ಲಾಕ್‌ಡೌನ್ ಸಂಕಷ್ಟ: ಹೊಸ ಕಾರು ಖರೀದಿದಾರರಿಗೆ ಭರ್ಜರಿ ಆಫರ್ ನೀಡಿದ ಹ್ಯುಂಡೈ

ಕರೋನಾ ವೈರಸ್‌ನಿಂದಾಗಿ ಆಟೋ ಮೊಬೈಲ್ ಸೇರಿದಂತೆ ಎಲ್ಲ ವಲಯದಲ್ಲೂ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಹೀಗಿರುವಾಗ ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದ್ದು, ಹ್ಯುಂಡೈ ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ.

ಹೊಸ ಕಾರು ಖರೀದಿದಾರರಿಗೆ ಭರ್ಜರಿ ಆಫರ್ ನೀಡಿದ ಹ್ಯುಂಡೈ

ಕಳೆದ ಒಂದೂವರೆ ತಿಂಗಳಿನಿಂದ ವಿಧಿಸಲಾಗಿರುವ ಲಾಕ್‌ಡೌನ್‌ನಿಂದ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಪ್ರತಿಯೊಬ್ಬರಲ್ಲೂ ಕಾಡತೊಡಗಿದೆ. ಹೀಗಿರುವಾಗ ಕಾರು ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಹ್ಯುಂಡೈ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದು, ಹೊಸ ಕಾರು ಖರೀದಿದಾರರಿಗೆ ಇಎಂಐ ಪಾವತಿ ಚಿಂತೆಯನ್ನು ಹೊಗಲಾಡಿಸಲು ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ.

ಹೊಸ ಕಾರು ಖರೀದಿದಾರರಿಗೆ ಭರ್ಜರಿ ಆಫರ್ ನೀಡಿದ ಹ್ಯುಂಡೈ

ಒಂದು ವೇಳೆ ಹೊಸ ಕಾರು ಖರೀದಿ ನಂತರ ಉದ್ಯೋಗ ಕಳೆದುಕೊಂಡರು ಇಎಂಐ ಪಾವತಿಯ ಚಿಂತೆಯನ್ನು ಹೊಗಲಾಡಿಸಲು ಮುಂದಾಗಿರುವ ಹ್ಯುಂಡೈ ಕಂಪನಿಯು ಮೂರು ತಿಂಗಳ ಕಾಲ ಇಎಂಐ ಪಾವತಿಯ ಹೊಣೆ ತನ್ನದು ಎಂದಿದೆ.

ಹೊಸ ಕಾರು ಖರೀದಿದಾರರಿಗೆ ಭರ್ಜರಿ ಆಫರ್ ನೀಡಿದ ಹ್ಯುಂಡೈ

ಅಂದರೆ ಕಾರು ಖರೀದಿಯ ನಂತರ ನೀವು ಒಂದು ವೇಳೆ ಕೆಲಸ ಕಳೆದುಕೊಂಡರು ಮೂರು ತಿಂಗಳ ಕಾಲ ಇಎಂಐ ಹೊರೆಯನ್ನು ತಾನೇ ಭರಿಸುವುದಾಗಿ ಹೇಳಿಕೊಂಡಿರುವ ಹ್ಯುಂಡೈ ಕಂಪನಿಯು ಕಾರು ಖರೀದಿದಾರರ ಆತ್ಮವಿಶ್ವಾಸ ಹೆಚ್ಚಿಸಲು ಮುಂದಾಗಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಹೊಸ ಕಾರು ಖರೀದಿದಾರರಿಗೆ ಭರ್ಜರಿ ಆಫರ್ ನೀಡಿದ ಹ್ಯುಂಡೈ

ಹೊಸ ಯೋಜನೆಯು ಇಂದಿನಿಂದಲೇ ಲಭ್ಯವಿದ್ದು, ಮುಂದಿನ ಒಂದು ವರ್ಷಗಳ ಅವಧಿಗೆ ಈ ಹೊಸ ಯೋಜನೆಯು ಅನ್ವಯವಾಗಲಿದೆ. ಆದ್ರೆ ಕಂಪನಿಯು ನಿಯಮದ ಪ್ರಕಾರ ಆಯ್ದ ಕಾರು ಮಾದರಿಗಳ ಖರೀದಿ ಮೇಲೆ ಮಾತ್ರವೇ ಈ ಯೋಜನೆಯನ್ನು ನೀಡುತ್ತಿದೆ.

ಹೊಸ ಕಾರು ಖರೀದಿದಾರರಿಗೆ ಭರ್ಜರಿ ಆಫರ್ ನೀಡಿದ ಹ್ಯುಂಡೈ

ಮಾಹಿತಿಗಳ ಪ್ರಕಾರ, ಎಂಟ್ರಿ ಲೆವಲ್ ಕಾರು ಮಾದರಿಗಳಾದ ಸ್ಯಾಂಟ್ರೋ, ಐ10 ಗ್ರಾಂಡ್ ನಿಯೋಸ್, ಐ20, ಔರಾ ಕಂಪ್ಯಾಕ್ಟ್ ಸೆಡಾನ್ ಮೇಲೆ ಮಾತ್ರವೇ ಲಭ್ಯವಿರಲಿದ್ದು, ನಿಜವಾಗಿಯೂ ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಲ್ಲಿ ಮಾತ್ರವೇ ಈ ಆರ್ಥಿಕ ಸಹಾಯದ ಯೋಜನೆ ಅರ್ಹವಾಗಿರುತ್ತಾರೆ.

MOST READ: ಕರೋನಾ ವೈರಸ್: ಹೊಸ ವಿಧಾನದ ಮೂಲಕ ಜನರ ಬಳಿ ಬರಲಿರುವ ಪೊಲೀಸರು..

ಹೊಸ ಕಾರು ಖರೀದಿದಾರರಿಗೆ ಭರ್ಜರಿ ಆಫರ್ ನೀಡಿದ ಹ್ಯುಂಡೈ

ಇನ್ನು ಮಾಹಾಮಾರಿ ಕರೋನಾ ವೈರಸ್ ಮಟ್ಟ ಹಾಕುವುದಕ್ಕಾಗಿ ಸದ್ಯ ಮೂರನೇ ಹಂತದ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ಆರ್ಥಿಕ ಪುನಶ್ಚೇತನಕ್ಕಾಗಿ ಕೈಗಾರಿಕಾ ವಲಯಕ್ಕೆ ಕೆಲವು ವಿನಾಯ್ತಿಗಳನ್ನು ಘೋಷಿಸಿದ್ದು, ಆಟೋ ಕಂಪನಿಗಳು ಕೂಡಾ ಹೊಸ ಮಾರ್ಗಸೂಚಿ ಅನುಸಾರವಾಗಿ ವಾಹನ ಉತ್ಪಾದನೆಗೆ ಮರುಚಾಲನೆ ನೀಡಿವೆ.

ಹೊಸ ಕಾರು ಖರೀದಿದಾರರಿಗೆ ಭರ್ಜರಿ ಆಫರ್ ನೀಡಿದ ಹ್ಯುಂಡೈ

ಹ್ಯುಂಡೈ ಕೂಡಾ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಕಾರು ಉತ್ಪಾದನೆಯನ್ನು ಪುನಾರಂಭಿಸಿದ್ದು, ಚೆನ್ನೈ ಹೊರವಲಯದಲ್ಲಿರುವ ಕಾರು ಉತ್ಪಾದನಾ ಘಟಕದಲ್ಲಿ ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳೊಂದಿಗೆ ಉತ್ಪಾದನಾ ಪ್ರಕ್ರಿಯೆಗೆ ಮರುಚಾಲನೆ ನೀಡಿದೆ.

MOST READ: ಎರಡು ಚಕ್ರಗಳಲ್ಲಿ ಚಲಿಸಿದ ಟ್ರಾಕ್ಟರ್, ಆನಂದ್ ಮಹೀಂದ್ರಾ ಹೇಳಿದ್ದೇನು?

ಹೊಸ ಕಾರು ಖರೀದಿದಾರರಿಗೆ ಭರ್ಜರಿ ಆಫರ್ ನೀಡಿದ ಹ್ಯುಂಡೈ

ಶೇ.33 ರಷ್ಟು ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆಗೆ ಗುಣಮಟ್ಟದ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯವಾಗಿರಲಿದೆ.

Most Read Articles

Kannada
English summary
Hyundai has announced 'EMI Assurance' program for new car buyers in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X