ಹಲವು ಅಪ್​ಡೇಟ್​ಗಳೊಂದಿಗೆ ಬಿಡುಗಡೆಗೊಂಡ ಇಗ್ನಿಸ್ ಕಾರುಗಳು

ಮಾರುತಿ ಸುಜುಕಿ ಕಂಪನಿಯು ಇಗ್ನಿಸ್ ಹ್ಯಾಚ್‌ಬ್ಯಾಕ್‌ ಕಾರಿನ ಜೆಟ್ಟಾ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳನ್ನು ಸ್ಮಾರ್ಟ್‌ಪ್ಲೇ ಇನ್ಫೋಟೇನ್‌ಮೆಂಟ್ ಸಿಸ್ಟಂನೊಂದಿಗೆ ಬಿಡುಗಡೆಗೊಳಿಸಿದೆ.

ಹಲವು ಅಪ್​ಡೇಟ್​ಗಳೊಂದಿಗೆ ಬಿಡುಗಡೆಗೊಂಡ ಇಗ್ನಿಸ್ ಕಾರುಗಳು

ಮಾರುತಿ ಸುಜುಕಿ ಇಗ್ನಿಸ್ ಜೆಟ್ಟಾ ಎಂಟಿ ಕಾರಿನ ಬೆಲೆ ದೆಹಲಿಯ ಎಕ್ಸ್ ಶೋ ರೂಂ ದರದಂತೆ ರೂ.5,97,820ಗಳಾದರೆ, ಇಗ್ನಿಸ್ ಜೆಟ್ಟಾ ಎಎಂಟಿ ಕಾರಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.6,44,820ಗಳಾಗಿದೆ. ಮಾರುತಿ ಇಗ್ನಿಸ್ ಕಾರ್ ಅನ್ನು ಮೊದಲ ಬಾರಿಗೆ 2017ರಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರ್ ಅನ್ನು ಸಿಗ್ಮಾ, ಡೆಲ್ಟಾ, ಜೆಟ್ಟಾ ಹಾಗೂ ಆಲ್ಫಾ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಇಗ್ನಿಸ್ ನೆಕ್ಸಾ ಶೋರೂಂನಿಂದ ಮಾರಾಟವಾದ ಮೊದಲ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಕಾರ್ ಆಗಿದೆ.

ಹಲವು ಅಪ್​ಡೇಟ್​ಗಳೊಂದಿಗೆ ಬಿಡುಗಡೆಗೊಂಡ ಇಗ್ನಿಸ್ ಕಾರುಗಳು

2019ರಲ್ಲಿ ಇಗ್ನಿಸ್ ಕಾರ್ ಅನ್ನು ಅಪ್ ಡೇಟ್ ಮಾಡಲಾಗಿತ್ತು. ಅಪ್ ಡೇಟ್ ನಂತರ ರಿವರ್ಸ್ ಪಾರ್ಕಿಂಗ್ ಸಿಸ್ಟಂ, ಸೀಟ್ ಬೆಲ್ಟ್ ರಿಮ್ಯಾಂಡರ್, ಹೈಸ್ಪೀಡ್ ಅಲರ್ಟ್ ಗಳಂತಹ ಸುರಕ್ಷತಾ ಫೀಚರ್ ಗಳನ್ನು ಸೇರಿಸಲಾಯಿತು. ಇಗ್ನಿಸ್ ಕಾರಿನ ಜೆಟ್ಟಾ ಹಾಗೂ ಆಲ್ಫಾ ಮಾದರಿಗಳಲ್ಲಿ ರೂಫ್ ರೇಲ್ ಗಳನ್ನು ಅಳವಡಿಸಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಹಲವು ಅಪ್​ಡೇಟ್​ಗಳೊಂದಿಗೆ ಬಿಡುಗಡೆಗೊಂಡ ಇಗ್ನಿಸ್ ಕಾರುಗಳು

ಇಗ್ನಿಸ್ ಫೇಸ್‌ಲಿಫ್ಟ್ ಹೊಸ ಮುಂಭಾಗದ ಬಂಪರ್‌ನೊಂದಿಗೆ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ. ಕಾರಿನಲ್ಲಿ ಜೀಪ್ ಕಂಪಾಸ್ ನಲ್ಲಿರುವಂತಹ ಹೊಸ ಗ್ರಿಲ್ ಅಳವಡಿಸಲಾಗಿದೆ. ಈ ಫೇಸ್ ಲಿಫ್ಟ್ ಕಾರು ಹೊಸ ಡ್ಯುಯಲ್-ಟೋನ್ ಐವರಿ ಇಂಟಿರಿಯರ್ ಅನ್ನು ಹೊಂದಿದೆ. ಸೀಟುಗಳ ಫ್ಯಾಬ್ರಿಕ್ ಹಾಗೂ ಮಾದರಿಯನ್ನು ಸಹ ಬದಲಿಸಲಾಗಿದೆ. ಕ್ಯಾಬಿನ್ ಈಗ ಹೆಚ್ಚು ಲೆಗ್ ರೂಂ ಹಾಗೂ ಬೂಟ್ ಸ್ಪೇಸ್ ಗಳನ್ನು ಹೊಂದಿದೆ.

ಹಲವು ಅಪ್​ಡೇಟ್​ಗಳೊಂದಿಗೆ ಬಿಡುಗಡೆಗೊಂಡ ಇಗ್ನಿಸ್ ಕಾರುಗಳು

ಇಗ್ನಿಸ್ ಫೇಸ್‌ಲಿಫ್ಟ್ ಹೊಸ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಹೊಂದಿದ್ದು, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಗಳನ್ನು ಬೆಂಬಲಿಸುತ್ತದೆ. ಆಡಿಯೊ ಸಿಸ್ಟಂನ ಎಲ್ಲಾ ಕಂಟ್ರೋಲ್ ಗಳನ್ನು ಸ್ಟೀಯರಿಂಗ್ ವ್ಹೀಲ್ ನಲ್ಲಿ ನೀಡಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹಲವು ಅಪ್​ಡೇಟ್​ಗಳೊಂದಿಗೆ ಬಿಡುಗಡೆಗೊಂಡ ಇಗ್ನಿಸ್ ಕಾರುಗಳು

ಸುರಕ್ಷತಾ ಫೀಚರ್ ಗಳಿಗಾಗಿ ಎಬಿಎಸ್-ಇಬಿಡಿ, ಡ್ಯುಯಲ್ ಏರ್‌ಬ್ಯಾಗ್ ಹಾಗೂ ಡ್ರೈವರ್ ಸೇಫ್ಟಿ ಅಲರ್ಟ್ ಗಳನ್ನು ನೀಡಲಾಗಿದೆ. ಫೇಸ್ ಲಿಫ್ಟ್ ಕಾರಿನಲ್ಲಿ ಲೈವ್ ಟ್ರಾಫಿಕ್, ವಾಯ್ಸ್ ರೆಕಗ್ನಿಷನ್, ವೆಹಿಕಲ್ ಇನ್ಫಾರ್ಮೆಷನ್ ಅಲರ್ಟ್ ನಂತಹ ಹೊಸ ಫೀಚರ್ ಗಳನ್ನು ಅಳವಡಿಸಲಾಗಿದೆ.

ಹಲವು ಅಪ್​ಡೇಟ್​ಗಳೊಂದಿಗೆ ಬಿಡುಗಡೆಗೊಂಡ ಇಗ್ನಿಸ್ ಕಾರುಗಳು

ಇಗ್ನಿಸ್ ಫೇಸ್‌ಲಿಫ್ಟ್ ಕಾರಿನಲ್ಲಿ 1.2-ಲೀಟರಿನ ಕೆ 12 ಬಿ ಬಿಎಸ್ 6 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 83 ಬಿಹೆಚ್ ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Maruti Suzuki Ignis cars get smart play infotainment system update. Read in Kannada.
Story first published: Thursday, July 23, 2020, 19:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X