YouTube

ಕ್ರೆಟಾ ಎಸ್‌ಯುವಿ ಬೆಲೆ ಹೆಚ್ಚಳದೊಂದಿಗೆ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ ಹ್ಯುಂಡೈ

ನ್ಯೂ ಜನರೇಷನ್ ಕ್ರೆಟಾ ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸುತ್ತಿರುವ ಹ್ಯುಂಡೈ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಎಂಟ್ರಿ ಲೆವಲ್ ವೆರಿಯೆಂಟ್ ಒಂದನ್ನು ಬಿಡುಗಡೆ ಮಾಡಿದ್ದು, ವಿವಿಧ ವೆರಿಯೆಂಟ್‌ಗಳ ಬೆಲೆಯನ್ನು ಕೂಡಾ ಹೆಚ್ಚಳ ಮಾಡಿದೆ.

ಕ್ರೆಟಾ ಎಸ್‌ಯುವಿ ಬೆಲೆ ಹೆಚ್ಚಳದೊಂದಿಗೆ ಹೊಸ ವೆರಿಯೆಂಟ್ ಬಿಡುಗಡೆ

ಹೊಸ ಕ್ರೆಟಾ ಮಾದರಿಯನ್ನು ಕಳೆದ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ್ದ ಹ್ಯುಂಡೈ ಕಂಪನಿಯು ಕಂಪನಿಯು ಈಗಾಗಲೇ 65 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಇ ವೆರಿಯೆಂಟ್ ಬಿಡುಗಡೆ ಮಾಡಿದೆ. ಕ್ರೆಟಾ ಇ ವೆರಿಯೆಂಟ್ ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, ಇ ವೆರಿಯೆಂಟ್ ಕ್ರೆಟಾ ಕಾರಿನ ಎಂಟ್ರಿ ಲೆವಲ್ ವೆರಿಯೆಂಟ್ ಆಗಿರಲಿದೆ.

ಕ್ರೆಟಾ ಎಸ್‌ಯುವಿ ಬೆಲೆ ಹೆಚ್ಚಳದೊಂದಿಗೆ ಹೊಸ ವೆರಿಯೆಂಟ್ ಬಿಡುಗಡೆ

ಕ್ರೆಟಾ ಇ ವೆರಿಯೆಂಟ್ ಮಾದರಿಯು ಪೆಟ್ರೋಲ್ ಮಾದರಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.81 ಲಕ್ಷ ಮತ್ತು ಡೀಸೆಲ್ ಮಾದರಿಯು ರೂ. 9.99 ಲಕ್ಷ ಬೆಲೆ ಹೊಂದಿರಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರೆ ವೆರಿಯೆಂಟ್‌ಗಳು ರೂ. 11 ಸಾವಿರದಿಂದ ರೂ. 61 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದೆ.

ಕ್ರೆಟಾ ಎಸ್‌ಯುವಿ ಬೆಲೆ ಹೆಚ್ಚಳದೊಂದಿಗೆ ಹೊಸ ವೆರಿಯೆಂಟ್ ಬಿಡುಗಡೆ

ಈ ಮೂಲಕ ನ್ಯೂ ಜನರೇಷನ್ ಕ್ರೆಟಾ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.81 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.20 ಲಕ್ಷ ಬೆಲೆ ಹೊಂದಿದ್ದು, ಪೆಟ್ರೋಲ್ ಆರಂಭಿಕ ಮಾದರಿಯ ಬೆಲೆಯಲ್ಲಿ ಅತಿ ಹೆಚ್ಚು ಬೆಲೆ ಏರಿಕೆಯಾಗಿದೆ.

ಹೊಸ ವೆರಿಯೆಂಟ್ ಮತ್ತು ಹೆಚ್ಚಳವಾದ ಬೆಲೆ(ದೆಹಲಿ ಎಕ್ಸ್‌ಶೋರೂಂ ಪ್ರಕಾರ)

1.5-ಲೀಟರ್ ಪೆಟ್ರೋಲ್
ವೆರಿಯೆಂಟ್ ಹೊಸ ದರ ಹಳೆಯ ದರ
ರೂ. 9,81,890 -
ಇಎಕ್ಸ್ ರೂ. 10,60,900 ರೂ. 9,99,000
ಎಸ್ ರೂ. 11,83,900 ರೂ. 11,72,000
ಎಸ್ಎಕ್ಸ್ ರೂ. 13,57,900 ರೂ. 13,46,000
ಎಸ್ಎಕ್ಸ್ ಐವಿಟಿ ರೂ. 15,05,900 ರೂ. 14,94,000
ಎಸ್ಎಕ್ಸ್(ಒ) ಐವಿಟಿ ರೂ. 16,26,900 ರೂ. 16,15,000
1.4-ಲೀಟರ್ ಟರ್ಬೋ ಪೆಟ್ರೋಲ್
ಎಸ್ಎಕ್ಸ್ ಡಿಸಿಟಿ ರೂ. 16,27,900 ರೂ. 16,16,000
ಎಸ್ಎಕ್ಸ್(ಒ) ಡಿಸಿಟಿ ರೂ. 17,31,900 ರೂ. 17,20,000
1.5-ಲೀಟರ್ ಟರ್ಬೋ ಡೀಸೆಲ್
ರೂ. 9,99,000 ರೂ. 9,99,000
ಇಎಕ್ಸ್ ರೂ. 11,60,900 ರೂ. 11,49,000
ಎಸ್ ರೂ. 12,88,900 ರೂ. 12,77,000
ಎಸ್ಎಕ್ಸ್ ರೂ. 14,62,900 ರೂ. 14,51,000
ಎಸ್ಎಕ್ಸ್ (ಒ) ರೂ. 15,90,900 ರೂ. 15,79,000
ಎಸ್ಎಕ್ಸ್ ಎಟಿ ರೂ. 16,10,900 ರೂ. 15,99,000
ಎಸ್ಎಕ್ಸ್ (ಒ) ಎಟಿ ರೂ. 17,31,900 ರೂ. 17,20,000
ಕ್ರೆಟಾ ಎಸ್‌ಯುವಿ ಬೆಲೆ ಹೆಚ್ಚಳದೊಂದಿಗೆ ಹೊಸ ವೆರಿಯೆಂಟ್ ಬಿಡುಗಡೆ

ಬಿಎಸ್-6 ಎಂಜಿನ್ ಸೇರಿದಂತೆ ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಕ್ರೆಟಾ ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ. ಹಳೆಯ ತಲೆಮಾರಿನ ಆವೃತ್ತಿಗಿಂತಲೂ ಹೆಚ್ಚು ಬಲಿಷ್ಠ, ಪ್ರೀಮಿಯಂ ಫೀಚರ್ಸ್ ಮತ್ತು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವುದು ಮತ್ತಷ್ಟು ಗ್ರಾಹಕನ್ನು ಸೆಳೆಯುತ್ತಿದೆ.

ಕ್ರೆಟಾ ಎಸ್‌ಯುವಿ ಬೆಲೆ ಹೆಚ್ಚಳದೊಂದಿಗೆ ಹೊಸ ವೆರಿಯೆಂಟ್ ಬಿಡುಗಡೆ

ನ್ಯೂ ಜನರೇಷನ್ ಕ್ರೆಟಾ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು 6 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯ ಆಯ್ಕೆ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕ್ರೆಟಾ ಎಸ್‌ಯುವಿ ಬೆಲೆ ಹೆಚ್ಚಳದೊಂದಿಗೆ ಹೊಸ ವೆರಿಯೆಂಟ್ ಬಿಡುಗಡೆ

1.5-ಲೀಟರ್ ಪೆಟ್ರೋಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.5-ಲೀಟರ್ ಡೀಸೆಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಕ್ರೆಟಾ ಎಸ್‌ಯುವಿ ಬೆಲೆ ಹೆಚ್ಚಳದೊಂದಿಗೆ ಹೊಸ ವೆರಿಯೆಂಟ್ ಬಿಡುಗಡೆ

ಇದಲ್ಲದೆ ಹ್ಯುಂಡೈ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಕ್ರೆಟಾ ಕಾರಿನಲ್ಲಿ ಹೊಸದಾಗಿ 7 ಸೀಟರ್ ಮಾದರಿಯನ್ನು ಸಹ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಸಾಮಾನ್ಯ ಕಾರಿನ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಮೂರು ಸಾಲಿನ ಆಸನ ಸೌಲಭ್ಯವನ್ನು ಪಡೆದುಕೊಳ್ಳಲಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಕ್ರೆಟಾ ಎಸ್‌ಯುವಿ ಬೆಲೆ ಹೆಚ್ಚಳದೊಂದಿಗೆ ಹೊಸ ವೆರಿಯೆಂಟ್ ಬಿಡುಗಡೆ

2+3+2 ಆಸನ ಸೌಲಭ್ಯ ಪಡೆದುಕೊಳ್ಳಲಿರುವ 7 ಸೀಟರ್ ಕ್ರೆಟಾ ಮಾದರಿಯು ಸಾಮಾನ್ಯ ಕಾರಿನಲ್ಲಿರುವಂತೆಯೇ ಎಂಜಿನ್ ಆಯ್ಕೆ ಹೊಂದಿಲಿದ್ದು, ಹೊಸ ಕಾರು ತುಸು ದುಬಾರಿ ಬೆಲೆ ಹೊಂದಿರಲಿದೆ. ಮುಂಬರುವ ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಹೊಸ ಕಾರು ಬಿಡುಗಡೆಯಾಗಲಿದ್ದು, ದುಬಾರಿ ಬೆಲೆಯ ಎಂಪಿವಿ ಕಾರುಗಳಿಗೆ ಹೊಸ ಕಾರು ಪೈಪೋಟಿ ನೀಡಲಿದೆ.

Most Read Articles

Kannada
English summary
Hyundai Creta Gets A Price Hike And New Entry-Level Variant. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X