ಲಾಕ್‌ಡೌನ್ ವಿಸ್ತರಣೆ- ಬಿಎಸ್-4 ವಾಹನಗಳ ಮಾರಾಟದ ಡೆಡ್‌ಲೈನ್ ಮತ್ತೆ ಮುಂದಕ್ಕೆ?

ಕರೋನಾ ವೈರಸ್‌ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಲಾಕ್‌ಡೌನ್ ಅನ್ನು ಮೇ 3ರ ತನಕ ವಿಸ್ತರಣೆ ಮಾಡಿದ್ದು, ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ನಷ್ಟ ಭೀತಿಯಲ್ಲಿವೆ.

ಲಾಕ್‌ಡೌನ್ ವಿಸ್ತರಣೆ- ಬಿಎಸ್-4 ವಾಹನಗಳ ಮಾರಾಟ ಡೆಡ್‌ಲೈನ್ ಮತ್ತೆ ಮುಂದಕ್ಕೆ?

ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಎಪ್ರಿಲ್ 1ರಿಂದಲೇ ಬಿಎಸ್-4 ವಾಹನಗಳ ಮಾರಾಟವನ್ನು ನಿಷೇಧಗೊಳಿಸಿ ಬಿಎಸ್-6 ವಾಹನಗಳ ಮಾರಾಟವನ್ನು ಕಡ್ಡಾಯಗೊಂಡಿದ್ದು, ಬಿಎಸ್-4 ವಾಹನಗಳ ಬ್ಯಾನ್‌ಗೆ ಕೇವಲ 10 ದಿನ ಬಾಕಿ ಇರುವಾಗ ಲಾಕ್‌ಡೌನ್ ವಿಧಿಸಲಾಗಿತ್ತು. ಇದರಿಂದ ಹಳೆಯ ವಾಹನಗಳ ಸ್ಟಾಕ್ ಪೂರ್ಣ ಪ್ರಮಾಣದಲ್ಲಿ ಮಾರಾಟ ಯೋಜನೆಯಲ್ಲಿದ್ದ ಆಟೋ ಕಂಪನಿಗಳಿಗೆ ಭಾರೀ ನಷ್ಟ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಬಿಎಸ್-4 ವಾಹನಗಳು ಬ್ಯಾನ್ ಆಗಿದ್ದರೂ ಹಳೆಯ ವಾಹನಗಳ ಮಾರಾಟಕ್ಕೆ ಸುಪ್ರೀಂಕೋರ್ಟ್ ಕೆಲವು ವಿನಾಯ್ತಿ ನೀಡಿತ್ತು.

ಲಾಕ್‌ಡೌನ್ ವಿಸ್ತರಣೆ- ಬಿಎಸ್-4 ವಾಹನಗಳ ಮಾರಾಟ ಡೆಡ್‌ಲೈನ್ ಮತ್ತೆ ಮುಂದಕ್ಕೆ?

ಏಪ್ರಿಲ್ 15ರಿಂದ ಏಪ್ರಿಲ್ 24ರ ತನಕ ಶೇ.10ರಷ್ಟು ಬಿಎಸ್-4 ವಾಹನ ಸ್ಟಾಕ್ ಮಾರಾಟಕ್ಕೆ ಅವಕಾಶ ನೀಡಿದ್ದ ಸುಪ್ರೀಂಕೋರ್ಟ್, ಮಾಲಿನ್ಯ ತಡೆಯುವುದಕ್ಕಾಗಿ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿ ಅವಕಾಶ ಮಾಡಿಕೊಟ್ಟಿತ್ತು.

MOST READ: ಕರೋನಾ ವಿರುದ್ಧದ ಹೋರಾಟಕ್ಕಾಗಿ 60 ಬೈಕ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಹೀರೋ

ಲಾಕ್‌ಡೌನ್ ವಿಸ್ತರಣೆ- ಬಿಎಸ್-4 ವಾಹನಗಳ ಮಾರಾಟ ಡೆಡ್‌ಲೈನ್ ಮತ್ತೆ ಮುಂದಕ್ಕೆ?

ಆದರೆ ಇದೀಗ ಕರೋನಾ ವೈರಸ್ ಅಟ್ಟಹಾಸವು ದಿನಂದಿನಕ್ಕೆ ಹೆಚ್ಚುತ್ತಿದ್ದಂತೆ ಲಾಕ್‌ಡೌನ್ ಅವಧಿಯನ್ನು ಮೇ 3ರ ತನಕ ವಿಸ್ತರಣೆ ಮಾಡಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಮತ್ತೆ ಬಿಎಸ್-4 ವಾಹನ ಮಾರಾಟ ಅವಧಿಯನ್ನು ಮುಂದೂಡುವ ಸಾಧ್ಯತೆಗಳಿವೆ.

ಲಾಕ್‌ಡೌನ್ ವಿಸ್ತರಣೆ- ಬಿಎಸ್-4 ವಾಹನಗಳ ಮಾರಾಟ ಡೆಡ್‌ಲೈನ್ ಮತ್ತೆ ಮುಂದಕ್ಕೆ?

ಇನ್ನು ಲಾಕ್‌ಡೌನ್‌ನಿಂದಾಗಿ ಆಟೋ ಕಂಪನಿಗಳು ದಿನಂಪ್ರತಿ ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಈ ಮಧ್ಯೆ ಸರಕು ಸಾಗಾಣಿಕೆ ಮಾಡುತ್ತಿದ್ದ ಸುಮಾರು 3.50 ಲಕ್ಷಕ್ಕೂ ಹೆಚ್ಚು ಲಾರಿಗಳು ಮಾರ್ಗಮಧ್ಯದಲ್ಲೇ ಉಳಿದಿರುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಗೂಡ್ಸ್ ಲಾರಿಗಳಲ್ಲಿ ವಿವಿಧ ಆಟೋ ಕಂಪನಿಗಳ ಸುಮಾರು ರೂ.35 ಸಾವಿರ ಕೋಟಿ ಮೌಲ್ಯದ ಹೊಸ ವಾಹನಗಳಿದ್ದು, ಲಾಕ್ ಡೌನ್‌ನಿಂದಾಗಿ ರಸ್ತೆ ಬದಿಯಲ್ಲೇ ಉಳಿಯುವಂತಾಗಿದೆ.

MOST READ: ಅತಿ ಕಡಿಮೆ ಬೆಲೆಯ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಲಾಕ್‌ಡೌನ್ ವಿಸ್ತರಣೆ- ಬಿಎಸ್-4 ವಾಹನಗಳ ಮಾರಾಟ ಡೆಡ್‌ಲೈನ್ ಮತ್ತೆ ಮುಂದಕ್ಕೆ?

ಆದರೆ ಪರಿಸ್ಥಿತಿಗೆ ಅನುಗುಣವಾಗಿ ಲಾಕ್ ಡೌನ್ ಪಾಲನೆ ಮಾಡಲೇಬೇಕಾದ ಅನಿವಾರ್ಯತೆಗಳಿದ್ದು, ಆಹಾರ ಪದಾರ್ಥಗಳು ಮತ್ತು ಅಗತ್ಯ ಸೇವೆಯ ವಾಹನಗಳನ್ನು ಹೊರತುಪಡಿಸಿ ಗೃಹಬಳಕೆಯ ವಸ್ತುಗಳು ಮತ್ತು ಆಟೋ ಉತ್ಪಾದನಾ ಸರಕು ಸಾಗಾಣಿಕೆಯ ವಾಹನಗಳಿಗೆ ಭಾರೀ ಹೊಡೆತ ಬೀಳುತ್ತಿದೆ.

ಲಾಕ್‌ಡೌನ್ ವಿಸ್ತರಣೆ- ಬಿಎಸ್-4 ವಾಹನಗಳ ಮಾರಾಟ ಡೆಡ್‌ಲೈನ್ ಮತ್ತೆ ಮುಂದಕ್ಕೆ?

ಅಂದಾಜು ಒಂದರ ಪ್ರಕಾರ, ಕೇವಲ ಆಟೋ ಉತ್ಪಾದನಾ ಕಂಪನಿಗಳಿಗೆ ಮಾತ್ರ ಸಂಬಂಧಿಸಿದ ರೂ.35 ಸಾವಿರ ಕೋಟಿ ಮೌಲ್ಯದ ಹೊಸ ವಾಹನಗಳು ಮತ್ತು ಬಿಡಿಭಾಗಗಳನ್ನು ಹೊತ್ತಬರುತ್ತಿರುವ ವಾಹನಗಳು ಮಾರ್ಗ ಮಧ್ಯದಲ್ಲೇ ಸಿಲುಕಿಕೊಂಡಿವೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಲಾಕ್‌ಡೌನ್ ವಿಸ್ತರಣೆ- ಬಿಎಸ್-4 ವಾಹನಗಳ ಮಾರಾಟ ಡೆಡ್‌ಲೈನ್ ಮತ್ತೆ ಮುಂದಕ್ಕೆ?

ಇದರಲ್ಲಿ ಸಿಮೆಂಟ್, ಕಬ್ಬಿಣ ಮತ್ತು ಲೈಫ್‌ಸ್ಟೈಲ್ ಸರಕು ಹೊತ್ತು ಬರುತ್ತಿರುವ ಸರಕು ವಾಹನಗಳು ಕೂಡಾ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಇದರ ನಡುವೆ ಹೆದ್ದಾರಿಗಳಲ್ಲಿ ಕಳ್ಳತನ ಪ್ರಕರಣಗಳು ಕೂಡಾ ಲಾರಿ ಚಾಲಕರ ನಿದ್ದೆಗೆಡಿಸಿದೆ.

ಲಾಕ್‌ಡೌನ್ ವಿಸ್ತರಣೆ- ಬಿಎಸ್-4 ವಾಹನಗಳ ಮಾರಾಟ ಡೆಡ್‌ಲೈನ್ ಮತ್ತೆ ಮುಂದಕ್ಕೆ?

ಲಾಕ್ ಡೌನ್ ನಂತರ ಹೆದ್ದಾರಿಗಳಲ್ಲೇ ವಾಸ್ತವ್ಯ ಹೂಡಿರುವ ಲಾರಿ ಚಾಲಕರಿಗೆ ಒಂದು ಕಡೆ ದಿನನಿತ್ಯದ ಆಹಾರ ವ್ಯವಸ್ಥೆ ಮಾಡಿಕೊಳ್ಳುವುದು ಒಂದು ಸಮಸ್ಯೆಯಾದರೆ ಮತ್ತೊಂದು ಕಡೆ ಪ್ರತಿ ಟ್ರಕ್‌ಗಳಲ್ಲೂ ಲೋಡ್ ಮಾಡಲಾಗಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಸರಕುಗಳನ್ನು ಕಾಯ್ದುಕೊಳ್ಳುವುದು ಮತ್ತೊಂದು ಸವಾಲಾಗಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಲಾಕ್‌ಡೌನ್ ವಿಸ್ತರಣೆ- ಬಿಎಸ್-4 ವಾಹನಗಳ ಮಾರಾಟ ಡೆಡ್‌ಲೈನ್ ಮತ್ತೆ ಮುಂದಕ್ಕೆ?

ಕೆಲವು ಕಡೆಗಳಲ್ಲಿ ಚಾಲಕರನ್ನು ಬೆದರಿಸಿ ಸರಕು ಕಳ್ಳತನ ಮಾಡಿರುವ ಪ್ರಕರಣಗಳು ಕೂಡಾ ಈಗಾಗಲೇ ದಾಖಲಾಗಿದ್ದು, ಮುಂದಿನ ಆದೇಶದ ವರೆಗೂ ಟ್ರಕ್ ಚಾಲಕರು ಸರಕ ಅನ್ನು ಕಾಪಾಡಿಕೊಳ್ಳಬೇಕಿರುವ ದೊಡ್ಡಸವಾಲಾಗಿದೆ.

Article Published On: Wednesday, April 15, 2020, 11:53 [IST]
English summary
Federation of Automobile Dealers Associations (FADA) is planning to approach Supreme Court for extending the BS4 vehicle registration deadline due to lockdown extended till May 3, 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+