7 ಸೀಟರ್ ಸೌಲಭ್ಯವುಳ್ಳ ಹೆಕ್ಟರ್ ಪ್ಲಸ್ ಬಿಡುಗಡೆಯ ಮಾಹಿತಿ ಬಹಿರಂಗ

ಹೆಕ್ಟರ್ ಎಸ್‌ಯುವಿ ಕಾರು ಮಾರಾಟದಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಎಂಜಿ ಮೋಟಾರ್ ಕಂಪನಿಯು ಮತ್ತೊಂದು ಹೊಸ ಕಾರು ಮಾದರಿಯನ್ನು ಬಿಡುಗಡೆಗೊಳಿಸಲು ಸಿದ್ದವಾಗಿದ್ದು, ಹೆಕ್ಟರ್ ಕಾರು ಮಾದರಿಯಲ್ಲೇ 7 ಸೀಟರ್ ಆವೃತ್ತಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ.

7 ಸೀಟರ್ ಸೌಲಭ್ಯವುಳ್ಳ ಹೆಕ್ಟರ್ ಪ್ಲಸ್ ಬಿಡುಗಡೆಯ ಮಾಹಿತಿ ಬಹಿರಂಗ

ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹೊಸ ಹೆಕ್ಟರ್ ಪ್ಲಸ್ ಕಾರು ಮಾದರಿಯನ್ನು ಅನಾವರಣಗೊಳಿಸುವ ಮೂಲಕ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದ ಎಂಜಿ ಮೋಟಾರ್ ಸಂಸ್ಥೆಯು ಇದೀಗ ಹೊಸ ಕಾರಿನ ಬಿಡುಗಡೆ ಕುರಿತಂತೆ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದು, ಇದೇ ವರ್ಷ ದೀಪಾವಳಿ ಹೊತ್ತಿಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಕಳೆದ ಜುಲೈನಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಹೆಕ್ಟರ್ ಬಿಡುಗಡೆಗೊಳಿಸಿದ ಮೊದಲ ವರ್ಷಾಚರಣೆ ಸಂಭ್ರಮಕ್ಕಾಗಿ ಹೆಕ್ಟರ್ ಪ್ಲಸ್ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

7 ಸೀಟರ್ ಸೌಲಭ್ಯವುಳ್ಳ ಹೆಕ್ಟರ್ ಪ್ಲಸ್ ಬಿಡುಗಡೆಯ ಮಾಹಿತಿ ಬಹಿರಂಗ

ಸಾಮಾನ್ಯ ಹೆಕ್ಟರ್ ಮಾದರಿಗಿಂತಲೂ ವಿಭಿನ್ನ ತಂತ್ರಜ್ಞಾನ ಸೌಲಭ್ಯ ಪಡೆದುಕೊಂಡಿರುವ ಹೆಕ್ಟರ್ ಪ್ಲಸ್ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಅಥವಾ 7 ಸೀಟರ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಿರಲಿದೆ.

7 ಸೀಟರ್ ಸೌಲಭ್ಯವುಳ್ಳ ಹೆಕ್ಟರ್ ಪ್ಲಸ್ ಬಿಡುಗಡೆಯ ಮಾಹಿತಿ ಬಹಿರಂಗ

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ 7 ಸೀಟರ್ ಎಸ್‌ಯುವಿ ಕಾರು ಮಾದರಿಗಳಿಗೆ ಉತ್ತಮ ಬೇಡಿಕೆಯಿದ್ದು, ಫುಲ್ ಸೈಜ್ 7 ಸೀಟರ್ ಎಸ್‌ಯುವಿ ಆವೃತ್ತಿಯಾಗಿರುವ ಫೋರ್ಡ್ ಎಂಡೀವರ್, ಮಹೀಂದ್ರಾ ಅಲ್ಟುರಾಸ್ ಮತ್ತು ಟೊಯೊಟಾ ಫಾರ್ಚೂನರ್ ಖರೀದಿಯು ಬಹುತೇಕ ಕಾರು ಖರೀದಿದಾರರಿಗೆ ಕಷ್ಟಸಾಧ್ಯ.

7 ಸೀಟರ್ ಸೌಲಭ್ಯವುಳ್ಳ ಹೆಕ್ಟರ್ ಪ್ಲಸ್ ಬಿಡುಗಡೆಯ ಮಾಹಿತಿ ಬಹಿರಂಗ

ಹೀಗಾಗಿ ಹೆಕ್ಟರ್ ಕಾರಿನಲ್ಲಿಯೇ ಹೊಸ ಆವೃತ್ತಿಯನ್ನು ಪರಿಚಯಿಸುತ್ತಿರುವ ಎಂಜಿ ಸಂಸ್ಥೆಯು ಹೆಕ್ಟರ್ ಪ್ಲಸ್ ಮೂಲಕ 7 ಸೀಟರ್ ಎಸ್‌ಯುವಿ ಖರೀದಿದಾರರನ್ನು ಸೆಳೆಯಲು ಮುಂದಾಗಿದ್ದು, ಪ್ರತಿಸ್ಪರ್ಧಿ ಕಾರುಗಳಿಂತಲೂ ಇದು ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ. ಈ ಮೂಲಕ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಇನ್ಮುಂದೆ ಸಾಮಾನ್ಯ ಮಾದರಿಯಲ್ಲಿ 5 ಸೀಟರ್(ಹೆಕ್ಟರ್) ಮತ್ತು ಹೆಕ್ಟರ್ ಪ್ಲಸ್‌ನಲ್ಲಿ 6 ಅಥವಾ 7 ಸೀಟರ್ ಆವೃತ್ತಿಯನ್ನು ಕೂಡಾ ಖರೀದಿ ಮಾಡಬಹುದಾಗಿದೆ.

7 ಸೀಟರ್ ಸೌಲಭ್ಯವುಳ್ಳ ಹೆಕ್ಟರ್ ಪ್ಲಸ್ ಬಿಡುಗಡೆಯ ಮಾಹಿತಿ ಬಹಿರಂಗ

ಹೆಕ್ಟರ್ ಪ್ಲಸ್‌ನಲ್ಲಿ ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಉತ್ತಮ ಆಸನ ಸೌಲಭ್ಯವನ್ನು ಒದಗಿಸಲಾಗಿದ್ದು, ಸಾಮಾನ್ಯ ಕಾರು ಮಾದರಿಗಿಂತಲೂ ಕೆಲವು ಪ್ರೀಮಿಯಂ ಸೌಲಭ್ಯಗಳನ್ನು ಒದಗಿಸಿರುವ ಎಂಜಿ ಸಂಸ್ಥೆಯು ಪ್ರತ್ಯೇಕ ಆಸನ ಸೌಲಭ್ಯ ಜೋಡಣೆ ಮಾಡಿದೆ.

7 ಸೀಟರ್ ಸೌಲಭ್ಯವುಳ್ಳ ಹೆಕ್ಟರ್ ಪ್ಲಸ್ ಬಿಡುಗಡೆಯ ಮಾಹಿತಿ ಬಹಿರಂಗ

ಒಂದು ವೇಳೆ ಗ್ರಾಹಕರಿಗೆ ಹಿಂಬದಿಯ ಆಸನದ ಸಾಲಿನಲ್ಲಿ ಪ್ರತ್ಯೇಕ ಸೀಟು ಬೇಡವಾದಲ್ಲಿ ಅದೇ ಕಾರನ್ನು 7 ಸೀಟರ್ ಆವೃತ್ತಿಯನ್ನಾಗಿ ಕೂಡಾ ಮಾಡಿಕೊಳ್ಳಬಹುದಾಗಿದ್ದು, ಅದಕ್ಕಾಗಿ ಹೆಚ್ಚುವರಿ ಮೊತ್ತ ಪಾವತಿ ಮಾಡಬೇಕಾಗುತ್ತದೆ.

7 ಸೀಟರ್ ಸೌಲಭ್ಯವುಳ್ಳ ಹೆಕ್ಟರ್ ಪ್ಲಸ್ ಬಿಡುಗಡೆಯ ಮಾಹಿತಿ ಬಹಿರಂಗ

ಎಂಜಿನ್ ಸಾಮರ್ಥ್ಯ

ಸದ್ಯ ಮಾರುಕಟ್ಟೆಯಲ್ಲಿರುವ 5 ಸೀಟರ್ ಹೆಕ್ಟರ್ ಕಾರು 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 6 ಸೀಟರ್ ಹೆಕ್ಟರ್ ಪ್ಲಸ್ ಕಾರು ಕೂಡಾ ಸಾಮಾನ್ಯ ಕಾರಿನಂತೆಯೇ ಎಂಜಿನ್ ಆಯ್ಕೆ ಪಡೆಯಲಿದೆ.

7 ಸೀಟರ್ ಸೌಲಭ್ಯವುಳ್ಳ ಹೆಕ್ಟರ್ ಪ್ಲಸ್ ಬಿಡುಗಡೆಯ ಮಾಹಿತಿ ಬಹಿರಂಗ

ಈ ಮೂಲಕ ಮತ್ತಷ್ಟು ಎಸ್‌ಯುವಿ ಕಾರು ಖರೀದಿದಾರರನ್ನು ಸೆಳೆಯಲಿರುವ ಎಂಜಿ ಮೋಟಾರ್ ಸಂಸ್ಥೆಯು ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್ ಜೊತೆಗೆ ಟೊಯೊಟಾ ಇನೋವಾ ಕ್ರಿಸ್ಟಾ ಆವೃತ್ತಿಗೂ ಪೈಪೋಟಿ ನೀಡಲಿದ್ದು, ಸಾಮಾನ್ಯ ಹೆಕ್ಟರ್ ಕಾರಿಗಿಂತಲೂ ತುಸು ದುಬಾರಿಯಾಗಲಿದೆ.

7 ಸೀಟರ್ ಸೌಲಭ್ಯವುಳ್ಳ ಹೆಕ್ಟರ್ ಪ್ಲಸ್ ಬಿಡುಗಡೆಯ ಮಾಹಿತಿ ಬಹಿರಂಗ

ಸದ್ಯ ಸಾಮಾನ್ಯ ಹೆಕ್ಟರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.12.74 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.44 ಲಕ್ಷ ಬೆಲೆ ಹೊಂದಿದ್ದು, ಹೆಕ್ಟರ್ ಪ್ಲಸ್ ಮಾದರಿಯು ಸಾಮಾನ್ಯ ಕಾರಿಗಿಂತಲೂ ರೂ. 1.50 ಲಕ್ಷದಿಂದ ರೂ.2 ಲಕ್ಷ ಹೆಚ್ಚುವರಿ ಬೆಲೆ ಹೊಂದಿರಲಿದೆ.

Most Read Articles

Kannada
English summary
MG Hector Plus 7-Seater Launch During Diwali; To Rival Tata Gravitas. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X