Just In
Don't Miss!
- News
ಆರೋಗ್ಯ ಸಹಾಯಕ ಕಾರ್ಯದರ್ಶಿಯಾಗಿ ತೃತೀಯಲಿಂಗಿ ನಾಮನಿರ್ದೇಶನ ಮಾಡಿದ ಬೈಡನ್
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Movies
Breaking: ನಟಿ ರಾಗಿಣಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಬುಕ್ಕಿಂಗ್ ವೆಬ್‌ಸೈಟ್‌ಗೆ ಕನ್ನ ಹಾಕಿದ ಖದೀಮರು
ಡಿಸೆಂಬರ್ 15ರಿಂದ ದೆಹಲಿಯಲ್ಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ಅನ್ನು ಕಡ್ಡಾಯಗೊಳಿಸಿದ ನಂತರ, ಹೊಸ ಸಂಖ್ಯೆಯ ಪ್ಲೇಟ್‌ಗಳನ್ನು ಕಾಯ್ದಿರಿಸಲು ಅಧಿಕೃತ ವೆಬ್‌ಸೈಟ್‌ನಲ್ಲಿ ದಟ್ಟಣೆ ಹೆಚ್ಚಾಗಿದೆ.

ಈ ವೆಬ್‌ಸೈಟ್ ಮಂಗಳವಾರ ಯಾವುದೇ ಸಮಸ್ಯೆಗಳಿಲ್ಲದೆ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಬುಧವಾರದಿಂದ ಈ ವೆಬ್‌ಸೈಟ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಜನರು ದೂರಿದ್ದಾರೆ. ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್'ಗಳನ್ನು ಬುಕ್ಕಿಂಗ್ ಮಾಡಲು ರೋಸ್‌ಮಾರ್ಟಾ ಸೇಫ್ಟಿ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ನಿರ್ವಹಿಸುತ್ತಿರುವ www.bookmyhsrp.com ವೆಬ್ ಸೈಟ್ ಅನ್ನು ಕೆಲ ಕಾಲದವರೆಗೆ ಸ್ಥಗಿತಗೊಳಿಸಲಾಗಿತ್ತು.

ವಿದೇಶದಲ್ಲಿರುವ ಸರ್ವರ್‌ನಿಂದ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಕಂಪನಿಯ ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ವೆಬ್‌ಸೈಟ್ ಅಧಿಕಾರಿಗಳು ದೆಹಲಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವೆಬ್‌ಸೈಟ್‌ನಲ್ಲಿ ಮಂಗಳವಾರ ಸುಮಾರು 32,000 ಹೆಚ್‌ಎಸ್‌ಆರ್‌ಪಿಗಳನ್ನು ಬುಕ್ಕಿಂಗ್ ಮಾಡಲಾಗಿತ್ತು ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಮಂಗಳವಾರ ಬೆಳಿಗ್ಗೆಯಿಂದ ಬುಧವಾರ ಬೆಳಿಗ್ಗೆಯವರೆಗೆ ಈ ವೆಬ್‌ಸೈಟ್ ಕಾರ್ಯನಿರ್ವಹಿಸುತ್ತಿತ್ತು.

ಬುಧವಾರ ಬೆಳಿಗ್ಗೆ 10 ಗಂಟೆಗೆ ಹಠಾತ್ ಆಗಿ ಸ್ಥಗಿತಗೊಂಡಿದೆ. ವೆಬ್‌ಸೈಟ್ ಅನ್ನು ಪರಿಶೀಲನೆ ನಡೆಸಿದ ನಂತರ ವೆಬ್‌ಸೈಟ್ ಹ್ಯಾಕ್ ಆಗಿರುವುದು ತಿಳಿದುಬಂದಿದೆ. ವೆಬ್‌ಸೈಟ್ ಹ್ಯಾಕಿಂಗ್‌ನಿಂದಾಗಿ ಹೆಚ್ಚಿನ ವರ್ಚುವಲ್ ದಟ್ಟಣೆ ಉಂಟಾಗಿ ಓವರ್‌ಲೋಡ್ ಆಗಿ ವೆಬ್‌ಸೈಟ್ ಸ್ಥಗಿತಗೊಂಡಿದೆ ಎಂದು ಕಂಪನಿ ತಿಳಿಸಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸಂಜೆ 4 ಗಂಟೆಯ ಸುಮಾರಿಗೆ ವೆಬ್‌ಸೈಟ್ ಅನ್ನು ಸರಿಪಡಿಸಲಾಗಿದ್ದು, ಬುಕ್ಕಿಂಗ್'ಗಳನ್ನು ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ. ವೆಬ್‌ಸೈಟ್ ನಿಂದ ಡೇಟಾ ಕದಿಯಲಾಗಿದೆ ಎಂಬ ಸುದ್ದಿಗಳನ್ನು ಕಂಪನಿ ನಿರಾಕರಿಸಿದೆ. ಈ ಘಟನೆಯ ನಂತರ ಕಂಪನಿಯ ಎಂಜಿನಿಯರ್‌ಗಳು ವೆಬ್‌ಸೈಟ್‌ನ ಸುರಕ್ಷತೆಯನ್ನು ಹೆಚ್ಚಿಸಿದ್ದಾರೆ ಎಂದು ಹೇಳಲಾಗಿದೆ.

ಹೊಸ ನಿಯಮ ಜಾರಿಯಾದ ಮೊದಲ ದಿನವೇ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ಇಲ್ಲದ 239 ವಾಹನಗಳಿಗೆ ದಂಡ ವಿಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸರು ರಚಿಸಿರುವ ಕ್ರಿಯಾ ತಂಡವು ಹೆಚ್‌ಎಸ್‌ಆರ್‌ಪಿ ವಾಹನಗಳನ್ನು ತಡೆದು ದಂಡ ವಿಧಿಸಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಜೀರ್‌ಪುರ, ಸಾಕೇತ್, ಶಾಸ್ತ್ರಿ ಪಾರ್ಕ್, ಅಕ್ಷರ್ಧಮ್, ದೆಹಲಿ ಕೋರ್ಟ್, ದ್ವಾರಕಾ ಸೇರಿದಂತೆ ದೆಹಲಿಯ ಕೆಲವು ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿದವರಿಗೆ ರೂ.5,500ಗಳ ದಂಡ ವಿಧಿಸಲಾಗಿದೆ.

ಹೊಸ ನಂಬರ್ ಪ್ಲೇಟ್‌ಗಳಿಗೆ ಅರ್ಜಿ ಸಲ್ಲಿಸಿರುವ ವಾಹನಗಳಿಗೆ ದಂಡ ವಿಧಿಸುತ್ತಿಲ್ಲ. ಆ ವಾಹನಗಳ ಮಾಲೀಕರು ನಂಬರ್ ಪ್ಲೇಟ್‌ಗೆ ಅರ್ಜಿ ಸಲ್ಲಿಸಿರುವ ದಾಖಲೆಗಳನ್ನು ತೋರಿಸಿದ ನಂತರ ಬಿಡಲಾಗುತ್ತಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೆಚ್‌ಎಸ್‌ಆರ್‌ಪಿ ನಿಯಮವನ್ನು ಕೇವಲ ನಾಲ್ಕು ಚಕ್ರ ವಾಹನಗಳಿಗೆ ಮಾತ್ರ ಜಾರಿಗೊಳಿಸಲಾಗಿದೆ. ಶೀಘ್ರದಲ್ಲೇ ದೆಹಲಿಯಲ್ಲಿರುವ ಎಲ್ಲಾ ವಾಹನಗಳಿಗೆ ಈ ನಿಯಮವನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿಯ ಸಾರಿಗೆ ಆಯುಕ್ತರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಆದೇಶದನ್ವಯ 2019ರ ಏಪ್ರಿಲ್ 1ಕ್ಕೂ ಮೊದಲು ಖರೀದಿಸಿದ ವಾಹನಗಳಲ್ಲಿ ಹೆಚ್‌ಎಸ್‌ಆರ್‌ಪಿ ಅಳವಡಿಸುವುದು ಕಡ್ಡಾಯವಾಗಿದೆ. ಇದರ ನಂತರ ಮಾರಾಟವಾದ ವಾಹನಗಳು ಹೊಸ ನಂಬರ್ ಪ್ಲೇಟ್‌ಗಳನ್ನು ಹೊಂದಿವೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಸಾಮಾನ್ಯ ನಂಬರ್ ಪ್ಲೇಟ್‌ನಂತೆಯೇ ಕಾಣುತ್ತದೆಯಾದರೂ ಅದರಲ್ಲಿರುವ ತಾಂತ್ರಿಕ ಲಕ್ಷಣಗಳು ವಿಭಿನ್ನವಾಗಿವೆ.

ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್, ಕ್ರೋಮಿಯಂ ಹೊಲೊಗ್ರಾಮ್ ಸ್ಟಿಕ್ಕರ್ ಅನ್ನು ಹೊಂದಿರುತ್ತದೆ. ಈ ಸ್ಟಿಕ್ಕರ್ ನಲ್ಲಿ ವಾಹನಕ್ಕೆ ಸಂಬಂಧಿಸಿದ ರಿಜಿಸ್ಟ್ರೇಷನ್ ನಂಬರ್, ಎಂಜಿನ್ ನಂಬರ್ ಹಾಗೂ ಚಾಸಿಸ್ ನಂಬರ್ ಗಳನ್ನು ನಮೂದಿಸಲಾಗಿರುತ್ತದೆ.