ಮೆಟ್ರೋ ಸ್ಟೇಷನ್‍‍ಗಳಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾ ಸೇವೆ ಆರಂಭಿಸಲಿದೆ ಇ‍‍‍ಟಿ‍ಒ ಮೋಟಾರ್ಸ್

ಈಗ ಎಲ್ಲೆಡೆ ಎಲೆಕ್ಟ್ರಿಕ್ ವಾಹನಗಳ ಭರಾಟೆ. ರಿಕ್ಷಾಗಳಾಗಲಿ, ಟ್ಯಾಕ್ಸಿಗಳಾಗಲಿ ಎಲ್ಲವೂ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬರುತ್ತಿವೆ. ಎಲೆಕ್ಟ್ರಿಕ್ ವಾಹನಗಳ ಸೇವೆಯನ್ನು ನೀಡಲು ಹಲವಾರು ಕಂಪನಿಗಳಿವೆ.

ಮೆಟ್ರೋ ಸ್ಟೇಷನ್‍‍ಗಳಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾ ಸೇವೆ ಆರಂಭಿಸಲಿದೆ ಇ‍‍‍ಟಿ‍ಒ ಮೋಟಾರ್ಸ್

ಎಲೆಕ್ಟ್ರಿಕ್ ವಾಹನ ಸೇವಾ ಕಂಪನಿಯಾದ ಇ‍‍ಟಿ‍ಒ ಮೋಟಾರ್ಸ್ ದೆಹಲಿಯಲ್ಲಿರುವ ಕೆಲವು ಮೆಟ್ರೋ ಸ್ಟೇಷನ್‍‍ಗಳಲ್ಲಿ ಇ-ರಿಕ್ಷಾ ಸೇವೆಯನ್ನು ಆರಂಭಿಸುವುದಾಗಿ ತಿಳಿಸಿದೆ. ಇದರನ್ವಯ ಈ ಯೋಜನೆಯಲ್ಲಿ ಮೊದಲ ಹಂತದಲ್ಲಿ 100 ಇ-ರಿಕ್ಷಾಗಳನ್ನು ಅಳವಡಿಸುವುದಾಗಿ ತಿಳಿಸಿದೆ.

ಮೆಟ್ರೋ ಸ್ಟೇಷನ್‍‍ಗಳಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾ ಸೇವೆ ಆರಂಭಿಸಲಿದೆ ಇ‍‍‍ಟಿ‍ಒ ಮೋಟಾರ್ಸ್

ಈ ಯೋಜನೆಯಲ್ಲಿ ಇಟಿ‍ಒ ಮೋಟಾರ್ಸ್ ಜೊತೆಗೆ ಗೊಯಂಕಾ ಎಲೆಕ್ಟ್ರಿಕ್ ಮೋಟಾರ್ ಹಾಗೂ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿ‍ಎಂ‍ಆರ್‍‍ಸಿ) ಸಹ ಕೈಜೋಡಿಸಿವೆ. ಇ‍‍ಟಿ‍ಒ ಮೋಟಾರ್ಸ್ ಈ ಸೇವೆಯನ್ನು ಮೂರು ಕಂಪನಿಗಳು ಒಟ್ಟಿಗೆ ನೀಡುವುದಾಗಿ ತಿಳಿಸಿದೆ.

ಮೆಟ್ರೋ ಸ್ಟೇಷನ್‍‍ಗಳಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾ ಸೇವೆ ಆರಂಭಿಸಲಿದೆ ಇ‍‍‍ಟಿ‍ಒ ಮೋಟಾರ್ಸ್

ಇ‍‍ಟಿ‍ಒ ಮೋಟಾರ್ಸ್ ಈ ಸೇವೆಯು ಮಾರ್ಚ್ 20ರಂದು ಶುರುವಾಗುವುದಾಗಿ ತಿಳಿಸಿದೆ. ಇ-ರಿಕ್ಷಾಗಳ ಸಾಮರ್ಥ್ಯ ಹಾಗೂ ಕಾರ್ಯಾಚರಣೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ನಂತರ ಜನವರಿ 13ರಂದು ಡಿ‍ಎಂ‍ಆರ್‍‍ಸಿ ಈ ಸೇವೆಗೆ ಹಸಿರು ನಿಶಾನೆ ತೋರಿಸಿದೆ.

ಮೆಟ್ರೋ ಸ್ಟೇಷನ್‍‍ಗಳಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾ ಸೇವೆ ಆರಂಭಿಸಲಿದೆ ಇ‍‍‍ಟಿ‍ಒ ಮೋಟಾರ್ಸ್

ಇ-ರಿಕ್ಷಾ ಸೇವೆಗಳು ದೆಹಲಿಯಲ್ಲಿರುವ ಯಮುನಾ ಬ್ಯಾಂಕ್, ಸುಖ್‍‍ದೇವ್ ವಿಹಾರ್, ಜಮಿಯಾ ಮಿಲಿಯಾ ಇಸ್ಲಾಮಿಯಾ ಹಾಗೂ ಜಸೋಲಾ ವಿಹಾರ್ ಶಾಹೀನ್‍‍ಬಾಗ್ ಮೆಟ್ರೋ ಸ್ಟೇಷನ್‍‍ಗಳಲ್ಲಿ ಆರಂಭವಾಗಲಿವೆ.

ಮೆಟ್ರೋ ಸ್ಟೇಷನ್‍‍ಗಳಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾ ಸೇವೆ ಆರಂಭಿಸಲಿದೆ ಇ‍‍‍ಟಿ‍ಒ ಮೋಟಾರ್ಸ್

ಈ ರಿಕ್ಷಾಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಸಂಬಂಧಪಟ್ಟ ಮೆಟ್ರೋ ಸ್ಟೇಷನ್‍‍ಗಳಲ್ಲಿ ನೀಡಲಾಗುವುದು. ಪಾರ್ಕಿಂಗ್ ಮಾಡಲಾಗುವ ಮೆಟ್ರೋ ಸ್ಟೇಷನ್‍‍ಗಳಲ್ಲಿಯೇ ಈ ಎಲೆಕ್ಟ್ರಿಕ್ ರಿಕ್ಷಾಗಳಿಗೆ ಚಾರ್ಜಿಂಗ್ ಪಾಯಿಂಟ್‍‍ಗಳನ್ನು ನೀಡಲಾಗುವುದು.

ಮೆಟ್ರೋ ಸ್ಟೇಷನ್‍‍ಗಳಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾ ಸೇವೆ ಆರಂಭಿಸಲಿದೆ ಇ‍‍‍ಟಿ‍ಒ ಮೋಟಾರ್ಸ್

ಈ ಬಗ್ಗೆ ಮಾತನಾಡಿರುವ ಇ‍‍ಟಿ‍ಒ ಮೋಟಾರ್ಸ್‍‍ನ ಸಿ‍ಇ‍ಒ ಬಿಜು ಮ್ಯಾಥ್ಯೂಸ್‍‍ರವರು ಡಿ‍ಎಂ‍ಆರ್‍‍ಸಿ ಈ ಸೇವೆ ಆರಂಭಿಸಲು ನಮಗೆ ಅನುಮತಿ ನೀಡಿರುವುದು, ನಮಗೆ ಸಂತಸವನ್ನು ತಂದಿದೆ ಎಂದು ಹೇಳಿದರು.

ಮೆಟ್ರೋ ಸ್ಟೇಷನ್‍‍ಗಳಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾ ಸೇವೆ ಆರಂಭಿಸಲಿದೆ ಇ‍‍‍ಟಿ‍ಒ ಮೋಟಾರ್ಸ್

ಡಿ‍ಎಂಆರ್‍‍ಸಿ ಈ ಸೇವೆಯನ್ನು ದೆಹಲಿಯ ನಾಲ್ಕು ಮೆಟ್ರೋ ಸ್ಟೇಷನ್‍‍ಗಳಲ್ಲಿ ಆರಂಭಿಸಲು ಅನುಮತಿ ನೀಡಿದೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸೇವೆಯನ್ನು ನೀಡಲಾಗುವುದು. ಈ ಸೇವೆಯಿಂದ ಪ್ರತಿದಿನ 25,000 ಜನರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಸೂಚನೆ: ಇಲ್ಲಿರುವ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
ETO Motors electric rickshaw fleet launched at Delhi Metro Stations. Read in Kannada.
Story first published: Wednesday, February 19, 2020, 17:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X