ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ವಿಶ್ವಾದ್ಯಂತ ಸಾವಿರಾರು ಜನರ ಬಲಿ ಪಡೆದಿರುವ ಕರೋನಾ ವೈರಸ್‌ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ಮಟ್ಟಹಾಕಲು ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಭಾರತದಲ್ಲೂ ವೈರಸ್ ತಡೆಗಾಗಿ ಈಗಾಗಲೇ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೈರಸ್ ಮಟ್ಟ ಹಾಕಲು ಎಲ್ಲ ರೀತಿ ಕಠಿಣ ಕ್ರಮಗಳೊಂಗದಿಗೆ ಮುಂದಿನ 21 ದಿನಗಳ ತನಕ ಲಾಕ್ ಡೌನ್ ಮಾಡಿವೆ. ಹೀಗಿರುವಾಗ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪುತ್ತಿದ್ದು, ತುರ್ತು ಆರೋಗ್ಯ ಸೌಲಭ್ಯಗಳಿಗಾಗಿ ಅನೇಕ ಸಂಘ ಸಂಸ್ಥೆಗಳು ಮತ್ತು ಉದ್ಯಮಿಗಳು ಕೇಂದ್ರ ಸರ್ಕಾರದ ಜೊತೆಗೆ ಕೈಜೋಡಿಸಿವೆ. ಈಗಾಗಲೇ ಪ್ರಧಾನಿಮಂತ್ರಿಗಳ ತುರ್ತು ಪರಿಹಾರ ನಿಧಿಗೆ ಭಾರೀ ಪ್ರಮಾಣದ ಹಣಕಾಸು ನೆರವು ಹರಿದುಬರುತ್ತಿದ್ದು, ಎಂಜಿ ಮೋಟಾರ್ ಸಹ ನೆರವು ನೀಡಿದೆ.

ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ಸ್ ಸಂಸ್ಥೆಯು ಕರೋನಾ ವೈರಸ್ ಮಟ್ಟಹಾಕಲು ಕೇಂದ್ರ ಸರ್ಕಾರವು ಕೈಗೊಂಡಿರುವ ಕ್ರಮವನ್ನು ಬೆಂಬಲಿಸಿ ಪ್ರಧಾನಮಂತ್ರಿಗಳ ತುರ್ತು ಪರಿಹಾರ ನಿಧಿಗೆ ರೂ.2 ಕೋಟಿ ಹಣ ನೀಡಿದ್ದು ತುರ್ತು ಸಂದರ್ಭದಲ್ಲಿ ಸಿಬ್ಬಂದಿಗೂ ಯಾವುದೇ ತೊಂದರೆಯಾಗದಂತೆ ಹಲವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ 1 ಉತ್ಪಾದನಾ ಘಟಕ ಮತ್ತು ಸುಮಾರು 150ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಹೊಂದಿದ್ದು, ಕಾರ್ಯನಿರ್ವಹಿಸುತ್ತಿರುವ ಬರೋಬ್ಬರಿ 5 ಸಾವಿರ ಉದ್ಯೋಗಿಗಳಿಗೆ ಗರಿಷ್ಠ ಪ್ರಮಾಣ ಸುರಕ್ಷತೆಯನ್ನು ಒದಗಿಸಿದೆ.

ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಇನ್ನು ವಿಶ್ವಾದ್ಯಂತ ಕರೋನಾ ವೈರಸ್ ಅಟ್ಟಹಾಸ ಮುಂದುವರಿದ್ದು, ವೈರಸ್‌ನಿಂದಾಗಿ ಇದುವರೆಗೆ ಸುಮಾರು 19 ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಜಗತ್ತಿನ ಎಲ್ಲಾ ಪ್ರಮುಖ ರಾಷ್ಟ್ರಗಳು ಹಲವು ಕಠಿಣ ಕ್ರಮಗಳೊಂದಿಗೆ ವೈರಸ್ ಹರಡುವಿಕೆಯನ್ನು ತಡೆಯಲು ಶ್ರಮಿಸುತ್ತಿವೆ. ಹೀಗಿರುವಾಗ ದೇಶದ ಆರ್ಥಿಕ ಪರಿಸ್ಥಿತಿಯು ದಿನದಿಂದ ದಿನಕ್ಕೆ ಶೋಚನೀಯವಾಗುತ್ತಿದ್ದು, ಆಟೋ ಉದ್ಯಮದವು ಕೂಡಾ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಮಾಲಿನ್ಯ ತಡೆಯುವ ಉದ್ದೇಶದಿಂದ ದೇಶದಲ್ಲಿ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಬಿಎಸ್-6(ಭಾರತ್ ಸ್ಟೆಜ್-6) ಜಾರಿಗೆ ತರಲಾಗುತ್ತಿದ್ದು, ಹೊಸ ಎಮಿಷನ್ ನಿಯಮ ಜಾರಿ ನಂತರ ಬಿಎಸ್-4 ವಾಹನ ಮಾರಾಟ ಮತ್ತು ನೋಂದಣಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗುತ್ತಿದೆ.

ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಆದರೆ ನಿಗದಿತ ಅವಧಿಯೊಳಗೆ ಬಿಎಸ್-4 ವಾಹನ ಮಾರಾಟ ಮಾಡಲು ಕರೋನಾ ವೈರಸ್ ಹಿನ್ನಲೆ ಸಂಪೂರ್ಣವಾಗಿ ಲಾಕ್ ಡೌನ್ ಮಾಡಿರುವುದರಿಂದ ವಾಹನ ಉತ್ಪಾದನಾ ಸಂಕಷ್ಟಕ್ಕೆ ಸಿಲುಕಿವೆ.

ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಈ ನಡುವೆ ಬಿಎಸ್-4 ವಾಹನಗಳ ಮಾರಾಟ ಅವಧಿಯನ್ನು ವಿಸ್ತರಿಸುವಂತೆ ಎರಡು ಬಾರಿ ಸುಪ್ರೀಂಕೋರ್ಟ್ ಮೊರೆಹೋಗಿದ್ದ ಆಟೋ ಕಂಪನಿಗಳ ಮನವಿಯನ್ನು ತಳ್ಳಿಹಾಕಲಾಗಿದ್ದು, ಇದರಿಂದ ಮಾರಾಟವಾಗದೆ ಉಳಿದಿರುವ ಬಿಎಸ್-4 ವಾಹನಗಳು ಆರ್ಥಿಕ ಹೊರೆಯಾಗಿ ಪರಿಣಮಿಸಿವೆ.

ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಆದರೆ ಪರಿಸ್ಥಿತಿಗೆ ಅನುಗುಣವಾಗಿ ಹಲವಾರು ವಿನಾಯ್ತಿಗಳನ್ನು ನೀಡಿರುವ ಕೇಂದ್ರ ಸರ್ಕಾರವು ಬಿಎಸ್-4 ವಾಹನ ಮಾರಾಟಕ್ಕೂ ಕೆಲವು ವಿನಾಯ್ತಿಗಳನ್ನು ನೀಡುವ ಸಾಧ್ಯತೆಗಳಿದ್ದು, ಮುಂಬರುವ ದಿನಗಳಲ್ಲಿ ಕೈಗೊಳ್ಳಲಿರುವ ಆರ್ಥಿಕ ನಿರ್ಧಾರಗಳ ಮೇಲೆ ಬಿಎಸ್-4 ವಾಹನಗಳ ಭವಿಷ್ಯ ನಿರ್ಧಾರವಾಗಲಿದೆ.

Most Read Articles

Kannada
English summary
MG Motor Announces Rs 2 Crore Donation Towards Medical Aid In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X