ದೀಪಾವಳಿ ಸಂಭ್ರಮಕ್ಕಾಗಿ ಸ್ಪೆಷಲ್ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಹ್ಯುಂಡೈ ಇಂಡಿಯಾ ಕಂಪನಿಯು ದೀಪಾವಳಿ ವಿಶೇಷತೆಗಾಗಿ ಸ್ಪೆಷಲ್ ಸರ್ವಿಸ್ ಕ್ಯಾಂಪ್ ಆಯೋಜಿಸಿದ್ದು, ಸ್ಪೆಷಲ್ ಸರ್ವಿಸ್ ಕ್ಯಾಂಪ್‌ನಲ್ಲಿ ಹ್ಯುಂಡೈ ವಿವಿಧ ಕಾರು ಮಾದರಿಗಳಿಗಾಗಿ ಆಕರ್ಷಕ ದರಗಳಲ್ಲಿ ಬಿಡಿಭಾಗಗಳ ಸೇವೆಗಳನ್ನು ಒದಗಿಸಲಾಗುತ್ತಿದೆ.

ದೀಪಾವಳಿ ಸಂಭ್ರಮಕ್ಕಾಗಿ ಹ್ಯುಂಡೈನಿಂದ ಸ್ಪೆಷಲ್ ಸರ್ವಿಸ್ ಕ್ಯಾಂಪ್

ಹ್ಯುಂಡೈ ಸ್ಪೆಷಲ್ ಸರ್ವಿಸ್ ಕ್ಯಾಂಪ್ ಇದೇ ತಿಂಗಳು 6ರಿಂದಲೇ ಆರಂಭವಾಗಿದ್ದು, 12ರ ತನಕ ಸ್ಪೆಷಲ್ ಸರ್ವಿಸ್ ಕ್ಯಾಂಪ್ ತೆರೆದಿರುತ್ತದೆ. ಸರ್ವಿಸ್ ಕ್ಯಾಂಪ್‌ನಲ್ಲಿ ದೀಪಾವಳಿ ವಿಶೇಷತೆಗಾಗಿ ವಿವಿಧ ಬಿಡಿಭಾಗಗಳು ಮತ್ತು ಸೇವಾ ಶುಲ್ಕದ ಮೇಲೆ ರಿಯಾಯ್ತಿ ಲಭ್ಯವಿದೆ. ಸರ್ವಿಸ್ ಕ್ಯಾಂಪ್‌ನಲ್ಲಿ ವಿವಿಧ ಬಿಡಿಭಾಗಗಳ ಸೇವೆಗಳು ರೂ. 263 ರಿಂದ ಆರಂಭವಾಗಲಿದ್ದು, ಕಾರ್ ವಾರಂಟಿ ಸೌಲಭ್ಯಗಳನ್ನು ಹೊರತುಪಡಿಸಿ ಈ ಸೇವೆಗಳನ್ನು ಒದಗಿಸಲಾಗುತ್ತಿದೆ.

ದೀಪಾವಳಿ ಸಂಭ್ರಮಕ್ಕಾಗಿ ಹ್ಯುಂಡೈನಿಂದ ಸ್ಪೆಷಲ್ ಸರ್ವಿಸ್ ಕ್ಯಾಂಪ್

ಇದರ ಜೊತೆಗೆ 360 ಡಿಗ್ರಿ ಕಂಟ್ಯಾಕ್ಟ್‌ಲೆಸ್ ಸರ್ವಿಸ್ ಕೂಡಾ ಲಭ್ಯವಿದ್ದು, ಆನ್‌ಲೈನ್ ಮೂಲಕ ಸರ್ವಿಸ್‌ಗಾಗಿ ಬುಕ್ಕಿಂಗ್ ಮಾಡಬಹುದಾಗಿದೆ. ಇದರಲ್ಲಿ ಪಿಕ್‌ಅಪ್ ಆ್ಯಂಡ್ ಡ್ರಾಪ್ ಆಯ್ಕೆಯಿದ್ದು, ಕರೋನಾ ವೈರಸ್ ಪರಿಣಾಮ ಹೆಚ್ಚಿನ ಸುರಕ್ಷತೆಗಾಗಿ ಕಂಟ್ಯಾಕ್ಟ್‌ಲೆಸ್ ಸರ್ವಿಸ್ ಸೇವೆಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ.

ದೀಪಾವಳಿ ಸಂಭ್ರಮಕ್ಕಾಗಿ ಹ್ಯುಂಡೈನಿಂದ ಸ್ಪೆಷಲ್ ಸರ್ವಿಸ್ ಕ್ಯಾಂಪ್

ಕಂಟ್ಯಾಕ್ಟ್‌ಲೆಸ್ ಸರ್ವಿಸ್‌ನಿಂದಾಗಿ ಗ್ರಾಹಕರ ಮನೆ ಬಾಗಿಲಿಗೆ ಗ್ರಾಹಕರ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಅಗತ್ಯ ಸಂದರ್ಭಗಳಲ್ಲಿ ಮಾತ್ರವೇ ಗ್ರಾಹಕರ ಕಾರುಗಳನ್ನು ಸರ್ವಿಸ್ ಸೆಂಟರ್‌ಗಳಿಗೆ ತೆಗೆದುಕೊಂಡ ಬರಲಾಗುತ್ತದೆ.

ದೀಪಾವಳಿ ಸಂಭ್ರಮಕ್ಕಾಗಿ ಹ್ಯುಂಡೈನಿಂದ ಸ್ಪೆಷಲ್ ಸರ್ವಿಸ್ ಕ್ಯಾಂಪ್

ಇನ್ನುಳಿದ ಸಂದರ್ಭಗಳಲ್ಲಿ ಗ್ರಾಹಕರ ಮನೆಬಾಗಿಲು ಬಳಿಯಲ್ಲೇ ನುರಿತ ಸಿಬ್ಬಂದಿ ತಂಡದೊಂದಿಗೆ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಸರ್ವಿಸ್ ನಂತರ ಸ್ಯಾನಿಟೈಜ್ ಮಾಡಿಯೇ ಕಾರ್ ಕೀ ಹಸ್ತಾಂತರ ಮಾಡಲಾಗುತ್ತದೆ. ಇದರಿಂದ ಗ್ರಾಹಕರಿಗೆ ಮಾತ್ರವಲ್ಲ ಸರ್ವಿಸ್ ಸಿಬ್ಬಂದಿಯ ಆರೋಗ್ಯ ದೃಷ್ಠಿಯಿಂದಲೂ ಉತ್ತಮ ಕ್ರಮವಾಗಿದ್ದು, ಸರ್ವಿಸ್ ಸೆಂಟರ್‌ಗಳಲ್ಲಿ ಗ್ರಾಹಕರ ನೇರ ಭೇಟಿಯನ್ನು ತಡೆಯಲು ಈ ಹೊಸ ಕ್ರಮ ಸಾಕಷ್ಟು ಸಹಕಾರಿಯಾಗಿದೆ.

ದೀಪಾವಳಿ ಸಂಭ್ರಮಕ್ಕಾಗಿ ಹ್ಯುಂಡೈನಿಂದ ಸ್ಪೆಷಲ್ ಸರ್ವಿಸ್ ಕ್ಯಾಂಪ್

ಇನ್ನು ದೀಪಾವಳಿ ವಿಶೇಷತೆಗಾಗಿ ವಿವಿಧ ಆಟೋ ಕಂಪನಿಗಳು ಹಲವಾರು ಆಫರ್‌ಗಳೊಂದಿಗೆ ವಾಹನ ಮಾರಾಟವನ್ನು ಹೆಚ್ಚಿಸುತ್ತಿದ್ದು, ಹ್ಯುಂಡೈ ಕೂಡಾ ಆಕರ್ಷಕ ಆಫರ್‌ಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ದೀಪಾವಳಿ ಸಂಭ್ರಮಕ್ಕಾಗಿ ಹ್ಯುಂಡೈನಿಂದ ಸ್ಪೆಷಲ್ ಸರ್ವಿಸ್ ಕ್ಯಾಂಪ್

ಕಳೆದ ತಿಂಗಳು ಅಕ್ಟೋಬರ್ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯು ಒಟ್ಟು 68,835 ಯುನಿಟ್‌ ಕಾರುಗಳನ್ನು ಮಾರಾಟಗೊಳಿಸಿದ್ದು, ಇದರಲ್ಲಿ 56,605 ಯುನಿಟ್‌ ದೇಶಿಯ ಮಾರುಕಟ್ಟೆಯಲ್ಲಿ 12,230 ಯುನಿಟ್ ಕಾರುಗಳನ್ನು ವಿದೇಶಿ ಮಾರುಕಟ್ಟೆಗೆ ರಫ್ತು ಮಾಡಿದೆ.

ದೀಪಾವಳಿ ಸಂಭ್ರಮಕ್ಕಾಗಿ ಹ್ಯುಂಡೈನಿಂದ ಸ್ಪೆಷಲ್ ಸರ್ವಿಸ್ ಕ್ಯಾಂಪ್

ಕಳೆದ ವರ್ಷದ ಅಕ್ಟೋಬರ್ ತಿಂಗಳ ಒಟ್ಟು ಮಾರಾಟವನ್ನು ಈ ವರ್ಷದ ಅದೇ ಅವಧಿಗೆ ಹೋಲಿಸಿದರೆ ಶೇ.13.2 ರಷ್ಟು ಬೆಳವಣಿಗೆಯನ್ನು ಸಾಧಿಸಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಐ20 ಕಾರು ಮತ್ತಷ್ಟು ಬೇಡಿಕೆ ಗಿಟ್ಟಿಸಿಕೊಳ್ಳುವ ತವಕದಲ್ಲಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ದೀಪಾವಳಿ ಸಂಭ್ರಮಕ್ಕಾಗಿ ಹ್ಯುಂಡೈನಿಂದ ಸ್ಪೆಷಲ್ ಸರ್ವಿಸ್ ಕ್ಯಾಂಪ್

ಹೊಸ ಐ20 ಕಾರು ಪ್ರಮುಖ ಮೂರು ಎಂಜಿನ್ ಮಾದರಿಗಳೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.79 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ. 11.17 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

Most Read Articles

Kannada
English summary
Hyundai Pre-Diwali Service Camp Introduced Across India. Read in Kannada.
Story first published: Wednesday, November 11, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X