ಅಕ್ಟೋಬರ್ ತಿಂಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಇಂಡಿಯಾ ಕಂಪನಿಯ 2020ರ ಅಕ್ಟೋಬರ್‌ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳ ಮಾರಾಟದಲ್ಲಿ ಕಿಯಾ ಕಂಪನಿಯು ಉತ್ತಮ ಬೆಳವಣಿಗೆಯನ್ನು ಕಂಡಿದ್ದು, ಅಲ್ಲದೇ ಇದು ಅತಿ ಹೆಚ್ಚು ಮಾಸಿಕ ಮಾರಾಟವಾಗಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಕಿಯಾ ಮೋಟಾರ್ಸ್

2020ರ ಅಕ್ಟೋಬರ್‌ ತಿಂಗಳಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 21,021 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ಕಿಯಾ ಮೋಟಾರ್ಸ್ ಕಂಪನಿಯು 12,854 ವಾಹನಗಳನ್ನು ಮಾರಾಟ ಮಾಡಿದ್ದರು. ಕಳೆದ ವರ್ಷದ ಅಕ್ಟೋಬರ್‌ ತಿಂಗಳ ಮಾರಾಟವನ್ನು ಈ ವರ್ಷದ ಅದೇ ಅವಧಿಗೆ ಹೋಲಿಸಿದರೆ ಶೇ.64 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಕಿಯಾ ಮೋಟಾರ್ಸ್

ಆದರೆ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಕಳೆದ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ಕಿಯಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯನ್ನು ಮಾತ್ರ ಮಾರಾಟ ಮಾಡಲಾಗುತ್ತಿತ್ತು.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಕಿಯಾ ಮೋಟಾರ್ಸ್

ಇದನ್ನು ಪರಿಗಣಿಸಿದರೆ, 2020ರ ಅಕ್ಟೋಬರ್‌ ತಿಂಗಳಲ್ಲಿ ಕಿಯಾ ಇಂಡಿಯಾ 8,900 ಯುನಿಟ್ ಸೆಲ್ಟೋಸ್ ಅನ್ನು ಮಾರಾಟ ಮಾಡಿತು, ಇದನ್ನು ಕಳೆದ ವರ್ಷದ ಅಕ್ಟೋಬರ್‌ ತಿಂಗಳ ಸೆಲ್ಟೋಸ್ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 31 ರಷ್ಟು ಕುಸಿತವಾಗಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಕಿಯಾ ಮೋಟಾರ್ಸ್

ಕಂಪನಿಯ ಹೊಸದಾಗಿ ಬಿಡುಗಡೆಗೊಳಿಸಿದ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಕಿಯಾ ಸೊನೆಟ್ 11,721 ಯುನಿಟ್‌ಗಳನ್ನು ಕಳೆದ ತಿಂಗಳು ಮಾರಾಟ ಮಾಡಿದೆ. ಉಳಿದ 400 ಯುನಿಟ್‌ಗಳು ಕಾರ್ನಿವಲ್ ಪ್ರೀಮಿಯಂ ಎಂಪಿವಿಯನ್ನು ಮಾರಾಟ ಮಾಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಕಿಯಾ ಮೋಟಾರ್ಸ್

2020ರ ಸೆಪ್ಟೆಂಬರ್ ತಿಂಗಳಲ್ಲಿ ಕಿಯಾ ಮೋಟಾರ್ಸ್ 18,676 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದರು. 2020ರ ಸೆಪ್ಟೆಂಬರ್ ತಿಂಗಳ ಮಾರಾಟವನ್ನು ಅಕ್ಟೋಬರ್‌ ತಿಂಗಳಿಗೆ ಹೋಲಿಸಿದರೆ ಶೇ.13 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಕಿಯಾ ಮೋಟಾರ್ಸ್

ಇನ್ನು ಆಂಧ್ರಪ್ರದೇಶದ ಅನಂತಪುರದ ಕಂಪನಿಯ ಉತ್ಪಾದನಾ ಘಟಕದಿಂದ ಕಳೆದ ತಿಂಗಳು ಸೊನೆಟ್ 38 ಯು‍‍ನಿ‍‍ಟ್‍ಗಳನ್ನು ರಫ್ತು ಮಾಡಿದೆ. ಇದೀಗ ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸಿರುವುದರಿಂದ ಈ ತಿಂಗಳಿನಿಂದ ಸೋನೆಟ್ ರಫ್ತು ಹೆಚ್ಚಾಗುವ ನಿರೀಕ್ಷೆಯಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಕಿಯಾ ಮೋಟಾರ್ಸ್

ಕಿಯಾ ಸೊನೆಟ್ ಬಿಡುಗಡೆಗೊಂಡು ಒಂದು ತಿಂಗಳು ಆಗುತ್ತಿದ್ದಂತೆ ಬರೊಬ್ಬರಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆದುಕೊಂಡಿವೆ. ಇದರಿಂದ ಭಾರತದಲ್ಲಿ ಕಿಯಾ ಸೊನೆಟ್ ಎಸ್‍ಯುವಿಯ ವೈಟಿಂಗ್ ಪಿರೇಡ್ ಹೆಚ್ಚಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್ ಎಸ್‍ಯುವಿಯ ವೈಟಿಂಗ್ ಪಿರೇಡ್ 10 ವಾರಗಳವರೆಗೆ ಹೆಚ್ಚಿಸಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಕಿಯಾ ಮೋಟಾರ್ಸ್

ಗ್ರಾಹಕರು ಕಿಯಾ ಕಾರುಗಳ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫಿಧಾ ಆಗಿದ್ದಾರೆ. ಕಿಯಾ ಮೋಟಾರ್ಸ್ ಹಲವು ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಅದು ಕಿಯಾ ಕಾರುಗಳ ಸ್ಪೆಷಾಲಿಟಿ ಎಂದು ಹೇಳಬಹುದು. ಹಬದ ಸೀಸನ್ ಆಗಿರುವುದರಿಂದ ಕಿಯಾ ಕಾರುಗಳ ಮಾರಾಟದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿದೆ.

Most Read Articles

Kannada
English summary
Kia India Registers Its Highest Ever Monthly Sales With 21,021 Units. Read In Kannada.
Story first published: Monday, November 2, 2020, 20:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X