ಕರೋನಾ ವೈರಸ್ ಎಫೆಕ್ಟ್: ಹೆಚ್ಚಾಗಲಿದೆ ಕಾರುಗಳ ಮಾರಾಟ

ಕರೋನಾ ವೈರಸ್ ಸೋಂಕು ಹರಡುವಿಕೆ ಕಡಿಮೆಯಾಗುತ್ತಿಲ್ಲ. ಕರೋನಾ ವೈರಸ್ ಹೆಚ್ಚು ಕಾಲದವರೆಗೆ ಇರಲಿದೆ, ಅದಕ್ಕೆ ನಾವು ಒಗ್ಗಿಕೊಳ್ಳಬೇಕು ಎಂಬ ಸುದ್ದಿ ಜಗತ್ತನ್ನು ಬೆಚ್ಚಿಬೀಳಿಸಿದೆ. ಈ ಕಾರಣಕ್ಕೆ ಜನರು ಕರೋನಾ ವೈರಸ್‌ನಿಂದ ತಪ್ಪಿಸಿಕೊಳ್ಳಲು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಹೆಚ್ಚಾಗಲಿದೆ ಕಾರುಗಳ ಮಾರಾಟ

ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್‌ಗಳನ್ನು ಧರಿಸುವುದು ಹೆಚ್ಚಾಗಿದೆ. ಆಗಾಗ್ಗೆ ಕೈ ತೊಳೆಯುವುದನ್ನು ಜನರು ಅಭ್ಯಾಸ ಮಾಡಿಕೊಂಡಿದ್ದಾರೆ. ಇವು ಕೆಲವು ಉದಾಹರಣೆಗಳಾಗಿವೆ. ಇನ್ನು ಮುಂದೆ ಜಗತ್ತಿನಲ್ಲಿ ಹಲವಾರು ಬದಲಾವಣೆಗಳಾಗಲಿವೆ.

ಕರೋನಾ ವೈರಸ್ ಎಫೆಕ್ಟ್: ಹೆಚ್ಚಾಗಲಿದೆ ಕಾರುಗಳ ಮಾರಾಟ

ಕರೋನಾ ವೈರಸ್ ಸೋಂಕಿತ ಜನರ ಸಂಖ್ಯೆ ಹೆಚ್ಚುತ್ತಿದ್ದರೂ ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನಗಳು ಸಾಗುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಸ್, ರೈಲು ಹಾಗೂ ವಿಮಾನಯಾನದಂತಹ ಸಾರಿಗೆ ಸೇವೆಗಳನ್ನು ಪುನರಾರಂಭಿಸಲು ತಯಾರಿ ನಡೆಸುತ್ತಿವೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್ ಎಫೆಕ್ಟ್: ಹೆಚ್ಚಾಗಲಿದೆ ಕಾರುಗಳ ಮಾರಾಟ

ಆಟೋ ಹಾಗೂ ಟ್ಯಾಕ್ಸಿಗಳಿಗೂ ಕ್ರಮೇಣ ಅನುಮತಿ ನೀಡುವ ಸಾಧ್ಯತೆಗಳಿವೆ. ಜನರು ಮೊದಲಿನಂತೆ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ರಯಾಣಿಸುವ ಬಗ್ಗೆ ಅನುಮಾನಗಳಿವೆ. ಕರೋನಾ ಸೋಂಕು ಹರಡಬಹುದೆಂಬ ಕಾರಣಕ್ಕೆ ಜನರು ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಬಯಸುತ್ತಾರೆ ಎಂದು ಹೇಳಲಾಗುತ್ತಿದೆ.

ಕರೋನಾ ವೈರಸ್ ಎಫೆಕ್ಟ್: ಹೆಚ್ಚಾಗಲಿದೆ ಕಾರುಗಳ ಮಾರಾಟ

ಕರೋನಾ ಭಯದಿಂದಾಗಿ ಜನರು ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲಿದ್ದಾರೆ ಎಂಬ ಕಾರಣಕ್ಕೆ ಕಾರು ಕಂಪನಿಗಳು ಖುಷಿಯಾಗಿವೆ. ಈ ಸುದ್ದಿಯು ಲಾಕ್‌ಡೌನ್‌ನಿಂದ ನಷ್ಟಕ್ಕೀಡಾಗಿದ್ದ ಕಾರು ಕಂಪನಿಗಳಿಗೆ ಸಂತೋಷ ತಂದಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕರೋನಾ ವೈರಸ್ ಎಫೆಕ್ಟ್: ಹೆಚ್ಚಾಗಲಿದೆ ಕಾರುಗಳ ಮಾರಾಟ

ಈ ಕುರಿತು ನಡೆಸಲಾದ ಸಮೀಕ್ಷೆಯಲ್ಲಿ ಕರೋನಾ ವೈರಸ್ ಭಯದಿಂದಾಗಿ ಹೆಚ್ಚಿನ ಸಂಖ್ಯೆಯ ಭಾರತೀಯರು ಸ್ವಂತ ಕಾರನ್ನು ಹೊಂದಲು ಬಯಸುತ್ತಾರೆ ಎಂದು ಹೇಳಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ಹೆಚ್ಚಾಗಲಿದೆ ಕಾರುಗಳ ಮಾರಾಟ

ಇಪ್ಸೊಸ್ ನಡೆಸಿದ ಸಮೀಕ್ಷೆಯ ಪ್ರಕಾರ, ನಗರ ಪ್ರದೇಶಗಳ ಭಾರತೀಯರು ತಮ್ಮದೇ ಆದ ಕಾರನ್ನು ಹೊಂದುವ ಸಾಧ್ಯತೆಗಳಿವೆ. ಕರೋನಾ ವೈರಸ್ ಇನ್ನೂ ಹಲವಾರು ತಿಂಗಳುಗಳವರೆಗೆ ಮುಂದುವರೆಯಲಿರುವುದೇ ಇದಕ್ಕೆ ಮುಖ್ಯ ಕಾರಣ. ಇಪ್ಸೊಸ್ ಮಾರ್ಕೆಟಿಂಗ್ ಸಂಶೋಧನಾ ಕಂಪನಿಯಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ಎಫೆಕ್ಟ್: ಹೆಚ್ಚಾಗಲಿದೆ ಕಾರುಗಳ ಮಾರಾಟ

ಕಂಪನಿಯ ಸಮೀಕ್ಷೆಯ ಪ್ರಕಾರ, ಕರೋನಾ ವೈರಸ್ ಹಾವಳಿಯ ನಂತರ 40%ನಷ್ಟು ಜನರು ಹಳೆಯ ಅಥವಾ ಹೊಸ ಕಾರನ್ನು ಖರೀದಿಸಲು ಬಯಸಿದ್ದಾರೆ. 31% ಜನರು ಕಾರು ಖರೀದಿಸುವ ಉದ್ದೇಶವಿಲ್ಲವೆಂದು ಹೇಳಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಹೆಚ್ಚಾಗಲಿದೆ ಕಾರುಗಳ ಮಾರಾಟ

29%ನಷ್ಟು ಜನರು ಎಚ್ಚರಿಕೆಯಿಂದ ಪ್ರಯಾಣಿಸುವುದಾಗಿ ತಿಳಿಸಿದ್ದಾರೆ. ಕಾರು ಖರೀದಿಸಲು ಸಾಧ್ಯವಿಲ್ಲದ ಜನರು ಸಾರ್ವಜನಿಕ ಸಾರಿಗೆಯನ್ನು ಬಳಸುವ ಉದ್ದೇಶವನ್ನು ಹೊಂದಿದ್ದಾರೆ. ಕಾರು ಖರೀದಿಸಲು ಬಯಸುತ್ತಿರುವವರು ಸುರಕ್ಷತೆಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದಾರೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.

Most Read Articles

Kannada
English summary
Covid 19 impact more Indians prefer to have own car. Read in Kannada.
Story first published: Saturday, May 16, 2020, 15:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X