ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್

ಜೀಪ್ ಇಂಡಿಯಾ ಕಂಪನಿಯು ತನ್ನ ಕಂಪಾಸ್ ಎಸ್‍ಯುವಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆವೃತ್ತಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದೆ. ಹೊಸ ಬಿಎಸ್-6 ಎಂಜಿನ್ ಹೊಂದಿರುವ ಜೀಪ್ ಕಂಪಾಸ್ ಎಸ್‍‍ಯುವಿಗಳ ಬೆಲೆಗಳು ಇನ್ನೂ ಕೂಡ ಬಹಿರಂಗಗೊಂಡಿಲ್ಲ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್

ಎಫ್‍‍ಸಿಎ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಪರ್ಥಾ ದತ್ತಾರವರು ಮಾತನಾಡಿ, ಪ್ರೀಮಿಯಂ ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟ್‍‍ನಲ್ಲಿ ಬಿಎಸ್-6 ಎಂಜಿನ್ ಅನ್ನು ನಾವೇ ಮೊದಲು ಬಿಡುಗಡೆಗೊಳಿಸಿದ್ದು. ಎಂಟು ತಿಂಗಳ ಬಳಿಕ ನಮ್ಮ ಜೀಪ್ ಕಂಪಾಸ್ ಸರಣಿಯಲ್ಲಿರುವ ಎಲ್ಲಾ ಎಸ್‍ಯುವಿಗಳು ಬಿಎಸ್-6 ಎಂಜಿನ್ ಹೊಂದಿವೆ ಎಂದು ಹೇಳಿದರು.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್

ನಮ್ಮ ಪೆಟ್ರೋಲ್ ಮತ್ತು ಡೀಸೆಲ್ ಎಂಜಿ‍‍ನ್‍‍ಗಳೆರಡರಲ್ಲೂ ಗಮನಾರ್ಹವಾದ ತಾಂತ್ರಿಕ ಸುಧಾರಣೆಗಳಾಗಿರುವುದರಿಂದ ಬೆಲೆಯನ್ನು ಹೆಚ್ಚಿಸಲಾಗಿದೆ. ಇದರೊಂದಿಗೆ ಕೆಲವು ಹೊಸ ಉಪಕರಣಗಳನ್ನು ಅಳವಡಿಸಿದ್ದೇವೆ ಎಂದು ಹೇಳಿದರು.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್

ಹೊಸ ಬಿಎಸ್-6 ಜೀಪ್ ಕಂಪಾಸ್ ಎಸ್‍‍ಯುವಿಗಳು ಮತ್ತಷ್ಟು ದುಬಾರಿಯಾಗಿವೆ. ಹೊಸ ಬಿಎಸ್-6 ಜೀಪ್ ಕಂಪಾಸ್ ಪೆಟ್ರೋಲ್ ಆವೃತ್ತಿಯ ಬೆಲೆಯನ್ನು ರೂ.25 ಸಾವಿರ ಮತ್ತು ಡೀಸೆಲ್ ಆವೃತ್ತಿಯ ಬೆಲೆಯನ್ನು ರೂ.1.1 ಲಕ್ಷಗಳಷ್ಟು ಹೆಚ್ಚಿಸಲಾಗಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್

ಹೊಸ ಜೀಪ್ ಕಂಪಾಸ್ ಎಸ್‍‍ಯುವಿಯಲ್ಲಿ ಕ್ರೂಸ್ ಕಂಟ್ರೋಲ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಅಲ್ಲದೇ ಎಂಜಿನ್ ಸ್ಟಾರ್ಟ್/ಸ್ಟಾಪ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಜೀಪ್ ಕಂಪಾಸ್ ಪೆಟ್ರೋಲ್ ಆವೃತ್ತಿಯು1.4 ಲೀಟರ್ ಟರ್ಬೊ ಎಂಜಿನ್ ಅನ್ನು ಹೊಂದಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್

ಈ ಪೆಟ್ರೋಲ್ ಎಂಜಿನ್ 161 ಬಿ‍‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್

ಜೀಪ್ ಕಂಪಾಸ್‍ನ ಲಾಂಗಿಟ್ಯೂಡ್ ಮತ್ತು ಲಿಮಿಟೆಡ್ ಪ್ಲಸ್ ರೂಪಾಂತದಲ್ಲಿ ನೀಡಲಾಗುವ ಹೊಸ ಎಂಜಿನ್ ಆಯ್ಕೆಯು ಟ್ರೈಲ್ ಹಾಕ್ ಎಂಜಿನ್‍‍ನಂತೆಯೇ ಇರುತ್ತದೆ. ಇದು 2.0 ಲೀಟರ್ ಡೀಸೆಲ್ ಎಂಜಿನ್ ಆಗಿದ್ದು, ಈ ಎಂಜಿನ್ 173 ಬಿ‍‍ಹೆಚ್‍‍ಪಿ ಪವರ್ ಮತ್ತು 350 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್

ಎಂಜಿನ್‍‍ನೊಂದಿಗೆ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ಎಂಜಿನ್ ಆಯ್ಕೆಯ ಹೊರತಾಗಿ ಜೀಪ್ ಕಂಪಾಸ್‍ನ ಲಾಂಗಿಟ್ಯೂಡ್ ಮತ್ತು ಲಿಮಿಟೆಡ್ ಪ್ಲಸ್ ಎರಡೂ ರೂಪಾಂತರಗಳು ಬಹುತೇಕ ಒಂದೇ ರೀತಿಯಲ್ಲಿವೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್

ಜೀಪ್ ಕಾಂಪಾಸ್‍ ಹಲವಾರು ಫೀಚರ್ಸ್‍‍ಗಳು ಮತ್ತು ಸುರಕ್ಷತಾ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಜೀಪ್ ಕಾಂಪಾಸ್‍‍ನಲ್ಲಿ ಹಲವಾರು ಸುರಕ್ಷತ ಫೀಚರ್ಸ್‍‍ಗಳನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇದರಲ್ಲಿ ಪನೋರಾಮಿಕ್ ಸನ್‍ರೂಫ್, ವೈಪರ್‍‍‍ಗಳೊಂದಿಗಿನ ಎಲ್‍ಇಡಿ ಹೆಡ್‍‍ಲ್ಯಾಂಪ್‍‍ಗಳು, ಆರು ಏರ್‍‍ಬ್ಯಾಗ್‍‍ಗಳು, 8 ರೀತಿಯ ಎಲೆಕ್ಟ್ರಿಕಾ ಅಡ್ಜೆಂಸ್ಟ್ಬಲ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಜೀಪ್‍‍ನ ಯುಕನೆಕ್ಟ್ ತಂತ್ರಜ್ಞಾನದೊಂದಿಗೆ 8.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್

ಹೊಸ ಬಿಎಸ್-6 ಜೀಪ್ ಕಂಪಾಸ್ ಭಾರತದಲ್ಲಿ ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್, ಟಾಟಾ ಹ್ಯಾರಿಯರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಜೀಪ್ jeep
English summary
BS6 Jeep Compass launched. Read in Kannada.
Story first published: Tuesday, February 4, 2020, 16:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X