಸು ಸಚಿವಾಲಯ ನಿರ್ಧರಿಸಿದ್ದು, ಇದರಲ್ಲಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸುವ ನಿರ್ಣಯಕ್ಕೆ ಬಂದಿದೆ.

ಕರೋನಾ ಎಫೆಕ್ಟ್- ಮಾರಾಟವಾಗದೆ ಉಳಿದ 7 ಲಕ್ಷ ಬಿಎಸ್-4 ವಾಹನಗಳು

ಹೆಚ್ಚುವರಿ ಅಬಕಾರಿ ಸುಂಕ ಎಷ್ಟು ಏರಿಕೆಯಾಗಿದೆ ಎನ್ನುವ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲವಾದರೂ ಹೊಸ ಅಬಕಾರಿ ಸುಂಕವನ್ನು ವಿಧಿಸಿದ ನಂತರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಪ್ರಸ್ತುತ ಮಾರುಕಟ್ಟೆಗಳಿಂತಲೂ ರೂ. 5ರಿಂದ ರೂ.8 ಏರಿಕೆಯಾಗುವ ಸಾಧ್ಯತೆಗಳಿವೆ.

ಕರೋನಾ ಎಫೆಕ್ಟ್- ಮಾರಾಟವಾಗದೆ ಉಳಿದ 7 ಲಕ್ಷ ಬಿಎಸ್-4 ವಾಹನಗಳು

ತುರ್ತು ಸಂದರ್ಭದಲ್ಲಿ ಆದಾಯ ಕ್ರೂಢೀಕರಣಕ್ಕಾಗಿ 'ಹಣಕಾಸು ಕಾಯ್ದೆ 2002'ರ ಎಂಟನೇ ಶೆಡ್ಯೂಲ್‌ಗೆ ತಿದ್ದುಪಡಿ ತರಲಾಗುತ್ತಿದ್ದು, ವಿಶೇಷ ಹೆಚ್ಚುವರಿ ಅಬಕಾರಿ ಸುಂಕದಡಿ ಪ್ರತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ರೂ. 4 ರಿಂದ ರೂ. 18 ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕರೋನಾ ಎಫೆಕ್ಟ್- ಮಾರಾಟವಾಗದೆ ಉಳಿದ 7 ಲಕ್ಷ ಬಿಎಸ್-4 ವಾಹನಗಳು

ಆದರೆ ಅಂತಿಮವಾಗಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರಸ್ತುತ ಮಾರುಕಟ್ಟೆಗಳಿಂತಲೂ ರೂ. 5ರಿಂದ ರೂ.8 ಏರಿಕೆ ಮಾಡಲು ಅನುಮೋದನೆ ಸಿಗುವ ಸಾಧ್ಯತೆಗಳಿದ್ದು, ಪರಿಸ್ಥಿತಿ ಸುಧಾರಣೆಗೊಳ್ಳುವ ತನಕವು ವಾಹನ ಸವಾರರಿಗೆ ಹೆಚ್ಚುವರಿ ಶುಲ್ಕ ಬಿಸಿ ತಪ್ಪಿದ್ದಲ್ಲ.

ಕರೋನಾ ಎಫೆಕ್ಟ್- ಮಾರಾಟವಾಗದೆ ಉಳಿದ 7 ಲಕ್ಷ ಬಿಎಸ್-4 ವಾಹನಗಳು

ಜೊತೆಗ ಭಾರತದಲ್ಲಿ ಕರೋನಾ ವೈರಸ್ ಪರಿಣಾಮವಾಗಿ ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ದಿಯು ಕಳೆದ 10 ದಿನಗಳಿಂದ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಆಟೋ ಉದ್ಯಮವು ಪ್ರತಿ ದಿನ ರೂ.1,500 ಕೋಟಿಯಷ್ಟು ನಷ್ಟ ಎದುರಿಸುತ್ತಿದೆ.

Most Read Articles

Kannada
English summary
According to reports, More than 7 lakh BS4 vehicles remain unsold at dealerships across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X