ಬಿಡುಗಡೆಯಾಯ್ತು ಬಿಎಸ್-6 ಎಂಜಿನ್‍ ಹೊಂದಿರುವ ಮಾರುತಿ ಸುಜುಕಿ ಇಕೋ

ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಬಿಎಸ್-6 ಇಕೋ ವ್ಯಾನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಹೊಸ ಮಾರುತಿ ಸುಜುಕಿ ಇಕೋ ವ್ಯಾನ್‍‍ಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.3.81 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಮಧ್ಯಮ ವರ್ಗದ ಜನರ ಮೆಚ್ಚಿನ ಮಾರುತಿ ಸುಜುಕಿ ಇಕೋ

ಹೊಸ ಮಾರುತಿ ಸುಜುಕಿ ಇಕೋವನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸಲಾಗಿದೆ. ಇದರೊಂದಿಗೆ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇಕೋ ಅದೇ ಹಿಂದಿನ ಮಾದರಿಯಂತೆ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದೇ ಎಂಜಿನ್ ಅನ್ನು ಮಾರುತಿ ಸುಜುಕಿ ಕಂಪನಿಯ ಸರಣಿಯಲ್ಲಿರುವ ಇತರ ಕಾರುಗಳಲ್ಲಿಯೂ ಬಳಸಲಾಗಿದೆ.

ಬಿಡುಗಡೆಯಾಯ್ತು ಮಧ್ಯಮ ವರ್ಗದ ಜನರ ಮೆಚ್ಚಿನ ಮಾರುತಿ ಸುಜುಕಿ ಇಕೋ

ಈ ಎಂಜಿನ್ 73 ಬಿ‍‍ಹೆಚ್‍‍ಪಿ ಪವರ್ ಮತ್ತು 98 ಪೀಕ್‍‍ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬಿಎಸ್-4 ಎಂಜಿನ್‍‍ಗೆ ಹೋಲಿಸಿದರೆ ಟಾರ್ಕ್ ಉತ್ಪಾದನೆಯಲ್ಲಿ ಸಣ್ಣ ಮಟ್ಟದ ಬದಲಾವಣೆಯಾಗಿದೆ.

ಬಿಡುಗಡೆಯಾಯ್ತು ಮಧ್ಯಮ ವರ್ಗದ ಜನರ ಮೆಚ್ಚಿನ ಮಾರುತಿ ಸುಜುಕಿ ಇಕೋ

ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಮಾರುತಿ ಸುಜುಕಿ ಇಕೋ ಸಿಎನ್‍‍‍ಜಿ ರೂಪಾಂತರದೊಂದಿಗೂ ಸಹ ಮಾರಾಟ ಮಾಡಲಾಗುವುದು. ಇಕೋ ಸಿಎನ್‍ಜಿ 21.8 ಕಿ.ಮೀ ಮೈಲೇಜ್ ಅನ್ನು ನೀಡಲಿದೆ.

ಬಿಡುಗಡೆಯಾಯ್ತು ಮಧ್ಯಮ ವರ್ಗದ ಜನರ ಮೆಚ್ಚಿನ ಮಾರುತಿ ಸುಜುಕಿ ಇಕೋ

ಮಾರುತಿ ಸುಜುಕಿ ಇಕೋವನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಾರ್ಗೊ ಟ್ರಿಮ್ ಸೇರಿದಂತೆ ಹಲವಾರು ವಿಭಿನ್ನ ರೂಪಾಂತರಗಳಲ್ಲಿ ಮಾರಾಟ ಮಾಡಲಾಗುವುದು. ಮಾರುತಿ ಸುಜುಕಿ ಕಂಪನಿಯು ಇಕೋ ಕಾರನ್ನು ಮೊದಲ ಬಾರಿಗೆ 2010ರಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಬಿಡುಗಡೆಯಾಯ್ತು ಮಧ್ಯಮ ವರ್ಗದ ಜನರ ಮೆಚ್ಚಿನ ಮಾರುತಿ ಸುಜುಕಿ ಇಕೋ

ಅಂದಿನಿಂದ ಇಲ್ಲಿಯವರೆಗೂ ಬರೊಬ್ಬರಿ 6.5 ಲಕ್ಷ ಯುನಿಟ್‍‍ಗಳು ಮಾರಾಟವಾಗಿವೆ. ಮಾರುತಿ ಸುಜುಕಿ ಇಕೋ ಕಾರು ಭಾರತದ ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಬಿಡುಗಡೆಗೊಳಿಸಲಾಗಿದೆ. ಇಕೋ ಕಾರಿನ ಕಾರ್ಗೋ ರೂಪಾಂತರವು ನಗರ ಪ್ರದೇಶದ ಜನರನ್ನು ಗುರಿಯಾಗಿಸಿಕೊಂಡು ಬಿಡುಗಡೆಗೊಳಿಸಲಾಗಿದೆ.

ಬಿಡುಗಡೆಯಾಯ್ತು ಮಧ್ಯಮ ವರ್ಗದ ಜನರ ಮೆಚ್ಚಿನ ಮಾರುತಿ ಸುಜುಕಿ ಇಕೋ

ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಶಾಂಕ್ ಶ್ರೀವಾಸ್ತವರವರು ಮಾತನಾಡಿ, ಮಾರುತಿ ಸುಜುಕಿ ಕಂಪನಿಯು ಗ್ರಾಹಕರ ವಿಶ್ವಾಸಾರ್ಹತೆಗೆ ಬದ್ದವಾಗಿದೆ. ಇಕೋ ಕಾರಿನಲ್ಲಿ ಬಿಎಸ್-6 ಎಂಜಿನ್‍ನೊಂದಿಗೆ ಬಿಡುಗಡೆಗೊಳಿಸುವ ಮೂಲಕ ಪರಿಸರದ ಬಗ್ಗೆ ಕಾಳಜಿ ಮತ್ತಷ್ಟು ಹೆಚ್ಚಿಸಿದೆ.

ಬಿಡುಗಡೆಯಾಯ್ತು ಮಧ್ಯಮ ವರ್ಗದ ಜನರ ಮೆಚ್ಚಿನ ಮಾರುತಿ ಸುಜುಕಿ ಇಕೋ

ಬಿಡುಗಡೆಯಾದ ಒಂದು ದಶಕದಿಂದ ಇಕೋ ಶೇ.84 ಪೂರ್ವ ನಿರ್ಧಾರಿತ ಖರೀದಿದಾರರನ್ನು ಆಕರ್ಷಸಿದೆ. ಇಕೋನ ಸೊಗಸಾದ ಮತ್ತು ವಿಶಾಲವಾದ ವಿನ್ಯಾಸ ಮತ್ತು ನಿರ್ವಹಣೆ ವೆಚ್ಚವು ಕಡಿಮೆಯಾಗಿರುವುದರಿಂದ ಹೆಚ್ಚಿನ ಖರೀದಿದಾರರನ್ನು ಆಕರ್ಷಿಸಿದೆ.

ಬಿಡುಗಡೆಯಾಯ್ತು ಮಧ್ಯಮ ವರ್ಗದ ಜನರ ಮೆಚ್ಚಿನ ಮಾರುತಿ ಸುಜುಕಿ ಇಕೋ

ಶೇ.50ರಷ್ಟು ಈ ಕಾರ್ ಅನ್ನು ಗ್ರಾಹಕರು ವ್ಯಾಪಾರ ಉಪಯುಕ್ತತೆಗಾಗಿ ಮತ್ತು ಕುಟುಂಬದ ಸಾರಿಗೆ ವಾಹನವಾಗಿ ಬಳಸುತ್ತಾರೆ. ಇಕೋ ವಾಹನವು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ ಎಂದು ಹೇಳಿದರು.

ಬಿಡುಗಡೆಯಾಯ್ತು ಮಧ್ಯಮ ವರ್ಗದ ಜನರ ಮೆಚ್ಚಿನ ಮಾರುತಿ ಸುಜುಕಿ ಇಕೋ

ಒಮ್ನಿ ವ್ಯಾನ್ ಸ್ಥಗಿತಗೊಂಡ ಬಳಿಕ ಮಾರುತಿ ಸುಜುಕಿ ಇಕೋ ಭಾರತೀಯ ಮಾರುಕಟ್ಟೆಯಲ್ಲಿರುವ ಏಕೈಕ ವ್ಯಾನ್ ಆಗಿದೆ. ಮಾರುತಿ ಸುಜುಕಿ ಕಂಪನಿಯ ಕಾರುಗಳ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಇಕೋ ದೇಶದಲ್ಲಿ ಮಾರಾಟವಾಗುವ ವಾಹನಗಳ ಟಾಪ್-10 ಪಟ್ಟಿಯಲ್ಲಿ ಸ್ಥಿರವಾಗಿ ಸ್ಥಾನ ಪಡೆದುಕೊಂಡಿದೆ. ಬಿಎಸ್-6 ಮಾರುತಿ ಸುಜುಕಿ ಇಕೋ ಇನ್ನಷ್ಟು ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
Maruti Suzuki Eeco BS-VI Launched In India: Prices Start At Rs 3.81 Lakh. Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X