ಬಿಡುಗಡೆಯಾಗಲಿದೆ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿ

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ತನ್ನ 2021ರ ಎಕ್ಸ್-ಟ್ರಯಲ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿಯ ಚಿತ್ರಗಳು ಅಂತರ್ಜಾಲದಲ್ಲಿ ಬಹಿರಂಗವಾಗಿದೆ.

ಬಿಡುಗಡೆಯಾಗಲಿದೆ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿ

2021ರ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿಯು ಇದರ ಹಿಂದಿನ ಮಾದರಿಗೆ ಹೋಲುತ್ತದೆ. ಆದರೆ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿಯು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ನಿಸ್ಸಾನ್ ವಿಷನ್ 2.0 ಕಾನ್ಸೆಪ್ಟ್‌ ಎಸ್‍ಯುವಿ ಮಾದರಿಯ ವಿ-ಮೋಷನ್ ಗ್ರಿಲ್ ಅನ್ನು ಎಕ್ಸ್-ಟ್ರಯಲ್ ಎಸ್‍ಯುವಿಯು ಹೊಂದಿರಲಿದೆ. ನಿಸ್ಸಾನ್ ವಿಷನ್ 2.0 ಕಾನ್ಸೆಪ್ಟ್‌ ಎಸ್‍ಯುವಿ ಮಾದರಿಯ ವಿನ್ಯಾಸವು ಇತರ ನಿಸ್ಸಾನ್ ಜೂಕ್, ಲಿವಿನಾ ಮತ್ತು ಸಿಲ್ಫಿ ಎಸ್‍ಯುವಿಗಳಿಗೆ ಪ್ರೇರಣೆಯಾಗಿದೆ.

ಬಿಡುಗಡೆಯಾಗಲಿದೆ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿ

ಹೊಸ ಎಕ್ಸ್ ಟ್ರಯಲ್ ಮಾದರಿಯು ಮುಂಭಾಗದಲ್ಲಿ ಮರುವಿನ್ಯಾಸಗೊಳಿಸಿದ ಬಂಪರ್ ಅನ್ನು ಹೊಂದಿದೆ. ಈ ಹೊಸ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗ ಏರ್‍‍ಡ್ಯಾಮ್ ಮತ್ತು ಸ್ಕಫ್ ಪ್ಲೇಟ್ ಅನ್ನು ಹೊಂದಿದೆ. ಹೊಸ ತಲೆಮಾರಿನ ಎಕ್ಸ್-ಟ್ರಯಲ್ ಎಸ್‍ಯುವಿಯ ಹಿಂಭಾಗವು ಮಾರುಕಟ್ಟೆಯಲ್ಲಿರುವ ಮಾದರಿಯಂತೆ ಇರುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಬಿಡುಗಡೆಯಾಗಲಿದೆ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿ

ನಿಸ್ಸಾನ್ ಇಂಟಿರಿಯರ್ ನಲ್ಲಿ ಡ್ರೈವರ್ ಫಂಕ್ಷನ್ ಬಟನ್‌ಗಳೊಂದಿಗೆ ಹೊಸ ಸ್ಟೀಯರಿಂಗ್ ವ್ಹೀಲ್ಮತ್ತು ಫ್ಲೋಟಿಂಗ್ ಟೈಪ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ, ಈ ಇನ್ಫೋಟೈನ್‍ಮೆಂಟ್ ಸಿಸ್ಟಂ ನಲ್ಲಿ ಆಪಲ್ ಕಾರ್‍‍ಪ್ಲೇ ಮತ್ತು ಅಂಡ್ರಾಯ್ಡ್ ಆಟೋ ಹೋಂದಾಣಿಯಾಗಿದೆ. ಇದರೊಂದಿಗೆ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಕಾಂಪ್ಯಾಕ್ಟ್ ಕ್ಲೈಮೇಂಟ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿ

ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿಯಲ್ಲಿ ಗ್ರಾಹಕರ ಸುರಕ್ಷತೆಗಾಗಿ ಹಲವಾರು ಫೀಚರ್‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಎಬಿಎಸ್ ಜೊತೆ ಇಬಿಡಿ, ಮಲ್ಟಿಪಲ್ ಏರ್‌ಬ್ಯಾಗ್, ಸೀಟ್ ಬೆಲ್ಟ್ ಅಲಾರ್ಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಲೇನ್-ಅಸಿಸ್ಟ್ ಸಿಸ್ಟಂ, ಮುಂಭಾಗ ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸರ್‌ಗಳು, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಇಮೊಬೈಲೈಸರ್ ಅನ್ನು ಒಳಗೊಂಡಿರುತ್ತದೆ.

MOST READ: ಬೆಂಗಳೂರಿನಲ್ಲಿ ತುರ್ತು ಸೇವೆ ಆರಂಭಿಸಿದ ಓಲಾ, ಉಬರ್

ಬಿಡುಗಡೆಯಾಗಲಿದೆ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ನಿಸ್ಸಾನ್ ಟ್ರಯಲ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿರಲಿದೆ. ಭಾರತದಲ್ಲಿ ಯಾವ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿಯು ಇನ್ನು ಬಹಿರಂಗವಾಗಿಲ್ಲ.

ಬಿಡುಗಡೆಯಾಗಲಿದೆ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿ

ನಿಸ್ಸಾನ್ ಕಂಪನಿಯು ಈ ವರ್ಷ ಇತರ ಮಾದರಿಯನ್ನು ಬಿಡುಗಡೆಗೊಳಿಸಬಹುದು. 2021ರ ಎಕ್ಸ್-ಟ್ರಯಲ್ ಎಸ್‍ಯುವಿಯನ್ನು ಈ ವರ್ಷದ ಕೊನೆಯಲ್ಲಿ ಅನಾವಾರಣಗೊಳಿಸಬಹುದು.

MOST READ: ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245

ಬಿಡುಗಡೆಯಾಗಲಿದೆ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿ

ನಿಸ್ಸಾನ್ ಕಂಪನಿಯು ಕಿಕ್ಸ್‌ನ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ. ಈ ಕಾರಿನ ಇ-ಪವರ್ ಹೈಬ್ರಿಡ್ ಆವೃತ್ತಿಯನ್ನು ಈ ವರ್ಷ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಮಾಹಿತಿಗಳ ಪ್ರಕಾರ, ಕಿಕ್ಸ್‌ ಕಾರಿನ ಫೇಸ್ ಲಿಫ್ಟ್ ಆವೃತ್ತಿಯಾಗಿ ಇ-ಪವರ್ ಹೈಬ್ರಿಡ್ ಅನ್ನು ಬಿಡುಗಡೆಗೊಳಿಸಲಾಗುವುದು.

ಬಿಡುಗಡೆಯಾಗಲಿದೆ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿ

2021ರ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಎಸ್‌ಯುವಿಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿರುವುದರಿಂದ ಸ್ಪರ್ಧಾತ್ಮಕವಾಗಿ ಬೆಲೆಯನ್ನು ನಿಗದಿಪಡಿಸಬಹುದು. ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‍ಯುವಿಯು ಬಿಡುಗಡೆಯಾದ ಬಳಿಕ ಟಿಗ್ವಾನ್ ಆಲ್‍ಸ್ಪೇಸ್ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ.

Article Published On: Saturday, April 18, 2020, 15:45 [IST]
English summary
Nissan X-Trail 2021 Model Prepped To Take On Volkswagen’s Tiguan Allspace. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+