ಹೋಂಡಾ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಖರೀದಿ ಮೇಲೆ ಸುಲಭ ಸಾಲ ಸೌಲಭ್ಯ ಘೋಷಣೆ

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಈಗಾಗಲೇ ವಿವಿಧ ಕಾರು ಖರೀದಿ ಮೇಲೆ ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದ್ದು, ಇದೀಗ ಕಂಪ್ಯಾಕ್ಟ್ ಸೆಡಾನ್ ಮಾದರಿಯಾದ ಅಮೇಜ್ ಕಾರು ಖರೀದಿಗಾಗಿ ಎಕ್ಸಿಸ್ ಬ್ಯಾಂಕ್ ಜೊತೆಗೂಡಿ ಹೊಸ ಸಾಲ ಸೌಲಭ್ಯ ಘೋಷಣೆ ಮಾಡಿದೆ.

ಅಮೇಜ್ ಕಂಪ್ಯಾಕ್ಟ್ ಸೆಡಾನ್ ಖರೀದಿ ಮೇಲೆ ಸುಲಭ ಸಾಲ ಸೌಲಭ್ಯ ಘೋಷಣೆ

ಆಟೋ ಉದ್ಯಮವು ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ವೈರಸ್ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಸಹ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದ್ದು, ಬಹುತೇಕ ಕಾರು ಕಂಪನಿಗಳು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿವೆ.

ಅಮೇಜ್ ಕಂಪ್ಯಾಕ್ಟ್ ಸೆಡಾನ್ ಖರೀದಿ ಮೇಲೆ ಸುಲಭ ಸಾಲ ಸೌಲಭ್ಯ ಘೋಷಣೆ

ಲಾಕ್‌ಡೌನ್‌ನಿಂದಾಗಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಅತಿ ದೊಡ್ಡ ಸಮಸ್ಯೆಯಾಗಿ ಕಾಡತೋಡಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುತ್ತಿವೆ.

ಅಮೇಜ್ ಕಂಪ್ಯಾಕ್ಟ್ ಸೆಡಾನ್ ಖರೀದಿ ಮೇಲೆ ಸುಲಭ ಸಾಲ ಸೌಲಭ್ಯ ಘೋಷಣೆ

ಹೋಂಡಾ ಇಂಡಿಯಾ ಕೂಡಾ ವಿವಿಧ ಕಾರು ಮಾದರಿಗಳ ಮೇಲೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಇದೀಗ ಕಂಪ್ಯಾಕ್ಟ್ ಸೆಡಾನ್ ಕಾರು ಮಾದರಿಯಾದ ಅಮೇಜ್ ಖರೀದಿಸುವ ಗ್ರಾಹಕರಿಗಾಗಿ ಆಕ್ಸಿಸ್ ಬ್ಯಾಂಕ್ ಜೊತೆಗೂಡಿ ಹೊಸ ಲೋನ್ ಆಫರ್ ನೀಡುತ್ತಿದೆ.

ಅಮೇಜ್ ಕಂಪ್ಯಾಕ್ಟ್ ಸೆಡಾನ್ ಖರೀದಿ ಮೇಲೆ ಸುಲಭ ಸಾಲ ಸೌಲಭ್ಯ ಘೋಷಣೆ

ಅಮೇಜ್ ಖರೀದಿಸುವ ಗ್ರಾಹಕರಿಗಾಗಿ 8 ವರ್ಷಗಳ ಕಾಲ ದೀರ್ಘಾವಧಿಯ ಸಾಲ ಸೌಲಭ್ಯದ ಜೊತೆಗೆ ಸುಲಭವಾದ ಇಎಂಐ ಆಯ್ಕೆ(1 ಲಕ್ಷಕ್ಕೆ ರೂ.1,432) ನೀಡಲಾಗಿದ್ದು, ಕಾರು ಖರೀದಿ ಮಾಡಿದ ಮೊದಲ ಆರು ತಿಂಗಳು ತನಕ ಅತಿ ಕಡಿಮೆ ಇಎಂಐ ಮರುಪಾವತಿ ಮಾಡಬಹುದು.

ಅಮೇಜ್ ಕಂಪ್ಯಾಕ್ಟ್ ಸೆಡಾನ್ ಖರೀದಿ ಮೇಲೆ ಸುಲಭ ಸಾಲ ಸೌಲಭ್ಯ ಘೋಷಣೆ

ತದನಂತರ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ನಿಗದಿತ ಪ್ರಮಾಣದ ಇಎಂಐ ಪಾವತಿ ಮಾಡಬೇಕಿದ್ದು, ಹೊಸ ಕಾರು ಖರೀದಿಯ ಮೇಲೆ ಶೇ.8.35ರಷ್ಟು ಬಡ್ಡಿ ದರದೊಂದಿಗೆ ಶೇ.100ರಷ್ಟು ಆನ್-ರೋಡ್ ಸಾಲ ಪಡೆಯಬಹುದಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಅಮೇಜ್ ಕಂಪ್ಯಾಕ್ಟ್ ಸೆಡಾನ್ ಖರೀದಿ ಮೇಲೆ ಸುಲಭ ಸಾಲ ಸೌಲಭ್ಯ ಘೋಷಣೆ

ಹೊಸ ಅಮೇಜ್ ಖರೀದಿಸಲು ಸದ್ಯ ರೂ. 10 ಸಾವಿರ ಡೌನ್ ಪೆಮೆಂಟ್ ಸಲ್ಲಿಕೆ ಮಾಡುವುದರೊಂದಿಗೆ ಕಾರಿನ ಮಾಲೀಕತ್ವ ಹೊಂದಬಹುದಾಗಿದ್ದು, ಹೊಸ ಕಾರಿನ ಖರೀದಿ ಮೇಲೆ ಕಂಪನಿಯು ರೂ.32 ಸಾವಿರದಷ್ಟು ಆಫರ್ ನೀಡಲಿದೆ.

ಅಮೇಜ್ ಕಂಪ್ಯಾಕ್ಟ್ ಸೆಡಾನ್ ಖರೀದಿ ಮೇಲೆ ಸುಲಭ ಸಾಲ ಸೌಲಭ್ಯ ಘೋಷಣೆ

ಇನ್ನು ಕಂಪ್ಯಾಕ್ಟ್ ಸೆಡಾನ್ ಮಾದರಿಗಳಲ್ಲಿ ಮಾರುತಿ ಡಿಜೈರ್ ನಂತರ ಅತಿಹೆಚ್ಚು ಬೇಡಿಕೆಯ ಕಾರು ಮಾದರಿಯಾಗಿರುವ ಅಮೇಜ್ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಅಮೇಜ್ ಕಂಪ್ಯಾಕ್ಟ್ ಸೆಡಾನ್ ಖರೀದಿ ಮೇಲೆ ಸುಲಭ ಸಾಲ ಸೌಲಭ್ಯ ಘೋಷಣೆ

ಒಟ್ಟು 14 ವೆರಿಯೆಂಟ್‌ಗಳನ್ನು ಹೊಂದಿರುವ ಅಮೇಜ್ ಕಾರಿನಲ್ಲಿ ಪೆಟ್ರೋಲ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.09 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.8.75 ಲಕ್ಷ ಬೆಲೆ ಹೊಂದಿದ್ದರೆ ಡೀಸೆಲ್ ಮಾದರಿಯು ಆರಂಭಿಕವಾಗಿ ರೂ. 7.55 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.95 ಲಕ್ಷ ಬೆಲೆ ಹೊಂದಿದೆ.

Most Read Articles

Kannada
Read more on ಹೋಂಡಾ honda
English summary
Honda Cars India Introduces Long Term Finance Offer For Customers. Read in Kannada.
Story first published: Tuesday, June 23, 2020, 17:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X