ಬಿಎಸ್-6 ಜಾರಿ ನಂತರ ಡೀಸೆಲ್ ಕಾರು ಮಾರಾಟದಲ್ಲಿ ಹ್ಯುಂಡೈ, ಮಹೀಂದ್ರಾ ಕಂಪನಿಗೆ ಅಗ್ರಸ್ಥಾನ

ಸುಪ್ರೀಂಕೋರ್ಟ್ ಆದೇಶದಂತೆ ದೇಶಾದ್ಯಂತ 2020ರ ಏಪ್ರಿಲ್ 1ರಿಂದ ಬಿಎಸ್-6 ವಾಹನಗಳ ಮಾರಾಟವು ಕಡ್ಡಾಯವಾಗಿ ಜಾರಿಗೆ ಬಂದಿದ್ದು, ಹೊಸ ಎಮಿಷನ್ ನಂತರ ಹಲವಾರು ಡೀಸೆಲ್ ಕಾರುಗಳ ಮಾರಾಟವು ಸ್ಥಗಿತಗೊಳ್ಳುವ ಮೂಲಕ ಹೊಸ ಬದಲಾವಣೆಗೆ ಕಾರಣವಾಗಿವೆ.

ಡೀಸೆಲ್ ಕಾರು ಮಾರಾಟದಲ್ಲಿ ಹ್ಯುಂಡೈ, ಮಹೀಂದ್ರಾ ಕಂಪನಿಗೆ ಅಗ್ರಸ್ಥಾನ

ಬಿಎಸ್-6 ಜಾರಿ ನಂತರ ಬಹುತೇಕ ಕಾರು ಮಾರಾಟ ಕಂಪನಿಗಳು ಹೊಸ ಎಮಿಷನ್‌ಗೆ ಎಂಜಿನ್ ಉನ್ನತೀಕರಣ ಸಾಧ್ಯವಿಲ್ಲದ ಕಾರಣ ಮಾರಾಟವನ್ನು ಸ್ಥಗಿತಗೊಳಿಸಿದ್ದರೆ ಇನ್ನು ಇನ್ನು ಕೆಲವು ಆಟೋ ಕಂಪನಿಗಳು ದುಬಾರಿ ಬೆಲೆ ನಡುವೆಯು ಡೀಸೆಲ್ ಎಂಜಿನ್‌‌ಗಳನ್ನು ಹೊಸ ಎಮಿಷನ್‌ನೊಂದಿಗೆ ಉನ್ನತೀಕರಿಸಿ ಮಾರಾಟ ಮಾಡುತ್ತಿವೆ. ಪೆಟ್ರೋಲ್ ಮಾದರಿಗಳಿಂತಲೂ ಡೀಸೆಲ್ ಎಂಜಿನ್ ಮಾದರಿಯ ಉನ್ನತೀಕರಣ ಪ್ರಕ್ರಿಯೆ ಸಾಕಷ್ಟು ವೆಚ್ಚದಾಯಕವಾಗಿದ್ದು, ಮಾರುತಿ ಸುಜುಕಿಯಂತಹ ಕಾರು ಕಂಪನಿಯೇ ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

ಡೀಸೆಲ್ ಕಾರು ಮಾರಾಟದಲ್ಲಿ ಹ್ಯುಂಡೈ, ಮಹೀಂದ್ರಾ ಕಂಪನಿಗೆ ಅಗ್ರಸ್ಥಾನ

ಆದರೆ ಹ್ಯುಂಡೈ, ಮಹೀಂದ್ರಾ, ಕಿಯಾ ಮೋಟಾರ್ಸ್, ಟಾಟಾ ಮೋಟಾರ್ಸ್, ಟೊಯೊಟಾ ಕಂಪನಿಗಳು ಡೀಸೆಲ್ ಎಂಜಿನ್‌ಗಳನ್ನು ದುಬಾರಿ ಬೆಲೆಯ ನಡುವೆಯೂ ಉನ್ನತೀಕರಿಸಿ ಮಾರಾಟ ಪ್ರಕ್ರಿಯೆಯನ್ನು ಮುಂದುವರಿಸಿವೆ.

ಡೀಸೆಲ್ ಕಾರು ಮಾರಾಟದಲ್ಲಿ ಹ್ಯುಂಡೈ, ಮಹೀಂದ್ರಾ ಕಂಪನಿಗೆ ಅಗ್ರಸ್ಥಾನ

ಬಿಎಸ್-6 ಜಾರಿ ನಂತರ ಮಾರುತಿ ಸುಜುಕಿ, ರೆನಾಲ್ಟ್, ಸ್ಕೋಡಾ, ಫೋಕ್ಸ್‌ವ್ಯಾಗನ್ ಮತ್ತು ನಿಸ್ಸಾನ್ ಕಂಪನಿಗಳು ಡೀಸೆಲ್ ಕಾರು ಮಾರಾಟದಲ್ಲಿ ಸೊನ್ನೆ ಸುತ್ತಿದರೆ ಹ್ಯುಂಡೈ, ಮಹೀಂದ್ರಾ, ಕಿಯಾ ಮೋಟಾರ್ಸ್ ಮತ್ತು ಟಾಟಾ ಕಂಪನಿಗಳು ಬೆಳವಣಿಗೆ ಸಾಧಿಸಿವೆ.

ಡೀಸೆಲ್ ಕಾರು ಮಾರಾಟದಲ್ಲಿ ಹ್ಯುಂಡೈ, ಮಹೀಂದ್ರಾ ಕಂಪನಿಗೆ ಅಗ್ರಸ್ಥಾನ

2020ರ ಎಪ್ರಿಲ್ ನಿಂದ ಜೂನ್ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪ್ರೇರಿತ ಒಟ್ಟು 3,51,141 ಯುನಿಟ್ ಕಾರುಗಳ ಮಾರಾಟಗೊಂಡಿದ್ದು, ಇದರಲ್ಲಿ ಪೆಟ್ರೋಲ್ ಕಾರುಗಳು 2,89,854 ಯುನಿಟ್ ಮಾರಾಟಗೊಂಡಲ್ಲಿ ಡೀಸೆಲ್ ಕಾರುಗಳು 60,238 ಯುನಿಟ್ ಮಾರಾಟಗೊಂಡಿವೆ.

ಡೀಸೆಲ್ ಕಾರು ಮಾರಾಟದಲ್ಲಿ ಹ್ಯುಂಡೈ, ಮಹೀಂದ್ರಾ ಕಂಪನಿಗೆ ಅಗ್ರಸ್ಥಾನ

ಪೆಟ್ರೋಲ್ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿಯು ಅಗ್ರಸ್ಥಾನದಲ್ಲಿದ್ದರೆ ಡೀಸೆಲ್ ಕಾರುಗಳ ಮಾರಾಟದಲ್ಲಿ ಹ್ಯುಂಡೈ ಮತ್ತು ಮಹೀಂದ್ರಾ ಕಂಪನಿಗಳು ಮುಂಚೂಣಿಯಲ್ಲಿದ್ದು, ಹ್ಯುಂಡೈ ಮತ್ತು ಮಹೀಂದ್ರಾ ಕಂಪನಿಗಳು ಡೀಸೆಲ್ ಜೊತೆಗೆ ಪೆಟ್ರೋಲ್ ಕಾರು ಮಾರಾಟದಲ್ಲೂ ಮುಂಚೂಣಿಯಲ್ಲಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಡೀಸೆಲ್ ಕಾರು ಮಾರಾಟದಲ್ಲಿ ಹ್ಯುಂಡೈ, ಮಹೀಂದ್ರಾ ಕಂಪನಿಗೆ ಅಗ್ರಸ್ಥಾನ

ಮಾರುತಿ ಸುಜುಕಿಯು ಡೀಸೆಲ್ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ ನಂತರ ಇತರೆ ಕಾರು ಕಂಪನಿಗಳ ಡೀಸೆಲ್ ಕಾರುಗಳ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಸಹ ಪೆಟ್ರೋಲ್ ಕಾರುಗಳ ಮೇಲೆ ಹೆಚ್ಚು ಗಮನಹರಿಸಿರುವುದು ಕಾರು ಮಾರಾಟ ಪಟ್ಟಿಯಲ್ಲಿ ಸ್ಪಷ್ಟವಾಗುತ್ತದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಡೀಸೆಲ್ ಕಾರು ಮಾರಾಟದಲ್ಲಿ ಹ್ಯುಂಡೈ, ಮಹೀಂದ್ರಾ ಕಂಪನಿಗೆ ಅಗ್ರಸ್ಥಾನ

2030ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳ ಮಾರಾಟವನ್ನು ಉತ್ತೇಜಿಸುವ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಮಾಲಿನ್ಯ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಡೀಸೆಲ್ ವಾಹನಗಳ ಮಾರಾಟವನ್ನು ತಗ್ಗಿಸುವ ಸಂಬಂಧ ಹಲವಾರು ನಿರ್ಬಂಧಗಳನ್ನು ಜಾರಿಗೆ ತರಲಾಗುತ್ತಿದೆ.

ಡೀಸೆಲ್ ಕಾರು ಮಾರಾಟದಲ್ಲಿ ಹ್ಯುಂಡೈ, ಮಹೀಂದ್ರಾ ಕಂಪನಿಗೆ ಅಗ್ರಸ್ಥಾನ

ಯುರೋಪಿಯನ್ ಒಕ್ಕೂಟ ರಾಷ್ಟ್ರಗಳಲ್ಲಿ ಈಗಾಗಲೇ ಡೀಸೆಲ್ ಕಾರುಗಳ ಮೇಲೆ ಗರಿಷ್ಠ ನಿರ್ಬಂಧ ವಿಧಿಸಿರುವ ಪರಿಣಾಮ ಪೆಟ್ರೋಲ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಮಾರಾಟವು ತೀವ್ರಗತಿಯಲ್ಲಿ ಬೆಳವಣಿ ಕಾಣುತ್ತಿದ್ದು, 2030ರ ವೇಳೆಗೆ ಸಂಪೂರ್ಣವಾಗಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಗುರಿ ಯೋಜನೆ ಹೊಂದಲಾಗಿದೆ.

Article Published On: Monday, September 14, 2020, 12:08 [IST]
English summary
Diesel Car Sales Post BS6 In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+