ಪ್ರಯಾಣಿಕರ ಸುರಕ್ಷತೆಗಾಗಿ ಕಡ್ಡಾಯವಾಗಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಹೊಸ ವಾಹನ ಉತ್ಪಾದನೆ ಮತ್ತು ಸುರಕ್ಷಾ ಫೀಚರ್ಸ್‌ಗಳ ಅಳವಡಿಕೆಯ ವಿಧಾನವು ಕಳೆದ ಒಂದು ದಶಕದಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಗಿದ್ದು, ಹೊಸ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹಲವಾರು ಹೊಸ ಸುರಕ್ಷಾ ಕ್ರಮಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಕಡ್ಡಾಯವಾಗಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆ ಆಧಾರದ ಮೇಲೆ ಅತ್ಯುತ್ತಮ ಸುರಕ್ಷಾ ಫೀಚರ್ಸ್ ಹೊಂದಿರುವ ಹಲವಾರು ಪ್ರಯಾಣಿಕ ಬಳಕೆಯ ವಾಹನಗಳು ಖರೀದಿ ಲಭ್ಯವಿದ್ದರೂ ಎಂಟ್ರಿ ಲೆವಲ್ ಮತ್ತು ಮಧ್ಯಮ ಗಾತ್ರದ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಸುರಕ್ಷಾ ಫೀಚರ್ಸ್‌ಗಳಿಗೆ ಗ್ರಾಹಕರು ಒತ್ತು ನೀಡುತ್ತಿದ್ದರೂ ಕೂಡಾ ವಾಹನ ಉತ್ಪಾದನಾ ಕಂಪನಿಗಳು ಬಜೆಟ್ ಬೆಲೆಯ ಹೆಸರಿನಲ್ಲಿ ಕಳೆಪೆ ಗುಣಮಟ್ಟದ ವಾಹನಗಳ ಮಾರಾಟ ಮಾಡುತ್ತಿವೆ.

ಪ್ರಯಾಣಿಕರ ಸುರಕ್ಷತೆಗಾಗಿ ಕಡ್ಡಾಯವಾಗಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಕಳೆಪೆ ಗುಣಮಟ್ಟಕ್ಕೆ ಬ್ರೇಕ್ ಹಾಕಿ ಪ್ರಯಾಣಿಕರಿಗೆ ಗರಿಷ್ಠ ಪ್ರಮಾಣದ ಸುರಕ್ಷತೆ ಒದಗಿಸುವ ಕುರಿತಂತೆ ಹೊಸ ನಿಯಮ ಜಾರಿಗೆ ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು ಮುಂಬರುವ ಕೆಲವೇ ದಿನಗಳಲ್ಲಿ ಉತ್ಪಾದನೆಗೊಳ್ಳುವ ಪ್ರತಿ ಕಾರಿನಲ್ಲೂ ಕನಿಷ್ಠ ಎರಡು ಏರ್‌ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲು ಆಟೋ ಉತ್ಪಾದನಾ ಕಂಪನಿಗಳಿಗೆ ಸೂಚನೆ ನೀಡಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಕಡ್ಡಾಯವಾಗಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಮಾಹಿತಿಗಳ ಪ್ರಕಾರ ಮುಂಬರುವ ಮಾರ್ಚ್‌ನಿಂದಲೇ ಎಂಟ್ರಿ ಲೆವಲ್ ಕಾರು ಮಾದರಿಯಲ್ಲಿ ಕಡ್ಡಾಯವಾಗಿ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಕೇಂದ್ರ ಸರ್ಕಾರದ ಸೂಚನೆಗೆ ಆಟೋ ಕಂಪನಿಗಳು ಕೂಡಾ ಒಪ್ಪಿಗೆ ಸೂಚಿಸಿವೆ.

ಪ್ರಯಾಣಿಕರ ಸುರಕ್ಷತೆಗಾಗಿ ಕಡ್ಡಾಯವಾಗಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಹೊಸ ನಿಯಮದನ್ವಯ ಮುಂಭಾಗದಲ್ಲಿ ಚಾಲಕ ಮತ್ತು ಸಹಪ್ರಯಾಣಿಕನಿಗೆ ಏರ್‌ಬ್ಯಾಗ್ ಸುರಕ್ಷತೆಯು ಕಡ್ಡಾಯವಾಗಿ ಅಳವಡಿಕೆಯಾಗಲಿದ್ದು, ಹೊಸ ಸೌಲಭ್ಯದ ನಂತರ ಎಂಟ್ರಿ ಲೆವಲ್ ಕಾರುಗಳ ಬೆಲೆಯಲ್ಲಿ ತುಸು ಏರಿಕೆಯಾಗಲಿದೆ. ಮಧ್ಯಮ ಕ್ರಮಾಂಕದ ಬಹುತೇಕ ಕಾರುಗಳಲ್ಲಿ ಈಗಾಗಲೇ ಕಡ್ಡಾಯವಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೌಲಭ್ಯವನ್ನು ಹೊಂದಿದ್ದು, ಎಂಟ್ರಿ ಲೆವಲ್ ಕಾರುಗಳ ಸುರಕ್ಷತೆ ಹೆಚ್ಚಿಸುವ ಸಂಬಂಧ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಕಡ್ಡಾಯವಾಗಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಅಧಿಕ ಗುಣಮಟ್ಟದ ಹೆಚ್ಚು ಸುರಕ್ಷತೆ ಹೊಂದಿರುವ ಕಾರುಗಳ ಖರೀದಿಯು ಮಧ್ಯಮ ವರ್ಗದ ಗ್ರಾಹಕರಿಗೆ ಕಷ್ಟಸಾಧ್ಯ. ಇದೇ ಕಾರಣಕ್ಕೆ ಬಹುತೇಕ ಗ್ರಾಹಕರು ಬಜೆಟ್ ಬೆಲೆಯಲ್ಲಿ ಕಾರು ಖರೀದಿಯ ಕನಸನ್ನು ನನಸಾಗಿಸಿಕೊಳ್ಳುವ ಗ್ರಾಹಕರ ಸಂಖ್ಯೆಯೇ ಹೆಚ್ಚಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಕಡ್ಡಾಯವಾಗಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಗ್ರಾಹಕರು ಸುರಕ್ಷತೆ ಒತ್ತು ನೀಡಿದರೂ ಕೂಡಾ ಬೆಲೆ ಹೆಚ್ಚಳವಾಗುವ ಸಂಬಂಧ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಕಾರುಗಳತ್ತ ಮುಖ ಮಾಡುತ್ತಾರೆ. ಆದರೆ ಸುರಕ್ಷತೆಯಿಲ್ಲದ ಕಾರು ಖರೀದಿಯು ಅಪಘಾತಗಳ ಸಂದರ್ಭದಲ್ಲಿ ದೊಡ್ಡಮಟ್ಟದ ಹಾನಿ ಉಂಟು ಮಾಡುವುದಲ್ಲಿ ಯಾವುದೇ ಅನುಮಾನವಿಲ್ಲ.

ಪ್ರಯಾಣಿಕರ ಸುರಕ್ಷತೆಗಾಗಿ ಕಡ್ಡಾಯವಾಗಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಅದೇ ಸುರಕ್ಷಿತ ವಾಹನ ಮಾದರಿಯಾಗಿದ್ದಲ್ಲಿ ಆಗಬಹುದಾದ ಹಾನಿಯ ತೀವ್ರತೆ ಕಡಿಮೆಗೊಳಿಸಬಹುದಾಗಿದ್ದು, ಈ ಹಿನ್ನಲೆಯಲ್ಲಿ ಬಜೆಟ್ ಕಾರುಗಳಲ್ಲಿ ಕನಿಷ್ಠ ಸುರಕ್ಷಾ ಸೌಲಭ್ಯಗಳನ್ನು ಕಡ್ಡಾಯಗೊಳಿಸಲಾಗುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಪ್ರಯಾಣಿಕರ ಸುರಕ್ಷತೆಗಾಗಿ ಕಡ್ಡಾಯವಾಗಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಭಾರತದಲ್ಲಿ ಪ್ರತಿ ವರ್ಷ ಸುಮಾರು 80 ಸಾವಿರದಿಂದ 1 ಲಕ್ಷ ಜನ ರಸ್ತೆ ಅಪಘಾತಗಳಲ್ಲಿ ಪ್ರಾಣಕಳೆದುಕೊಳ್ಳುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಅಪಘಾತದಲ್ಲಿ ಜೀವಕಳೆದುಕೊಳ್ಳುವವರ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಕಡ್ಡಾಯವಾಗಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಹೊಸ ವಾಹನಗಳ ಸಂಖ್ಯೆ ಹೆಚ್ಚಿದಂತೆ ಅಪಘಾತಗಳ ಸಂಖ್ಯೆ ಹೆಚ್ಚಿದರೂ ಕೂಡಾ ವಾಹನಗಳ ಸುರಕ್ಷತೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಅಪಘಾತದಲ್ಲಿ ಪ್ರಾಣಕಳೆದುಕೊಳ್ಳುವವರ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಪ್ರಯಾಣಿಕರ ಸುರಕ್ಷತೆಗಾಗಿ ಕಡ್ಡಾಯವಾಗಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ನಿಯಮಗಳ ಕಡ್ಡಾಯದೊಂದಿಗೆ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಾಗುತ್ತಿದ್ದು, ಕ್ರ್ಯಾಶ್ ಟೆಸ್ಟಿಂಗ್ ಮೂಲಕ ಹೊಸ ವಾಹನಗಳ ಗುಣಮಟ್ಟವನ್ನು ಸಾಕಷ್ಟು ಸುಧಾರಣೆಗೊಳಿಸುವಲ್ಲಿ ಸಹಕಾರಿಯಾಗಿದೆ.

Most Read Articles

Kannada
English summary
Front Passenger Airbag Likely To Be Mandatory For All Cars Soon. Read in Kannada.
Story first published: Friday, December 18, 2020, 19:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X