ಆಟೋ ಎಕ್ಸ್‌ಪೋ 2020: ಜಿಮ್ನಿ ಎಸ್‍‍ಯುವಿಯನ್ನು ಪ್ರದರ್ಶಿಸಲಿದೆ ಮಾರುತಿ ಸುಜುಕಿ

ಜಾಗತಿಕ ಮಾರುಕಟ್ಟೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡ ಮಾರುತಿ ಸುಜುಕಿ ಸಂಸ್ಥೆಯ ಜಿಮ್ನಿ ಮಿನಿ-ಎಸ್‌ಯುವಿಯನ್ನು ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ 2020ರ ಆಟೋ ಎಕ್ಸ್​ಪೋದಲ್ಲಿ ಪ್ರದರ್ಶಿಸಲಾಗುತ್ತದೆ. ಇದರೊಂದಿಗೆ ಮಾರುತಿ ಸುಜುಕಿ ಕಂಪನಿಯು ಫ್ಯೂಚರೊ - ಇ ಕಾರನ್ನು ಕೂಡ ಪ್ರದರ್ಶಿಸಲಾಗುತ್ತದೆ.

ಆಟೋ ಎಕ್ಸ್‌ಪೋ 2020: ಜಿಮ್ನಿ ಎಸ್‍‍ಯುವಿಯನ್ನು ಪ್ರದರ್ಶಿಸಲಿದೆ ಮಾರುತಿ ಸುಜುಕಿ

ಹೊಸ ತಲೆಮಾರಿನ ಸುಜುಕಿ ಜಿಮ್ನಿ 2018 ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಭಾರತೀಯ ಮಾರುಕಟ್ಟೆ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸಕರಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಮೆಚ್ಚುಗೆ ಪಡೆಯುವಲ್ಲಿ ಮಾರುತಿ ಸುಜುಕಿ ಜಿಮ್ನಿ ಯಶಸ್ವಿಯಾಗಿದೆ.

ಆಟೋ ಎಕ್ಸ್‌ಪೋ 2020: ಜಿಮ್ನಿ ಎಸ್‍‍ಯುವಿಯನ್ನು ಪ್ರದರ್ಶಿಸಲಿದೆ ಮಾರುತಿ ಸುಜುಕಿ

ಆದರೆ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ನಂತರ 'ಜಿಪ್ಸಿ' ಎಂದು ಮರುನಾಮಕರಣವಾಗುವ ಸಾಧ್ಯತೆಗಳಿವೆ. ಜಿಮ್ನಿಯ ಮರುನಾಮಕರಣದೊಂದಿಗೆ ಮುಖ್ಯವಾಗಿ ಇಂಡಿಯನ್-ಸ್ಪೆಕ್ ಮಾದರಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಮಾದರಿಗಿಂತ ಸ್ವಲ್ಪ ಗಾತ್ರದಲ್ಲಿ ದೊಡ್ಡದಾಗಿರಬಹುದು.

ಆಟೋ ಎಕ್ಸ್‌ಪೋ 2020: ಜಿಮ್ನಿ ಎಸ್‍‍ಯುವಿಯನ್ನು ಪ್ರದರ್ಶಿಸಲಿದೆ ಮಾರುತಿ ಸುಜುಕಿ

ಇಂಡಿಯನ್-ಸ್ಪೆಕ್ ಸುಜುಕಿ ಜಿಮ್ನಿ ದೊಡ್ಡದಾಗಿದೆ ಎಂದು ಹೇಳಲಾಗಿದ್ದರೂ ಕೂಡ ಇದು ಅಂತರರಾಷ್ಟ್ರೀಯ ಮಾದರಿಯ ಅದೇ ವೇದಿಕೆಯ ಭಾಗವಾಗಲಿದೆ. ಇಂಡಿಯನ್-ಸ್ಪೆಕ್ ಸುಜುಕಿ ಜಿಮ್ನಿ (ಜಿಪ್ಸಿ)ಯ ಫೀಚರ್ಸ್‍ಗಳು, ಕಂಪೋನೆನ್ಟ್ಸ್ ಹಾಗೂ ಇಂಜೀನ್ ಗೇರ್‍‍ಬಾಕ್ಸ್ ಸಿಯೆರಾ ಮಿನಿ-ಎಸ್‍ಯುವಿಯ ರೀತಿಯಲ್ಲೇ ಸಿದ್ದಪಡಿಸಿದ್ದಾರೆ.

ಆಟೋ ಎಕ್ಸ್‌ಪೋ 2020: ಜಿಮ್ನಿ ಎಸ್‍‍ಯುವಿಯನ್ನು ಪ್ರದರ್ಶಿಸಲಿದೆ ಮಾರುತಿ ಸುಜುಕಿ

ಒಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ, ಇಂಡಿಯನ್-ಸ್ಪೆಕ್ ಸುಜುಕಿ ಜಿಮ್ನಿ ಕಂಪನಿಯ ಪ್ರೀಮಿಯಂ ನೆಕ್ಸಾ ಡೀಲರ್‍‍‍ಶಿಪ್ ಮೂಲಕ ಪ್ರತ್ಯೇಕವಾಗಿ ಮಾರಾಟವಾಗಲಿದೆ. ಇದು ಬ್ರಾಂಡ್‌ನ ಇತರ ಎಸ್‍ಯುವಿ ವಿಟಾರಾ ಬ್ರಿಝಾದಿಂದ ಪ್ರೀಮಿಯಂ ಕೊಡುಗೆಯಾಗಿ ಜಿಮ್ನಿ ಸ್ಥಾನಕ್ಕೆ ಸಹಾಯ ಮಾಡುತ್ತದೆ, ಅರೆನಾ ಶೋ ರೂಂಗಳ ಮೂಲಕ ಕೂಡ ಮಾರಾಟ ಮಾಡಲಾಗುತ್ತದೆ.

ಆಟೋ ಎಕ್ಸ್‌ಪೋ 2020: ಜಿಮ್ನಿ ಎಸ್‍‍ಯುವಿಯನ್ನು ಪ್ರದರ್ಶಿಸಲಿದೆ ಮಾರುತಿ ಸುಜುಕಿ

ವಿಶೇಷ ಅಂದ್ರೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಜಿಮ್ನಿಯು ಭಾರತೀಯ ರಸ್ತೆಗಳಿಗೆ ಸರಿಹೊಂದುವ ಹಾಗೆ ವಿಶೇಷವಾಗಿ ತಯಾರಿಸಲಿದ್ದಾರೆ. ಇಂಡಿಯನ್-ಸ್ಫೆಕ್ ಮಾದರಿಯು ಸಿಯೆರಾ ರೂಪಂತರವನ್ನು ಹೋಲುವಂತಹ ವಿಶಾಲವಾದ ವಿನ್ಯಾಸದ ಜೊತೆಯಲ್ಲಿ 3- ಡೋರ್‍ ನೊಂದಿಗೆ ಸಿದ್ದಪಡಿಸಿದ್ದಾರೆ.

ಆಟೋ ಎಕ್ಸ್‌ಪೋ 2020: ಜಿಮ್ನಿ ಎಸ್‍‍ಯುವಿಯನ್ನು ಪ್ರದರ್ಶಿಸಲಿದೆ ಮಾರುತಿ ಸುಜುಕಿ

ಆದ್ರೆ ಭಾರತದ ಮಾರುಕಟ್ಟೆಗೆ ಬರಲಿರುವ ಕಾರುಗಳಿಗೆ 5 ಸ್ಟ್ಯಾಂಡರ್ಡ್ ಡೋರ್‍‍ಗಳನ್ನು ರಚಿಸಬಹುದು. ಮುಂಬರುವ ಇಂಡಿಯನ್-ಸ್ಪೆಕ್ ಸುಜುಕಿ ಜಿಮ್ನಿ 4 ಮೀಟರ್‌ಗಿಂತ ಕಡಿಮೆ ಉದ್ದವಿದ್ದು, ಇದರಿಂದಾಗಿ ಗ್ರಾಹಕರಿಗೆ ತೆರಿಗೆ ಪ್ರಯೋಜನಗಳನ್ನು ಸಹ ಪಡೆಯಲು ಅವಕಾಶ ನೀಡುತ್ತದೆ.

ಆಟೋ ಎಕ್ಸ್‌ಪೋ 2020: ಜಿಮ್ನಿ ಎಸ್‍‍ಯುವಿಯನ್ನು ಪ್ರದರ್ಶಿಸಲಿದೆ ಮಾರುತಿ ಸುಜುಕಿ

ಭಾರತೀಯ ಮಾರುಕಟ್ಟೆಯಲ್ಲಿ ಒಮ್ಮೆ ಪರಿಚಯಿಸಿದ ನಂತರ, ಸುಜುಕಿ ಜಿಮ್ನಿ ಅದೇ 1.5-ಲೀಟರ್ ಕೆ 15-ಸರಣಿಯ ಪೆಟ್ರೋಲ್ ಎಂಜಿನ್‌ ಹೊಂದಿದೆ. ಎರ್ಟಿಗಾ, ಸಿಯಾಝ್ ಮತ್ತು ಎಕ್ಸ್‌ಎಲ್6 ಗೆ ಶಕ್ತಿ ನೀಡಿದ ಅದೇ ಎಂಜಿನ್ ಆಗಿದೆ. ಜಿಮ್ನಿ ಎಕ್ಸ್‌ಎಲ್ 6 ರಂತೆಯೇ ಗೇರ್‍‍ಬಾಕ್ಸ್ ಆಯ್ಕೆಗಳನ್ನು ಸಹ ಸ್ವೀಕರಿಸುತ್ತದೆ, ಇದು ಸ್ಟ್ರ್ಯಾಂಡರ್ಡ್ 5- ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್-ಕನ್ವಟರ್ ಅಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಹೊಂದಿರಲಿದೆ.

ಆಟೋ ಎಕ್ಸ್‌ಪೋ 2020: ಜಿಮ್ನಿ ಎಸ್‍‍ಯುವಿಯನ್ನು ಪ್ರದರ್ಶಿಸಲಿದೆ ಮಾರುತಿ ಸುಜುಕಿ

ಇಂಡಿಯನ್-ಸ್ಪೆಕ್ ಸುಜುಕಿ ಜಿಮ್ನಿ ಗುಜರಾತ್‌ನ ಕಂಪನಿಯ ಸ್ಥಾವರದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸುವ ಸಾಧ್ಯತೆಗಳಿದೆ. ಭಾರತದಲ್ಲಿ ತಯಾರಾಗುತ್ತಿರುವ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸಬಹುದು ಮತ್ತು ಇದು ಎಸ್‍ಯುವಿ ವಿಭಾಗದಲ್ಲಿ ಅತ್ಯಂತ ಆಕರ್ಷಕ ಕೊಡುಗೆಯಾಗಿ ಹೊರಹೊಮ್ಮಲಿದೆ.

Most Read Articles

Kannada
English summary
Maruti Suzuki to showcase Jimny SUV at Auto Expo 2020. Read in Kananda
Story first published: Wednesday, January 22, 2020, 19:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X