ದುಬಾರಿ ಬೆಲೆಯ ಕಾರು ಖರೀದಿಸಿದ ಜಾಹ್ನವಿ ಕಪೂರ್
1980 ಹಾಗೂ 1990ರ ದಶಕದಲ್ಲಿ ನಟಿ ಶ್ರೀದೇವಿರವರು ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದರು. ಈಗ ಅವರ ಪುತ್ರಿ ಜಾಹ್ನವಿ ಕಪೂರ್‍ರವರೂ ಸಹ ಅದೇ ಹಾದಿಯಲ್ಲಿದ್ದಾರೆ.

ಜಾಹ್ನವಿ ಕಪೂರ್‍ರವರು ಈಗಾಗಲೇ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿ ಶ್ರೀದೇವಿರವರ ಪುತ್ರಿ ಎಂಬ ಕಾರಣಕ್ಕೆ ಅಭಿಮಾನಿಗಳು ಜಾಹ್ನವಿ ಕಪೂರ್‍ರವರ ಮೇಲೆ ಭಾರೀ ನಿರೀಕ್ಷೆಯನ್ನಿಟ್ಟು ಕೊಂಡಿದ್ದಾರೆ. ತಮ್ಮ ಮೊದಲ ಚಿತ್ರದಲ್ಲಿಯೇ ಜಾಹ್ನವಿ ಕಪೂರ್ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ.

ಅವರ ಮೊದಲ ಚಿತ್ರ ಮರಾಠಿಯ ಸೈರಾಟ್ ಚಿತ್ರದ ಹಿಂದಿ ರಿಮೇಕ್ ಆದ ದಢಕ್. ಜಾಹ್ನವಿ ಕಪೂರ್‍ರವರು ದಕ್ಷಿಣ ಭಾರತದ ಚಿತ್ರಗಳಲ್ಲಿಯೂ ನಟಿಸುತ್ತಾರೆ ಎಂಬ ಬಗ್ಗೆ ವರದಿಗಳಾಗಿವೆ. ವಿಜಯ್ ದೇವರಕೊಂಡ ನಟಿಸಲಿರುವ ಈ ಚಿತ್ರವು ತೆಲುಗು ಹಾಗೂ ಹಿಂದಿಯಲ್ಲಿ ತಯಾರಾಗಲಿದೆ.

ಈ ಚಿತ್ರವನ್ನು ಕರಣ್ ಜೋಹರ್ ಹಾಗೂ ಪುರಿ ಜಗನ್ನಾಥ್ ಜಂಟಿಯಾಗಿ ನಿರ್ಮಿಸಲಿದ್ದಾರೆ. ವಿಜಯ್ ದೇವರಕೊಂಡ ಈ ಚಿತ್ರದಲ್ಲಿ ನಟಿಸುವುದನ್ನು ಖಚಿತಪಡಿಸಿದ್ದಾರೆ. ಇನ್ನು ಜಾಹ್ನವಿ ಕಪೂರ್‍ರವರ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇವುಗಳ ಜೊತೆಗೆ ಜಾಹ್ನವಿ ಕಪೂರ್‍ರವರು ರೂಹಿ ಅಫ್ಜಾ, ದೊಸ್ತಾನಾ 2 ಚಿತ್ರಗಳ ಜೊತೆಗೆ ನೆಟ್‍ಫ್ಲಿಕ್ಸ್ ಸರಣಿಯ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಇಷ್ಟೆಲ್ಲಾ ಬಿಜಿ ಶೆಡ್ಯೂಲ್‍ನ ನಡುವೆ ಜಾಹ್ನವಿ ಕಪೂರ್‍ರವರು ಹೊಸ ವರ್ಷಚಾರಣೆಯ ಸಂಭ್ರಮಕ್ಕಾಗಿ ಹೊಸ ಮರ್ಸಿಡಿಸ್ ಬೆಂಝ್ ಐಷಾರಾಮಿ ಕಾರ್ ಅನ್ನು ಖರೀದಿಸಿದ್ದಾರೆ.

ಜಾಹ್ನವಿ ಕಪೂರ್‍ರವರು ತಮ್ಮ ಹೊಸ ಕಾರಿನ ಜೊತೆಗಿರುವ ಫೋಟೊವನ್ನು ಯೋಹಾನ್ ಶಾರವರು ತಮ್ಮ ಇನ್ಸ್ ಟಾಗ್ರಾಂ ಖಾತೆಯಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಈ ಫೋಟೊವನ್ನು ನೋಡಿದ ನಂತರ ಜಾಹ್ನವಿ ಕಪೂರ್‍ರವರು ಖರೀದಿಸಿರುವ ಕಾರು ಮರ್ಸಿಡಿಸ್ ಬೆಂಝ್ ಜಿಎಲ್‍ಸಿ ಎಂದು ಕಂಡು ಬರುತ್ತದೆ.

ಜಿಎಲ್‍ಸಿ ಕಾರು ಮರ್ಸಿಡಿಸ್ ಬೆಂಝ್ ಕಂಪನಿಯ ಅತ್ಯಾಧುನಿಕ ಕಾರ್ ಆಗಿದೆ. ಈ ಕಾರ್ ಅನ್ನು ಕಳೆದ ವರ್ಷದ ಮಾರ್ಚ್‍ನಲ್ಲಿ ಜಿನಿವಾದಲ್ಲಿ ನಡೆದ ಆಟೋ ಶೋದಲ್ಲಿ ಅನಾವರಣಗೊಳಿಸಲಾಗಿತ್ತು. ಈ ಕಾರ್ ಅನ್ನು 2018ರ ಡಿಸೆಂಬರ್ 3ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಹಲವಾರು ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಜಿಎಲ್‍ಸಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.55 ಲಕ್ಷಗಳಿಂದ ರೂ.60 ಲಕ್ಷಗಳಾಗಿದೆ. ಈ ಕಾರಿನಲ್ಲಿ 2.0 ಲೀಟರಿನ ಬಿಎಸ್ 6 ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.
ಈ ಕಾರ್ ಅನ್ನು ಬಿಎಸ್ 6 ಪೆಟ್ರೋಲ್ ಎಂಜಿನ್‍ನೊಂದಿಗೂ ಸಹ ಮಾರಾಟ ಮಾಡಲಾಗುತ್ತದೆ. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್, ಬಿಎಂಡಬ್ಲ್ಯು ಎಕ್ಸ್ 3 ಹಾಗೂ ವೋಲ್ವೊ ಎಕ್ಸ್ ಸಿ 60 ಕಾರುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








