ಮುಂದಿನ ತಿಂಗಳಿನಿಂದ ಮತ್ತೆ ಉತ್ಪಾದನೆ ಆರಂಭಿಸಲಿದೆ ಫೆರಾರಿ

ಕರೋನಾ ವೈರಸ್ ನಿಂದಾಗಿ ಪ್ರಪಂಚದ ಜನಜೀವನ ಅಸ್ತ ವ್ಯಸ್ತವಾಗಿದೆ. ಜನರು ಪ್ರಾಣ ಉಳಿದರೆ ಸಾಕು ಎಂಬ ಭಾವನೆಯಲ್ಲಿದ್ದಾರೆ. ಇದರಿಂದಾಗಿ ಪ್ರಪಂಚದ ಆರ್ಥಿಕ ವ್ಯವಸ್ಥೆಯು ಹದಗೆಟ್ಟಿದೆ. ಕರೋನಾ ವೈರಸ್ ಬಿಸಿ ಆಟೋ ಮೊಬೈಲ್ ಕಂಪನಿಗಳಿಗೂ ತಟ್ಟಿದೆ.

ಮುಂದಿನ ತಿಂಗಳಿನಿಂದ ಮತ್ತೆ ಉತ್ಪಾದನೆ ಆರಂಭಿಸಲಿದೆ ಫೆರಾರಿ

ಇದರಿಂದಾಗಿ ಬಹುತೇಕ ಎಲ್ಲಾ ಆಟೋ ಮೊಬೈಲ್ ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ಇವುಗಳಲ್ಲಿ ಫೆರಾರಿ ಕಂಪನಿಯು ಒಂದು. ಫೆರಾರಿ, ಇಟಲಿ ಮೂಲದ ಕಾರು ತಯಾರಕ ಕಂಪನಿಯಾಗಿದೆ. ಫೆರಾರಿ ವಿಶ್ವದ ಜನಪ್ರಿಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಸದ್ಯಕ್ಕೆ ಇಟಲಿಯು ಕರೋನಾ ವೈರಸ್‌ನಿಂದ ಭಾರಿ ಪ್ರಮಾಣದ ಸಾವುನೋವುಗಳನ್ನು ಅನುಭವಿಸುತ್ತಿದೆ.

ಮುಂದಿನ ತಿಂಗಳಿನಿಂದ ಮತ್ತೆ ಉತ್ಪಾದನೆ ಆರಂಭಿಸಲಿದೆ ಫೆರಾರಿ

ಇಟಲಿಯಲ್ಲಿ ಇದುವರೆಗೂ ಸುಮಾರು 86,500 ಜನರಿಗೆ ಕರೋನಾ ವೈರಸ್ ಸೋಂಕು ತಗುಲಿದೆ. 9,000ಕ್ಕೂ ಹೆಚ್ಚು ಪ್ರಾಣ ಕಳೆದುಕೊಂಡಿದ್ದಾರೆ.

ಮುಂದಿನ ತಿಂಗಳಿನಿಂದ ಮತ್ತೆ ಉತ್ಪಾದನೆ ಆರಂಭಿಸಲಿದೆ ಫೆರಾರಿ

ಕರೋನಾ ವೈರಸ್ ಭೀತಿಯ ಮಧ್ಯೆಯೂ ಫೆರಾರಿ ಕಂಪನಿಯು ಕಾರು ಉತ್ಪಾದನೆಯನ್ನು ಮುಂದುವರೆಸಿತ್ತು. ಕಳೆದ ತಿಂಗಳು 15ರಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಕರೋನಾ ಸಮಸ್ಯೆಯು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.

ಮುಂದಿನ ತಿಂಗಳಿನಿಂದ ಮತ್ತೆ ಉತ್ಪಾದನೆ ಆರಂಭಿಸಲಿದೆ ಫೆರಾರಿ

ಫೆರಾರಿ ಕಂಪನಿಯು ಮುಂದಿನ ತಿಂಗಳಿನಿಂದ ಇಟಲಿಯಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಕಾರು ಉತ್ಪಾದನೆಯನ್ನು ಪುನರ್ ಆರಂಭಿಸಲು ನಿರ್ಧರಿಸಿದೆ. ಬಿಡಿಭಾಗಗಳು ಪೂರೈಕೆಯಾದರೆ, ಉತ್ಪಾದನೆಯನ್ನು ಮತ್ತೆ ಆರಂಭಿಸಲು ಕಂಪನಿಯು ಯೋಜಿಸಿದೆ.

MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಮುಂದಿನ ತಿಂಗಳಿನಿಂದ ಮತ್ತೆ ಉತ್ಪಾದನೆ ಆರಂಭಿಸಲಿದೆ ಫೆರಾರಿ

ಮುಂದಿನ ತಿಂಗಳ ಮಧ್ಯಭಾಗದ ವೇಳೆಗೆ ಕರೋನಾ ವೈರಸ್ ಸಮಸ್ಯೆ ಸರಿ ಹೋಗಬಹುದು ಎಂಬ ಮುಂದಾಲೋಚನೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಕಂಪನಿ ತಿಳಿಸಿದೆ.

MOST READ: ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಮುಂದಿನ ತಿಂಗಳಿನಿಂದ ಮತ್ತೆ ಉತ್ಪಾದನೆ ಆರಂಭಿಸಲಿದೆ ಫೆರಾರಿ

ನೌಕರರ ಸುರಕ್ಷತೆ ಹಾಗೂ ಹೂಡಿಕೆದಾರರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ತೆಗೆದುಕೊಳ್ಳುವುದಾಗಿ ಕಂಪನಿ ತಿಳಿಸಿದೆ. ವೈರಸ್‌ನಿಂದ ಉಂಟಾಗುವ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಉತ್ಪಾದನಾ ನಷ್ಟವನ್ನು ಸರಿದೂಗಿಸುವ ಯೋಜನೆಗಳನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

MOST READ: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಮುಂದಿನ ತಿಂಗಳಿನಿಂದ ಮತ್ತೆ ಉತ್ಪಾದನೆ ಆರಂಭಿಸಲಿದೆ ಫೆರಾರಿ

ಫೆರಾರಿ ಕಂಪನಿಯು ತನ್ನ ತ್ರೈಮಾಸಿಕ ಲಾಭ ನಷ್ಟದ ಪ್ರಮಾಣವನ್ನು ಹಾಗೂ ಷೇರುದಾರರ ಫಲಿತಾಂಶಗಳನ್ನು ಮೇ 4ರಂದು ಪ್ರಕಟಿಸುವ ಸಾಧ್ಯತೆಗಳಿವೆ. ಸದ್ಯಕ್ಕೆ ಉಂಟಾಗಿರುವ ಅನಿಶ್ಚಿತತೆಯು ಹೆಚ್ಚು ತೊಂದರೆಯನ್ನು ಅನುಭವಿಸಬೇಕಾದ ವಾತಾವರಣವನ್ನು ಸೃಷ್ಟಿಸಿದೆ.

More from DriveSpark

Article Published On: Sunday, March 29, 2020, 13:13 [IST]
English summary
Ferrari to restart production from April. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+