Just In
Don't Miss!
- News
ಎಂಇಎಸ್, ಉದ್ಧಟವ್ ಠಾಕ್ರೆ ಇಷ್ಟು ಬೆಳೆಯಲು ಕಾರಣ ಬಿಜೆಪಿಯ ಸಲುಗೆ
- Sports
ಅಡಿಲೇಡ್ ಸೋಲಿನ ನಂತರ ಗೆಲುವಿನ ಹಾದಿ ಹಿಡಿದ ರೋಚಕ ಸಂಗತಿ ವಿವರಿಸಿದ ಹನುಮ ವಿಹಾರಿ
- Movies
Breaking: ನಟಿ ರಾಗಿಣಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
- Finance
ಕಾನ್ ಸ್ಟೇಬಲ್ ಡೆಬಿಟ್ ಕಾರ್ಡ್ ನಿಂದ 40 ಸಾವಿರ ರು. ಎಗರಿಸಿದ ದುಷ್ಕರ್ಮಿ
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಪ್ರತಿ ನಿಮಿಷಕ್ಕೆ ಉತ್ಪಾದನೆಗೊಳ್ಳುವ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ?
ಮೇಕ್ ಇನ್ ಇಂಡಿಯಾ ಅಭಿಯಾನದ ನಂತರ ದೇಶಿಯ ಮಾರುಕಟ್ಟೆಯಲ್ಲಿನ ವಾಹನ ಉತ್ಪಾದನಾ ಪ್ರಮಾಣವು ಸಾಕಷ್ಟು ಏರಿಕೆಯಾಗಿದ್ದು, ವಿಶ್ವದ ಪ್ರಮುಖ ರಾಷ್ಟ್ರಗಳನ್ನು ಹಿಂದಿಕ್ಕಿರುವ ಭಾರತವು ಸದ್ಯ ಐದನೇ ಅತಿ ದೊಡ್ಡ ಕಾರು ಉತ್ಪಾದನಾ ರಾಷ್ಟ್ರವಾಗಿ ಹೊರಹೊಮ್ಮಿದೆ.

ವಿಶ್ವಾದ್ಯಂತ ಪ್ರತಿವರ್ಷ ಸುಮಾರು 100 ಮಿಲಿಯನ್‌ಗೂ ಹೆಚ್ಟು ಕಾರುಗಳನ್ನು ಉತ್ಪಾದಿಸುವ ವಿವಿಧ ಕಾರು ಕಂಪನಿಗಳು ಭಾರತದಲ್ಲೂ ಭಾರೀ ಪ್ರಮಾಣದ ಉತ್ಪಾದನೆಯನ್ನು ಕೈಗೊಳ್ಳುತ್ತಿದ್ದು, ಪ್ರತಿ ನಿಮಿಷದ ಆಧಾರದ ಮೇಲೆ ಕಾರು ಉತ್ಪಾದನೆಯಲ್ಲಿ ಮೊದಲ ಸ್ಥಾನವನ್ನು ಚೀನಾ ತನ್ನದಾಗಿಸಿಕೊಂಡಿದೆ. ತದನಂತರ ಯುಎಸ್ಎ, ಜಪಾನ್, ಜರ್ಮನಿ ಮತ್ತು ಐದನೇ ಸ್ಥಾನದಲ್ಲಿ ಭಾರತವು ಅತಿದೊಡ್ಡಕಾರು ಉತ್ಪಾದನಾ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಭಾರತದಲ್ಲಿ ಪ್ರತಿ ನಿಮಿಷಕ್ಕೆ ಸರಾಸರಿಯಾಗಿ 8.6 ಕಾರುಗಳು ಉತ್ಪಾದನೆಗೊಳ್ಳುತ್ತವೆ.

ಚೀನಾದಲ್ಲಿ ಪ್ರತಿ ನಿಮಿಷಕ್ಕೆ 48.9, ಯುಎಸ್ಎನಲ್ಲಿ ಪ್ರತಿ ನಿಮಿಷಕ್ಕೆ 20.7, ಜಪಾನ್‌ನಲ್ಲಿ 18.4, ಜರ್ಮನಿಯಲ್ಲಿ 8.9 ಮತ್ತು ಭಾರತದಲ್ಲಿ 8.6 ಕಾರುಗಳ ಉತ್ಪಾದನೆ ಮೂಲಕ ಐದನೇ ಸ್ಥಾನದಲ್ಲಿದ್ದು, ತದನಂತರದಲ್ಲಿ ಮೆಕ್ಸಿಕೊ, ದಕ್ಷಿಣ ಕೊರಿಯಾ, ಬ್ರೆಜಿಲ್, ಸ್ಪೆನ್, ಫ್ರಾನ್ಸ್ ರಾಷ್ಟ್ರಗಳು ಸ್ಥಾನ ಹೊಂದಿವೆ.

ಜಗತ್ತಿನ ಅರ್ಧಕ್ಕೂ ಹೆಚ್ಚು ಹೊಸ ವಾಹನಗಳ ಉತ್ಪಾದನೆಯನ್ನು ಹೊಂದಿರುವ ಚೀನಾ ಆಟೋ ಉದ್ಯಮದಲ್ಲಿ ಮುಂಚೂಣಿ ಹೊಂದಿದ್ದು, ಪ್ರತಿ ನಿಮಿಷಕ್ಕೆ ಅತಿ ಹೆಚ್ಚು ಕಾರುಗಳನ್ನು ಉತ್ಪಾದನೆ ಮಾಡುವ ಆಟೋ ಕಂಪನಿಗಳ ಪೈಕಿ ಟೊಯೊಟಾ ಮೋಟಾರ್ಸ್ ಅಗ್ರಸ್ಥಾನದಲ್ಲಿದೆ.

ಜಪಾನ್ ಆಟೋ ಉತ್ಪಾದನಾ ಕಂಪನಿಯಾಗಿರುವ ಟೊಯೊಟಾ ಕಂಪನಿಯು ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳಲ್ಲಿ ಹತ್ತಾರು ಉತ್ಪಾದನಾ ಘಟಕಗಳ ಮೂಲಕ ಪ್ರತಿ ನಿಮಿಷಕ್ಕೆ 19.9 ಕಾರುಗಳನ್ನು ಉತ್ಪಾದಿಸುವ ಮೂಲಕ ವಿಶ್ವದ ನಂ.1 ಕಾರು ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮಿದೆ. ತದನಂತರದ ಸ್ಥಾನದಲ್ಲಿರುವ ಫೋಕ್ಸ್‌ವ್ಯಾಗನ್ ಗ್ರೂಪ್ಸ್ ಕಂಪನಿಯು ಪ್ರತಿ ನಿಮಿಷಕ್ಕೆ 19.8 ಕಾರುಗಳನ್ನು ಉತ್ಪಾದಿಸುತ್ತಿದ್ದು, ಟೊಯೊಟಾ ಕಂಪನಿಯೊಂದಿಗೆ ನೇರ ಪೈಪೋಟಿ ಹೊಂದಿದೆ.

ತದನಂತರದ ಸ್ಥಾನದಲ್ಲಿ ಹ್ಯುಂಡೈ ಪ್ರತಿ ನಿಮಿಷಕ್ಕೆ 13.7, ಜನರಲ್ ಮೋಟಾರ್ಸ್ ಪ್ರತಿ ನಿಮಿಷಕ್ಕೆ 13.0, ಫೋರ್ಡ್ ಪ್ರತಿ ನಿಮಿಷಕ್ಕೆ 12.2, ನಿಸ್ಸಾನ್ ಪ್ರತಿ ನಿಮಿಷಕ್ಕೆ 11.0, ಹೋಂಡಾ ಪ್ರತಿ ನಿಮಿಷಕ್ಕೆ 10.0, ಎಫ್‌ಸಿಎ ಪ್ರತಿ ನಿಮಿಷಕ್ಕೆ 8.8, ರೆನಾಲ್ಟ್ ಪ್ರತಿ ನಿಮಿಷಕ್ಕೆ 7.9, ಪಿಎಸ್ಎ ಪ್ರತಿ ನಿಮಿಷಕ್ಕೆ 6.9, ಸುಜುಕಿ ಪ್ರತಿ ನಿಮಿಷಕ್ಕೆ 6.3 ಕಾರುಗಳನ್ನು ಉತ್ಪಾದನೆ ಮಾಡುತ್ತಿವೆ.

ಕಾರು ಉತ್ಪಾದನೆ ಮೂಲಕ ಅತಿಹೆಚ್ಚು ಲಾಭದಲ್ಲಿರುವ ಕಂಪನಿಗಳ ಪೈಕಿ ಟೊಯೊಟಾ ಕೂಡಾ ನಂ.1 ಸ್ಥಾನದಲ್ಲಿದ್ದು, ತದನಂತರ ಫೋಕ್ಸ್‌ವ್ಯಾಗನ್, ಡೈಮ್ಲರ್, ಫೋರ್ಡ್, ಹೋಂಡಾ, ಜನರಲ್ ಮೋಟಾರ್, ಸೈಕ್, ಎಫ್‌ಸಿಎ, ಬಿಎಂಡಬ್ಲ್ಯು, ನಿಸ್ಸಾನ್, ಹ್ಯುಂಡೈ, ಫ್ಯೂಜೊ ಕಂಪನಿಗಳು ಟಾಪ್ 12ರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಾರು ಉತ್ಪಾದನಾ ಕಂಪನಿಗಳ ಪೈಕಿ ಟೊಯೊಟಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ವಿಶ್ವದಲ್ಲಿ ಅರ್ಧಕ್ಕೂ ಹೆಚ್ಚು ವಾಹನ ಮಾರಾಟ ಪಾಲನ್ನು ತಮ್ಮದಾಗಿಸಿಕೊಂಡಿದ್ದು, ಭಾರತದಲ್ಲಿ ಮಾತ್ರ ಮಾರುತಿ ಸುಜುಕಿ ಕಂಪನಿಯು ಸದ್ಯ ಅಗ್ರಸ್ಥಾನದಲ್ಲಿದೆ.

ಭಾರತದಲ್ಲಿ ಕಾರು ಉತ್ಪಾದನಾ ಕಂಪನಿಗಳ ಪೈಕಿ ಮಾರುತಿ ಸುಜುಕಿ ನಂತರ ಹ್ಯುಂಡೈ, ಟಾಟಾ ಮೋಟಾರ್ಸ್, ಕಿಯಾ ಮೋಟಾರ್ಸ್, ಮಹೀಂದ್ರಾ, ಟೊಯೊಟಾ, ಹೋಂಡಾ, ಫೋರ್ಡ್, ರೆನಾಲ್ಟ್, ನಿಸ್ಸಾನ್ ಕಂಪನಿಗಳು ಸ್ಥಾನ ಪಡೆದುಕೊಂಡಿದ್ದು, ಉತ್ಪಾದನೆ ಮತ್ತು ಮಾರಾಟ ಎರಡು ವಿಭಾಗದಲ್ಲೂ ಮಾರುತಿ ಸುಜುಕಿ ಅಗ್ರಸ್ಥಾನದಲ್ಲಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಈ ವರ್ಷದ ಕರೋನಾ ಸಂಕಷ್ಟದಲ್ಲೂ ಹೊಸ ಕಾರುಗಳ ಉತ್ಪಾದನೆಯು ಸಾಕಷ್ಟು ಹೆಚ್ಚಳವಾಗಿದ್ದು, ಭಾರತದಿಂದ ಕಾರುಗಳ ರಫ್ತು ಪ್ರಮಾಣದಲ್ಲೂ ಸಾಕಷ್ಟು ಏರಿಕೆಯಾಗುವು ಮೂಲಕ ಆರ್ಥಿಕ ಚೇತರಿಕೆ ಪ್ರಮುಖ ಪಾಲು ಹೊಂದಿದೆ.