ಕಾರ್ನಿವಾಲ್‌ ನಂತರ ಮತ್ತೊಂದು ಹೊಸ ಎಂಪಿವಿ ಬಿಡುಗಡೆಗೊಳಿಸಲು ಸಜ್ಜಾದ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಸೆಲ್ಟೊಸ್ ನಂತರ ಕಾರ್ನಿವಾಲ್ ಐಷಾರಾಮಿ ಎಂಪಿವಿ ಬಿಡುಗಡೆಗೊಳಿಸಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಕಾರ್ನಿವಾಲ್ ಕಾರಿಗಿಂತಲೂ ಅಗ್ಗದ ಬೆಲೆಯ ಮಧ್ಯಮ ಗಾತ್ರದ ಮತ್ತೊಂದು ಎಂಪಿವಿ ಆವೃತ್ತಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಕಾರ್ನಿವಾಲ್‌ ನಂತರ ಮತ್ತೊಂದು ಹೊಸ ಎಂಪಿವಿ ಬಿಡುಗಡೆಗೊಳಿಸಲಿದೆ ಕಿಯಾ ಮೋಟಾರ್ಸ್

ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಕಾರ್ನಿವಾಲ್ ಮಾದರಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಕಿಯಾ ಮೋಟಾರ್ಸ್ ಹಿರಿಯ ಅಧಿಕಾರಿಯೊಬ್ಬರು ಕಾರ್ನಿವಾಲ್ ನಂತರ ಮತ್ತೊಂದು ಎಂಪಿವಿ ಆವೃತ್ತಿಯು ಬಿಡುಗಡೆಯ ಪಟ್ಟಿಯಲ್ಲಿದ್ದು, ಹೊಸ ಕಾರು ಮಧ್ಯಮ ಗಾತ್ರದ ಎಂಪಿವಿ ಆವೃತ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕಾರ್ನಿವಾಲ್‌ ನಂತರ ಮತ್ತೊಂದು ಹೊಸ ಎಂಪಿವಿ ಬಿಡುಗಡೆಗೊಳಿಸಲಿದೆ ಕಿಯಾ ಮೋಟಾರ್ಸ್

ಸದ್ಯ ಬಿಡುಗಡೆಯಾಗಿರುವ ಕಾರ್ನಿವಾಲ್ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 24.95 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಆವೃತ್ತಿಯು ರೂ.33.95 ಲಕ್ಷ ಬೆಲೆ ಪಡೆದುಕೊಂಡಿದ್ದು, ಮಾರುಕಟ್ಟೆ ಪ್ರವೇಶಿಸಲಿರುವ ಹೊಸ ಎಂಪಿವಿ ಕಾರು ಕಾರ್ನಿವಾಲ್ ಕಾರಿಗಿಂತಲೂ ಅಗ್ಗವಾಗಿರಲಿದೆ.

ಕಾರ್ನಿವಾಲ್‌ ನಂತರ ಮತ್ತೊಂದು ಹೊಸ ಎಂಪಿವಿ ಬಿಡುಗಡೆಗೊಳಿಸಲಿದೆ ಕಿಯಾ ಮೋಟಾರ್ಸ್

ಹೊಸ ಎಂಪಿವಿ ಕಾರು ಎಕ್ಸ್‌ಶೋರೂಂ ಪ್ರಕಾರ ರೂ.13 ಲಕ್ಷದಿಂದ ರೂ. 16 ಲಕ್ಷ ಬೆಲೆ ಪಡೆದುಕೊಳ್ಳುವ ಬಗ್ಗೆ ಸುಳಿವು ನೀಡಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಹೊಸ ಕಾರನ್ನು ಪೆಟ್ರೋಲ್ ಮತ್ತು ಡಿಸೇಲ್ ಎರಡು ಮಾದರಿಯಲ್ಲೂ ಬಿಡುಗಡೆಗೊಳಿಸಲಿದೆ.

ಕಾರ್ನಿವಾಲ್‌ ನಂತರ ಮತ್ತೊಂದು ಹೊಸ ಎಂಪಿವಿ ಬಿಡುಗಡೆಗೊಳಿಸಲಿದೆ ಕಿಯಾ ಮೋಟಾರ್ಸ್

ಕಾರ್ನಿವಾಲ್ ಸದ್ಯ 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾತ್ರ ಖರೀದಿಗೆ ಲಭ್ಯವಿದ್ದು, ಹೊಸ ಎಂಪಿವಿ ಕಾರು ಸೆಲ್ಟೊಸ್ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಲಿದೆ. ಹೊಸ ಎಂಪಿವಿ ಬಿಡುಗಡೆಗೂ ಮುನ್ನ ಕಿಯಾ ನಿರ್ಮಾಣದ ಮತ್ತೊಂದು ಬಹುನೀರಿಕ್ಷಿತ ಸೊನೆಟ್ ಕಾರು ಮಾರುಕಟ್ಟೆ ಪ್ರವೇಶಿಸಲಿದ್ದು, ತದನಂತರವಷ್ಟೇ ಹೊಸ ಎಂಪಿವಿ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

ಕಾರ್ನಿವಾಲ್‌ ನಂತರ ಮತ್ತೊಂದು ಹೊಸ ಎಂಪಿವಿ ಬಿಡುಗಡೆಗೊಳಿಸಲಿದೆ ಕಿಯಾ ಮೋಟಾರ್ಸ್

ಪ್ರಸ್ತುತ ಮಾರುಕಟ್ಟೆಯಲ್ಲಿ 7 ಸೀಟರ್ ಮತ್ತು 8 ಸೀಟರ್ ಎಂಪಿವಿ ಕಾರುಗಳಿಗೆ ಭಾರೀ ಬೇಡಿಕೆಯಿದ್ದು, ಟೊಯೊಟಾ ಇನೋವಾ ಕ್ರಿಸ್ಟಾ ಕಾರು ದುಬಾರಿ ಬೆಲೆ ಹೊಂದಿದ್ದರೂ ಬೇಡಿಕೆಯಲ್ಲಿ ಮಾತ್ರ ಅಗ್ರಸ್ಥಾನದಲ್ಲಿದೆ.

ಕಾರ್ನಿವಾಲ್‌ ನಂತರ ಮತ್ತೊಂದು ಹೊಸ ಎಂಪಿವಿ ಬಿಡುಗಡೆಗೊಳಿಸಲಿದೆ ಕಿಯಾ ಮೋಟಾರ್ಸ್

ಇನೋವಾ ಕ್ರಿಸ್ಟಾ ಮಾದರಿಯಲ್ಲಿ 7 ಸೀಟರ್ ಮತ್ತು 8 ಸೀಟರ್ ಕಾರುಗಳ ಕೊರತೆಯು ದೇಶಿಯ ಮಾರುಕಟ್ಟೆಯಲ್ಲಿ ಎದ್ದುಕಾಣುತ್ತಿದ್ದು, ಕಡಿಮೆ ಹೊಂದಿದ್ದರೂ ಮಾರುತಿ ಎರ್ಟಿಗಾ ಮತ್ತು ಮಹೀಂದ್ರಾ ಮರಾಜೋ ಕಾರುಗಳು ಗ್ರಾಹಕರ ಬೇಡಿಕೆ ಪೂರೈಸುವಲ್ಲಿ ಹಿಂದೆಬಿದ್ದಿವೆ.

ಕಾರ್ನಿವಾಲ್‌ ನಂತರ ಮತ್ತೊಂದು ಹೊಸ ಎಂಪಿವಿ ಬಿಡುಗಡೆಗೊಳಿಸಲಿದೆ ಕಿಯಾ ಮೋಟಾರ್ಸ್

ಹೀಗಾಗಿ ವಿವಿಧ ಹಂತದ ಮಾರುಕಟ್ಟೆ ಅಧ್ಯಯನದೊಂದಿಗೆ ಬೃಹತ್ ಯೋಜನೆ ರೂಪಿಸಿರುವ ಕಿಯಾ ಸಂಸ್ಥೆಯು ರೂ.13 ಲಕ್ಷದಿಂದ ರೂ.16 ಲಕ್ಷ ಬೆಲೆ ಅಂತರದಲ್ಲಿ ಅತ್ಯುತ್ತಮ ಒಳಾಂಗಣ ವಿನ್ಯಾಸ ಹೊಂದಿರುವ ಮಧ್ಯಮ ಕ್ರಮಾಂಕರ ಎಂಪಿವಿ ಬಿಡುಗಡೆಗೆ ಮುಂದಾಗಿದ್ದು, ಹೊಸ ಕಾರು ಮುಂದಿನ ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಗ್ರಾಹಕರ ಕೈಸೇರಬಹುದೆಂದು ವರದಿಯಾಗಿದೆ.

Source: Autocarindia

Kannada
English summary
South Korean car maker, KIA Motors is planning to launch all new mid size MPV car in India by next year. Read in Kannada.
Story first published: Tuesday, February 11, 2020, 8:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X