ವಿನೂತನ ಬಗೆಯ ಸ್ಯಾನಿಟೈಜೆಷನ್ ಯೋಜನೆಯನ್ನಾರಂಭಿಸಿದ ಎಂಜಿ ಮೋಟಾರ್

ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಹೊಸ ಸ್ಯಾನಿಟೈಜೆಷನ್ ಯೋಜನೆಯನ್ನು ಆರಂಭಿಸಿದೆ. ಕಂಪನಿಯ ಈ ಯೋಜನೆಗೆ ಎಂಜಿ ಸೇವಾ-ಪೇರೆಂಟ್ಸ್ ಫಸ್ಟ್ ಎಂಬ ಹೆಸರನ್ನಿಡಲಾಗಿದೆ. ಈ ಯೋಜನೆಯಡಿಯಲ್ಲಿ ಕಂಪನಿಯು ತನ್ನ ಗ್ರಾಹಕರ ಪೋಷಕರ ಕಾರುಗಳನ್ನು ಸ್ವಚ್ವಗೊಳಿಸಲಿದೆ.

ವಿನೂತನ ಬಗೆಯ ಸ್ಯಾನಿಟೈಜೆಷನ್ ಯೋಜನೆಯನ್ನಾರಂಭಿಸಿದ ಎಂಜಿ ಮೋಟಾರ್

ಗಮನಿಸಬೇಕಾದ ಸಂಗತಿಯೆಂದರೆ ಈ ಸ್ಯಾನಿಟೈಜೆಷನ್ ಕಾರ್ಯವನ್ನು ಗ್ರಾಹಕರ ಮನೆಯಲ್ಲಿಯೇ ಮಾಡುತ್ತದೆ. ಈ ಸ್ಯಾನಿಟೈಜೆಷನ್ ಕಾರ್ಯಕ್ಕೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲ. ಈ ಸೇವೆಯನ್ನು ದೇಶಾದ್ಯಂತ ಇರುವ ಎಂಜಿ ಮೋಟಾರ್ ಕಂಪನಿಯ ಮಾರಾಟಗಾರರಿಂದ ಪಡೆಯಬಹುದು.

ವಿನೂತನ ಬಗೆಯ ಸ್ಯಾನಿಟೈಜೆಷನ್ ಯೋಜನೆಯನ್ನಾರಂಭಿಸಿದ ಎಂಜಿ ಮೋಟಾರ್

ಈ ಸ್ಯಾನಿಟೈಜೆಷನ್ ಕಾರ್ಯದಲ್ಲಿ ಕಾರಿನಲ್ಲಿರುವ ಸೀಟುಗಳಂತಹ ಹೈ ಟಚ್ ಪಾಯಿಂಟ್‌ಗಳನ್ನು ಸ್ವಚ್ವಗೊಳಿಸಲಾಗುವುದು. ಜೊತೆಗೆ ಡ್ರೈ ವಾಶ್ ಸಹ ಮಾಡಲಾಗುವುದು. 2020ರ ಜುಲೈ ಹಾಗೂ ಆಗಸ್ಟ್ ತಿಂಗಳುಗಳಲ್ಲಿ ಈ ಸೇವೆಯನ್ನು ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ವಿನೂತನ ಬಗೆಯ ಸ್ಯಾನಿಟೈಜೆಷನ್ ಯೋಜನೆಯನ್ನಾರಂಭಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯ ಎಲ್ಲಾ ಗ್ರಾಹಕರಿಗೆ ರಿಜಿಸ್ಟರ್ ಇಮೇಲ್ ಐಡಿ ಮೂಲಕ ಕೋಡ್ ಕಳುಹಿಸಲಾಗುವುದು ಎಂದು ಕಂಪನಿ ಹೇಳಿದೆ. ಗ್ರಾಹಕರು ಈ ಕೋಡ್ ಅನ್ನು ಮಾರಾಟಗಾರರೊಂದಿಗೆ ಶೇರ್ ಮಾಡಿಕೊಂಡ ನಂತರ ಈ ಸೇವೆಯನ್ನು ಪಡೆಯಬಹುದು.

ವಿನೂತನ ಬಗೆಯ ಸ್ಯಾನಿಟೈಜೆಷನ್ ಯೋಜನೆಯನ್ನಾರಂಭಿಸಿದ ಎಂಜಿ ಮೋಟಾರ್

ಈ ಯೋಜನೆಯಡಿಯಲ್ಲಿ ಕೇವಲ ಒಂದು ಕಾರನ್ನು ಮಾತ್ರ ಸ್ವಚ್ವಗೊಳಿಸಲಾಗುವುದು ಎಂದು ಎಂಜಿ ಮೋಟಾರ್ ಸ್ಪಷ್ಟ ಪಡಿಸಿದೆ. ಇದೇ ವೇಳೆ ಎಂಜಿ ಮೋಟಾರ್ ಕಂಪನಿಯು ಜುಲೈ 13ರಂದು ಎಂಜಿ ಹೆಕ್ಟರ್ ಪ್ಲಸ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದೆಂದು ಹೇಳಿದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ವಿನೂತನ ಬಗೆಯ ಸ್ಯಾನಿಟೈಜೆಷನ್ ಯೋಜನೆಯನ್ನಾರಂಭಿಸಿದ ಎಂಜಿ ಮೋಟಾರ್

ಎಂಜಿ ಹೆಕ್ಟರ್ ಪ್ಲಸ್ ಕಾರನ್ನು ಹೆಕ್ಟರ್ ಪ್ಲಸ್ ಸೂಪರ್, ಸ್ಮಾರ್ಟ್ ಹಾಗೂ ಶಾರ್ಪ್ ಎಂಬ ಮೂರು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಹೆಕ್ಟರ್ ಪ್ಲಸ್ ಎಂಜಿ ಮೋಟಾರ್ ಕಂಪನಿಯ 6 ಸೀಟುಗಳ ವಾಹನವಾಗಿದೆ. ಈ ಕಾರಿನ ಬುಕ್ಕಿಂಗ್ ಗಳನ್ನು ಈಗಾಗಲೇ ಆರಂಭಿಸಲಾಗಿದೆ.

ವಿನೂತನ ಬಗೆಯ ಸ್ಯಾನಿಟೈಜೆಷನ್ ಯೋಜನೆಯನ್ನಾರಂಭಿಸಿದ ಎಂಜಿ ಮೋಟಾರ್

ಎಂಜಿ ಹೆಕ್ಟರ್ ಪ್ಲಸ್ ಕಾರನ್ನು ಕಂಪನಿಯ ವೆಬ್‌ಸೈಟ್ ಅಥವಾ ಡೀಲರ್ ಗಳಲ್ಲಿ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಬಹುದು. ಎಂಜಿ ಹೆಕ್ಟರ್ ಪ್ಲಸ್ ಅನ್ನು ಪೆಟ್ರೋಲ್, ಡೀಸೆಲ್ ಹಾಗೂ ಹೈಬ್ರಿಡ್ ಎಂಜಿನ್ ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸಲಾಗುವುದು.

Most Read Articles

Kannada
English summary
MG Motor to sanitize their customer's parents cars under MG Sewa program. Read in Kannada.
Story first published: Friday, July 10, 2020, 18:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X