ಕೆಯುವಿ100 ಇವಿ ಕಾರು ಸೇರಿ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳ ಮಾಹಿತಿ ಬಿಚ್ಚಿಟ್ಟ ಮಹೀಂದ್ರಾ

ಭಾರತದಲ್ಲಿ ವಿವಿಧ ಮಾದರಿಯ ಹಲವು ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೊಂದಿರುವ ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಸಾರವಾಗಿ ಮತ್ತಷ್ಟು ಹೊಸ ಇವಿ ವಾಹನಗಳ ಬಿಡುಗಡೆಗೆ ಸಜ್ಜಾಗಿದ್ದು, ತನ್ನ ಬಹುನೀರಿಕ್ಷಿತ ಕೆಯುವಿ100 ಇವಿ ಮತ್ತು ಎಕ್ಸ್‌ಯುವಿ300 ಇವಿ ಕಾರುಗಳ ಬಿಡುಗಡೆ ಮಾಹಿತಿಯನ್ನು ಬಿಚ್ಚಿಟ್ಟಿದೆ.

ಹೊಸ ಎಲೆಕ್ಟ್ರಿಕ್ ಕಾರುಗಳ ಮಾಹಿತಿ ಬಿಚ್ಚಿಟ್ಟ ಮಹೀಂದ್ರಾ

ಕಳೆದ ಫೆಬ್ರುವರಿ ನಡೆದಿದ್ದ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಕೆಯುವಿ100 ಎಲೆಕ್ಟ್ರಿಕ್, ಎಕ್ಸ್‌ಯುವಿ300 ಎಲೆಕ್ಟ್ರಿಕ್ ಮತ್ತು ಅಟಾಮ್ ಕ್ವಾರ್ಡ್ರಿಸೈಕಲ್ ಮಾದರಿಗಳನ್ನು ಪ್ರದರ್ಶನ ಮಾಡಿದ್ದ ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಯು ಪ್ರದರ್ಶನದ ವೇಳೆ ಕೆಯುವಿ100 ಎಲೆಕ್ಟ್ರಿಕ್ ಕಾರು ಮಾದರಿಯ ಬೆಲೆ ಮಾಹಿತಿ ಮಾತ್ರವೇ ಹಂಚಿಕೊಳ್ಳುವ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ವಿತರಣೆ ಮಾಡುವುದಾಗಿ ಹೇಳಿಕೊಂಡಿತ್ತು.

ಹೊಸ ಎಲೆಕ್ಟ್ರಿಕ್ ಕಾರುಗಳ ಮಾಹಿತಿ ಬಿಚ್ಚಿಟ್ಟ ಮಹೀಂದ್ರಾ

ಆದರೆ ಮಾರ್ಚ್ ಹೊತ್ತಿಗೆ ಕರೋನಾ ವೈರಸ್ ಹೆಚ್ಚಾದ ಹಿನ್ನಲೆ ಲಾಕ್‌ಡೌನ್ ಪರಿಣಾಮ ಹೊಸ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯನ್ನು ಮುಂದೂಡಿಕೆ ಮಾಡುತ್ತಲೆ ಬಂದ ಆಟೋ ಕಂಪನಿಗಳು ಲಾಕ್‌ಡೌನ್ ವಿಸ್ತರಣೆ ಸಂದರ್ಭದಲ್ಲೂ ಯಾವುದೇ ಹೊಸ ವಾಹನ ಬಿಡುಗಡೆ ಮಾಡಲಿಲ್ಲ.

ಹೊಸ ಎಲೆಕ್ಟ್ರಿಕ್ ಕಾರುಗಳ ಮಾಹಿತಿ ಬಿಚ್ಚಿಟ್ಟ ಮಹೀಂದ್ರಾ

ಮಹೀಂದ್ರಾ ಕಂಪನಿಯು ಕೂಡಾ ಲಾಕ್‌ಡೌನ್ ವಿಸ್ತರಣೆಯ ಸಂದರ್ಭದಲ್ಲಿ ವಾಹನ ಮಾರಾಟದ ಮೇಲೆ ಗಮನಹರಿಸುವ ಮೂಲಕ ಹೊಸ ವಾಹನಗಳ ಮುಂದೂಡಿಕೆ ಮಾಡುತ್ತ ಬಂದಿತ್ತು. ಇದೀಗ ಕರೋನಾ ವೈರಸ್ ಸಂಖ್ಯೆ ಹೆಚ್ಚಿದ್ದರೂ ಹೊಸ ಸುರಕ್ಷಾ ಮಾರ್ಗಸೂಚಿಗಳಿಂದಾಗಿ ವಾಹನ ಮಾರಾಟವು ಸುಧಾರಣೆಗೊಂಡಿರುವ ಹಿನ್ನಲೆಯಲ್ಲಿ ಹೊಸ ವಾಹನಗಳ ಬಿಡುಗಡೆಗೆ ಚಾಲನೆ ನೀಡಲಾಗಿದೆ.

ಹೊಸ ಎಲೆಕ್ಟ್ರಿಕ್ ಕಾರುಗಳ ಮಾಹಿತಿ ಬಿಚ್ಚಿಟ್ಟ ಮಹೀಂದ್ರಾ

ಲಾಕ್‌ಡೌನ್ ವಿನಾಯ್ತಿ ಹಲವು ಹೊಸ ಹೊಸ ಮಾದರಿಯ ವಾಹನಗಳ ಉನ್ನತೀಕರಿಸಿ ಬಿಡುಗಡೆ ಮಾಡಿರುವ ಮಹೀಂದ್ರಾ ಕಂಪನಿಯು ಸಾಮಾನ್ಯ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಗೂ ಒತ್ತು ನೀಡುತ್ತಿದ್ದು, ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆಯ ವೇಳೆ ಕೆಯುವಿ100 ಎಲೆಕ್ಟ್ರಿಕ್, ಎಕ್ಸ್‌ಯುವಿ300 ಎಲೆಕ್ಟ್ರಿಕ್ ಮತ್ತು ಅಟಾಮ್ ಕ್ವಾರ್ಡ್ರಿಸೈಕಲ್ ಮಾದರಿಗಳ ಬಿಡುಗಡೆ ಮಾಹಿತಿಯನ್ನು ಹಂಚಿಕೊಂಡಿದೆ.

ಹೊಸ ಎಲೆಕ್ಟ್ರಿಕ್ ಕಾರುಗಳ ಮಾಹಿತಿ ಬಿಚ್ಚಿಟ್ಟ ಮಹೀಂದ್ರಾ

2021ರ ಜನವರಿಯಲ್ಲಿ ಕೆಯುವಿ100 ಎಲೆಕ್ಟ್ರಿಕ್ ಕಾರಿನ ವಿತರಣೆಯನ್ನು ಆರಂಭಿಸಲಾಗುತ್ತಿದ್ದು, ತದನಂತರವಷ್ಟೇ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಮತ್ತು ಅಟಾಮ್ ಕ್ವಾರ್ಡ್ರಿಸೈಕಲ್ ಮಾದರಿಗಳ ಬಿಡುಗಡೆಯ ಮಾಹಿತಿ ಹಂಚಿಕೊಳ್ಳಲಾಗುವುದಾಗಿ ಮಹೀಂದ್ರಾ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹೊಸ ಎಲೆಕ್ಟ್ರಿಕ್ ಕಾರುಗಳ ಮಾಹಿತಿ ಬಿಚ್ಚಿಟ್ಟ ಮಹೀಂದ್ರಾ

ಇಕೆಯುವಿ100 ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿಯನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿಯೇ ಹಂಚಿಕೊಳ್ಳಲಾಗಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಎಲೆಕ್ಟ್ರಿಕ್ ಕಾರು ಮಾದರಿಗಳಿಂತಲೂ ಆಕರ್ಷಕ ಬೆಲೆ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಎಲೆಕ್ಟ್ರಿಕ್ ಕಾರುಗಳ ಮಾಹಿತಿ ಬಿಚ್ಚಿಟ್ಟ ಮಹೀಂದ್ರಾ

ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೆಲೆಯ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲಿ ಒಂದಾಗಿರುವ ಇಕೆಯುವಿ100 ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.8.25 ಲಕ್ಷ ಬೆಲೆ ಹೊಂದಿದ್ದು, 15.9kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಚಾರ್ಜ್‌ಗೆ 120 ಕಿ.ಮೀ ಮೈಲೇಜ್ ಸಾಮರ್ಥ್ಯ ಹೊಂದಿದೆ.

ಹೊಸ ಎಲೆಕ್ಟ್ರಿಕ್ ಕಾರುಗಳ ಮಾಹಿತಿ ಬಿಚ್ಚಿಟ್ಟ ಮಹೀಂದ್ರಾ

ಹೊಸ ಕಾರು ಖರೀದಿದಾರರು ಅತಿ ಕಡಿಮೆ ಅವಧಿಯ ಚಾರ್ಜಿಂಗ್ ಮಾಡಿಕೊಳ್ಳಲು ಬೇಡಿಕೆ ಅನುಸಾರವಾಗಿ ಸ್ಟ್ಯಾಂಡರ್ಡ್ ಮತ್ತು ಫಾಸ್ಟ್ ಚಾರ್ಜಿಂಗ್ ಆಯ್ಕೆಗಳನ್ನು ನೀಡಲಾಗಿದ್ದು, ಹೋಂ ಚಾರ್ಜಿಂಗ್ ಮೂಲಕ ಚಾರ್ಜ್ ಮಾಡಲು 3 ರಿಂದ 4 ಗಂಟೆ ತೆಗೆದುಕೊಳ್ಳಲಿದ್ದರೆ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಮೂಲಕ ಕೇವಲ 50 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಹೊಸ ಎಲೆಕ್ಟ್ರಿಕ್ ಕಾರುಗಳ ಮಾಹಿತಿ ಬಿಚ್ಚಿಟ್ಟ ಮಹೀಂದ್ರಾ

ಸದ್ಯ ಇಕೆಯುವಿ100 ವಿತರಣೆಗೆ ಸಜ್ಜಾಗುತ್ತಿರುವ ಮಹೀಂದ್ರಾ ಕಂಪನಿಯು ಜನವರಿ ಹೊತ್ತಿಗೆ ಹೊಸ ಕಾರು ಮಾರಾಟವನ್ನು ಶುರುಮಾಡಲಾಗಿದ್ದು, ತದನಂತರ ಕೆಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಅಟಾಮ್ ಕ್ವಾರ್ಡ್ರಿಸೈಕಲ್ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

Most Read Articles

Kannada
English summary
Mahindra eKUV100 Launch Timeline Officially Revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X