ಲೋಗೋ ಮೂಲಕವೇ ಕರೋನಾ ವೈರಸ್ ಬಗೆಗೆ ಜನಜಾಗೃತಿ ಮೂಡಿಸಿದ ಆಟೋ ಕಂಪನಿಗಳು

ಮಹಾಮಾರಿ ಕರೋನಾ ವೈರಸ್ ಅಟ್ಟಹಾಸಕ್ಕೆ ಇಡಿ ವಿಶ್ವವೇ ತಲ್ಲಣಗೊಂಡಿದ್ದು, ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

ಲೋಗೋ ಮೂಲಕವೇ ಕರೋನಾ ವೈರಸ್ ಬಗೆಗೆ ಜನಜಾಗೃತಿ ಮೂಡಿಸಿದ ಆಟೋ ಕಂಪನಿಗಳು

ಕರೋನಾ ವೈರಸ್‌ ತಡೆಯಲು ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಇಲ್ಲದಿರುವುದೇ ದೊಡ್ಡ ಆತಂಕಕ್ಕೆ ಕಾರಣವಾಗಿದ್ದು, ಈ ವೇಳೆ ವೈರಸ್ ಹರಡದಂತೆ ನಮ್ಮನ್ನು ನಾವೇ ಸ್ವಯಂರಕ್ಷಣೆ ಮಾಡಿಕೊಳ್ಳುವುದೇ ಪ್ರಮುಖ ಜವಾಬ್ದಾರಿಯಾಗಿದೆ. ವೈರಸ್ ಹರಡುವಿಕೆಯನ್ನು ತಡೆಯಲು ಸರ್ಕಾರಗಳು ಲಾಕ್ ಡೌನ್ ವಿಧಿಸಲಾಗಿದ್ದರೂ ನಿಯಮ ಉಲ್ಲಂಘನೆ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಸಂಕಷ್ಟಕರ ಪರಿಸ್ಥಿತಿಯಲ್ಲೂ ಸಾಮಾಜಿಕ ಅಂತರವನ್ನು ಕಾಯ್ದಕೊಳ್ಳುವಲ್ಲಿ ಅಸಡ್ಡೆ ತೋರುತ್ತಿರುವ ಕೆಲವರು ಮಾಹಾಮಾರಿ ವೈರಸ್‌ಗೆ ತುತ್ತಾಗುತ್ತಿದ್ದಾರೆ.

ಲೋಗೋ ಮೂಲಕವೇ ಕರೋನಾ ವೈರಸ್ ಬಗೆಗೆ ಜನಜಾಗೃತಿ ಮೂಡಿಸಿದ ಆಟೋ ಕಂಪನಿಗಳು

ಈ ಕುರಿತು ಜಾಗೃತಿಯೊಂದು ಮೂಡಿಸುತ್ತಿರುವ ಆಟೋ ಕಂಪನಿಗಳು ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿಯೊಂದಿಗೆ ದೇಣಿಗೆ ನೀಡಿ ಸರ್ಕಾರದ ಪ್ರಯತ್ನಕ್ಕೆ ಶಕ್ತಿ ತುಂಬಿರುವುದಲ್ಲದೆ ಜನತೆಯಲ್ಲಿ ಸೋಂಕು ಹರಡದಂತೆ ಹಲವಾರು ಜಾಗೃತಿ ಕ್ರಮಗಳನ್ನು ಕೈಗೊಂಡಿವೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಲೋಗೋ ಮೂಲಕವೇ ಕರೋನಾ ವೈರಸ್ ಬಗೆಗೆ ಜನಜಾಗೃತಿ ಮೂಡಿಸಿದ ಆಟೋ ಕಂಪನಿಗಳು

ಹ್ಯುಂಡೈ ಕಂಪನಿಯು ತನ್ನದೇ ಶೈಲಿಯಲ್ಲಿ ಜನತೆಗೆ ಒಂದು ಉತ್ತಮ ಸಂದೇಶ ನೀಡಿದೆ. ಲೋಗೋ ಮೂಲಕವೇ ಜನತೆಯಲ್ಲಿ ಜಗ್ಗಟ್ಟಿನ ಜೊತೆ ಸಾಮಾಜಿಕ ಅಂತರ ಕಾಯ್ದಕೊಳ್ಳುವ ಬಗ್ಗೆ ಸಂದೇಶ ನೀಡಲಾಗಿದ್ದು, ಎಲ್ಲರೂ ಒಟ್ಟಾಗಿ ಕರೋನಾ ತೊಲಗಿಸುವ ವಿಶ್ವಾಸ ವ್ಯಕ್ತಪಡಿಸಿವೆ.

ಲೋಗೋ ಮೂಲಕವೇ ಕರೋನಾ ವೈರಸ್ ಬಗೆಗೆ ಜನಜಾಗೃತಿ ಮೂಡಿಸಿದ ಆಟೋ ಕಂಪನಿಗಳು

ಹಾಗೆಯೇ ಆಡಿ ಕಂಪನಿ ಕೂಡಾ ತನ್ನ ಲೋಗೋ ಶೈಲಿಯನ್ನು ಬದಲಾವಣೆಗೊಳಿಸುವ ಮೂಲಕ ಸಾಮಾಜಿಕ ಅಂತರದ ಕುರಿತು ಗಮನಸೆಳೆದಿದ್ದು, ಫೋರ್ಕ್ಸ್‌ವ್ಯಾಗನ್ ಮತ್ತು ಮರ್ಸಿಡಿಸ್ ಬೆಂಝ್ ಕಂಪನಿ ಸಹ ಲೋಗೋ ಬದಲಾವಣೆಗೊಳಿಸಿರುವುದು ಗಮನಸೆಳೆದಿದೆ.

MOST READ: ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ಲೋಗೋ ಮೂಲಕವೇ ಕರೋನಾ ವೈರಸ್ ಬಗೆಗೆ ಜನಜಾಗೃತಿ ಮೂಡಿಸಿದ ಆಟೋ ಕಂಪನಿಗಳು

ಇನ್ನು ಜಗತ್ತಿನಾದ್ಯಂತ ದಿನಂಪ್ರತಿ ಸಾವಿರಾರು ಜನರ ಜೀವವನ್ನು ಬಲಿಪಡೆಯುತ್ತಿರುವ ವೈರಸ್‌ನಿಂದ ಬಚಾವ್ ಆಗಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಪ್ರಮುಖ ಅಂಶವಾಗಿದ್ದು, ಪ್ರತಿಯೊಬ್ಬರು ವೈರಸ್ ತಡೆಯುವುದಕ್ಕಾಗಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಲೋಗೋ ಮೂಲಕವೇ ಕರೋನಾ ವೈರಸ್ ಬಗೆಗೆ ಜನಜಾಗೃತಿ ಮೂಡಿಸಿದ ಆಟೋ ಕಂಪನಿಗಳು

ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ ಡೌನ್ ವಿಧಿಸಲಾಗಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಭಾರತ ಸೇರಿ ವಿಶ್ವದ ಹಲವು ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದೆ. ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಆರಂಭಿಸಲಾಗಿರುವ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ.

MOST READ: ಲಾಕ್ ಡೌನ್: ‌‌‌‌‌‌ಮಗನಿಗಾಗಿ 1400 ಕಿ.ಮೀ ಪ್ರಯಾಣಿಸಿದ ತಾಯಿ

ಲೋಗೋ ಮೂಲಕವೇ ಕರೋನಾ ವೈರಸ್ ಬಗೆಗೆ ಜನಜಾಗೃತಿ ಮೂಡಿಸಿದ ಆಟೋ ಕಂಪನಿಗಳು

ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಮುಂದಾಗಿವೆ.

ಲೋಗೋ ಮೂಲಕವೇ ಕರೋನಾ ವೈರಸ್ ಬಗೆಗೆ ಜನಜಾಗೃತಿ ಮೂಡಿಸಿದ ಆಟೋ ಕಂಪನಿಗಳು

ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಮತ್ತು ಐಸಿಯು ಯುನಿಟ್‌ಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದು, ಆರೋಗ್ಯ ಇಲಾಖೆಯ ಬೇಡಿಕೆಗಳನ್ನು ಪೂರೈಸಲು ಸಿದ್ದವಾಗುತ್ತಿವೆ.

MOST READ: ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ಲೋಗೋ ಮೂಲಕವೇ ಕರೋನಾ ವೈರಸ್ ಬಗೆಗೆ ಜನಜಾಗೃತಿ ಮೂಡಿಸಿದ ಆಟೋ ಕಂಪನಿಗಳು

ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿನ ಆರೋಗ್ಯ ಸೌಕರ್ಯ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ವಿಶೇಷ ಆದ್ಯತೆ ನೀಡುವುದಾಗಿ ಹೇಳಿಕೊಂಡಿರುವ ಆಟೋ ಕಂಪನಿಗಳು ಪರಿಸರ ಮತ್ತು ಆರೋಗ್ಯ ಕಾಳಜಿಗೆ ವಿಶೇಷ ಆಸಕ್ತಿ ವಹಿಸಿದ್ದು, ಶೀಘ್ರದಲ್ಲೇ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವುದಾಗಿ ಘೋಷಣೆ ಮಾಡಿವೆ.

ಲೋಗೋ ಮೂಲಕವೇ ಕರೋನಾ ವೈರಸ್ ಬಗೆಗೆ ಜನಜಾಗೃತಿ ಮೂಡಿಸಿದ ಆಟೋ ಕಂಪನಿಗಳು

ಚೀನಾದಿಂದ ಶುರುವಾದ ಕರೋನಾ ವೈರಸ್ ಹರಡುವಿಕೆಯು ಇದೀಗ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಇದುವರೆಗೆ 17 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದಲ್ಲದೆ 1.03 ಲಕ್ಷ ಜನ ಪ್ರಾಣಕಳೆದುಕೊಂಡಿದ್ದಾರೆ. ಸೋಂಕು ಪಿಡಿತರಲ್ಲಿ ಇದುವರೆಗೆ ಸುಮಾರು 3.82 ಲಕ್ಷ ಜನ ಗುಣಮುಖರಾಗಿದ್ದು, ಶೇ.5 ರಷ್ಟು ಜನರ ಸ್ಥಿತಿ ಶೋಚನೀಯವಾಗಿದೆ.

Most Read Articles

Kannada
English summary
Manufacturers Tweak Logos To Promote Social Distancing. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X